Bharat Taxi : ಕೇಂದ್ರ ಸರ್ಕಾರ ಚಾಲಕರ ಅನುಕೂಲಕ್ಕಾಗಿ ಹೊಸ ಯೋಜನೆಯೊಂದನ್ನು ತಂದಿದೆ. ಇದ್ರಲ್ಲಿ ಬರೀ ಲಾಭ ಮಾತ್ರವಲ್ಲ ಮಾಲೀಕತ್ವ ಚಾಲಕರಿಗೆ ಸಿಗಲಿದೆ. ಭಾರತ್ ಟ್ಯಾಕ್ಸಿ ಅಮೂಲ್ ರೀತಿಯಲ್ಲೇ ಇನ್ವೆಸ್ಟ್ಮೆಂಟ್ ಮಾಡೆಲ್ ಸಿದ್ಧಪಡಿಸಿದೆ. 

ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ (Amit Shah), ಟ್ಯಾಕ್ಸಿ ಚಾಲಕರಿಗೆ ನೆಮ್ಮದಿ ಸುದ್ದಿಯನ್ನು ನೀಡಿದ್ದಾರೆ. ಭಾರತ್ ಟ್ಯಾಕ್ಸಿ ಎಂಬ ಸಹಕಾರಿ ರೈಡ್-ಹೆಲಿಂಗ್ ವೇದಿಕೆಯನ್ನು ಉದ್ಘಾಟಿಸಿದ ಅವರು, ಇದ್ರಿಂದ ಚಾಲಕರಿಗೆ ಏನೆಲ್ಲ ಲಾಭವಿದೆ ಎಂಬುದನ್ನು ವಿವರಿಸಿದ್ರು. ಭಾರತ್ ಟ್ಯಾಕ್ಸಿ ಯೋಜನೆಯಲ್ಲಿ ಚಾಲಕರಿಗೆ ಲಾಭದಲ್ಲಿ ನೇರ ಪಾಲು ಸಿಗಲಿದೆ. ಅಷ್ಟೇ ಅಲ್ಲದೇ ಸೇವೆಯ ಮಾಲೀಕತ್ವ ಕೂಡ ಚಾಲಕರಿಗೆ ಸಿಗಲಿದೆ.

ಭಾರತ್ ಟ್ಯಾಕ್ಸಿ (Bharat Taxi) ಯೋಜನೆ

ದೆಹಲಿ-ಎನ್ಸಿಆರ್ ಮತ್ತು ಗುಜರಾತ್ನ ಕ್ಯಾಬ್ ಹಾಗೂ ಆಟೋ ಚಾಲಕರ ಜೊತೆ ನಡೆದ ಟೌನ್ಹಾಲ್ ಸಭೆಯಲ್ಲಿ ಅಮಿತ್ ಶಾ, ಈ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಒಟ್ಟು ಲಾಭದ ಶೇಕಡಾ 80 ರಷ್ಟನ್ನು ನಿಗದಿತ ಕಿಲೋಮೀಟರ್ ಆಧಾರದ ಮೇಲೆ ಚಾಲಕರಿಗೆ ಹಂಚಿಕೆಯಾಗುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಉಳಿದ ಶೇಕಡಾ 20 ರಷ್ಟನ್ನು ಸಹಕಾರಿ ಮೂಲಧನ ನಿರ್ಮಾಣಕ್ಕೆ ಮೀಸಲಿಡಲಾಗುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಏಷ್ಯಾದ 2ನೇ ದೊಡ್ಡ 5 ಎಕರೆ ಅಮೆಜಾನ್‌ ಕಚೇರಿ : 7000 ನೌಕರರಿಗೆ ಸ್ಥಳಾವಕಾಶ

ಅಮೂಲ್ ಶೈಲಿಯಲ್ಲಿ ಯೋಜನೆ

ಭಾರತ್ ಟ್ಯಾಕ್ಸಿ ಯೋಜನೆಯನ್ನು ಅಮೂಲ್ ಸಹಕಾರಿ ಮಾದರಿಯಲ್ಲಿ ಶುರು ಮಾಡಲಾಗಿದೆ. ಇದು ಕಾರ್ಮಿಕ ಮಾಲಿಕತ್ವದ ಯಶಸ್ವಿ ಮಾದರಿಯನ್ನೇ ಪಾಲಿಸಲಿದೆ. ಸುಮಾರು 36 ಲಕ್ಷ ಮಹಿಳೆಯರು ಕೇವಲ 50 ರೂಪಾಯಿ ಹೂಡಿಕೆ ಮಾಡಿ ಅಮೂಲ್ ಅನ್ನು 1.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಲಾಭ ಮಾಲೀಕರಿಗೆ ಹೋಗುತ್ತದೆ, ಆದರೆ ಅಮೂಲ್ನಲ್ಲಿ ಬಹುತೇಕ ಲಾಭ ಉತ್ಪಾದಕರಿಗೆ ಸಿಗುತ್ತದೆ. ಭಾರತ್ ಟ್ಯಾಕ್ಸಿಯೂ ಇದೇ ತತ್ವದ ಮೇಲೆ ಸಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಚಾಲಕರು 500 ರೂಪಾಯಿ ಮೌಲ್ಯದ ಷೇರು ಖರೀದಿಸಬೇಕು. ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯಲ್ಲೂ ಚಾಲಕರಿಗೆ ಪ್ರತಿನಿಧಿತ್ವ ಸಿಗುತ್ತದೆ. ಚಾಲಕರ ಹಿತಕ್ಕೆ ವಿರುದ್ಧವಾದ ಯಾವುದೇ ನಿರ್ಧಾರ ತೆಗೆದುಕೊಂಡಾಗ ಚಾಲಕರು ಅದನ್ನು ಪ್ರಶ್ನಿಸಿ ತಮ್ಮ ಹಕ್ಕನ್ನು ಪ್ರತಿಪಾದಿಸಬಹುದು.

ಕೈಕೊಟ್ಟ ಇನ್ಫೋಸಿಸ್‌, ಟಿಸಿಎಸ್‌: ಎರಡೇ ತಿಂಗಳಲ್ಲಿ 43 ಸಾವಿರ ಕೋಟಿ ನಷ್ಟ ಕಂಡ ಎಲ್‌ಐಸಿ!

ಫೆಬ್ರವರಿ 5ರಂದು ಎಂಟು ಪ್ರಮುಖ ಸಹಕಾರಿ ಸಂಘಗಳ ಬೆಂಬಲದೊಂದಿಗೆ ಭಾರತ್ ಟ್ಯಾಕ್ಸಿ ಆರಂಭಗೊಂಡಿದೆ. ಅಧಿಕೃತ ಲಾಂಚ್ಗೂ ಮುನ್ನ ಎರಡು ತಿಂಗಳ ಪೈಲಟ್ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು ಓಲಾ (Ola Cabs), ಉಬರ್ (Uber) ಮತ್ತು ರ್ಯಾಪಿಡೋ (Rapido) ಮುಂತಾದ ಪ್ರಮುಖ ಕಂಪನಿಗಳಿಗೆ ಸ್ಪರ್ಧೆಯಾಗಲಿದೆ. ಭಾರತ್ ಟ್ಯಾಕ್ಸಿ ಮುಂದಿನ ಎರಡು ವರ್ಷಗಳಲ್ಲಿ 15 ಕೋಟಿ ಚಾಲಕರನ್ನು ಸಂಘಕ್ಕೆ ಸೇರಿಸಿಕೊಳ್ಳುವ ಗುರಿ ಹೊಂದಿದೆ. ಮೂರು ವರ್ಷಗಳಲ್ಲಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ನಗರಗಳಿಗೆ ಸೇವೆ ವಿಸ್ತರಿಸುವ ಯೋಜನೆ ಇದೆ. ಪ್ರಸ್ತುತ ದೆಹಲಿ-ಎನ್ಸಿಆರ್ ಮತ್ತು ರಾಜ್ಕೋಟ್ನಲ್ಲಿ ಸೇವೆ ಲಭ್ಯವಿದೆ . ಲಾಭ ಹಂಚಿಕೆಯನ್ನು ಸ್ಥಿರಗೊಳಿಸಲು ಸುಮಾರು ಮೂರು ವರ್ಷ ಬೇಕಾಗ್ಬಹುದು, ಅಲ್ಲಿಯವರೆಗೆ ತಾಳ್ಮೆಯಿಂದ ಇರುವಂತೆ ಅಮಿತ್ ಶಾ ಚಾಲಕರಿಗೆ ಮನವಿ ಮಾಡಿದ್ದಾರೆ.