ಮತ್ತೊಂದು ವಿದೇಶಿ ಕೆಫೆ ಜೊತೆಗೆ ರಿಲಯನ್ಸ್ ಒಪ್ಪಂದ;ಭಾರತಕ್ಕೆ ಬರಲಿದೆ ಲಂಡನ್ ಮೂಲದ ಈ ಪಿಂಕ್ ಕಾಫಿ ಶಾಪ್

ರಿಲಯನ್ಸ್ ಸಂಸ್ಥೆ ಈಗಾಗಲೇ ವಿದೇಶಿ ಮೂಲದ ಪ್ರೆಟ್ ಎ ಮ್ಯಾಂಗರ್  ಮೊದಲ ಔಟ್ ಲೆಟ್ ಅನ್ನು ಮುಂಬೈಯಲ್ಲಿ ಪ್ರಾರಂಭಿಸಿದೆ. ಈಗ ಲಂಡನ್ ಮೂಲದ ಇನ್ನೊಂದು ಕಾಫಿ ಕೆಫೆಯನ್ನು ಭಾರತಕ್ಕೆ ತರಲು ಒಪ್ಪಂದ ಮಾಡಿಕೊಂಡಿದೆ. ಆಕರ್ಷಕ ಇಂಟೀರಿಯರ್ ಮೂಲಕ ಮನೆಮಾತಾಗಿರುವ ಇಎಲ್ &ಎನ್ ಕೆಫೆ ಶೀಘ್ರದಲ್ಲೇ ಭಾರತದಲ್ಲಿ ತನ್ನ ಶಾಖೆ ತೆರೆಯಲಿದೆ. 

Mukesh Ambanis Reliance to bring this French themed cafe chain to India competing with Big Chill Diggin anu

Business Desk:ಭಾರತದಲ್ಲಿ ಕಾಫಿ ಕೆಫೆ ಚೈನ್ ಗಳ ಸಂಖ್ಯೆ ಹೆಚ್ಚುತ್ತಿದೆ. ವಿದೇಶಿ ಬ್ರ್ಯಾಂಡ್ ಗಳ ಜೊತೆಗೆ ದೇಶೀಯ ಸ್ಟಾರ್ಟ್ ಅಪ್ ಗಳು ಕೂಡ ಸದ್ದು ಮಾಡುತ್ತಿವೆ. ಕೆಲವು ಬ್ರ್ಯಾಂಡ್ ಗಳು ಯಶಸ್ಸು ಕಂಡಿವೆ ಕೂಡ. ಈ ನಡುವೆ ಎಲ್ಲ ಕ್ಷೇತ್ರಕ್ಕೂ ಉದ್ಯಮವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ರಿಲಯನ್ಸ್ ಸಂಸ್ಥೆ ಈಗ ಲಂಡನ್ ಮೂಲದ ರೆಸ್ಟೋರೆಮಟ್ ಚೈನ್ ವೊಂದನ್ನು ಭಾರತಕ್ಕೆ ತರಲು ಸಜ್ಜಾಗಿದೆ. ಮುಖೇಶ್ ಅಂಬಾನಿ ಹಾಗೂ ಇಶಾ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಬ್ರ್ಯಾಂಡ್ ಈ ಪ್ರಯತ್ನಕ್ಕೆ ಕೈಹಾಕಿದೆ. ಅತ್ಯಂತ ಆಕರ್ಷಕವಾದ ಇಂಟಿರೀಯರ್ ಮೂಲಕವೇ ಗ್ರಾಹಕರನ್ನು ಸೆಳೆಯುವ ಜೊತೆಗೆ ಇಂದಿನ ಯುವಜನಾಂಗದ ಅಭಿರುಚಿಗೆ ತಕ್ಕಂತೆ ಇರುವ ಈ ರೆಸ್ಟೋರೆಂಟ್ ಈಗಾಗಲೇ ವಿದೇಶಗಳಲ್ಲಿ ಹೆಸರು ಮಾಡಿದೆ. ಇಂಗ್ಲೆಂಡ್ ಮೂಲದ ಇಎಲ್ &ಎನ್ ಕೆಫೆ ಭಾರತದಲ್ಲಿ ತನ್ನ ಉದ್ಯಮ ವಿಸ್ತರಣೆಗೆ ರಿಲಯನ್ಸ್ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದೆ. ಈ ಬಗ್ಗೆ ರಿಲಯನ್ಸ್ ತ್ರೈಮಾಸಿಕ ಸಭೆಯಲ್ಲಿ ಕೂಡ ಮಾಹಿತಿ ನೀಡಲಾಗಿತ್ತು.ಇಎಲ್ &ಎನ್ ಕೆಫೆ ಆಹಾರ ಹಾಗೂ ಪಾನೀಯಗಳ ರಿಟೇಲ್ ಬ್ರ್ಯಾಂಡ್ ಆಗಿದ್ದು,ಇಂಗ್ಲೆಂಡ್ ಮಾತ್ರವಲ್ಲದೆ ಇತರ ಅನೇಕ ದೇಶಗಳಲ್ಲೂ ತನ್ನ ಶಾಖೆಗಳನ್ನು ಹೊಂದಿದೆ.

ಇಎಲ್ &ಎನ್ ಕೆಫೆ (EL&N Cafes) ಫ್ರಾನ್ಸ್, ಇಟಲಿ, ಲಂಡನ್, ಸೌದಿ ಅರೇಬಿಯಾ, ಕತ್ತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡಿದ್ದು, ಜಾಗತಿನಾದ್ಯಂತ 27ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಇಎಲ್ &ಎನ್ ಕೆಫೆ ತನ್ನ ಒಳಾಂಗಣ ವಿನ್ಯಾಸದಿಂದಲೇ ಜನಪ್ರಿಯತೆ ಗಳಿಸಿದೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಹೋದ ಕಡೆ ಬಂದ ಕಡೆ ಪೋಟೋ ತೆಗೆದು ಇನ್ ಸ್ಟಾಗ್ರಾಮ್, ಫೇಸ್ ಬುಕ್ ಗಳಲ್ಲಿ ಪೋಸ್ಟ್ ಮಾಡೋರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಫ್ರೆಂಚ್ ಹಾಗೂ ಅರೇಬಿಯನ್ ಥೀಮ್ ಮಿಶ್ರಿತ ಒಳಾಂಗಣ ವಿನ್ಯಾಸವನ್ನು ಈ ಕೆಫೆ ಹೊಂದಿದೆ. ಅಲ್ಲದೆ, ಯುವಜನಾಂಗವನ್ನು ಸೆಳೆಯುವಂತಹ ವಾತಾವರಣವನ್ನು ಹೊಂದಿದೆ. ಈ ಮೂಲಕ ಯುವಜನಾಂಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯೋದು ಈ ಕೆಫೆ ಉದ್ದೇಶ. ಅತ್ಯಂತ ಆಕರ್ಷಕ ಹಾಗೂ ಆಹ್ಲಾದಕರ ವಾತಾವರಣವನ್ನು ಹೊಂದಿರುವ ಕೆಫೆಗಳ ಮೂಲಕ ಇಎಲ್ &ಎನ್ ಈಗಾಗಲೇ ಉತ್ತಮ ಬ್ರ್ಯಾಂಡ್ ನೇಮ್ ಹೊಂದಿದೆ. 

ಪುತ್ರನ ಕಂಪೆನಿ ಬೆಳೆಸಲು ಮತ್ತೊಮ್ಮೆ 16,645 ಕೋಟಿ ರೂ ವಿದೇಶಿ ಸಾಲ ಪಡೆದ ಉದ್ಯಮಿ ಮುಖೇಶ್ ಅಂಬಾನಿ!

ಇಎಲ್ &ಎನ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮುನ್ನ ರಿಲಯನ್ಸ್ ರಿಟೇಲ್ ಇಂಗ್ಲೆಂಡ್ ಮೂಲದ ಜನಪ್ರಿಯ ಸ್ಯಾಂಡ್ ವಿಚ್ ಹಾಗೂ ಕಾಫಿ ಚೈನ್  ಪ್ರೆಟ್ ಎ ಮ್ಯಾಂಗರ್   ಜೊತೆಗೆ ಉದ್ಯಮ ಒಪ್ಪಂದ ಮಾಡಿಕೊಂಡಿತ್ತು. ಅಲ್ಲದೆ, ಪ್ರೆಟ್ ಎ ಮ್ಯಾಂಗರ್  ಮೊದಲ ಔಟ್ ಲೆಟ್ ಅನ್ನು ಮುಂಬೈಯಲ್ಲಿ ಪ್ರಾರಂಭಿಸಿದೆ ಕೂಡ. ಮುಂಬೈ ಬಾಂದ್ರಾ ಮಾರುಕಟ್ಟೆಯಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಮುಂಬೈನಲ್ಲಿರುವ ಈ ಕಾಫಿ ಸ್ಟೋರ್ 2567 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ಟಾಟಾ ಗ್ರೂಪ್ ನ ಸ್ಟಾರ್ ಬಕ್ಸ್ ಗೆ ತೀವ್ರ ಸ್ಪರ್ಧೆ ನೀಡಲಿದೆ ಎಂದು ಹೇಳಲಾಗಿದೆ. 

ಇಎಲ್ &ಎನ್ ಮೊದಲ ಔಟ್ ಲೆಟ್ ಲಂಡನ್ ನಲ್ಲಿ 2017 ರಲ್ಲಿ ಪ್ರಾರಂಭವಾಯಿತು. ಅಲ್ಲದೆ, ಇದನ್ನು ಜಗತ್ತಿನ ಅತ್ಯಂತ ಆಕರ್ಷಕ ಕೆಫೆ ಎಮದು ಕರೆಯಲಾಗಿದೆ ಕೂಡ. ಅತ್ಯಂತ ಆಕರ್ಷಕ ಒಳಾಂಗಣ ವಿನ್ಯಾಸದ ಮೂಲಕ ಇದು ಜನಪ್ರಿಯತೆ ಗಳಿಸಿದೆ. ಮುಖೇಶ್ ಅಂಬಾನಿ ಭಾರತದಲ್ಲಿ ಮೊದಲ ಇಎಲ್ &ಎನ್ ಕೆಫೆಯನ್ನು 2024ರಲ್ಲಿ ಪ್ರಾರಂಭಿಸುವ ನಿರೀಕ್ಷೆಯಿದೆ.

ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಸೆಮಣೆ ಏರೋ ದಿನ ಬಹಿರಂಗ!

ಗುಲಾಬಿ ವರ್ಣದ ಇಂಟೀರಿಯರ್, ಅಗ್ಗದ ಬೆಲೆ ಹಾಗೂ ಆಕರ್ಷಕ ಆಹಾರ ಹಾಗೂ ಪಾನೀಯಗಳ ಮೂಲಕ ಬಿಗ್ ಚಿಲ್ಲಿ, ಡಿಗ್ಗಿನ್, ಹಾಗೂ ಕೆಫೆ ಡೆಹಲಿ ಹೈಟ್ಸ್  ಮುಂತಾದ ದೊಡ್ಡ ಕೆಫೆ ಚೈನ್ ಗಳಿಗೆ ಪೈಪೋಟಿ ನೀಡಲಿದೆ. ಹಾಗೆಯೇ ಸ್ಟಾರ್ ಬಕ್ಸ್ ಹಾಗೂ ಕೋಸ್ಟ ಕಾಫಿ ಕೂಡ ಇದು ದೊಡ್ಡ ಪ್ರತಿಸ್ಪರ್ಧಿಯಾಗಲಿದೆ. 

Latest Videos
Follow Us:
Download App:
  • android
  • ios