ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಏರಿಳಿತಗಳಾಗುತ್ತವೆ. ಹೂಡಿಕೆ ತಜ್ಞರು ಬೆಲೆ ಕಡಿಮೆಯಾದಾಗ ಖರೀದಿಸಲು ಸಲಹೆ ನೀಡುತ್ತಾರೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿ ದರಗಳನ್ನು ತಿಳಿಯಿರಿ.

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಖರೀದಿಸಬೇಕು ಎಂಬವುದು ಎಲ್ಲಾ ವರ್ಗದವರ ಆಸೆಯಾಗಿರುತ್ತದೆ. ಆದ್ರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುತ್ತದೆ. ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಿರುತ್ತದೆ. ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸಬೇಕು ಎಂದು ಹೂಡಿಕೆ ತಜ್ಞರು ಸಲಹೆ ನೀಡುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ. 

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,611 ರೂಪಾಯಿ
8 ಗ್ರಾಂ: 60,888 ರೂಪಾಯಿ 
10 ಗ್ರಾಂ: 76,110 ರೂಪಾಯಿ
100 ಗ್ರಾಂ: 7,61,100 ರೂಪಾಯಿ

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,303 ರೂಪಾಯಿ
8 ಗ್ರಾಂ: 49,824 ರೂಪಾಯಿ
10 ಗ್ರಾಂ: 62,280 ರೂಪಾಯಿ
100 ಗ್ರಾಂ: 6,22,800 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 76,110 ರೂಪಾಯಿ, ಮುಂಬೈ: 76,110 ರೂಪಾಯಿ, ದೆಹಲಿ: 76,260 ರೂಪಾಯಿ, ಕೋಲ್ಕತ್ತಾ: 76,110 ರೂಪಾಯಿ, ಬೆಂಗಳೂರು: 76,110 ರೂಪಾಯಿ, ಹೈದರಾಬಾದ್: 76,110 ರೂಪಾಯಿ, ಪುಣೆ: 76,110 ರೂಪಾಯಿ, ವಡೋದರಾ: 76,160 ರೂಪಾಯಿ, ಅಹಮದಾಬಾದ್: 76,160 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
1 ಗ್ರಾಂ: 98.60 ರೂಪಾಯಿ 
10 ಗ್ರಾಂ: 986 ರೂಪಾಯಿ
100 ಗ್ರಾಂ: 9,860 ರೂಪಾಯಿ
1000 ಗ್ರಾಂ: 98,600 ರೂಪಾಯಿ

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆ ಏರಿಕೆಯಾಗುತ್ತಾ?

ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್‌, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಇದನ್ನು ನೀವು ಆ ದಿನದ ಚಿನ್ನದ ದರ ಹೇಗಿದೆ ಎಂಬುದರ ಮೇಲೆ ಬಹು ವರ್ಷಗಳ ನಂತರವೂ ಉತ್ತಮ ದರವನ್ನು ಪಡೆಯಬಹುದು. ಹೀಗಾಗಿಯೇ ಚಿನ್ನ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆಯ ವಿಷಯವಾಗಿದೆ. ಅಲ್ಲದೇ ಷೇರು ಮಾರುಕಟ್ಟೆಯ ಹೂಡಿಕೆದಾರರು ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಚಿನ್ನದ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ.

ಇದನ್ನೂ ಓದಿ: ಕೌಟುಂಬಿಕ ಮಾಸಿಕ ತಲಾ ವೆಚ್ಚ ಕುರಿತ ವರದಿ ಪ್ರಕಟ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?