ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆ ಏರಿಕೆಯಾಗುತ್ತಾ?
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮೊದಲೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ಸ್ಥಿತಿಯಲ್ಲಿ ಬಜೆಟ್ ನಂತರ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತಾ? ಈ ಕುರಿತು ವಿಶ್ವ ಗೋಲ್ಡ್ ಕೌನ್ಸಿಲ್ ಭವಿಷ್ಯವೇನು?

ಬಜೆಟ್ ಮಂಡನೆ
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಆದರೆ ಅದಕ್ಕೂ ಮೊದಲೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಈ ಸ್ಥಿತಿಯಲ್ಲಿ ಬಜೆಟ್ ನಂತರ ಚಿನ್ನದ ಬೆಲೆ ಏನಾಗುತ್ತೆ ಎಂಬ ಚರ್ಚೆ ಜೋರಾಗಿದೆ. ಕೇಂದ್ರ ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಾಗಲಿದೆ. ಯಾಕೆ ಚಿನ್ನದ ಬೆಲೆ ಬದಲಾವಣೆ ಬಿಸಿ ಜನಸಾಮಾನ್ಯರ ಮೇಲೂ ತಟ್ಟಲಿದೆ ಅನ್ನೋದು ವಿಶ್ವ ಗೋಲ್ಡ್ ಕೌನ್ಸಿಲ್ ಭವಿಷ್ಯ ನುಡಿದಿದೆ.
ಚಿನ್ನದ ಬೆಲೆ
ಮಂಗಳವಾರ ಸ್ವಲ್ಪ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ. ಆದರೆ ಇನ್ನೂ ಮಧ್ಯಮ ವರ್ಗದವರಿಗೆ ಚಿನ್ನ ಖರೀದಿಸುವುದು ಕಷ್ಟವಾಗಿದೆ. ಈಗಾಗಲೇ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದ ಪ್ರತಿ ಗ್ರಾಂ ಚಿನ್ನ ಕೂಡ ಜನಸಾಮಾನ್ಯರಿಗೆ ಕೈಗೆಟುಕದ ವಸ್ತುವಾಗಿ ಹೊರಹೊಮ್ಮಿದೆ.
ಬಜೆಟ್ ನಂತರ ಏನಾಗುತ್ತೆ?
ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025ರ ಮಂಡನೆ ಬಳಿಕ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ವಿಶ್ವ ಚಿನ್ನದ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ವರದಿ ಬಿಡುಗಡೆ ಮಾಡಿದೆ. ಚಿನ್ನದ ಮೇಲಿನ ಸುಂಕ ಹೆಚ್ಚಾದರೆ ಚಿನ್ನ ಬಲು ದುಬಾರಿಯಾಗಲಿದೆ. ಅಧ್ಯಯನ ವರದಿ ಪ್ರಕಾರ ಈ ಬಾರಿಯ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ವಿಶ್ವ ಚಿನ್ನ ಮಂಡಳಿ ಅಂದಾಡಿಸಿದೆ.
ಚಿನ್ನದ ಬೆಲೆ ಏರಿಕೆ
ಚಿನ್ನದ ಬೆಲೆ ಸ್ಥಿರವಾಗಿಡಲು ಮತ್ತು ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಆಮದು ಸುಂಕ ಕಡಿಮೆ ಮಾಡಿತ್ತು. ಆದರೆ ಈ ಬಾರಿಯ ಬಜೆಟ್, ಜನಸಾಮಾನ್ಯರ ಆದ್ಯತೆಗಳಿಗೆ ಅನುಗುಣವಾಗಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಪೈಕಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಾಗುವ ಸಾಧ್ಯತೆ ಇದೆ. ಇದು ನೇರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಮಾಡಲಿದೆ.
ಚಿನ್ನ ಬಳಕೆಯಲ್ಲಿ ಭಾರತ
ಚಿನ್ನ ಬಳಕೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಚಿನ್ನದ ಬೇಡಿಕೆ ತುಂಬಾ ಇರುವುದರಿಂದ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಚಿನ್ನ ನಿಕ್ಷೇಪಗಳು ಬರಿದಾಗಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಚಿನ್ನದ ನಿಕ್ಷೇಪ ಭಾರತ ಒಂದು ಭಾಗಕ್ಕೂ ಸಾಲದು. ಹೀಗಾಗಿ ವಿದೇಶಗಳಿಂದ ಚಿನ್ನದ ಆಮದು ಅನಿವಾರ್ಯವಾಗಿದೆ. ಇದೇ ಕಾರಣದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಲಿದೆ. ಪ್ರಮುಖವಾಗಿ ಸುಂಕ ಹೆಚ್ಚಳ ಈ ಬದಲಾವಣೆಗೆ ಕಾರಣವಾಗಲಿದೆ.
ಸುಂಕದ ಸಮಸ್ಯೆ
ಚಿನ್ನದ ಮೇಲಿನ ಸುಂಕ ಹೆಚ್ಚಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿಶ್ವ ಚಿನ್ನದ ಮಂಡಳಿಯ ಪ್ರಾದೇಶಿಕ CEO ಶಚೀನ್ ಜೈನ್ ಹೇಳಿದ್ದಾರೆ. ಆದರೆ ಇತರ ಎಲ್ಲಾ ಕ್ಷೇತ್ರಗಳ ಮೇಲಿನ ಲೆಕ್ಕಾಚಾರ ನೋಡಿ ಬಜೆಟ್ ಸಿದ್ಧಪಡಿಸಲಾಗುತ್ತದೆ. ಪ್ರಮುಖವಾಗಿ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಮೇಲೆ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ.