ಗೃಹಸಾಲದಂತೆ ಕ್ರೆಡಿಟ್ ಕಾರ್ಡ್ ಸಾಲದ ವರ್ಗಾವಣೆ ಸಾಧ್ಯನಾ? ಇಲ್ಲಿದೆ ಮಾಹಿತಿ
ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಬಡ್ಡಿದರ ನಿಮ್ಮ ಚಿಂತೆಗೆ ಕಾರಣವಾಗಿದೆಯಾ? ಹಾಗಾದ್ರೆ ಬೇರೆ ಬ್ಯಾಂಕಿಗೆ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಮಾಡುವ ಬಗ್ಗೆ ಯೋಚಿಸಿ. ಇದ್ರಿಂದ ಬಡ್ಡಿದರದ ಹೊರೆ ತಗ್ಗುತ್ತದೆ. ಅಲ್ಲದೆ, ಕೆಲವೊಂದು ಬ್ಯಾಂಕ್ ಗಳು ಬಡ್ಡಿರಹಿತ ಅವಧಿಯನ್ನು ಕೂಡ ಒದಗಿಸುತ್ತವೆ. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಸರಳ ಹಾಗೂ ಸುಲಭ.
Business Desk: ಇಂದು ಸಾಮಾನ್ಯವಾಗಿ ಬಹುತೇಕರ ಬಳಿ ಕ್ರೆಡಿಟ್ ಕಾರ್ಡ್ ಇದ್ದೇ ಇರುತ್ತದೆ. ಬ್ಯಾಂಕ್ ಖಾತೆಯಲ್ಲಿ ನಯಾಪೈಸೆಯೂ ಇಲ್ಲದ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಆಪ್ತಮಿತ್ರನಂತೆ ನೆರವಿಗೆ ಬರುತ್ತದೆ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಕೈಯಲ್ಲಿದ್ರೆ ಅದೇನೋ ಧೈರ್ಯ. ಹೀಗಿರುವಾಗ ಒಂದು ಕ್ರೆಡಿಟ್ ಕಾರ್ಡ್ ನಿಂದ ಇನ್ನೊಂದು ಕ್ರೆಡಿಟ್ ಕಾರ್ಡ್ ಗೆ ಬ್ಯಾಲೆನ್ಸ್ ವರ್ಗಾವಣೆ ಮಾಡಬಹುದಾ? ಮಾಡಲು ಸಾಧ್ಯವಿದೆ. ಇಂಥ ಸೌಲಭ್ಯವನ್ನು ಕೆಲವು ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗಳು ಹೊಂದಿವೆ. ಉದಾಹರಣೆಗೆ ಈಗ ನಿಮ್ಮ ಬಳಿಯಿರುವ ಕ್ರೆಡಿಟ್ ಕಾರ್ಡ್ ಸಾಲದ ಮೇಲೆ ದೊಡ್ಡ ಮೊತ್ತದ ಬಡ್ಡಿದರ ವಿಧಿಸಲಾಗುತ್ತಿದ್ರೆ, ನೀವು ಕಡಿಮೆ ಬಡ್ಡಿದರ ವಿಧಿಸುವ ಬ್ಯಾಂಕಿಗೆ ವರ್ಗಾಯಿಸಬಹುದು. ಇದ್ರಿಂದ ಕ್ರೆಡಿಟ್ ಕಾರ್ಡ್ ಸಾಲದ ಹೊರೆ ಸ್ವಲ್ಪ ಮಟ್ಟಗೆ ತಗ್ಗುತ್ತದೆ. ಅಲ್ಲದೆ, ಹಣಕಾಸಿನ ಸ್ಥಿತಿಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯ ಕೂಡ ಹೆಚ್ಚಲಿದೆ. ಹಳೆಯ ಕ್ರೆಡಿಟ್ ಕಾರ್ಡ್ ನಿಂದ ಉತ್ತಮ ಷರತ್ತುಗಳು ಹಾಗೂ ಕಡಿಮೆ ಬಡ್ಡಿದರ ಹೊಂದಿರುವ ಹೊಸ ಕ್ರೆಡಿಟ್ ಕಾರ್ಡ್ ಗೆ ಬ್ಯಾಲೆನ್ಸ್ ವರ್ಗಾವಣೆ ಮಾಡಲು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಸೌಲಭ್ಯ ಅವಕಾಶ ಕಲ್ಪಿಸುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಒದಗಿಸುವ ಕೆಲವು ಸಂಸ್ಥೆಗಳು ಬ್ಯಾಲೆನ್ಸ್ ವರ್ಗಾವಣೆ ವೆಚ್ಚವನ್ನು ಕೂಡ ವಿಧಿಸುವುದಿಲ್ಲ. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ವೆಚ್ಚ ಸಾಮಾನ್ಯವಾಗಿ ಸಾಲದ ಮೊತ್ತೆ ಶೇ.3ರಿಂದ ಶೇ.5ರಷ್ಟು ಇರುತ್ತದೆ. ಹಾಗೆಯೇ ಪ್ರಾರಂಭಿಕ ಅಥವಾ ಉತ್ತೇಜನಕಾರಿ ಕ್ರಮವಾಗಿ 6ರಿಂದ 18 ತಿಂಗಳುಗಳ ಕಾಲ ವರ್ಗಾವಣೆ ಮಾಡಿದ ಮೊತ್ತದ ಮೇಲೆ ಯಾವುದೇ ಬಡ್ಡಿ ಕೂಡ ವಿಧಿಸುವುದಿಲ್ಲ.
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಹೇಗೆ?
ನಿಮಗೆ ಯಾವುದಾದ್ರೂ ಸಂಸ್ಥೆ ಶೂನ್ಯ ಬಡ್ಡಿದರದಲ್ಲಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಗೆ ಅವಕಾಶ ನೀಡಿದ್ರೆ ಆಗ ಬಡ್ಡಿದರ ಸ್ಥಿರವಾಗಿರುತ್ತದಾ ಅಥವಾ ಕ್ರೆಡಿಟ್ ಚೆಕ್ ಮೇಲೆ ಅವಲಂಬಿತವಾಗಿರುತ್ತದಾ? ಎಂಬುದನ್ನು ಪರಿಶೀಲಿಸಿ. ಆ ಬಳಿಕ ನಿರ್ಧಾರ ಕೈಗೊಳ್ಳಿ. ಬ್ಯಾಲೆನ್ಸ್ ವರ್ಗಾವಣೆಗೆ ಪ್ರೊಸೆಸಿಂಗ್ ಶುಲ್ಕ ಕೂಡ ವಿಧಿಸಲಾಗುತ್ತದೆ. ಹೀಗಾಗಿ ಈ ಬಗ್ಗೆ ಕೂಡ ವಿಚಾರಿಸಿ.
ಅಮೃತ್ ಕಲಶ್ ಯೋಜನೆ ಪರಿಚಯಿಸಿದ SBI; ಹಿರಿಯ ನಾಗರಿಕರಿಗೆ ಶೇ.7.6 ಬಡ್ಡಿದರ
ಇನ್ನೊಂದು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ಬ್ಯಾಲೆನ್ಸ್ ವರ್ಗಾವಣೆ
ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಸಾಲ ಹೊಂದಿದ್ದು, ಅದನ್ನು ಪಾವತಿಸಲು ಕಷ್ಟಪಡುತ್ತಿರೋರಿಗೆ ಸಹಾಯಕವಾಗಲಿದೆ. ಇಂಥ ಗ್ರಾಹಕರು ಕಡಿಮೆ ಬಡ್ಡಿದರ ಹೊಂದಿರುವ ಹೊಸ ಬ್ಯಾಂಕ್ ಅಥವಾ ಇನ್ನೊಂದು ಸಂಸ್ಥೆಗೆ ವರ್ಗಾವಣೆ ಹೊಂದಲು ಬಯಸುತ್ತಾರೆ. ಈ ರೀತಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಬ್ಯಾಲೆನ್ಸ್ ವರ್ಗಾವಣೆ ಮಾಡೋದ್ರಿಂದ ಅವರ ಮೇಲಿನ ಸಾಲದ ಹೊರೆ ತಗ್ಗುತ್ತದೆ.
ಬ್ಯಾಲೆನ್ಸ್ ವರ್ಗಾವಣೆಗೆ ಅವಕಾಶವಿರುವ ಕ್ರೆಡಿಟ್ ಕಾರ್ಡ್ ಗಳು: ಎಸ್ ಬಿಐ ಕಾರ್ಡ್, ಎಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಚ್ ಎಸ್ ಬಿಸಿ, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್
ಸಾಲದ ಬಡ್ಡಿದರ ಏರಿಕೆ ಮಾಡಿದ SBI;ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ
ಬ್ಯಾಲೆನ್ಸ್ ವರ್ಗಾವಣೆ ಪ್ರಯೋಜನಗಳು:
*ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ತ್ವರಿತ ಹಾಗೂ ಸರಳ ಪ್ರಕ್ರಿಯೆಯಾಗಿದೆ. ಒಂದು ವೇಳೆ ಗ್ರಾಹಕ ಬ್ಯಾಲೆನ್ಸ್ ವರ್ಗಾವಣೆಗೆ ಅಗತ್ಯವಾದ ಅವಶ್ಯಕತೆಗಳನ್ನು ಪೂರೈಸಿದರೆ, ಬ್ಯಾಂಕ್ ಗಳು ಒಂದು ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಿಂದ ಇನ್ನೊಂದು ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಗೆ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸುತ್ತವೆ. ಇದ್ರಿಂದ ಗ್ರಾಹಕನಿಗೆ ಕ್ರೆಡಿಟ್ ಕಾರ್ಡ್ ಸಾಲ ನಿರ್ವಹಿಸಲು ನೆರವು ಸಿಗಲಿದೆ.
*ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್ ನ ಎಲ್ಲ ಸಾಲವನ್ನು ಹೊಸ ಕಾರ್ಡ್ ಗೆ ವರ್ಗಾಯಿಸೋದು ಹೆಚ್ಚು ಸೂಕ್ತವಾಗಲಿದೆ. ಅಲ್ಲದೆ, ಬಹುತೇಕ ಸಂಸ್ಥೆಗಳು ಈ ಆಯ್ಕೆ ಒದಗಿಸುತ್ತವೆ. ಸಾಲಗಾರರು ಈಗ ತನ್ನ ಎಲ್ಲ ಬಿಲ್ ಗಳನ್ನು ಒಂದೇ ಬಾರಿಗೆ ಪಾವತಿಸಬಹುದು.
*ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಸಾಲಗಾರರಿಗೆ ಅನೇಕ ರೀತಿಯಲ್ಲಿ ಪ್ರಯೋಜನ ಕಲ್ಪಿಸಲಿದೆ. ಬಡ್ಡಿರಹಿತ ಅವಧಿ ಹಾಗೂ ಕಡಿಮೆ ಬಡ್ಡಿದರವನ್ನು ಒದಗಿಸಲಿದೆ.