ಅಮೃತ್ ಕಲಶ್ ಯೋಜನೆ ಪರಿಚಯಿಸಿದ SBI; ಹಿರಿಯ ನಾಗರಿಕರಿಗೆ ಶೇ.7.6 ಬಡ್ಡಿದರ

ಆರ್ ಬಿಐ ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳು ಎಫ್ ಡಿ ಮೇಲೆ ಉತ್ತಮ ಬಡ್ಡಿ ನೀಡುತ್ತಿವೆ. ಎಸ್ ಬಿಐ ಕೂಡ ಇತ್ತೀಚೆಗೆ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದೆ. ಅಲ್ಲದೆ, ಅಮೃತ್ ಕಲಶ್ ಎಂಬ ಕಿರು ಅವಧಿಯ ಠೇವಣಿ ಯೋಜನೆ ಪರಿಚಯಿಸಿದೆ. ಈ ಯೋಜನೆಯಲ್ಲಿನ ಹೂಡಿಕೆಗೆ ಶೇ.7.6 ಬಡ್ಡಿದರ ನಿಗದಿಪಡಿಸಲಾಗಿದೆ. 

SBI launches attractive SBI Amrit Kalash Scheme with up to 760 percent interest rate for senior citizens

ನವದೆಹಲಿ (ಫೆ.18):  ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಒಂದು ವರ್ಷದ ಅವಧಿಯಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದ ಬೆನ್ನಲ್ಲೇ ಸ್ಥಿರ ಠೇವಣಿ (ಎಫ್ ಡಿ)  ಮೇಲಿನ ಬಡ್ಡಿದರವನ್ನು ಬ್ಯಾಂಕ್ ಗಳು ಹೆಚ್ಚಳ ಮಾಡಿವೆ. ಹೀಗಾಗಿ ಇತ್ತೀಚೆಗೆ ಹೂಡಿಕೆದಾರರು ಸಹಜವಾಗಿ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಲು  ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಸ್ ಬಿಐ ಅಮೃತ್ ಕಲಶ್ ಯೋಜನೆ ಪರಿಚಯಿಸಿದೆ. ಇದು ನಿಗದಿತ ಅವಧಿಯ ಸ್ಥಿರ ಠೇವಣಿಯಾಗಿದೆ. ಗ್ರಾಹಕರಿಗೆ ಅತ್ಯಾಕರ್ಷಕ ರಿಟರ್ನ್ಸ್ ಕೂಡ ನೀಡುತ್ತಿದೆ. ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ರಿಟರ್ನ್ ಸಿಗುತ್ತಿದೆ. ಇನ್ನು ಬ್ಯಾಂಕಿನ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಹೆಚ್ಚುವರಿ ಶೇ.1ರಷ್ಟು ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಎಸ್ ಬಿಐ ಅಮೃತ್ ಕಲಶ್ ಯೋಜನೆಯ ಅವಧಿ 400 ದಿನಗಳಾಗಿವೆ. ಈ ಯೋಜನೆಯಲ್ಲಿ  ಹೂಡಿಕೆದಾರರು ಹಣವನ್ನು 2023ರ ಫೆಬ್ರವರಿ 15 ಹಾಗೂ 2023ರ ಮಾರ್ಚ್ 31ರ ನಡುವೆ ಹೂಡಿಕೆ ಮಾಡಬೇಕು. ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 

ಸುಮಾರು ಒಂದು ವರ್ಷ ಅವಧಿಗೆ ಹೂಡಿಕೆ ಮಾಡಲು ಯೋಚಿಸುತ್ತಿರುವ ವ್ಯಕ್ತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಎಸ್ ಬಿಐ ಅಮೃತ್ ಕಲಶ್ ಯೋಜನೆಗೆ ನೀಡುತ್ತಿರುವ ಬಡ್ಡಿದರ ಅಂಚೆ ಕಚೇರಿಯ ಒಂದು ವರ್ಷ ಅವಧಿಯ ಟೈಮ್ ಡೆಫಾಸಿಟ್ ಗಿಂತ ಹೆಚ್ಚಿದೆ. ಹೀಗಾಗಿ ಕಡಿಮೆ ಅವಧಿಗೆ ಹೂಡಿಕೆ ಮಾಡಲು ಬಯಸೋರು ಈ ಯೋಜನೆ ಆಯ್ಕೆ ಮಾಡಬಹುದು.

ಈ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ರಿಸ್ಕ್ ಕಡಿಮೆ,ರಿಟರ್ನ್ಸ್ ಅಧಿಕ!

ಎಷ್ಟು ಬಡ್ಡಿ ಗಳಿಕೆ ಮಾಡಬಹುದು?
ಅಮೃತ್ ಕಲಶ್ ಯೋಜನೆ ಅವಧಿ 400 ದಿನಗಳು. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 1ಲಕ್ಷ ರೂ. ಹೂಡಿಕೆ ಮಾಡಿದ್ರೆ ಸುಮಾರು 8600 ಬಡ್ಡಿ ಸಿಗುತ್ತದೆ. ಇತರರಿಗೆ 400 ದಿನಗಳ ಅವಧಿಗೆ 1ಲಕ್ಷ ರೂ. ಹೂಡಿಕೆ ಮೇಲೆ 8,017ರೂ. ಬಡ್ಡಿದರ ಸಿಗುತ್ತದೆ. 

ಎಸ್ ಬಿಐ ಸ್ಥಿರ ಠೇವಣಿ (FD) ಹಾಗೂ ರಿಕರಿಂಗ್ ಡೆಫಾಸಿಟ್ (RD) ಮೇಲಿನ ಬಡ್ಡಿದರದಲ್ಲಿ ಕೂಡ ಹೆಚ್ಚಳ ಮಾಡಿದೆ. ಏಳು ದಿನಗಳಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಎಸ್ ಬಿಐ ಶೇ.3ರಿಂದ ಶೇ. 6.50 ಬಡ್ಡಿ ವಿಧಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಶೇ.3.50ರಿಂದ ಶೇ.7.25 ಬಡ್ಡಿ ವಿಧಿಸುತ್ತಿದೆ. ಇನ್ನು 12 ತಿಂಗಳಿಂದ ಹಿಡಿದು 10 ವರ್ಷಗಳ ಅವಧಿಯ ಆರ್ ಡಿ ಯೋಜನೆಗಳ ಮೇಲಿನ ಬಡ್ಡಿದರ ಶೇ.6.5ರಿಂದ ಶೇ.6.80ರಷ್ಟಿದೆ. 

ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ಮಾ.17ರಿಂದ ಶುಲ್ಕಗಳಲ್ಲಿ ಬದಲಾವಣೆ

ಅನೇಕ ಇತರ ಬ್ಯಾಂಕ್ ಗಳು ಎಫ್ ಡಿ ಬಡ್ಡಿದರದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ಎಸ್ ಬಿಐ ಕೂಡ ಅಧಿಕ ಬಡ್ಡಿದರ ನೀಡುವ ಈ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. ಅನೇಕ ಸಣ್ಣ ಹಣಕಾಸು ಬ್ಯಾಂಕ್ ಗಳು ಎಫ್ ಡಿ ಯೋಜನೆಗಳ ಮೇಲೆ ಶೇ.9ರಷ್ಟು ಬಡ್ಡಿದರ ನೀಡುತ್ತಿವೆ. ಹೀಗಾಗಿ ಎಸ್ ಬಿಐ ಬಡ್ಡಿದರ ಹೆಚ್ಚಳ ಮಾಡಿರೋದು ಅದರ ಗ್ರಾಹಕರಿಗೆ ಖುಷಿಯ ವಿಚಾರವಾಗಿದೆ. 


 

Latest Videos
Follow Us:
Download App:
  • android
  • ios