D Mart Business : ಡಿ ಮಾರ್ಟ್ ನಂತ ದೊಡ್ಡ ಮಳಿಗೆಯಲ್ಲಿ ನಿಮ್ಮ ಉತ್ಪನ್ನ ಮಾರಾಟವಾದ್ರೆ ಖುಷಿ ಜೊತೆ ಲಾಭ ಗ್ಯಾರಂಟಿ. ಆದ್ರೆ ನಿಮ್ಮ ವಸ್ತುಗಳನ್ನು ಮಾರಾಟ ಮಾಡೋದು ಹೇಗೆ? ಅದಕ್ಕೆ ಏನೆಲ್ಲ ಬೇಕು ಎಂಬ ವಿವರ ಇಲ್ಲಿದೆ.
ಅತಿ ಕಡಿಮೆ ಬೆಲೆಗೆ ಅನೇಕ ವಸ್ತುಗಳನ್ನು ಡಿ ಮಾರ್ಟ್ ಮಾರಾಟ ಮಾಡುತ್ತೆ. ಅಲ್ಲಿ ಅನೇಕ ವಸ್ತುಗಳನ್ನು ನೀವು ನೋಡಿರ್ತೀರಿ. ನಿಮ್ಮ ಪ್ರಾಡಕ್ಟ್ ಕೂಡ ಡಿ ಮಾರ್ಟ್ ನಲ್ಲಿ ಮಾರಾಟ ಆಗ್ಬೇಕು ಎನ್ನುವ ಆಸೆ ಇರುತ್ತೆ. ಆದ್ರೆ ಅಲ್ಲಿ ಹೇಗೆ ಮಾರಾಟ ಮಾಡೋದು ಎನ್ನುವ ಮಾಹಿತಿ ಇರೋದಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.
ಡಿ-ಮಾರ್ಟ್ನಲ್ಲಿ ಅವಕಾಶ
ಡಿ ಮಾರ್ಟ್ ನಲ್ಲಿ ನೀವು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡ್ಬಹುದು. ಆದ್ರೆ ಡಿ ಮಾರ್ಟ್ ಫ್ರಾಂಚೈಸಿ ನೀಡೋದಿಲ್ಲ. ನೀವು ಡಿ ಮಾರ್ಟ್ ಮಳಿಗೆಯಲ್ಲಿ ನಿಮ್ಮ ವಸ್ತು ಮಾರಾಟ ಮಾಡ್ಬಹುದೇ ವಿನಃ ನಿವೇ ಡಿ ಮಾರ್ಟ್ ಮಳಿಗೆಯನ್ನು ನಿಮ್ಮೂರಿನಲ್ಲಿ ಓಪನ್ ಮಾಡಲು ಸಾಧ್ಯವಿಲ್ಲ. ನೀವು ಡಿ-ಮಾರ್ಟ್ಗೆ ಸಪ್ಲೈಯರ್ ಅಥವಾ ವೆಂಡರ್ ಆಗಿ ಅರ್ಜಿ ಸಲ್ಲಿಸಬಹುದು.
ಆದಾಯ ಹೆಚ್ಚಳಕ್ಕೆ BMTC ಹೊಸ ಪ್ಲಾನ್; ಬಸ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿದೆ ನ್ಯೂ
ಯಾವ ಗುಣಗಳು ಇರಬೇಕು?
ಡಿ-ಮಾರ್ಟ್ ನಿಮ್ಮ ಪ್ರಾಡಕ್ಟ್ ಖರೀದಿಸುವ ಮೊದಲು ಕೆಲವು ವಿಷಯಗಳನ್ನು ಪರಿಶೀಲಿಸುತ್ತದೆ. ನಿಮ್ಮ ಉತ್ಪನ್ನದ ಗುಣಮಟ್ಟ ಉತ್ತಮವಾಗಿರಬೇಕು. ಬೆಲೆ ಸ್ಪರ್ಧಾತ್ಮಕವಾಗಿರಬೇಕು. ಪ್ಯಾಕಿಂಗ್ ಆಕರ್ಷಕವಾಗಿರಬೇಕು. ಜೊತೆಗೆ ಬೇಡಿಕೆ ಬಂದಾಗ ನಿರಂತರವಾಗಿ ಸರಕು ಪೂರೈಸುವ ಸಾಮರ್ಥ್ಯವೂ ಇರಬೇಕು.
ಯಾವ ದಾಖಲೆಗಳು ಬೇಕು?
ನಿಮ್ಮ ಉತ್ಪನ್ನದ ಪ್ರಕಾರ ಕೆಲವು ದಾಖಲೆಗಳು ಅತ್ಯಗತ್ಯ. ಸಾಮಾನ್ಯವಾಗಿ GST, PAN ಕಡ್ಡಾಯ. ಆಹಾರ ಪದಾರ್ಥಗಳಿದ್ದರೆ FSSAI ಲೈಸೆನ್ಸ್ ಬೇಕಾಗುತ್ತದೆ. ಕೆಲವು ಉತ್ಪನ್ನಗಳಿಗೆ BIS ಅಥವಾ ಇತರ ಸರ್ಕಾರಿ ಪ್ರಮಾಣಪತ್ರಗಳೂ ಅಗತ್ಯವಾಗಬಹುದು.
ಎಷ್ಟು ಹಣ ಬೇಕಾಗುತ್ತದೆ?
ಸಪ್ಲೈಯರ್ ಆಗಲು ಪ್ರತ್ಯೇಕ ಫ್ರಾಂಚೈಸಿ ಶುಲ್ಕ ಇರುವುದಿಲ್ಲ. ಆದರೆ ಉತ್ಪನ್ನ ತಯಾರಿಕೆ, ಪ್ಯಾಕಿಂಗ್, ಸ್ಟಾಕ್ ಇಟ್ಟುಕೊಳ್ಳುವುದು, ಸಾರಿಗೆ ಮತ್ತು ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡಲು ಸಾಕಷ್ಟು ಬಂಡವಾಳ ಇರಬೇಕು. ಕೆಲವು ಉತ್ಪನ್ನ ವಿಭಾಗಗಳಲ್ಲಿ ವಾಣಿಜ್ಯ ಒಪ್ಪಂದದ ಪ್ರಕಾರ ಲಿಸ್ಟಿಂಗ್ ಅಥವಾ ಶೆಲ್ಫ್ ಶುಲ್ಕವೂ ಇರಬಹುದು.
ಚೀನಾ, ಸೌದಿ, IMF ಆಯ್ತು ಈಗ ಅಮೆರಿಕದ ಮುಂದೆ 85 ಸಾವಿರ ಕೋಟಿ ಸಾಲಕ್ಕೆ ಭಿಕ್ಷಾಪಾತ್ರೆ ಹಿಡಿದ ಪಾಕಿಸ್ತಾನ
ತಿಂಗಳಿಗೆ ಎಷ್ಟು ಲಾಭ?
ನೀವು ಡಿ ಮಾರ್ಟ್ ನಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಎಷ್ಟು ಲಾಭ ಪಡೆಯಬಹುದು ಎಂಬುದು ನಿಮ್ಮ ಉತ್ಪನ್ನವನ್ನು ಅವಲಂಭಿಸಿದೆ. ನಿಮ್ಮ ಉತ್ಪನ್ನಕ್ಕೆ ಉತ್ತಮ ಬೇಡಿಕೆ ಇದ್ದಲ್ಲಿ, ಒಳ್ಳೆ ಗುಣಮಟ್ಟ ಕಾಯ್ದುಕೊಂಡಿದ್ದಲ್ಲಿ ನೀವು ಹೆಚ್ಚಿನ ಲಾಭ ಗಳಿಸುತ್ತೀರಿ. ಪ್ರಾಡಕ್ಟ್ಗೆ ಇರುವ ಬೇಡಿಕೆ, ಮಾರಾಟದ ಪ್ರಮಾಣ, ವೆಚ್ಚ, ವ್ಯವಹಾರ ನಿರ್ವಹಣೆ ಮತ್ತು ಡಿ-ಮಾರ್ಟ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಮೇಲೆ ಲಾಭ ಅವಲಂಬಿತವಾಗಿರುತ್ತದೆ.
ಕೊನೆಯ ಮಾತು
ನಿಮ್ಮ ಉತ್ಪನ್ನದ ಗುಣಮಟ್ಟ ಉತ್ತಮವಾಗಿದ್ದರೆ, ಸರಿಯಾದ ದಾಖಲೆಗಳು ಇದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಸರಕು ಪೂರೈಸುವ ಸಾಮರ್ಥ್ಯ ಇದ್ದರೆ, ಡಿ-ಮಾರ್ಟ್ನಂತಹ ದೊಡ್ಡ ರಿಟೇಲ್ ಸ್ಟೋರ್ನಲ್ಲಿ ನಿಮ್ಮ ಪ್ರಾಡಕ್ಟ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮೊದಲು ಉತ್ತಮ ಬ್ರ್ಯಾಂಡ್ ನಿರ್ಮಿಸಿ, ಗುಣಮಟ್ಟ ಕಾಪಾಡಿ ಮತ್ತು ಗ್ರಾಹಕರ ವಿಶ್ವಾಸ ಗಳಿಸುವತ್ತ ಗಮನ ಕೊಡಿ.

