ಅಣ್ಣನಿಗೆ ಸಂಪತ್ತಿನ ಸಿರಿ: ತಮ್ಮನಿಗೆ ಸಂಕಷ್ಟದ ಹೊಳೆ: ಇಡಿ ಮುಂದೆ ಹಾಜರಾದ ಅನಿಲ್ ಅಂಬಾನಿ ಪತ್ನಿ ಟೀನಾ
ಒಂದೆಡೆ ಮುಕೇಶ್ ಅಂಬಾನಿ ಆದಾಯ ದಿನದಿಂದ ದಿನಕ್ಕೆ ಏರುತ್ತಲೇ ಹೋದರೆ ಅತ್ತ ಸಹೋದರ ಅನಿಲ್ ಅಂಬಾನಿ ಒಂದಲ್ಲ ಒಂದು ಸಂಕಟಕ್ಕೆ ಸಿಲುಕುತ್ತಲೇ ಇದ್ದಾರೆ. ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಮುಂಬೈ: ಒಂದೆಡೆ ಮುಕೇಶ್ ಅಂಬಾನಿ ಆದಾಯ ದಿನದಿಂದ ದಿನಕ್ಕೆ ಏರುತ್ತಲೇ ಹೋದರೆ ಅತ್ತ ಸಹೋದರ ಅನಿಲ್ ಅಂಬಾನಿ ಒಂದಲ್ಲ ಒಂದು ಸಂಕಟಕ್ಕೆ ಸಿಲುಕುತ್ತಲೇ ಇದ್ದಾರೆ. ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ಪತ್ನಿ ಟೀನಾಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿತ್ತು. ಅದರಂತೆ ಇಂದು ಅವರು ವಿಚಾರಣೆಗಾಗಿ ಇಡಿ ಮುಂದೆ ಹಾಜರಾದರು.
ಒಂದು ಕಾಲದ ಬಾಲಿವುಡ್ ನಟಿಯೂ ಆಗಿದ್ದ ಟೀನಾ ಅವರ ಪತಿ ಉದ್ಯಮಿ ಅನಿಲ್ ಅಂಬಾನಿ ಅವರು ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜ್ಮೆಂಟ್ ಆಕ್ಟ್‌ನ ಹಲವು ಸೆಕ್ಷನ್‌ಗಳಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಇಂದು ಪತ್ನಿ ಟೀನಾ ಇಡಿ ಎದುರು ಹಾಜರಾಗಿದ್ದಾರೆ. ಇದಕ್ಕೂ ಮೊದಲು ಅನಿಲ್ ಅಂಬಾನಿ ಕೇಂದ್ರೀಯ ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು. ಮುಂಬೈನ ಬಲ್ಲರ್ಡ್ ಎಸ್ಟೇಟ್ ಪ್ರದೇಶದ (Ballard Estate area) ಕೇಂದ್ರ ತನಿಖಾ ತಂಡ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ಯಾರಿದು ಅನಿಲ್ ಅಂಬಾನಿ ಸೊಸೆ ಕ್ರಿಶಾ ಶಾ? ಇವರ ನೆಟ್‌ವರ್ತ್ ಎಷ್ಟು ಗೊತ್ತಾ?
ಯೆಸ್ ಬ್ಯಾಂಕ್ ನಿಂದ ಸಾಲ ಮಂಜೂರು ಮಾಡಲು ಕಿಕ್‌ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಅನಿಲ್ ಅಂಬಾನಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಈಹಗರಣದಲ್ಲಿ ಅದರ ಸಹ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿತ್ತು. ಅಂಬಾನಿ ಭಾಗಿಯಾಗಿದ್ದಾರೆ ಎನ್ನಲಾದ ಈ ಪ್ರಕರಣದ ವಿವರಗಳು ಬಗ್ಗೆ ಇನ್ನೂ ಖಚಿತತೆ ಇಲ್ಲ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 420 ಕೋಟಿ ರೂಪಾಯಿ ತೆರಿಗೆ ವಂಚನೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ (Bombay High Court) ಅನಿಲ್ ಅಂಬಾನಿ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸುವ ಮೂಲಕ ಉದ್ಯಮಿ ಅನಿಲ್ ಅಂಬಾನಿಗೆ ರಿಲೀಫ್ ನೀಡಿತ್ತು.
ಇತ್ತ ಅನಿಲ್ ಸಹೋದರ ಮುಕೇಶ್ ಅಂಬಾನಿ ಏಷ್ಯಾದ ಭಾರತದ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದರೆ, ಇತ್ತ ಅನಿಲ್ ಅಂಬಾನಿ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದಾರೆ, ಈ ಹಿಂದೆ ಹೀಗೆ ಸಂಕಷ್ಟಕ್ಕೆ ಸಿಲುಕಿದ ಸಹೋದರ ಜೈಲಿಗೆ ಹೋಗದಂತೆ ಮುಕೇಶ್ ಅಂಬಾನಿ ಅವರೇ ತಡೆದಿದ್ದರು. ಒಡಹುಟ್ಟಿದವರಾದರೂ ಸಹೋದರರ ಮಧ್ಯೆ ಅತಂಹ ಒಳ್ಳೆ ಬಾಂಧವ್ಯವಿಲ್ಲದೇ ಇಬ್ಬರೂ ದೂರ ದೂರವೇ ಇದ್ದಿದ್ದರು. ಒಂಭತ್ತು ವರ್ಷಗಳ ಕಾಲ ಅಣ್ಣ ತಮ್ಮನ ಕುಟುಂಬದ ಮಧ್ಯೆ ಉತ್ತಮ ಒಡನಾಟವಿರಲಿಲ್ಲ. ಆದರೆ 2019ರಲ್ಲಿ ಸಹೋದರ ಅನಿಲ್ ಅಂಬಾನಿ ಬಾಕಿ ಪಾವತಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ 9 ವರ್ಷಗಳ ಕಾಲದ ಸಹೋದರರ ನಡುವಿನ ಕಹಿ ಶೀತಲ ಸಮರದ ಮಧ್ಯೆಯೇ ಮುಕೇಶ್ ಅಂಬಾನಿ ಸಹೋದರನ ನೆರವಿಗೆ ಬಂದು ಜೈಲಿಗೆ ಹೋಗುವುದರಿಂದ ಪಾರು ಮಾಡಿದ್ದರು.
ಬೆಳ್ಳಿ-ರೇಷ್ಮೆ ಲೆಹೆಂಗಾ, ವಜ್ರ, ಪಚ್ಚೆ ಆಭರಣದಲ್ಲಿ ಮಿಂಚಿದ ಅನಿಲ್ ಅಂಬಾನಿ ಸೊಸೆ!
ಇದನ್ನು ಸ್ವತ: ಅನಿಲ್ ಅಂಬಾನಿಯೇ ಹೃದಯದಾಳದಿಂದ ಹೇಳಿಕೊಂಡಿದ್ದರು. ಈ ಕಷ್ಟದ ಪರೀಕ್ಷಾ ಸಂದರ್ಭದಲ್ಲಿ ನನ್ನ ಜೊತೆ ನಿಂತ ನನ್ನ ಹಿರಿಯ ಸಹೋದರ ಮುಕೇಶ್ ಅಂಬಾನಿ ಹಾಗೂ ಅತ್ತಿಗೆ ನೀತಾಗೆ ಹೃದಯ ತುಂಬಿದ ಕೃತಜ್ಞತೆಯನ್ನು ಹೇಳುತ್ತೇನೆ. ಹಾಗೂ ನನ್ನ ಕುಟುಂಬವೂ ಕೂಡ ನಿಮಗೆ ಕೃತಜ್ಞರಾಗಿರುತ್ತೇವೆ. ನಾವು ಹಳೆಯ ಘಟನೆಗಳನ್ನೆಲ್ಲಾ ಮರೆತಿದ್ದು ನಿಮ್ಮ ಈ ಉದಾತ ನಿಲುವು ನಮ್ಮ ಹೃದಯವನ್ನು ಅಳವಾಗಿ ತಟ್ಟಿದೆ ಎಂದು ಅನಿಲ್ ಅಂಬಾನಿ ಹೇಳಿಕೊಂಡಿದ್ದರು. 2019ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್, ಒಂದು ವೇಳೆ ಅನಿಲ್ ಅಂಬಾನಿ 4 ವಾರಗಳಲ್ಲಿ ಎರಿಕ್‌ಸನ್ ಸಂಸ್ಥೆಗೆ ಬಾಕಿ ಇರುವ 430 ಕೋಟಿ ನೀಡದೇ ಇದ್ದಲ್ಲಿ ಅನಿಲ್ ಅಂಬಾನಿಯನ್ನು ಜೈಲಿಗಟ್ಟಬೇಕಾಗಬಹುದು ಎಂದು ಹೇಳಿದಾಗ ತಾವೇ ಸ್ವತಃ ಸಹೋದರನಿಗೆ ಬಾಕಿ ಪಾವತಿ ಮಾಡಲು ಸಹಾಯ ಮಾಡಿ ತಮ್ಮ ಜೈಲು ಪಾಲಾಗುವುದನ್ನು ತಪ್ಪಿಸಿದ್ದರು.