ಈ ಷೇರಿನಿಂದ 5 ದಿನದಲ್ಲಿ ಕೋಟಿಗೂ ಅಧಿಕ ಲಾಭ ಗಳಿಸಿದ ಖ್ಯಾತ ಹೂಡಿಕೆದಾರ: ನಿಮ್ಮ ಬಳಿಯೂ ಇದ್ಯಾ ಈ ಸ್ಟಾಕ್?
ಕೇವಲ 5 ದಿನಗಳಲ್ಲಿ ವಿಜಯ್ ಕೇಡಿಯಾ ಷೇರು ಕಂಪನಿಯೊಂದರಲ್ಲಿ ಹೂಡಿಕೆ ಮಾಡಿ ಬರೋಬ್ಬರಿ 1,24,03,537 ರೂ. ಲಾಭ ಗಳಿಸಿದ್ದಾರೆ. ಆ ಗ್ಗೆ ಇಲ್ಲಿದೆ ವಿವರ..
ನವದೆಹಲಿ (ಸೆಪ್ಟೆಂಬರ್ 12, 2023): ಕೆಲ ದಿನಗಳಿಂದ ಷೇರು ಮಾರುಕಟ್ಟೆ ಭರ್ಜರಿ ಲಾಭದಲ್ಲಿದೆ. ಹೂಡಿಕೆ ಹೆಚ್ಚಾಗುತ್ತಿದ್ದು, ಲಾಭವೂ ಹೆಚ್ಚಾಗುತ್ತಿದೆ. ಅದರಲ್ಲೂ, ದೇಶದ ಪ್ರಮುಖ ಹೂಡಿಕೆದಾರರಲ್ಲಿ ಒಬ್ಬರಾದ ವಿಜಯ್ ಕೇಡಿಯಾ ಕೇವಲ 5 ದಿನಗಳಲ್ಲಿ 1,24,03,537 ರೂ.ಗಳನ್ನು ಗಳಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ..
ಸೆಪ್ಟೆಂಬರ್ 04, 2023 ರಂದು, ವಿಜಯ್ ಕೇಡಿಯಾ ಒಡೆತನದ Kedia Securities Ltd 24,65,912 ಷೇರುಗಳನ್ನು ಪ್ರತಿ ಷೇರಿಗೆ 61.70 ರೂ. ನಂತೆ ಒಟ್ಟು 15,21,46,771 ಅಥವಾ ಅಂದಾಜು 15.21 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಶುಕ್ರವಾರ ಮುಕ್ತಾಯದ ವೇಳೆಗೆ ಷೇರುಗಳು ಬಿಎಸ್ಇಯಲ್ಲಿ ಪ್ರತಿ ಷೇರಿಗೆ 66.73 ರೂ. ನಂತೆ ವಹಿವಾಟು ನಡೆಸುತ್ತಿದೆ. ಹಾಗೂ, ಅವರು ಹೊಂದಿರುವ ಷೇರುಗಳ ಒಟ್ಟು ಮೌಲ್ಯ 16,45,50,308 ಅಥವಾ 16.45 ಕೋಟಿ ರೂ. ಆಗಿದೆ. ಆದ್ದರಿಂದ ಕೇವಲ 5 ದಿನಗಳಲ್ಲಿ ಇವರು ಬರೋಬ್ಬರಿ 1,24,03,537 ರೂ. ಲಾಭ ಗಳಿಸಿದ್ದಾರೆ.
ಆ ಕಂಪನಿ ಬಗ್ಗೆ ಇಲ್ಲಿದೆ ವಿವರ..
ಇದನ್ನು ಓದಿ: G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ
ಈ ಕಂಪನಿಯು 642.64 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, 3 ವರ್ಷಗಳ ಸ್ಟಾಕ್ ಬೆಲೆ CAGR ಶೇಕಡಾ 61 ಆಗಿದೆ. ತ್ರೈಮಾಸಿಕ ಫಲಿತಾಂಶಗಳ ಪ್ರಕಾರ, ನಿವ್ವಳ ಮಾರಾಟವು 267 ಕೋಟಿ ರೂ.ಗೆ ಅಂದರೆ 84.14 ರಷ್ಟು ಹೆಚ್ಚಾಗಿದೆ. ಹಾಗೂ, Q1FY23 ಕ್ಕೆ ಹೋಲಿಸಿದರೆ Q1FY24 ರಲ್ಲಿ ನಿವ್ವಳ ಲಾಭವು 133.33 ರಷ್ಟು ಅಂದರೆ 14 ಕೋಟಿ ರೂ.ಗೆ ಏರಿಕೆಯಾಗಿದೆ.
ವಾರ್ಷಿಕ ಫಲಿತಾಂಶಗಳ ಪ್ರಕಾರ, FY22 ಕ್ಕೆ ಹೋಲಿಸಿದರೆ ನಿವ್ವಳ ಮಾರಾಟವು 155.27 ಶೇಕಡಾದಿಂದ 799 ಕೋಟಿ ರೂಪಾಯಿಗಳಿಗೆ ಮತ್ತು ನಿವ್ವಳ ಲಾಭವು FY23 ರಲ್ಲಿ 50 ಶೇಕಡಾದಿಂದ 13 ಕೋಟಿ ರೂಪಾಯಿಗಳಿಗೆ ಕಡಿಮೆಯಾಗಿದೆ. ಜೂನ್ 30, 2023 ರ ಹೊತ್ತಿಗೆ ಕಂಪನಿಯು ತನ್ನ ಆರ್ಡರ್ ಬುಕ್ನಲ್ಲಿ 2,961 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ಗಳನ್ನು ಹೊಂದಿದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 25,600 ಕೋಟಿ ಮೌಲ್ಯದ ಆಸ್ತಿ ಹೆಚ್ಚಿಸಿಕೊಂಡ ಉದ್ಯಮಿ ಮೋದಿ
ಇಷ್ಟೆಲ್ಲ ಲಾಭ ಗಳಿಸುತ್ತಿರುವ ಮಲ್ಟಿಬ್ಯಾಗರ್ ಸ್ಟಾಕ್ ಹೆಸರು OM INFRA LTD. Om Infra Ltd ಹೈಡ್ರೋ-ಮೆಕಾನಿಕಲ್ ಉಪಕರಣಗಳು, ಟರ್ನ್ಕೀ ಸ್ಟೀಲ್ ಫ್ಯಾಬ್ರಿಕೇಶನ್ ಪರಿಹಾರಗಳು, ಜಲವಿದ್ಯುತ್ ಅಭಿವೃದ್ಧಿ, ರಿಯಲ್ ಎಸ್ಟೇಟ್, ಮನರಂಜನಾ ಕೇಂದ್ರಗಳು ಮತ್ತು ಹೋಟೆಲ್ಗಳು ಸೇರಿದಂತೆ ಮೂಲಸೌಕರ್ಯದಲ್ಲಿ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿರುವ ಸಂಘಟಿತವಾಗಿದೆ. ಇದು ಓಂ ಕೊಠಾರಿ ಗ್ರೂಪ್ನ ಪ್ರಮುಖ ಕಂಪನಿಯಾಗಿದೆ.
ಸ್ಟಾಕ್ ಕೇವಲ 1 ವರ್ಷದಲ್ಲಿ 76 ಪ್ರತಿಶತ ಮತ್ತು 2 ವರ್ಷಗಳಲ್ಲಿ 140 ಪ್ರತಿಶತದಷ್ಟು ಹೆಚ್ಚಾಗಿದೆ. 290 ಪ್ರತಿಶತದಷ್ಟು ಲಾಭದೊಂದಿಗೆ ಕಳೆದ 3 ವರ್ಷಗಳಲ್ಲಿ ಸ್ಟಾಕ್ ಮಲ್ಟಿಬ್ಯಾಗರ್ ಆಗಿದೆ.
ಇದನ್ನೂ ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?