ಒಂದೇ ವರ್ಷದಲ್ಲಿ 25,600 ಕೋಟಿ ಮೌಲ್ಯದ ಆಸ್ತಿ ಹೆಚ್ಚಿಸಿಕೊಂಡ ಉದ್ಯಮಿ ಮೋದಿ

ಕೋಲ್ಕತ್ತಾ ಮೂಲದ ಬಿಸಿನೆಸ್ ಟೈಕೂನ್ ರವಿ ಮೋದಿ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ ದೇಶದ ಅತಿದೊಡ್ಡ ಸಂಪತ್ತು ಗಳಿಸಿದವರಲ್ಲಿ ಒಬ್ಬರು. 

meet man who gained rs 25600 crore wealth in just one year his net worth now is ash

ಕೋಲ್ಕತ್ತಾ (ಸೆಪ್ಟೆಂಬರ್ 11, 2023): ದೇಶದಲ್ಲಿ ಪ್ರಧಾನಿ ಮೋದಿ ಮಾತ್ರವಲ್ಲ, ಮೋದಿ ಎಂಬ ಹೆಸರಿನ ಹಲವರು ಜನಪ್ರಿಯತೆ ಹೊಂದಿದ್ದಾರೆ. ಈ ಪೈಕಿ ಕೋಲ್ಕತ್ತಾ ಮೂಲದ ಬ್ಯುಸಿನೆಸ್‌ ಉದ್ಯಮಿ ರವಿ ಮೋದಿಯೂ ಒಬ್ಬರು. ಆದರೆ ಇತರರಂತೆ ಇವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲ್ಲ. ಮಾಧ್ಯಮಗಳು ಇರುವ ಕಡೆ ಇವರು ಹೆಚ್ಚು ಇರುವುದೂ ಇಲ್ಲ.

ಇವರೇ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಮೂಲದ ಬಿಸಿನೆಸ್ ಟೈಕೂನ್ ರವಿ ಮೋದಿ. ತನ್ನ ಕಂಪನಿಯ ಬೃಹತ್ ಯಶಸ್ವಿ IPO ಲಿಸ್ಟಿಂಗ್‌ಗೆ ಸಹ ಇವರು ಹಾಜರಾಗಿಲ್ಲ. ಆದರೂ, ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ ದೇಶದ ಅತಿದೊಡ್ಡ ಸಂಪತ್ತು ಗಳಿಸಿದವರಲ್ಲಿ ಮೋದಿ ಒಬ್ಬರು.

ಇದನ್ನು ಓದಿ: ನಾಳೆ ಮಹತ್ವದ ಆ್ಯಪಲ್ ಈವೆಂಟ್: ಐಫೋನ್‌ 15 ಜತೆ ಮತ್ತೇನು ಸರ್‌ಪ್ರೈಸ್‌ ಕಾದಿದೆ ನೋಡಿ..

ಜವಳಿ ಉದ್ಯಮಿಯಾಗಿರೋ ಇವರು ಭಾರತೀಯ ಬಿಲಿಯನೇರ್ ಉದ್ಯಮಿಗಳಲ್ಲಿ ವರ್ಷದಿಂದ ವರ್ಷಕ್ಕೆ ಆರನೇ ಅತಿದೊಡ್ಡ ಲಾಭ ಗಳಿಸಿದ ವ್ಯಕ್ತಿ. ಈ ಪಟ್ಟಿಯ ಪ್ರಕಾರ ಅವರು ತಮ್ಮ ಸಂಪತ್ತಿಗೆ ಒಂದು ವರ್ಷಕ್ಕೆ 25,600 ಕೋಟಿ ರೂ. ಹೆಚ್ಚು ಮಾಡಿಕೊಂಡಿದ್ದಾರೆ. ಮುಖೇಶ್ ಅಂಬಾನಿ, ಗೌತಮ್ ಅದಾನಿ, ಸೈರಸ್ ಪೂನಾವಾಲಾ ಮತ್ತು ಫಲ್ಗುಣಿ ನಾಯರ್ ಅವರಂತಹ ವ್ಯಕ್ತಿಗಳ ಜತೆಗೆ ರವಿ ಮೋದಿ ಸಹ ದೇಶದ ಅತಿದೊಡ್ಡ ಸಂಪತ್ತು ಗಳಿಸಿದವರು ಎಂದು ಪರಿಗಣಿಸುತ್ತಾರೆ.

ರವಿ ಮೋದಿ ಭಾರತದ ಪ್ರಮುಖ ಜವಳಿ ಮತ್ತು ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದನ್ನು ನಿರ್ಮಿಸಿದ ವ್ಯಕ್ತಿ. ತನ್ನ ತಂದೆಯ ಬಟ್ಟೆ ಅಂಗಡಿಯಲ್ಲಿ ಮಾರಾಟಗಾರನಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 2002 ರಲ್ಲಿ ವೇದಾಂತ್ ಫ್ಯಾಶನ್ಸ್ ಅನ್ನು ಆರಂಭಿಸಿದರು. ಈ ಕಂಪನಿಯು ಭಾರತದ ಅತ್ಯಂತ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಮಾನ್ಯವರ್' ಅನ್ನು ಹೊಂದಿದೆ. ಈ ಕಂಪನಿಯು 'ಮೊಹೆ', 'ಮಂಥನ್', 'ಮೆಬಾಜ್' ಮತ್ತು 'ಟ್ವಾಮೆವ್' ಎಂಬ ಹಲವಾರು ಇತರೆ ಬ್ರ್ಯಾಂಡ್‌ಗಳನ್ನು ಸಹ ಹೊಂದಿದೆ. ವೇದಾಂತ್ ಫ್ಯಾಶನ್ಸ್ ಇಂದು 31,464 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.  

ಇದನ್ನೂ ಓದಿ: AJIO ಬಳಕೆದಾರರೇ ಎಚ್ಚರ: ಅಂಬಾನಿ ಕಂಪನಿ ಹೆಸರಲ್ಲಿ ಇದೇನಿದು ದೊಡ್ಡ ಹಗರಣ?

20 ವರ್ಷಗಳ ಹಿಂದೆ, ಮೋದಿ ವ್ಯಾಪಾರದಲ್ಲಿ ಯೋಗ್ಯವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ, ತಮ್ಮ ಲಾಭದಿಂದ ಐಷಾರಾಮಿ ಮರ್ಸಿಡಿಸ್-ಬೆನ್ಜ್ ಕಾರನ್ನು ಖರೀದಿಸಲು ಬಯಸಿದ್ದರು. ಆದರೂ, ಯುವ ಉದ್ಯಮಿ ವಿವೇಕಯುತ ನಿರ್ಧಾರ ತೆಗೆದುಕೊಂಡು ವ್ಯವಹಾರದಲ್ಲಿ ತನ್ನ ಲಾಭವನ್ನು ಮರುಹೂಡಿಕೆ ಮಾಡಲು ನಿರ್ಧರಿಸಿದರು. ವೇದಾಂತ್ ಫ್ಯಾಶನ್ಸ್ ಹುಟ್ಟಿದ್ದು ಹೀಗೆ. ಸುಮಾರು 15 ವರ್ಷಗಳ ನಂತರ, ಅವರು ಅಂತಿಮವಾಗಿ ಮರ್ಸಿಡಿಸ್-ಬೆನ್ಜ್ ಖರೀದಿಸುವ ತಮ್ಮ ಕನಸನ್ನು ಈಡೇರಿಸಿಕೊಂಡರು.

ಮೋದಿ ಅವರು ಮಾರುಕಟ್ಟೆಯಲ್ಲಿನ ಅಂತರವನ್ನು ಗುರುತಿಸಿ ಎಥ್ನಿಕ್ ವೇರ್ ತಯಾರಿಕೆಯಲ್ಲಿ ತೊಡಗಿದರು. ವಿರಾಟ್ ಕೊಹ್ಲಿ, ರಣವೀರ್ ಸಿಂಗ್, ಅನುಷ್ಕಾ ಶರ್ಮಾ, ಕಾರ್ತಿಕ್ ಆರ್ಯನ್ ಮತ್ತು ಆಲಿಯಾ ಭಟ್ ಅವರಂತಹ ಸೆಲೆಬ್ರಿಟಿಗಳನ್ನು ಜಾಹೀರಾತಿಗೆ ಬಳಸಿಕೊಂಡು ಮಾರುಕಟ್ಟೆಯಲ್ಲಿ ತಮ್ಮ ಬ್ರ್ಯಾಂಡ್ ಸ್ಥಾನವನ್ನು ಭದ್ರಪಡಿಸಿಕೊಂಡರು. ಕಂಪನಿಯು ಈಗ ಭಾರತ ಮತ್ತು ವಿದೇಶಗಳಲ್ಲಿ 600 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ರವಿ ಮೋದಿ ಇಂದು 27,370 ಕೋಟಿ ರೂ (3.3 ಬಿಲಿಯನ್‌ ಡಾಲರ್‌) ನಿವ್ವಳ ಮೌಲ್ಯದೊಂದಿಗೆ ಭಾರತದ 50 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಇದನ್ನೂ ಓದಿ: ಟ್ಯಾಕ್ಸಿ ಓಡಿಸಿ, ಹೋಟೆಲ್‌ ರೂಂ ಕ್ಲೀನ್‌ ಮಾಡ್ತಿದ್ದ ಭಾರತೀಯ 43 ಸಾವಿರ ಕೋಟಿ ರೂ. ಒಡೆಯರಾದ ಕಥೆ ಹೀಗಿದೆ..

Latest Videos
Follow Us:
Download App:
  • android
  • ios