Asianet Suvarna News Asianet Suvarna News

ಬಜೆಟ್‌ನಲ್ಲಿ ತೆರಿಗೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಸಂಪೂರ್ಣ ಸ್ಪಷ್ಟ ಉತ್ತರ

ಈ ಎರಡೂ ತೆರಿಗೆಯ ಬದಲಾವಣೆಯಿಂದಾಗಿ ತೆರಿಗೆದಾರರಿಗೆ 17,500 ರೂಪಾಯಿ ಉಳಿತಾಯವಾಗಲಿದೆ. ಆದರೆ ಹಳೆ ತೆರಿಗೆ ಸ್ಲಾಬ್‌ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆಯನ್ನು ತಂದಿಲ್ಲ. 

Union budget 2024 Nirmala Sitharaman announce New tax slabs standard deduction details mrq
Author
First Published Jul 23, 2024, 1:33 PM IST | Last Updated Jul 23, 2024, 1:33 PM IST

ನವದೆಹಲಿ: ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಂಬಳ ಪಡೆಯುವ ಮಧ್ಯಮ ವರ್ಗದ ಜನತೆಗೆ ರಿಲೀಫ್ ನೀಡಲಾಗಿದೆ. ಹೊಸ ತೆರಿಗೆ ಪದ್ದತಿ ಪ್ರಕಾರ, ಈಗ 3 ಲಕ್ಷದಿಂದ 7 ಲಕ್ಷ ರೂಪಾಯಿ ಆದಾಯದ ಮೇಲೆ ಶೇ.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೊಸ ತೆರಿಗೆ ಅನ್ವಯ 50 ಸಾವಿರ ಬದಲಾಗಿ 75 ಸಾವಿರ ರೂಪಾಯಿ ಸ್ಟಾಂಡರ್ಟ್ ಡಿಡಕ್ಷನ್ ಸಿಗಲಿದೆ. ಈ ಎರಡೂ ತೆರಿಗೆಯ ಬದಲಾವಣೆಯಿಂದಾಗಿ ತೆರಿಗೆದಾರರಿಗೆ 17,500 ರೂಪಾಯಿ ಉಳಿತಾಯವಾಗಲಿದೆ. ಆದರೆ ಹಳೆ ತೆರಿಗೆ ಸ್ಲಾಬ್‌ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆಯನ್ನು ತಂದಿಲ್ಲ. 

ಹೊಸ ತೆರಿಗೆಯ ಆರು ಹಂತಗಳು 

3 ಲಕ್ಷ ರೂಪಾಯಿವರೆಗೆ: 0
3 ಲಕ್ಷದಿಂದ 7 ಲಕ್ಷ ರೂ.ವರೆಗೆ: ಶೇ.5
7 ಲಕ್ಷದಿಂದ 10 ಲಕ್ಷ ರೂ.ವರೆಗೆ: ಶೇ.10
10 ಲಕ್ಷದಿಂದ 12 ಲಕ್ಷ ರೂ.ವರೆಗೆ: ಶೇ.15
12 ಲಕ್ಷದಿಂದ 15 ಲಕ್ಷ ರೂ.ವರೆಗೆ: ಶೇ.20
15 ಲಕ್ಷಕ್ಕಿಂತ ಅಧಿಕ: ಶೇ.30

Union Budget 2024: ಸ್ವಂತ ವ್ಯವಹಾರ ಆರಂಭಿಸೋರಿಗೆ ಸಿಗಲಿದೆ 20 ಲಕ್ಷ ...

ಹಳೆ ತೆರಿಗೆಯಲ್ಲಿ ನಾಲ್ಕು ಹಂತಗಳು. ಶೇ.30ರಷ್ಟು ಟ್ಯಾಕ್ಸ್ 

2.5 ಲಕ್ಷವರೆಗೆ: 0 ತೆರಿಗೆ ಇಲ್ಲ
2.5 ಲಕ್ಷದಿಂದ 5 ಲಕ್ಷ ರೂ.ವರೆಗೆ:  ಶೇ.5 (12,500 ರೂಪಾಯಿ)
5 ಲಕ್ಷದಿಂದ 10 ಲಕ್ಷ ರೂ.ವರೆಗೆ: ಶೇ.20 (1,12,500 ರೂ) ಇದು 5 ಲಕ್ಷಕ್ಕೆ 15,500 ರೂ. ಮತ್ತು ಇನ್ನುಳಿದ ಮೊತ್ತದ ಮೇಲೆ 1,00,000 ರೂ.ಸೇರುತ್ತದೆ. ಹಾಗಾಗಿ ಒಟ್ಟು ತೆರಿಗೆ 1,12,500 ರೂಪಾಯಿ ಆಗುತ್ತದೆ)
10 ಲಕ್ಷ ರೂಪಾಯಿಗೂ ಅಧಿಕ: ಶೇ.30 (1,12,500 ರೂಪಾಯಿ ಅಧಿಕ ಆಗುತ್ತೆ)

ಹಳೆ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂ. ಆದಾಯದ ಮೇಲೆ 12,500 ರೂ. ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಆಕ್ಟ್ ಪ್ರಕಾರ ಸೆಕ್ಷನ್ 87A ಅಡಿಯಲ್ಲಿ 12,500 ರೂ.ಗೆ ವಿನಾಯ್ತಿ ಸಿಗುತ್ತದೆ. ಒಂದು ವೇಳೆ ನಿಮ್ಮ ಆದಾಯ 5 ಲಕ್ಷ ರೂಪಾಯಿ ಮೇಲೆ 1 ರೂ.ಹೆಚ್ಚಾದರೂ ಸೆಕ್ಷನ್ 87A ಅಡಿಯಲ್ಲಿ ಸಿಗುವ 12,500 ರೂ. ವಿನಾಯ್ತಿ ಸಿಗಲ್ಲ. 1 ರೂಪಾಯಿ ಹೆಚ್ಚಾದ್ರೂ ಶೇ.20ರಷ್ಟು ಅಂದ್ರೆ 20 ಪೈಸೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ವಿಮೆ, ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ ಮೇಲೆ ನಿಮಗೆ ತೆರಿಗೆ ವಿನಾಯ್ತಿ ಸಿಗುತ್ತದೆ.

Latest Videos
Follow Us:
Download App:
  • android
  • ios