Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!
ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಇದಕ್ಕೆ ಕಾರಣವೇನು?
ನವದೆಹಲಿ(ಜು.23) ಎನ್‌ಡಿಎ ಮೈತ್ರಿ ಸರ್ಕಾರ ಹಲವು ಸವಾಲುಗಳ ನಡುವೆ 3.0 ಸರ್ಕಾರದ ಮೊದಲ ಬಜೆಟ್ ಮಂಡಿಸಿದೆ. ಉದ್ಯೋಗ ಸೃಷ್ಟಿ, ತೆರಿಗೆ ಕಡಿತ, ಆದಾಯ ತೆರಿಗೆ ನೀತಿಯಲ್ಲಿ ಬದಲಾವಣೆ, ಕೃಷಿ ಜೊತೆಗೆ ಕೆಲ ಹೊಸ ಯೋಜನೆಗಳ ಘೋಷಣೆ ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಬಂಡವಾಳ ಹೂಡಿಕೆಯ ಲಾಭ ಮೇಲಿನ ತೆರಿಗೆಯಿಂದ ಹೂಡಿಕೆದಾರರು ನಿರಾಸೆಗೊಂಡಿದೆ. ಇದರ ಪರಿಣಾಮ ಷೇರುಮಾರುಕಟ್ಟೆ ಕುಸಿತ ಕಂಡಿದೆ. ಸೆನ್ಸೆಕ್ಸ್ 1,200 ಅಂಕ ಕುಸಿತ ಕಂಡರೆ, ನಿಫ್ಠಿ 350 ಅಂಕ ಕುಸಿತ ಕಂಡಿದೆ.
ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಷೇರು ಮಾರುಕಟ್ಟೆಯಲ್ಲಿ ನಿರಾಸೆ ಮೂಡಿಸಿದೆ. ಪ್ರಮುಖವಾಗಿ ಬಂಡವಾಳ ಹೂಡಿಕೆಯ ಲಾಭದ ಮೇಲೆ ತೆರಿಗೆಯನ್ನು ಏರಿಕೆ ಮಾಡಲಾಗಿದೆ. ಶೇಕಡಾ 10 ರಿಂದ ಶೇಕಡಾ 12ಕ್ಕೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಂಡವಾಳ ಹೂಡಿಕೆಯ ಲಾಭದ ತೆರಿಗೆ ಹೆಚ್ಚಳದಿಂದ ಹೂಡಿಕೆದಾರರಿಗೆ ತೀವ್ರ ಹೊಡೆತ ಬಿದ್ದಿದೆ.ಈ ಘೋಷಣೆ ಹೊರಬೀಳುತ್ತಿದ್ದಂತೆ ಭಾರತದ ಷೇರುಮಾರುಕಟ್ಟೆ ಕುಸಿತ ಕಂಡಿದೆ.
Union Budget 2024, ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?
ಒಂದೆಡೆ ಭಾರತದಲ್ಲಿ ಬಜೆಟ್ ಮಂಡನೆಯಲ್ಲಿ ಹೂಡಿಕೆ ಲಾಭದ ಮೇಲಿನ ತೆರಿಗೆ ಹೆಚ್ಚಳದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡರೆ, ಇತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕುಸಿತ ಕಂಡಿದೆ. ಪ್ರಮುಖವಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಸ್ಥಾನದಿಂದ ಜೋ ಬೈಡೆನ್ ಹಿಂದೆ ಸರಿಯುತ್ತಿದ್ದಂತೆ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣವಾಗಿದೆ. ಬಜೆಟ್ ಮಂಡನೆ ಬೆನ್ನಲ್ಲೇ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
ನಿಫ್ಟಿ 50 ಮತ್ತೆ ಸೆನ್‌ಸೆಕ್ಸ್ ತಲಾ ಶೇಕಡಾ 1ರಷ್ಟು ಕುಸಿತ ಕಂಡಿದೆ. ಕ್ರಮವಾಗಿ ನಿಫ್ಟಿ 24,225 ಅಂಕ ಹಾಗೂ ಸೆನ್‌ಸೆಕ್ಸ್ 80,024ನಲಲಿ ವಹಿವಾಟು ನಡೆಸಿದೆ. ಇದರ ಬೆನಲ್ಲೇ ಮತ್ತೊಂದು ಆಘಾತವೂ ಎದುರಾಗಿದೆ. ಅಮೆರಿಕ ಡಾಲರ್ ವಿರುದ್ದ ಭಾರತೀಯ ರೂಪಾಯಿ ಭಾರಿ ಕುಸಿತ ಕಂಡಿದೆ. ಭಾರತೀಯ ರೂಪಾಯಿ 83.69ಕ್ಕೆ ಇಳಿಕೆ ಕಂಡಿದೆ.
ನಿರ್ಮಲಾ ಸೀತಾರಾಮನ್ ಇಂದು 7ನೇ ಬಾರಿಗೆ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ಕಳೆದೆರಡು ಅವಧಿಯ ಬಜೆಟ್‌ಗಿಂತ ಈ ಬಾರಿಯ ಬಜೆಟ್ ಮೋದಿ ಸರ್ಕಾರಕ್ಕೆ ಹೆಚ್ಚು ಸವಾಲಾಗಿತ್ತು. ಕಾರಣ ಈ ಬಾರಿ ಮೈತ್ರಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ. ಹೀಗಾಗಿ ಬೆಂಬಲ ನೀಡಿದ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಬಂಪರ್ ಘೋಷಣೆ ಮಾಡಲಾಗಿದೆ.
Union Budget 2024 ಸರ್ಕಾರದಿಂದ ಮೊದಲ ತಿಂಗಳ ವೇತನ ಸೇರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಘೋಷಣೆ!