ವೈದ್ಯಕೀಯ ಕ್ಷೇತ್ರಕ್ಕೆ 89155 ಕೋಟಿ ರು. ಅನುದಾನ : 2047ರೊಳಗೆ ಅನಿಮಿಯಾ ರೋಗ ನಿರ್ಮೂಲನೆ ಗುರಿ
ದೇಶದಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ 89,155 ಕೋಟಿ ರು. ಅನುದಾನ ಘೋಷಣೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.13ರಷ್ಟುಹೆಚ್ಚುವರಿ ಅನುದಾನವನ್ನು ನೀಡಲಾಗಿದೆ. ಕಳೆದ ವರ್ಷ 79,145 ಕೋಟಿ ರು. ಅನುದಾನ ನೀಡಲಾಗಿತ್ತು.
ದೇಶದಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ 89,155 ಕೋಟಿ ರು. ಅನುದಾನ ಘೋಷಣೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.13ರಷ್ಟುಹೆಚ್ಚುವರಿ ಅನುದಾನವನ್ನು ನೀಡಲಾಗಿದೆ. ಕಳೆದ ವರ್ಷ 79,145 ಕೋಟಿ ರು. ಅನುದಾನ ನೀಡಲಾಗಿತ್ತು. 89,155 ಕೋಟಿ ರು. ಅನುದಾನದಲ್ಲಿ ಆಯುಷ್ ಸಚಿವಾಲಯಕ್ಕೆ 3,647.5 ಕೋಟಿ ರು., ಆರೋಗ್ಯ ಕಲ್ಯಾಣ ಇಲಾಖೆಗೆ 86,175 ಕೋಟಿ ರು., ಮತ್ತು ಆರೋಗ್ಯ ಸಂಶೋಧನಾ ಇಲಾಖೆಗೆ 2,980 ಕೋಟಿ ರು., ಹೆಚ್ಚುವರಿಯಾಗಿ 22 ಏಮ್ಸ್‌ಗಳ ಸ್ಥಾಪನೆಗೆ 6,835 ಕೋಟಿ ರು., ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 3,365 ಕೋಟಿ ರು. ಹಂಚಿಕೆ ಮಾಡಲಾಗಿದೆ.
ಹಾಗೂ ವೈದ್ಯಕೀಯ ಶಿಕ್ಷಣ ಸೌಕರ್ಯವನ್ನು ಹೆಚ್ಚು ಮಾಡಲು ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 2014ರಿಂದ ಇಲ್ಲಿಯವರೆಗೆ ಸ್ಥಾಪನೆಯಾಗಿರುವ ವಿವಿಧ 157 ಮೆಡಿಕಲ್ ಕಾಲೇಜುಗಳ ಆವರಣದಲ್ಲೇ ಈ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದೊಂದರಿಗೆ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಹೆಚ್ಚು ಮಾಡುವುದಕ್ಕಾಗಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೊಸ ವೈದ್ಯಕೀಯ ಉಪಕರಣಗಳನ್ನು ಬಳಕೆ ಮಾಡಲು ಬೇಕಾದ ಕೌಶಲ್ಯಗಳನ್ನು ಕಲಿಸಲು ನಿರ್ಧರಿಸಲಾಗಿದೆ.
5.94 ಲಕ್ಷ ಕೋಟಿ ರೂ ರಕ್ಷಣಾ ಬಜೆಟ್: ಚೀನಾ, ಪಾಕ್ ಉಪಟಳ ಹೆಚ್ಚಳದಿಂದ ಅನುದಾನ ಹೆಚ್ಚಳ
ಸಿಕಲ್ ಸೆಲ್ ಅನಿಮಿಯಾ ನಿರ್ಮೂಲನಾ ಯೋಜನೆ:
ಬಹುಪಾಲು ಜನರನ್ನು ಕಾಡುವ ಸಿಕಲ್‌ಸೆಲ್ ಅನಿಮಿಯಾ (ಒಂದು ಬಗೆಯ ರಕ್ತಹೀನತೆ)ವನ್ನು 2047ರೊಳಗೆ ಭಾರತದಿಂದ ನಿರ್ಮೂಲನೆ ಮಾಡಲು ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಈ ಯೋಜನೆ ರೋಗದ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವುದು, ರೋಗ ಹೆಚ್ಚಾಗಿ ಕಾಣಿಸಿಕೊಳ್ಳುವ ಬುಡಕಟ್ಟು ಪ್ರದೇಶದಲ್ಲಿನ 40 ವರ್ಷದೊಳಗಿನ ವಯೋಮಾನದ ಎಲ್ಲಾ 7 ಕೋಟಿ ಜನರ ಆರೋಗ್ಯ ತಪಾಸಣೆ ನಡೆಸುವುದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವರನ್ನು ಒಳಗೊಂಡತೆ ಸಲಹಾ ಕೇಂದ್ರಗಳನ್ನು ತೆರೆದು ಸಲಹೆಗಳನ್ನು ನೀಡುವುದನ್ನು ಒಳಗೊಂಡಿದೆ.
ವೈದ್ಯಕೀಯ ಸಂಶೋಧನೆ:
ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಖಾಸಗಿ ವಲಯದ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳಿಗೆ ಅಗತ್ಯವಾದ ಸಂಶೋಧನೆಗಳನ್ನು ನಡೆಸಲು ಬೇಕಾದ ಅನುಕೂಲ ಒದಗಿಸಲು ಆಯ್ದ ಐಸಿಎಂಆರ್ ಪ್ರಯೋಗಾಲಯಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಔಷಧ ವಲಯಗಳಲ್ಲಿ ಮಾಡಲಾದ ಸಂಶೋಧನೆಗಳ ಪ್ರಚಾರವನ್ನು ಉತ್ಕೃಷ್ಟತಾ ಕೇಂದ್ರಗಳ ಮೂಲಕ ನಡೆಸಲು ತೀರ್ಮಾನಿಸಲಾಗಿದೆ.
ಸ್ಟಾರ್ಟಪ್‌ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ: ಐಟಿ ರಿಟರ್ನ್ಸ್ 24 ತಾಸುಗಳಲ್ಲಿ ಕ್ಲಿಯರ್!
ವೈದ್ಯಕೀಯ ಯೋಜನೆಗೆ ಬಹುಶಿಕ್ಷಣ:
ಈಗಾಗಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಬಹುಶಿಕ್ಷಣ ಕಲಿಕಾ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯವಾಗಿರುವ ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ ಮತ್ತು ಉನ್ನತ ಗುಣಮಟ್ಟದ ಸಂಶೋಧನಾ ಕೇಂದ್ರಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಆಯುಷ್ ಸಚಿವಾಲಯಕ್ಕೆ 3,647.5 ಕೋಟಿ ರು.
ಆರೋಗ್ಯ ಕಲ್ಯಾಣ ಇಲಾಖೆಗೆ 86,175 ಕೋಟಿ ರು.
ಆರೋಗ್ಯ ಸಂಶೋಧನಾ ಇಲಾಖೆಗೆ 2,980 ಕೋಟಿ ರು.
22 ಏಮ್ಸ್‌ಗಳ ಸ್ಥಾಪನೆಗೆ 6,835 ಕೋಟಿ ರು.
ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ 3,365 ಕೋಟಿ ರು.