Asianet Suvarna News Asianet Suvarna News

ಸ್ಟಾರ್ಟಪ್‌ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ: ಐಟಿ ರಿಟರ್ನ್ಸ್ 24 ತಾಸುಗಳಲ್ಲಿ ಕ್ಲಿಯರ್‌!

ದೇಶದಲ್ಲಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಈ ಬಾರಿಯೂ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಈ ತೆರಿಗೆ ವಿನಾಯಿತಿಯು 2014ರ ಮಾರ್ಚ್  31ರವರೆಗೂ ಅನ್ವಯಿಸಲಿದೆ.

Union Budget 2023 Another Year of Tax Exemption for Startups, IT Returns Cleared in 24 Hours akb
Author
First Published Feb 2, 2023, 11:34 AM IST

ದೇಶದಲ್ಲಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಈ ಬಾರಿಯೂ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಈ ತೆರಿಗೆ ವಿನಾಯಿತಿಯು 2014ರ ಮಾರ್ಚ್  31ರವರೆಗೂ ಅನ್ವಯಿಸಲಿದೆ. ಅಲ್ಲದೆ ನಷ್ಟದಲ್ಲಿರುವ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ನೀಡುತ್ತಿರುವ ತೆರಿಗೆ ವಿನಾಯಿತಿಯನ್ನು 7 ವರ್ಷದ ಬದಲು 10 ವರ್ಷದವರೆಗೆ ವಿಸ್ತರಿಸಿದೆ. ಹೊಸ ಸಹಕಾರ ಸಂಘಗಳು ಸಕ್ಕರೆ ಉತ್ಪಾದನೆಯನ್ನು ಆರಂಭಿಸಲು ಮಾರ್ಚ್‌ 2024ರವರೆಗೂ ಅವಕಾಶ ನೀಡಿದೆ. ಇದಕ್ಕಾಗಿ ಶೇ.15ಕ್ಕೆ ತೆರಿಗೆ ಇಳಿಸಲಾಗಿದೆ. ಇದು ಅತ್ಯಂತ ಕಡಿಮೆ ತೆರಿಗೆ ಎಂದು ಸರ್ಕಾರ ಹೇಳಿದೆ.

45% ಆದಾಯ ತೆರಿಗೆ ರಿಟರ್ನ್‌ 24 ತಾಸುಗಳಲ್ಲಿ ಕ್ಲಿಯರ್‌!

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾದ ಆದಾಯ ತೆರಿಗೆ ರಿಟರ್ನ್‌ಗಳನ್ನು ಕೇವಲ 24 ತಾಸಿನಲ್ಲೇ ಸಂಸ್ಕರಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಂದು ದಿನ ಗರಿಷ್ಠ 72 ಲಕ್ಷ ರಿಟರ್ನ್‌ಗಳು ಸಲ್ಲಿಕೆಯಾಗಿವೆ. 6.5 ಕೋಟಿ ರಿಟರ್ನ್‌ಗಳನ್ನು ಸಂಸ್ಕರಣೆ ಮಾಡಲಾಗಿದೆ. ಈ ಸಂಸ್ಕರಣೆ ಅವಧಿ 2013-14ನೇ ಹಣಕಾಸು ವರ್ಷದಲ್ಲಿ ಸರಾಸರಿ 93 ದಿನಗಳಷ್ಟಿತ್ತು. ಅದು ಈಗ 16 ದಿನಗಳಿಗೆ ಇಳಿಕೆಯಾಗಿದೆ. ಶೇ.45 ರಿಟರ್ನ್ಸ್  24 ತಾಸಲ್ಲಿ ವಿಲೇವಾರಿಯಾಗಿವೆ ಎಂದು ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

ರಜೆ ನಗದೀಕರಣ ಮಿತಿ 25 ಲಕ್ಷಕ್ಕೇರಿಕೆ

ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಾರರಿಗೆ ನಿವೃತ್ತಿ ಸಂದರ್ಭದಲ್ಲಿ ಸಿಗುವ ಲೀವ್‌ ಎನ್‌ಕ್ಯಾಷ್‌ಮೆಂಟ್‌ನಲ್ಲಿ ಈವರೆಗೆ ರೂ.3 ಲಕ್ಷದ ಮೊತ್ತಕ್ಕೆ ತೆರಿಗೆ ವಿನಾಯಿತಿ ಇತ್ತು. ಮುಂದಿನ ಸಾಲಿಗೆ ಅನ್ವಯವಾಗುವಂತೆ ಇನ್ನು ಮುಂದೆ ರೂ. 25 ಲಕ್ಷ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಖಾಸಗಿ ಉದ್ಯೋಗಿಗಳಿಗೆ ಇದು ಖಂಡಿತವಾಗಿ ಭರ್ಜರಿ ಕೊಡುಗೆ.

ಸಣ್ಣ ಉದ್ದಿಮೆದಾರರಿಗೆ ತೆರಿಗೆ ರಿಲೀಫ್‌

ಕಡಿಮೆ ವ್ಯವಹಾರ ಇರುವ ತೆರಿಗೆದಾರರು ಆದಾಯ ತೆರಿಗೆ ಕಾನೂನಿನಿಂದ ಮತ್ತು ಇಲಾಖೆಯಿಂದ ಯಾವುದೇ ರೀತಿಯ ತೊಂದರೆ/ಶೋಷಣೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ತೆರಿಗೆ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಈವರೆಗೆ ವಾರ್ಷಿಕ 2 ಕೋಟಿ ರೂ.ವ್ಯವಹಾರ ಇರುವ ವ್ಯಾಪಾರಸ್ಥರು ಒಟ್ಟು ವ್ಯವಹಾರದ ಶೇ. 6ರಷ್ಟುಲಾಭಕ್ಕೆ ತೆರಿಗೆ ಕಟ್ಟಿದರೆ ಅವರು ಯಾವುದೇ ದಾಖಲೆಗಳನ್ನು ಇಡುವ ಅಗತ್ಯವಿರಲಿಲ್ಲ. ಈಗ ಆ ಮೊತ್ತವನ್ನು 2 ಕೋಟಿ ರೂ.ನಿಂದ 3 ಕೋಟಿ ರೂ.ಗೆ ಏರಿಸಿದ್ದಾರೆ. ಹಾಗಾಗಿ, ಇದು ಸಣ್ಣ ಉದ್ಯಮದಾರರಿಗೆ ಅನುಕೂಲವಾಗಲಿದೆ.

ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲಾ ಸೀತಾರಾಮನ್ ಬಜೆಟ್‌ 

ಹಿಂಜರಿತ ತಡೆಗೆ ಅಮೃತ ಬಜೆಟ್‌

ಸ್ವಾತಂತ್ರ್ಯದ 75ನೇ ವರ್ಷದಿಂದ 100ನೇ ವರ್ಷದವರೆಗಿನ ‘ಅಮೃತ ಕಾಲ’ದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಒಯ್ದು ಬಲಿಷ್ಠವಾಗಿಸಲು, ವಿಶ್ವವನ್ನು ಅಲುಗಾಡಿಸುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತ ಭೀತಿಯನ್ನು ಸಮರ್ಥವಾಗಿ ಎದುರಿಸಲು, ಹಿಂಜರಿತವನ್ನೇ ಅವಕಾಶವನ್ನಾಗಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಸಾಧಿಸಲು, ಭಾರತವನ್ನು ಉತ್ಪಾದನಾ ತಾಣವನ್ನಾಗಿಸಲು, ಭವಿಷ್ಯದ ಉದ್ಯೋಗಗಳನ್ನು ಕಬಳಿಸಲು ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ. ಇದೇ ವೇಳೆ, ವಿಧಾನಸಭೆ- ಲೋಕಸಭೆ ಚುನಾವಣೆಯಲ್ಲಿ ಮಧ್ಯಮವರ್ಗ, ಬುಡಕಟ್ಟು ಸಮುದಾಯಗಳನ್ನು ಸೆಳೆಯಲು ಈ ಬಜೆಟ್‌ನಲ್ಲಿ ಕಸರತ್ತು ನಡೆಸಲಾಗಿದೆ. 

Follow Us:
Download App:
  • android
  • ios