ನವದೆಹಲಿ(ಫೆ.02): ಈಗಾಗಲೇ 2019ರ ಡಿಸೆಂಬರ್ 31ರಂದು ಘೋಷಣೆ ಮಾಡಿದಂತೆ ಮುಂದಿನ 5 ವರ್ಷದಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ 103 ಲಕ್ಷ ಕೋಟಿ ರು. ತೊಡಗಿಸಲು ನಿರ್ಧರಿಸಲಾಗಿದೆ. ಈ ಯೋಜನೆ ಯಡಿ ದೇಶಾದ್ಯಂತ 6500 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಮನೆ ನಿರ್ಮಾಣ, ಸುರಕ್ಷಿತ ಕುಡಿಯುವ ನೀರು ಯೋಜನೆ, ಸ್ವಚ್ಛ ಹಾಗೂ ಕೈಗೆಟಕುವ ದರದ ಇಂಧನ, ಆರೋಗ್ಯ ಸೇವೆ, ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳ ನಿರ್ಮಾಣ, ಆಧುನಿಕ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು, ಮೆಟ್ರೋ ಹಾಗೂ ರೈಲು ಸಾರಿಗೆ, ಸರಕು ಸಾಗಣೆ ಹಾಗೂ ಗೋದಾಮುಗಳು, ನೀರಾವರಿ ಇತ್ಯಾದಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.             

ಕೇಂದ್ರ ಬಜೆಟ್: ಜಲ್‌ ಜೀವನ್‌ ಯೋಜನೆಗೆ 11500 ಕೋಟಿ

ಮೂಲಸೌಕರ್ಯಕ್ಕೆ ಬಂಪರ್ 100 ಹೊಸ ಏರ್ ಪೋರ್ಟ್ ಸ್ಥಾಪನೆ, 6 ಸಾವಿರ ಕಿಮೀ ರಸ್ತೆ ನಿರ್ಮಾಣ, 150 ಪಿಪಿಪಿ ರೈಲುಗಳು, ರೈಲು ಹಳಿ ಪಕ್ಕ ಸೋಲಾರ್ ಘಟಕ ಸ್ಥಾಪನೆ 100 ಏರ್ಪೋರ್ಟ್ 150 ಖಾಸಗಿ ರೈಲು ಹಾಗೂ 9000 ಕಿ.ಮೀ ಆರ್ಥಿಕ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ.

ಇನ್‌ಫ್ರಾಸ್ಟ್ರಕ್ಚರ್‌ಗೆ 5 ವರ್ಷದಲ್ಲಿ 103 ಲಕ್ಷ ಕೋಟಿ ವೆಚ

27 ಸಾವಿರ ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣ ಮಾಲಿನ್ಯ ಮುಕ್ತ ರೈಲು ಸಂಚಾರದ ಗುರಿ ಹೊಂದಿರುವ ಸರ್ಕಾರ, ಈಗ ಡೀಸೆಲ್ ರೈಲುಗಳು ಓಡುತ್ತಿರುವ 27 ಸಾವಿರ ಕಿ.ಮೀ. ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸುವ ಮಹದೋದ್ದೇಶ ಹೊಂದಿದೆ. ವಿದ್ಯುತ್ ಚಾಲಿತ ಎಂಜಿನ್‌ಗಳ ವೇಗವು ಡೀಸೆಲ್ ಎಂಜಿನ್‌ಗಿಂತ ಹೆಚ್ಚಿದೆ. ಹೀಗಾಗಿ ರೈಲುಗಳ ವೇಗವನ್ನು ಇನ್ನಷ್ಟು ಹೆಚ್ಚಿಸಲು ಅನುಕೂಲವಾಗಲಿದೆ. ಈಗಾಗಲೇ ದೇಶದ ಎಲ್ಲ ಮಾನವರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮೂಲನೆ ಮಾಡಿ ಅಲ್ಲಿ ಸೇತುವೆಗಳನ್ನು ಹಾಕಲಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ 550 ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್: ರೈಲ್ವೆಗೆ 70000 ಕೋಟಿ ರು. ಬಜೆಟ್‌ ಅನುದಾನ

890 ಕಿ.ಮೀ. ಒಳನಾಡು ಜಲಸಾರಿಗೆ ಮಾರ್ಗ ಒಳನಾಡು ಜಲಸಾರಿಗೆ ಮಾರ್ಗದ 2ನೇ ಹಂತದಲ್ಲಿ ಬ್ರಹ್ಮಪುತ್ರಾ ನದಿ ಹರಿಯುವ ಅಸ್ಸಾಂನ ಧುಬ್ರಿ ಹಾಗೂ ಸಾದಿಯಾ ನಡುವೆ 2022ರೊಳಗೆ ಒಳನಾಡು ಜಲಸಾರಿಗೆ ಮಾರ್ಗ ರೂಪಿಸುವ ಗುರಿ ಹೊಂದಲಾಗಿದೆ. ಇಗಾಗಲೇ ಗಂಗಾ ನದಿಯಲ್ಲಿ ಮೋದಿ ಸರ್ಕಾರ ಕಳೆದ ಅವಧಿಯಲ್ಲೇ ಒಳನಾಡು ಜಲಸಾರಿಗೆಯ ಮೊದಲ ಹಂತವನ್ನು ಆರಂಭಿಸಿತ್ತು. ಮೊದಲ ಹಂತವನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಇದಲ್ಲದೆ, ಒಳನಾಡು ಜಲಸಾರಿಗೆ ಮಾರ್ಗದ ಅಕ್ಕಪಕ್ಕದ ದಂಡೆಯ ಊರುಗಳಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜಿಸುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಇದಕ್ಕಾಗಿಯೇ ‘ಅರ್ಥ ಗಂಗಾ’ ಎಂಬ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು.

ಬಂದರು ಷೇರುಪೇಟೆಗೆ!

ದೇಶದ ಒಂದು ಪ್ರಮುಖ ಬಂದರನ್ನು ಕಾರ್ಪೋರೇಟೀಕರಣಗೊಳಿಸಲು ನಿರ್ಧರಿಸಲಾಗಿದೆ. ಅಂದರೆ ಆ ಬಂದರನ್ನು ಒಂದು ಕಂಪನಿಯ ರೀತಿ ಅಭಿವೃದ್ಧಿಪಡಿಸಲಾಗುತ್ತದೆ. ಅಲ್ಲದೆ, ಷೇರುಪೇಟೆಯಲ್ಲಿ ಆ ಬಂದರನ್ನು ನೋಂದಾಯಿಸಲಾಗುತ್ತದೆ. ಈ ಮೂಲಕ ಆ ಬಂದರಿನ ಷೇರುಗಳು ಷೇರು ಹೂಡಿಕೆದಾರರಿಗೆ ಲಭ್ಯವಾಗಲಿವೆ. ಬಂದರುಗಳನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಇರಾದೆಯು ಈ ಕ್ರಮದ ಹಿಂದಿದೆ.

3 ವರ್ಷದಲ್ಲಿ ಪ್ರೀಪೇಡ್ ಸ್ಮಾರ್ಟ್ ವಿದ್ಯುತ್ ಮೀಟರ್ ಈಗಾಗಲೇ ಎಲ್ಲ ಮನೆಗಳಿಗೆ ವಿದ್ಯುತ್ ಒದಗಿಸುವಲ್ಲಿ ಬಹುತೇಕ ಯಶ ಕಂಡಿರುವ ಕೇಂದ್ರ ಸರ್ಕಾರ ಈಗ ಪ್ರೀಪೇಟ್ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳನ್ನು 3 ವರ್ಷದಲ್ಲಿ ಅಳವಡಿಸಲು ವಿದ್ಯುತ್ ಸಂಪರ್ಕ ಒದಗಿಸುವ ಡಿಸ್ಕಾಂಗಳಿಗೆ ಸಲಹೆ ನೀಡಿದೆ. ವಿದ್ಯುತ್ ಪೂರೈಸುವ ಡಿಸ್ಕಾಂಗಳು ಆರ್ಥಿಕ ಒತ್ತಡದಲ್ಲಿವೆ. ಹೀಗಾಗಿ ಪ್ರೀಪೇಡ್ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯು ಈ ಆರ್ಥಿಕ ಒತ್ತಡದಿಂದ ಕಂಪನಿಗಳು ಹೊರಬರಲು ಸಹಾಯ ಮಾಡಬಹುದು. ಈ ಮೀಟರ್‌ಗಳಿಂದ ಮ್ಯಾನ್ಯುವಲ್ ಬಿಲ್ಲಿಂಗ್‌ನ ಖರ್ಚು ಉಳಿಯಲಿದೆ. ಸ್ಮಾರ್ಟ್ ಮೀಟರ್ ಹೊಂದಿದವರಿಗೆ ರಿಯಾಯಿತಿ ದರ ವಿಧಿಸಬೇಕು ಎಂದು ಹಿಂದೆ ಸರ್ಕಾರ ಸೂಚಿಸಿತ್ತು.

ಕೇಂದ್ರ ಬಜೆಟ್ 2020 ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿದ್ಯುತ್ ವಲಯಕ್ಕೆ 22 ಸಾವಿರ ಕೋಟಿ ವಿದ್ಯುತ್ ವಲಯ ಹಾಗೂ ಮರುಬಳಕೆ ಇಂಧನ ವಲಯಕ್ಕೆ 2020-21ನೇ ಸಾಲಿಗೆ ಸರ್ಕಾರ 22 ಸಾವಿರ ಕೋಟಿ ರು. ನೀಡಿದೆ. ನ್ಯಾಷನಲ್ ಗ್ಯಾಸ್ ಗ್ರಿಡ್ ಅನ್ನು ಈಗಿನ 16,200 ಕಿ. ಮೀ.ನಿಂದ 27,000 ಕಿ.ಮೀ.ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ.

ಏಕಗವಾಕ್ಷಿ ಇ-ಸರಕು ಮಾರುಕಟ್ಟೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಏಕಗವಾಕ್ಷಿ ಇ-ಸರಕು ಮಾರುಕಟ್ಟೆ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಹೊಸ ಸರಕು ಸಾಗಣೆ ನೀತಿಯನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪಾತ್ರವನ್ನು ವರ್ಗೀಕರಿಸಲಾಗುತ್ತದೆ. ಈ ಯೋಜನೆಯಿಂದ ಉದ್ಯಮಗಳಲ್ಲಿ ಸ್ಪರ್ಧೆ ಹೆಚ್ಚಲಿದೆ. ಜತೆಗೆ ಉದ್ಯೋಗಾವಕಾಶಗಳು, ಪ್ರತಿಭೆಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

5 ಕೋಟಿ ರು.ವರೆಗೆ ಆಡಿಟ್‌ ಬೇಕಿಲ್ಲ: ಸಣ್ಣ ಕಂಪನಿಗಳಿಗೆ, ವ್ಯಾಪಾರಿಗಳಿಗೆ ರಿಲೀಫ್!

ಹಳಿ ಪಕ್ಕದ ಖಾಲಿ ಜಾಗೆಯಲ್ಲಿ ಸೌರ ಘಟಕ ರೈಲು ಹಳಿಯ ಪಕ್ಕದ ಖಾಲಿ ಜಾಗದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪವೂ ರೈಲ್ವೆ ಇಲಾಖೆ ಮುಂದೆ ಇದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿದ್ಯುತ್ ವಲಯಕ್ಕೆ 22 ಸಾವಿರ ಕೋಟಿ ವಿದ್ಯುತ್ ವಲಯ ಹಾಗೂ ಮರುಬಳಕೆ ಇಂಧನ ವಲಯಕ್ಕೆ 2020-21ನೇ ಸಾಲಿಗೆ ಸರ್ಕಾರ 22 ಸಾವಿರ ಕೋಟಿ ರು. ನೀಡಿದೆ. ನ್ಯಾಷನಲ್ ಗ್ಯಾಸ್ ಗ್ರಿಡ್ ಅನ್ನು ಈಗಿನ 16,200 ಕಿ. ಮೀ.ನಿಂದ 27000 ಕಿ.ಮೀ.ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ.

ಹಳಿ ಪಕ್ಕದ ಖಾಲಿ ಜಾಗೆಯಲ್ಲಿ ಸೌರ ಘಟಕ ರೈಲು ಹಳಿಯ ಪಕ್ಕದ ಖಾಲಿ ಜಾಗದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪವೂ ರೈಲ್ವೆ ಇಲಾಖೆ ಮುಂದೆ ಇದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

150 ರೈಲುಗಳು ಖಾಸಗಿ ಸಹಭಾಗಿತ್ವದಲ್ಲಿ ಖಾಸಗಿ-ಸರ್ಕಾರಿ ಸಹಾಭಾಗಿತ್ವದಲ್ಲಿ 150 ರೈಲುಗಳನ್ನು ಓಡಿಸುವ ಘೋಷಣೆ ಮಾಡಲಾಗಿದೆ. ಇದಲ್ಲದೆ, 4 ರೈಲು ನಿಲ್ದಾಣಗಳನ್ನು ಇದೇ ರೀತಿ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತದೆ. ಹೆಚ್ಚು ತೇಜಸ್ ರೈಲುಗಳನ್ನು ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ಓಡಿಸಲಾಗುತ್ತದೆ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗೆ ವೇಗ ನೀಡಲಾಗುತ್ತದೆ

ಉಡಾನ್ ಯೋಜನೆಯಡಿ ಇನ್ನೂ 100 ಹೊಸ ಏರ್‌ಪೋರ್ಟ್ ಉಡಾನ್ ವಿಮಾನಯಾನ ಯೋಜನೆಯಡಿ ದೇಶದಲ್ಲಿ 2025ನೇ ಇಸವಿಯ ಒಳಗೆ 100 ಹೆಚ್ಚು ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಇದರಿಂದಾಗಿ ಉಡಾನ್ ಯೋಜನೆಯಡಿ ಸಂಚರಿಸುತ್ತಿರುವ 600 ವಿಮಾನಗಳ ಸಂಖ್ಯೆ 1200ಕ್ಕೆ ಈ ಅವಧಿಯಲ್ಲಿ ಹೆಚ್ಚಲಿದೆ.

ಸಾರಿಗೆ ಮೂಲಸೌಕರ್ಯಕ್ಕೆ ₹1.7 ಲಕ್ಷ ಕೋಟಿ ಸಾರಿಗೆ ಮೂಲಸೌಕರ್ಯ ವಲಯಕ್ಕೆ 1.7 ಲಕ್ಷ ಕೋಟಿ ರು.ಗಳನ್ನು 2020-21ನೇ ಸಾಲಿಗೆ ನೀಡಲಾಗಿದೆ. ರಸ್ತೆ, ರೈಲು ಹಾಗೂ ಇತರ ಸಾರಿಗೆ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. 9 ಸಾವಿರ ಕಿ.ಮೀ. ಆರ್ಥಿಕ ಕಾರಿಡಾರ್ ಹೆದ್ದಾರಿ ಹೆದ್ದಾರಿಗಳ ಅಭಿವೃದ್ಧಿ ತೀವ್ರಕ್ಕೆ ನಿರ್ಧರಿಸಲಾಗಿದೆ. ಈ ಪ್ರಕಾರ 9 ಸಾವಿರ ಕಿ.ಮೀ. ಆರ್ಥಿಕ ಕಾರಿಡಾರ್ ಹೆದ್ದಾರಿ ನಿರ್ಮಾಣ, 2500 ಕಿ.ಮೀ. ನಿಯಂತ್ರಿತ ಹೆದ್ದಾರಿಗಳು, 2000 ಕಿ.ಮೀ. ಕರಾವಳಿ ಹೆದ್ದಾರಿಗಳು ಹಾಗೂ ಸೇನೆಗೆ ನೆರವಾಗಲು ದೇಶದ ಗಡಿಗಳಲ್ಲಿ 2000 ಕಿ.ಮೀ. ಹೆದ್ದಾರಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 2023ಕ್ಕೆ ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಪೂರ್ಣಗೊಳಿಸುವ ಉದ್ದೇಶ ವಿದೆ. ಇದು ಸಾಕಾರಗೊಂಡರೆ 12 ತಾಸಿನಲ್ಲಿ ಮುಂಬೈನಿಂದ ದಿಲ್ಲಿಗೆ ಪ್ರಯಾಣ ಸಾಧ್ಯ.