EPFO ಕನಿಷ್ಠ ಪಿಂಚಣಿ 1 ಸಾವಿರದಿಂದ 5 ಸಾವಿರಕ್ಕೆ ಏರಿಕೆ?
ಟ್ರೇಡ್ ಯೂನಿಯನ್‌ಗಳು ಕನಿಷ್ಠ ಇಪಿಎಫ್‌ಒ ಪಿಂಚಣಿಯನ್ನು ₹5,000ಕ್ಕೆ ಹೆಚ್ಚಿಸುವಂತೆ ಮತ್ತು 8ನೇ ವೇತನ ಆಯೋಗ ರಚಿಸುವಂತೆ ಒತ್ತಾಯಿಸಿವೆ. ಅಲ್ಲದೆ, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹10 ಲಕ್ಷಕ್ಕೆ ಹೆಚ್ಚಿಸಬೇಕೆಂದು ಮತ್ತು ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿವೆ.
ನವದೆಹಲಿ (ಜ.6): ಇಂದು ದೇಶದಲ್ಲಿ ಉದ್ಯೋಗ ಭವಿಷ್ಯನಿಧಿ ನೀಡುವ ಕನಿಷ್ಠ ಪಿಂಚಣಿ 1 ಸಾವಿರ ರೂಪಾಯಿ. ಆದರೆ, ಇದನ್ನು 5 ಸಾವಿರ ರೂಪಾಯಿಗೆ ಏರಿಸುವಂತೆ ಒತ್ತಾಯ ಕೇಳಿಬಂದಿದೆ. ಟ್ರೇಡ್ ಯೂನಿಯನ್‌ಗಳು ಸೋಮವಾರ ಕನಿಷ್ಠ ಇಪಿಎಫ್‌ಒ ಪಿಂಚಣಿಯನ್ನು 5 ಪಟ್ಟು ಏರಿಕೆ ಮಾಡಿ 5 ಸಾವಿರ ರೂಪಾಯಿ ಮಾಡುವಂತೆ ಒತ್ತಾಯಿಸಿದೆ. ಅದರೊಂದಿಗೆ 8ನೇ ವೇತನ ಆಯೋಗವನ್ನು ತಕ್ಷಣವೇ ರಚಿಸಬೇಕು ಮುಂಬರುವ 2025-26 ಬಜೆಟ್‌ನಲ್ಲಿ ಅತೀಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ಹಾಕುವಂತೆ ಒತ್ತಾಯ ಮಾಡಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ತಮ್ಮ ಸಾಂಪ್ರದಾಯಿಕ ಬಜೆಟ್ ಪೂರ್ವ ಸಭೆಯಲ್ಲಿ, ಟ್ರೇಡ್ ಯೂನಿಯನ್ ಮುಖಂಡರು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ 10 ಲಕ್ಷಕ್ಕೆ ಹೆಚ್ಚಿಸಬೇಕು, ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆ ಮತ್ತು ಸರ್ಕಾರಿ ನೌಕರರ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು. 2025-26ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಯುಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌ಪಿ ತಿವಾರಿ, ಅನೌಪಚಾರಿಕ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಸರ್ಕಾರವು ಪಿಎಸ್‌ಯುಗಳ ಎಲ್ಲಾ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣವನ್ನು ನಿಲ್ಲಿಸಬೇಕು ಮತ್ತು ಸೂಪರ್ ರಿಚ್‌ಗಳಿಗೆ ಹೆಚ್ಚುವರಿ 2% ತೆರಿಗೆ ವಿಧಿಸಬೇಕು. ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸಬೇಕು ಮತ್ತು ಅವರ ಕನಿಷ್ಠ ವೇತನವನ್ನು ಸಹ ನಿಗದಿಪಡಿಸಬೇಕು ಎಂದು ತಿವಾರಿ ಒತ್ತಾಯಿಸಿದ್ದಾರೆ.
ಭಾರತೀಯ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ (ಉತ್ತರ ವಲಯ) ಪವನ್ ಕುಮಾರ್, ಇಪಿಎಸ್-95 ರ ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ 1,000 ರೂ.ನಿಂದ ಮಾಸಿಕ 5,000 ರೂ.ಗೆ ಮೊದಲ ಹಂತವಾಗಿ ಹೆಚ್ಚಿಸಬೇಕು ಮತ್ತು ನಂತರ ವಿಡಿಎ (ವೇರಿಯಬಲ್ ಡಿಯರ್ನೆಸ್ ಭತ್ಯೆ) ಗೆ ಲಿಂಕ್ ಮಾಡಬೇಕು. ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು 10 ಲಕ್ಷ ರೂ.ಗೆ ಏರಿಸುವಂತೆಯೂ ಅವರು ಸಲಹೆ ನೀಡಿದರು. ಅಲ್ಲದೆ, ಪಿಂಚಣಿಯಿಂದ ಬರುವ ಆದಾಯವನ್ನು ತೆರಿಗೆ ಮುಕ್ತವನ್ನಾಗಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 8ನೇ ವೇತನ ಆಯೋಗವನ್ನು ಕೂಡಲೇ ರಚಿಸಬೇಕು. ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಸ್ವದೇಶ್ ದೇವ್ ರಾಯ್ ಅವರು ಫೆಬ್ರವರಿ 2014 ರಲ್ಲಿ 7 ನೇ ವೇತನ ಆಯೋಗವನ್ನು ಸ್ಥಾಪಿಸಿ 10 ವರ್ಷಗಳಿಗಿಂತ ಹೆಚ್ಚು ಕಾಲವಾಗಿದೆ. ಹಾಗಾಗಿ 8 ನೇ ವೇತನ ಆಯೋಗವನ್ನು ತಕ್ಷಣವೇ ರಚಿಸಬೇಕು ಎಂದು ಒತ್ತಾಯಿಸಿದರು.
ಇನ್ನು Pension ಓಡಾಟದ ರಗಳೆಯಿಲ್ಲ; ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ದೇಶಾದ್ಯಂತ ಜಾರಿ ಮಾಡಿದ EPFO
1980ರ ದಶಕದಲ್ಲಿ 21 ಲಕ್ಷದಿಂದ 2023-24ರಲ್ಲಿ 8 ಲಕ್ಷಕ್ಕೂ ಹೆಚ್ಚು CPSE ಗಳಲ್ಲಿ ಖಾಯಂ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿರುವುದರ ಬಗ್ಗೆಯೂ ದೇವ್ ರಾಯ್ ಕಳವಳ ವ್ಯಕ್ತಪಡಿಸಿದರು. ಎನ್‌ಎಫ್‌ಐಟಿಯು ರಾಷ್ಟ್ರೀಯ ಅಧ್ಯಕ್ಷ ದೀಪಕ್ ಜೈಸ್ವಾಲ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಗಾಗಿ ಪ್ರತ್ಯೇಕ ಬಜೆಟ್ ಹಂಚಿಕೆಗೆ ಒತ್ತಾಯ ಮಾಡಿದ್ದಾರೆ.
ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್, ಜನವರಿ ಒಳಗಾಗಿ ಈ ಕೆಲಸ ಮಾಡಿ!