ಇನ್ನು Pension ಓಡಾಟದ ರಗಳೆಯಿಲ್ಲ; ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ ದೇಶಾದ್ಯಂತ ಜಾರಿ ಮಾಡಿದ EPFO
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (CPPS) ಪೂರ್ಣ ಪ್ರಮಾಣದ ಅನುಷ್ಠಾನವನ್ನು ಪೂರ್ಣಗೊಳಿಸಿದೆ. ಈ ಹೊಸ ವ್ಯವಸ್ಥೆಯು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ದೇಶದಾದ್ಯಂತ ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅನುವು ಮಾಡಿಕೊಡುತ್ತದೆ.
ನವದೆಹಲಿ (ಜ.4): ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(EPFO) ನಿವೃತ್ತಿ ನಿಧಿ ವಿಭಾಗ, ದೇಶದ ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (CPPS) ಪೂರ್ಣ ಪ್ರಮಾಣದ ರೋಲ್‌ಔಟ್ ಅನ್ನು ಪೂರ್ಣಗೊಳಿಸಿದೆ. ಇದು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. vಡಿಸೆಂಬರ್ 2024ಕ್ಕೆ ಎಲ್ಲಾ EPFO ನ 122 ಪ್ರಾದೇಶಿಕ ಕಚೇರಿಗಳಿಂದ (ಪಿಂಚಣಿ ನೀಡುವ ಸಂಸ್ಥೆಗಳು) 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಸುಮಾರು ₹1,570 ಕೋಟಿಗಳನ್ನು ವಿತರಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಯೋಜನೆಯ ಭಾಗವಾಗಿ, 49,000 ಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಸುಮಾರು ₹11 ಕೋಟಿ ವಿತರಣೆಯ ಮೂಲಕ CPPSನ ಮೊದಲ ಪ್ರಾಯೋಗಿಕವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕರ್ನಾಲ್‌ನ ಜಮ್ಮು ಮತ್ತು ಶ್ರೀನಗರ ಪ್ರಾದೇಶಿಕ ಕಚೇರಿಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು.
ನವೆಂಬರ್ 2024 ರಲ್ಲಿ, ಎರಡನೇ ಪ್ರಾಯೋಗಿಕ ಪರೀಕ್ಷೆಯನ್ನು 24 ಪ್ರಾದೇಶಿಕ ಕಚೇರಿಗಳಲ್ಲಿ ಮಾಡಲಾಗಿತ್ತು. ಇದರಲ್ಲಿ ಸುಮಾರು 9.3 ಲಕ್ಷ ಪಿಂಚಣಿದಾರರಿಗೆ ಸುಮಾರು ₹213 ಕೋಟಿ ಪಿಂಚಣಿ ವಿತರಿಸಲಾಯಿತು.EPFO ಕಳೆದ ವರ್ಷ ಡಿಸೆಂಬರ್‌ನಲ್ಲಿ ನೌಕರರ ಪಿಂಚಣಿ ಯೋಜನೆ 1995 ರ ಅಡಿಯಲ್ಲಿ CPPS ನ ಪೂರ್ಣ ಪ್ರಮಾಣದ ರೋಲ್‌ಔಟ್ ಅನ್ನು ಪೂರ್ಣಗೊಳಿಸಿತು.
ಏನಿದು ಸಿಪಿಪಿಎಸ್: ಕೇಂದ್ರ ಸಚಿವಾಲಯದ ಪ್ರಕಾರ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (CPPS) ಅಸ್ತಿತ್ವದಲ್ಲಿರುವ ಪಿಂಚಣಿ ವಿತರಣೆ ವ್ಯವಸ್ಥೆಯಿಂದ ದೊಡ್ಡ ಬದಲಾವಣೆಯಾಗಿದೆ. ಹಿಂದಿನ ವ್ಯವಸ್ಥೆ ವಿಕೇಂದ್ರೀಕರಣವಾಗಿತ್ತು. ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿಯಲ್ಲಿ, ಇಪಿಎಫ್‌ಒನ ಪ್ರತಿಯೊಂದು ವಲಯ/ಪ್ರಾದೇಶಿಕ ಕಚೇರಿಗಳು ಕೇವಲ ಮೂರರಿಂದ ನಾಲ್ಕು ಬ್ಯಾಂಕ್‌ಗಳೊಂದಿಗೆ ಪ್ರತ್ಯೇಕ ಒಪ್ಪಂದಗಳನ್ನು ನಿರ್ವಹಣೆ ಮಾಡುತ್ತಿತ್ತು.
ಆದರೆ, CPPS ಅನ್ನು ಪರಿಚಯಿಸುವುದರೊಂದಿಗೆ, ಪಿಂಚಣಿದಾರರು ಈಗ ಯಾವುದೇ ಬ್ಯಾಂಕ್‌ನಿಂದ ಪಿಂಚಣಿಯನ್ನು ಪಡೆಯಬಹುದಾಗಿದೆ. ಅಲ್ಲದೆ, ಪಿಂಚಣಿದಾರರು ಪಿಂಚಣಿ ಪ್ರಾರಂಭವಾಗುವ ಸಮಯದಲ್ಲಿ ಯಾವುದೇ ಪರಿಶೀಲನೆಗಾಗಿ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ. ಸಿಪಿಪಿಎಸ್ ಅಡಿಯಲ್ಲಿ, ಬಿಡುಗಡೆಯಾದ ತಕ್ಷಣ ಪಿಂಚಣಿಯ ಹಣವನ್ನು ಜಮಾ ಮಾಡಲಾಗುತ್ತದೆ.
ಜನವರಿ 2025 ರಿಂದ, ಪಿಂಚಣಿದಾರರು ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಾಗ ಅಥವಾ ದೇಶ ಬಿಟ್ಟು ವಿದೇಶಕ್ಕೆ ಶಿಫ್ಟ್ ಆದರೂ ಸಹ ಪಿಂಚಣಿ ಪಾವತಿ ಆದೇಶಗಳನ್ನು (PPO) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲದೇ ದೇಶದಾದ್ಯಂತ ಪಿಂಚಣಿಗಳ ವಿತರಣೆಯನ್ನು CPPS ಖಚಿತಪಡಿಸುತ್ತದೆ.
"ನಿವೃತ್ತಿಯ ನಂತರ ತಮ್ಮ ಊರಿಗೆ ತೆರಳುವ ಪಿಂಚಣಿದಾರರಿಗೆ ಇದು ಉತ್ತಮ ಪರಿಹಾರವಾಗಿದೆ" ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಿಪಿಪಿಎಸ್‌ನ ಪೂರ್ಣ ಪ್ರಮಾಣದ ಅನುಷ್ಠಾನವನ್ನು 'ಐತಿಹಾಸಿಕ ಮೈಲಿಗಲ್ಲು' ಎಂದು ಬಣ್ಣಿಸಿದ್ದಾರೆ.
ಇಪಿಎಫ್‌ಒ ಸದಸ್ಯರಿಗೆ Important ನೋಟಿಸ್, ಜನವರಿ ಒಳಗಾಗಿ ಈ ಕೆಲಸ ಮಾಡಿ!
“ಈ ಪರಿವರ್ತಕ ಉಪಕ್ರಮವು ಪಿಂಚಣಿದಾರರಿಗೆ ತಮ್ಮ ಪಿಂಚಣಿಯನ್ನು ಯಾವುದೇ ಬ್ಯಾಂಕ್, ಯಾವುದೇ ಶಾಖೆ, ದೇಶದ ಎಲ್ಲಿಂದಲಾದರೂ ಮನಬಂದಂತೆ ಪ್ರವೇಶಿಸಲು ಅಧಿಕಾರ ನೀಡುತ್ತದೆ. ಇದು ಭೌತಿಕ ಪರಿಶೀಲನೆ ಭೇಟಿಗಳ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಪಿಂಚಣಿ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ, ”ಎಂದು ಮಾಂಡವಿಯಾ ಹೇಳಿದರು.ಈ ವ್ಯವಸ್ಥೆಯು ಇಪಿಎಫ್‌ಒ ಸೇವೆಗಳನ್ನು ಆಧುನೀಕರಿಸಲು ಮತ್ತು "ನಮ್ಮ ಪಿಂಚಣಿದಾರರಿಗೆ ಅನುಕೂಲತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು" ಕೇಂದ್ರ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
EPF ಬಗ್ಗೆ ಗೊತ್ತು VPF ಬಗ್ಗೆ ಗೊತ್ತಿದ್ಯಾ? ಇದರಲ್ಲಿ ನಿಮಗೆ ಸಿಗುತ್ತೆ ಪಿಎಫ್‌ನಷ್ಟೇ ಬಡ್ಡಿ!