ನವದೆಹಲಿ(ಆ.21): ದುಬಾರಿ ಬೈಕ್‌ಗಳ ಉತ್ಪಾದಕ ಕಂಪನಿ, ಶೀಘ್ರವೇ ಭಾರತಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ. ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಾಹನ ಮಾರಾಟ ಆಗದೇ ಇರುವುದರಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಒಂದೇ ಕ್ಲಿಕ್; ಬೆಂಗಳೂರಿನಲ್ಲಿ ಮನೆಬಾಗಿಲಿಗೆ ಬರಲಿದೆ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್

ಈ ವರ್ಷದ ಎರಡನೇ ತ್ರೈಮಾಸಿಕದ ವಹಿವಾಟುಗನ್ನು ಪರಿಶೀಲನೆ ನಡೆಸಿದ ಬಳಿಕ, ಲಾಭ ಕುಂಠಿತವಾಗಿರುವ ಹಾಗೂ ಮುಂದಿನ ಕಾರ್ಯಾಚರಣೆಗೆ ಸುಗಮವಲ್ಲದ ದೇಶಗಳಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ ಎಂದು ಹಾರ್ಲೆ ಡೇವಿಡ್‌ಸನ್‌ ಹೇಳಿದೆ.

ಬರುತ್ತಿದೆ ಬಜಾಜ್ ಚೇತಕ್ ಸ್ಪೂರ್ತಿ ಪಡೆದ ಹಸ್ಕವರ್ನ ಎಲೆಕ್ಟ್ರಿಕ್ ಸ್ಕೂಟರ್!

ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ 2500 ಕ್ಕೂ ಕಡಿಮೆ ಬೈಕ್‌ಗಳು ಬಿಕರಿಯಾಗಿದ್ದು, 2020ರ ಏಪ್ರಿಲ್‌-ಜೂನ್‌ನಲ್ಲಿ ಕೇವಲ 100 ಬೈಕುಗಳು ಮಾರಾಟವಾಗಿದೆ. ಇದು ಯೋಜಿತ ವಹಿವಾಟಿಗಿಂತ ಕಡಿಮೆಯಾಗಿದ್ದು, ಹಾಗಾಗಿ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದು ನಿಕ್ಕಿಯಾಗಿದೆ.