ನವದೆಹಲಿ(ಆ.16): ಭಾರತದಲ್ಲಿ ಬಜಾಜ್ ಜೊತೆ ಸೇರಿ ವ್ಯವಹಾರ ನಡೆಸುತ್ತಿರುವ KTM ಇದೀಗ ಮತ್ತೊಂದು ಹೆಜ್ಜೆ ಇಡುತ್ತಿದೆ. KTM ಹಾಗೂ ಹಸ್ಕವರ್ನ ಜೊತೆಯಾಗಿ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ ಹಳೇ ಬಜಾಜ್ ಸ್ಕೂಟರ್ ಡಿಸೈನ್‌ನಿಂದ ಪ್ರೇರಿತಗೊಂಡು ನೂತನ ಹಸ್ಕವರ್ನ ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ನಿರ್ಮಿಸಲಾಗಿದೆ.

ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

ಬಜಾಜ್ ಸ್ಕೂಟರ್‌ನಿಂದ ಸ್ಪೂರ್ತಿ ಪಡೆದು ನೂತನ ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ಮಾಡಲಾಗಿದೆ. ಆದರೆ ಆಧುನಿಕ ಟಚ್ ನೀಡಲಾಗಿದೆ.  ರೌಂಡ್ LED ಹೆಡ್‌ಲ್ಯಾಂಪ್ಸ್, ರಿಡಿಸೈನ್ ಹ್ಯಾಂಡಲ್‌ಬಾರ್ ಹಾಗೂ ವಿಂಡ್ ಪ್ರೊಟೆಕ್ಷನ್ ಮೂಲಕ ಸ್ಕೂಟರ್ ಅಂದ ಮತ್ತಷ್ಟು ಹೆಚ್ಚಾಗಿದೆ.

ಹೆಚ್ಚು ಸ್ಪೋರ್ಟಿ ಲುಕ್ ಹೊಂದಿರುವ ನೂತನ ಎಲೆಕ್ಟ್ರಿಕ್ ಸ್ಕೂಟರ್, ಮುಂಭಾಗದಲ್ಲಿ ಸಿಂಗಲ್ ಸೈಡ್ ಸಸ್ಪೆನ್ಶನ್ ಹೊಂದಿದೆ. ಹಳೇ ಬಜಾಜ್ ಸ್ಕೂಟರ್‌ನಂತೆ ಡಿಸೈನ್ ಮಾಡಲಾಗಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್, ಹ್ಯಾಂಡಲ್‌ಬಾರ್ ಒಳಗಡೆ ಟರ್ನ್ ಇಂಡಿಕೇಟರ್ ಅಳವಡಿಸಲಾಗಿದ್ದು ಹೆಚ್ಚು ಹೊಸತನಗಳನ್ನು ಒಳಗೊಂಡಿದೆ. 

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಳಸಿರುವ 3Kwh ಬ್ಯಾಟರಿ ಹಾಗೂ 4 KW ಮೋಟಾರ್ ಬಳಸಲಾಗುತ್ತಿದೆ. ಇದು 16Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನೂತನ  ಹಸ್ಕವರ್ನ ಎಲೆಕ್ಟ್ರಿಕ್ ಸ್ಕೂಟರ್ ಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ