ಒಂದೇ ಕ್ಲಿಕ್; ಬೆಂಗಳೂರಿನಲ್ಲಿ ಮನೆಬಾಗಿಲಿಗೆ ಬರಲಿದೆ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್
- ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಒಕಿನಾವ ಇ ಸ್ಕೂಟರ್‌ನಿಂದ ಹೊಸ ಕೊಡುಗೆ
- ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಮುಂದಾಗ ಒಕಿನಾವ
- ಬೆಂಗಳೂರಿನಲ್ಲಿ ಹೋಮ್ ಡೆಲಿವರಿ ಆರಂಭಿಸಿದ ಒಕಿನಾವ ಸ್ಕೂಟರ್
ಬೆಂಗಳೂರು(ಆ.18): ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಒಕಿನಾವಾ, ಬೆಂಗಳೂರು ನಗರದಲ್ಲಿ ಇ ಸ್ಕೂಟರ್ ಖರೀದಿದಾರರಿಗೆ ವಿಶಿಷ್ಟವಾಗಿ ಮನೆ ಬಾಗಿಲಿಗೆ ಡೆಲಿವರಿ ಸರ್ವೀಸ್ ಘೋಷಿಸಿದೆ. ಕಂಪನಿ ಉಚಿತವಾಗಿ ಈ ಸರ್ವೀಸ್ ಖರೀದಿದಾರರಿಗೆ ನೀಡಲಿದೆ. ನಗರದಲ್ಲಿ ಮನೆಬಾಗಿಲಿಗೆ ಇಲೆಕ್ಟ್ರಿಕ್ ಸ್ಕೂಟರ್ ವಿತರಿಸುವ ಕಾರ್ಯಕ್ಕೆ ಬ್ರಾಂಡ್ ಚಾನೆಲ್ ಪಾಲುದಾರರೊಂದಿಗೆ ಸಹಭಾಗಿತ್ವ ಹೊಂದಿದೆ.
ಒಕಿನಾವ ಪ್ರೈಸ್ ಪ್ರೋ ಸ್ಕೂಟರ್; ಮನೆಯಲ್ಲೇ ಚಾರ್ಜ್ ಮಾಡಿ 110 ಕಿ.ಮೀ ಪ್ರಯಾಣಿಸಿ!.
ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಸಮಯದಿಂದ ಒಕಿನಾವಾ ತನ್ನ ಶೇರುದಾರರಿಗೆ ಸುಲಭ ಮತ್ತು ಸುರಕ್ಷಿತ ವಿಧಾನ ಪರಿಚಯಿಸಲು ಅವಿರತವಾಗಿ ಕೆಲಸ ಮಾಡುತ್ತಿದೆ. ಬ್ರಾಂಡ್ ಪ್ರಕ್ರಿಯೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ವೆಬ್ ಸೈಟ್ ಮೂಲಕ ಉತ್ಪನ್ನಗಳ ಆನ್ ಲೈನ್ ಬುಕ್ಕಿಂಗ್ ಇತ್ತೀಚೆಗಷ್ಟೇ ಆರಂಭಿಸಿದೆ. ಮನೆಬಾಗಿಲಿಗೆ ಸರ್ವೀಸ್ ನೀಡುವ ಹೊಸ ಪರಿಕಲ್ಪನೆ ಇದೇ ದಿಕ್ಕಿನಲ್ಲಿ ಕಂಪನಿಯ ಮತ್ತೊಂದು ಅಭಿಯಾನವಾಗಿದೆ. ಸರ್ವೀಸ್ ಒಕಿನಾವಾ ವೆಬ್ ಸೈಟ್ ಮೂಲಕ ಮಾಡಲಾಗುವ ಎಲ್ಲಾ ಬುಕ್ಕಿಂಗ್ ಗೆ ಅನ್ವಯವಾಗುತ್ತದೆ. ಇಡೀ ಪ್ರಕ್ರಿಯೆ ಕನಿಷ್ಟ ಸಂಪರ್ಕವನ್ನು ಹೊಂದಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್!.
"ಕೋವಿಡ್-19 ಆರಂಭವಾದ ಸಮಯದಿಂದ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯ ಅಗತ್ಯವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಒಕಿನಾವಾದಲ್ಲಿ, ನಾವು ಸುರಕ್ಷಿತ ಕಾರ್ಯತಂತ್ರ ಅಳವಡಿಸಿಕೊಳ್ಳುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ನಾವು ಇತ್ತೀಚೆಗಷ್ಟೇ ಒಂದು ಸಲಹೆಯನ್ನು ನೀಡಿದ್ದು, ಇದು ಡೀಲರ್ ಶಿಪ್ ನಲ್ಲಿ ಡೆಲಿವರಿ ನಂತರ ಮತ್ತು ಜೋಡಣಾ ಘಟಕದಲ್ಲಿ ಉತ್ಪನ್ನಗಳಿಗೆ ಸೂಕ್ತವಾಗಿ ಸ್ಯಾನಿಟೈಸ್ ಮಾಡುವುದನ್ನು ಖಚಿತಪಡಿಸುವುದನ್ನು ಒಳಗೊಂಡಿದೆ. ಡೀಲರ್ ಗಳಿಗೂ ನಿಗದಿತ ಕಾರ್ಯವಿಧಾನ ಅಳವಡಿಸುವಂತೆ ಸಲಹೆ ನೀಡಲಾಗಿದೆ. ನಾವು ಈ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಸಾಧ್ಯವಾದಷ್ಟೂ ಉತ್ತಮವಾಗಿ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಕೆಲಸ ಮಾಡುತ್ತಿದ್ದೇವೆ. ಆದ್ದರಿಂದಲೇ, ನಾವೀಗ ಇ-ವಾಣಿಜ್ಯ ವೆಬ್ ಸೈಟ್ ಆರಂಭಿಸಿದ್ದೇವೆ. ಡೀಲರ್ ಶಿಪ್ ಅಪ್ಲಿಕೇಶನ್ ಪ್ರಕ್ರಿಯೆಯೂ ಡಿಜಿಟಲೀಕರಣವಾಗಿದೆ. ಮನೆಬಾಗಿಲಿಗೆ ಸರ್ವೀಸ್ ಎನ್ನುವ ಹೊಸ ಪರಿಕಲ್ಪನೆ ಗ್ರಾಹಕರು ಉತ್ಪನ್ನ ಪಡೆಯಲು ಮನೆಯಿಂದ ಹೊರಗೆ ಪ್ರಯಾಣಿಸುವ ಅಗತ್ಯವಿಲ್ಲದಂತೆ ಮಾಡುತ್ತದೆ. ಜೊತೆಗೆ, ಉತ್ಪನ್ನವನ್ನು ಸರಿಯಾಗಿ ಸ್ಯಾನಿಟೈಸ್ ಮಾಡುವುದರೊಂದಿಗೆ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಉಷ್ಣಾಂಶ ಪರೀಕ್ಷೆಯನ್ನೂ ಮಾಡಲಾಗುತ್ತದೆ," ಎಂದು ಒಕಿನಾವಾ ದ ಎಂಡಿ ಮತ್ತು ಸಂಸ್ಥಾಪಕ, ಮಿ. ಜಿತೇಂದರ್ ಶರ್ಮಾ ಹೇಳಿದ್ದಾರೆ.
ಸರ್ವೀಸ್ ಬೆಂಗಳೂರು ನಗರದಲ್ಲಿ ಆಗಸ್ಟ್ 15, 2020 ರಿಂದ ಆರಂಭವಾಗಿದೆ. ಬ್ರಾಂಡ್ ಬೆಂಗಳೂರಿನ ಅನುಭವದ ಫಲಿತಾಂಶ ಆಧರಿಸಿ, ಸರ್ವಿಸ್ ಅನ್ನು ಭಾರತದಾದ್ಯಂತ ಇತರ ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಬೆಂಗಳೂರಿನಲ್ಲಿ ಒಕಿನಾವಾ ಇ-ಸ್ಕೂಟರ್ ಗಳ ಮನೆಬಾಗಿಲಿನ ಸರ್ವೀಸ್ ಆರಂಭಿಸಿದೆ
ಸರ್ವೀಸ್ ಬೆಂಗಳೂರು ನಗರದಲ್ಲಿ ಆಗಸ್ಟ್ 15, 2020 ರಿಂದ ಆರಂಭವಾಗಿದೆ. ಬ್ರಾಂಡ್ ಬೆಂಗಳೂರಿನ ಅನುಭವದ ಫಲಿತಾಂಶ ಆಧರಿಸಿ, ಸರ್ವಿಸ್ ಅನ್ನು ಭಾರತದಾದ್ಯಂತ ಇತರ ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.
ಒಕಿನಾವಾ ಕುರಿತು
2015ರಲ್ಲಿ ಆರಂಭವಾಗದ ಒಕಿನಾವಾ ಭಾರತೀಯ ಆಟೋಮೊಬೈಲ್ ಕಂಪನಿಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಪ್ರಸಿದ್ಧವಾಗುತ್ತಿರುವ ಹೆಸರಾಗಿದೆ. ಒಕಿನಾವಾ- Fame-II ಅನುಮೋದನೆ ಪಡೆದ ’ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಕೇಂದ್ರೀಕರಿಸಿದ 100% ಮೊದಲ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿದೆ. ಅತ್ಯಂತ ವೇಗದ ಇ-ಸ್ಕೂಟರ್ ಮತ್ತು ಬೈಕ್ ಗಳನ್ನು ಉತ್ಪಾದಿಸುವ ಮೂಲಕ, ಕಂಪನಿ ಭಾರತದಲ್ಲಿ ಇ-ವಾಹನಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಸೂಕ್ತ ಪರ್ಯಾಯವನ್ನು ನಿರಂತರವಾಗಿ ನಿರ್ಮಿಸುವ ಮೂಲಕ, ಕಂಪನಿ #ಪವರ್ ದ ಚೇಂಜ್ ಬ್ರಾಂಡ್ ಗುರಿ ನೀಡುತ್ತಿದೆ. ಕಂಪನಿ ಗುರುಗ್ರಾಮದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ರಾಜಸ್ಥಾನದ ಭಿವಾಡಿಯಲ್ಲಿ ತಯಾರಿಕಾ ಘಟಕ ಹೊಂದಿದೆ.