ಕೆಂಪು ಹವಳ: ಒಂದೇ ತಿಂಗಳಲ್ಲಿ ರೈತನ ಕೋಟ್ಯಧಿಪತಿ ಮಾಡಿದ ಟೊಮೆಟೋ
ಮಹಾರಾಷ್ಟ್ರದ ರೈತರೊಬ್ಬರು ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಕೆಂಪು ಹವಳ ಟೊಮೆಟೋ, ಮಹಾರಾಷ್ಟ್ರದ ಜುನ್ನಾರ್ ಪ್ರದೇಶದ ರೈತ ತುಕರಾಮ್ ಭಗೋಜಿ ಗಾಯ್ಕರ್ ಎಂಬುವವರೇ ಟೊಮೆಟೋ ಬೆಳೆದು ಜಾಕ್‌ಪಾಟ್ ಹೊಡೆಸಿಕೊಂಡವರು.
ಮಹಾರಾಷ್ಟ್ರ: ಮಹಾರಾಷ್ಟ್ರದ ರೈತರೊಬ್ಬರು ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಕೆಂಪು ಹವಳ ಟೊಮೆಟೋ, ಹೌದು ದೇಶಾದ್ಯಂತ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಕೈ ಸುಡುತ್ತಿದೆ. ಮಳೆಯಿಂದಾಗಿ ಹಲವೆಡೆ ಬೆಳೆ ನಾಶವಾಗಿದ್ದರಿಂದ ಟೊಮೆಟೋ ಸೇರಿದಂತೆ ಹಲವು ತರಕಾರಿಗಳ ದರ ಗಗನಕ್ಕೇರಿದೆ. ಮಹಾರಾಷ್ಟ್ರದ ರೈತರೊಬ್ಬರಿಗೆ ಇದು ವರವಾಗಿ ಪರಿಣಮಿಸಿದೆ. ಅವರು ಒಂದೇ ತಿಂಗಳಲ್ಲಿ 1.5 ಕೋಟಿ ಮೊತ್ತದ 13 ಸಾವಿರ ಕ್ರೇಟ್ ಟೊಮೆಟೋ ಮಾರಿದ್ದಾರೆ.
ಮಹಾರಾಷ್ಟ್ರದ ಜುನ್ನಾರ್ ಪ್ರದೇಶದ ರೈತ ತುಕರಾಮ್ ಭಗೋಜಿ ಗಾಯ್ಕರ್ ಎಂಬುವವರೇ ಟೊಮೆಟೋ ಬೆಳೆದು ಜಾಕ್‌ಪಾಟ್ ಹೊಡೆಸಿಕೊಂಡವರು. ಇವರು ಸುಮಾರು 13 ಸಾವಿರ ಕ್ರೇಟ್ ಟೊಮೆಟೋ ಸೇಲ್ ಮಾಡುವ ಮೂಲಕ 1 ಕೋಟಿ 5 ಲಕ್ಷ ಹಣ ಸಂಪಾದನೆ ಮಾಡಿದ್ದಾರೆ. ಇವರಿಗೆ 18 ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ 12 ಎಕರೆ ಪ್ರದೇಶದಲ್ಲಿ ಅವರು ಟೊಮೆಟೋ ಬೆಳೆದಿದ್ದರು. ಮಗ ಈಶ್ವರ್ ಗಾಯ್ಕರ್ ಹಾಗೂ ಸೊಸೆ ಸೋನಾಲಿ ನೆರವಿನಿಂದ 12 ಎಕರೆಯಲ್ಲಿ ಅವರು ಟೊಮೆಟೋ ಕೃಷಿ ಮಾಡಿದ್ದರು.
ಬೆಳೆ ಕುಸಿತ: ₹2000 ಗಡಿ ದಾಟಿದ ಟೊಮೆಟೋ ದರ!
ಅವರು ಪ್ರತಿ ಸಲವೂ ಉತ್ತಮ ಗುಣಮಟ್ಟದ ಟೊಮೆಟೋ ಬೆಳೆಯುತ್ತಿದ್ದರು. ಅವರು ಬಳಸುವ ರಸಗೊಬ್ಬರ ಹಾಗೂ ಕೀಟನಾಶಕಗಳು ಟೊಮೆಟೋ ಉತ್ತಮವಾಗಿರಲು ಸಹಾಯ ಮಾಡಿವೆ ಎಂದು ರೈತ ತುಕರಾಮ್ ಅವರ ಕುಟುಂಬದವರು ಹೇಳಿದರು.
ನಾರಾಯಣಗಂಜ್‌ನಲ್ಲಿ ಒಂದು ಟೊಮೆಟೋ ಕ್ರೇಟ್‌ಗೆ 2100 ರೂಪಾಯಿಯಂತೆ ಅವರಿಗೆ ದರ ಸಿಕ್ಕಿತ್ತು, ನಿನ್ನೆ ಇವರು 900 ಕ್ರೇಟ್ ಟೊಮೆಟೋ ಮಾರಿದ್ದರಿಂದ ಅವರಿಗೆ ಒಂದೇ ದಿನ 18 ಲಕ್ಷ ರೂಪಾಯಿ ಆದಾಯ ಬಂದಿತ್ತು. ಹಾಗೆಯೇ ಕಳೆದ ತಿಂಗಳಲ್ಲಿ ಅವರಿಗೆ ಗುಣಮಟ್ಟವನ್ನು ಆಧರಿಸಿದ ಒಂದು ಕ್ರೇಟ್ ಟೊಮೆಟೋಗೆ 1000 ದಿಂದ 2400 ರೂವರೆಗೆ ದರ ಸಿಕ್ಕಿತ್ತು. ಪುಣೆ ಜಿಲ್ಲೆಯ ಜುನ್ನಾರ್‌ನಲ್ಲಿ ಅನೇಕರು ಈ ಬಾರಿ ಟೊಮೆಟೋ ಬೆಳೆದು ಲಕ್ಷಾಧಿಪತಿ ಕೋಟ್ಯಾಧಿಪತಿಗಳಾಗೊದ್ದಾರೆ. ಟೊಮೆಟೋ ಬೆಳೆಗಾರರ ಸಂಘವೂ ಈ ಬಾರಿ ಸುಮಾರು 80 ಕೋಟಿ ಮೌಲ್ಯದ ವ್ಯವಹಾರ ಮಾಡಿದ್ದು, ಆ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿದೆ.
ತುಕಾರಾಮ್ ಅವರ ಸೊಸೆ (daughter-in-law) ಸೋನಾಲಿ (Sonali) ಅವರು ಟೊಮೆಟೋ ಗಿಡ ನೆಟ್ಟು ಅದರ ಪೋಷಣೆ, ನೀರಾವರಿ, ಪ್ಯಾಕಿಂಗ್ ಮುಂತಾದ ಕೆಲಸ ಮಾಡಿದರೆ, ಅವರ ಮಗ ಈಶ್ವರ್ ಅದರ ಮಾರಾಟ, ಹಣಕಾಸು ವ್ಯವಹಾರದ ನಿರ್ವಹಣೆ ಮಾಡುತ್ತಾರೆ. ಉತ್ತಮವಾದ ಮಾರುಕಟ್ಟೆಯಿಂದಾಗಿ ಕಳೆದ ಮೂರು ತಿಂಗಳ ಕಠಿಣ ಪರಿಶ್ರಮಕ್ಕೆ ಅವರಿಗೆ ಭರ್ಜರಿಯೇ ಎಂಬಷ್ಟು ಫಲ ಸಿಕ್ಕಿದೆ.
ಟೊಮೆಟೋ ಬೆಲೆ ಸದ್ಯ ಇಳಿಯೋಲ್ಲ ಬಿಡಿ, ಮನೇಲಿ ಬೆಳೆಯೋದು ಒಳ್ಳೇದು!
ಪುಣೆಯ ನಾರಾಯಣಗಂಜ್‌ನಲ್ಲಿರುವ ಜುನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಕ್ರೇಟ್‌ಗಳಿಗೆ ಅತ್ಯಧಿಕ ಬೆಲೆ ಸಿಗುತ್ತದೆ. 2,500 ರೂ., ಅಂದರೆ ಒಂದು ಕ್ರೇಟ್‌ನಲ್ಲಿ 20 ಕೆಜಿ ಟೊಮೆಟೋ ಇದ್ದು, ಕಿಲೋ ಗ್ರಾಂಗೆ 125 ರೂ. ದರ ಸಿಗುತ್ತದೆ. ಹೀಗೆ ಟೊಮೇಟೊ ಮಾರಾಟ ಮಾಡುವ ಮೂಲಕ ರೈತರು ಕೋಟ್ಯಾಧಿಪತಿ ಲಕ್ಷಾಧಿಪತಿಗಳಾಗುತ್ತಿರುವುದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕದ ಕೋಲಾರದ ರೈತರ ಕುಟುಂಬವೊಂದು ಈ ವಾರ 2,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿ 38 ಲಕ್ಷ ರೂ.ಗಳೊಂದಿಗೆ ಮನೆಗೆ ಮರಳಿದೆ.