ಟೊಮೆಟೋ ಬೆಲೆ ಸದ್ಯ ಇಳಿಯೋಲ್ಲ ಬಿಡಿ, ಮನೇಲಿ ಬೆಳೆಯೋದು ಒಳ್ಳೇದು!
ಟೊಮೆಟೋ ಬೆಲೆ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಅಡುಗೆಗೆ ಟೊಮೆಟೋ ಬೇಕೇ ಬೇಕಾದ್ರೂ ಬೆಲೆ ನೋಡಿದ್ರೆ ಕೊಳ್ಳೋ ಹಾಗಿಲ್ಲ. ಹೀಗಿರುವಾಗ ನೀವ್ಯಾಕೆ ಮನೆಯಲ್ಲೇ ಟೊಮೆಟೋ ಬೆಳೀಬಾರದು. ಇಲ್ಲಿದೆ ಸಿಂಪಲ್ ಟಿಪ್ಸ್.

ಭಾರತೀಯಾ ಅಡುಗೆಮನೆಗಳಲ್ಲಿ ಟೊಮೆಟೋಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬಹುತೇಕ ಎಲ್ಲಾ ಅಡುಗೆಗಳಲ್ಲಿ ಟೊಮೆಟೋವನ್ನು ಬಳಸಲಾಗುತ್ತದೆ. ರಸಂ, ಸಾಂಬಾರ್, ಟೊಮೆಟೋ ಬಾತ್, ಪಲ್ಯ, ಚಟ್ನಿ ಹೀಗೆ ಹಲವು ಬಗೆಯ ಅಡುಗೆಗಳಿಗೆ ಟೊಮೆಟೋ ಬೇಕೇ ಬೇಕು. ಆದ್ರೆ ಅಡುಗೆಗೆ ಟೊಮೆಟೋ ಬೇಕೇ ಬೇಕು ಅಂದ್ರೂ ಬೆಲೆ ನೋಡಿದ್ರೆ ಕೊಳ್ಳೋ ಹಾಗಿಲ್ಲ.
ಹೀಗಿರುವಾಗ ನೀವ್ಯಾಕೆ ಮನೆಯಲ್ಲೇ ಟೊಮೆಟೋ ಬೆಳೀಬಾರದು. ಅದಕ್ಕಾಗಿ ಹೆಚ್ಚಿನ ಶ್ರಮ ಬೇಕಿಲ್ಲ. ಕೆಲವು ಸಿಂಪಲ್ ಮೆಥಡ್‌ನ ಮೂಲಕ ನೀವು ಮನೆಯಲ್ಲಿ ಟೊಮೆಟೊಗಳನ್ನು ಬೆಳೆಯಬಹುದು. ಕೆಲವೇ ದಿನಗಳಲ್ಲಿ ಮನೆಯಲ್ಲಿ ಕಿಚನ್ ಗಾರ್ಡನ್ ಅಥವಾ ಟೆರೇಸ್‌ನಲ್ಲಿ ಟೊಮೇಟೊ ಬೆಳೆಯುವುದು ಹೇಗೆ ಎಂದು ತಿಳಿಯಿರಿ.
ಹಂತ 1
ಮನೆಯಲ್ಲೇ ಟೊಮೆಟೋ ಬೆಳಯುವುದರಿಂದ ನೀವು ಹಣವನ್ನು ಉಳಿಸಬಹುದು. ಮಾತ್ರವಲ್ಲ ಸಾವಯವವಾಗಿ ಬೆಳೆದ ಈ ಟೊಮೆಟೊಗಳು ನಿಮ್ಮ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಹಾಗಾದರೆ ಕೆಲವೇ ದಿನಗಳಲ್ಲಿ ಮನೆಯಲ್ಲಿ ಕಿಚನ್ ಗಾರ್ಡನ್ ಅಥವಾ ಗಾರ್ಡನ್ ನಲ್ಲಿ ಟೊಮೇಟೊ ಬೆಳೆಯುವುದು ಹೇಗೆ ಎಂದು ತಿಳಿಯೋಣ.
ಹಂತ 2
ಟೊಮೇಟೊ ಒಂದು ಸರಳವಾದ ಸಸ್ಯವಾಗಿದ್ದು ನೀವು ಇದನ್ನು ಸುಲಭವಾಗಿ ಬೆಳೆಯಬಹುದು. ಫ್ರಿಡ್ಜ್ ನಲ್ಲಿಟ್ಟ ಟೊಮೇಟೊ ಸಹಾಯದಿಂದ ತುಂಬಾ ಸುಲಭವಾಗಿ ಟೊಮೇಟೊ ಗಿಡವನ್ನು ಬೆಳೆಯಬಹುದು. ಮೊದಲ ಹಂತದ ಪ್ರಕಾರ, ಯಾವಾಗಲೂ ಮಧ್ಯಕ್ಕೆ ಕೆಂಪು ಟೊಮೆಟೊಗಳನ್ನು ಕಟ್ ಮಾಡಿ, ಬೀಜಗಳನ್ನು ಪ್ರತ್ಯೇಕಿಸಿ. ಅಥವಾ ನೀವು ಅದನ್ನು ನೇರವಾಗಿ ಕತ್ತರಿಸಿ ಸ್ವಲ್ಪ ಒಣಗಿಸಬಹುದು.
ಹಂತ 3
ಬೀಜಗಳನ್ನು ಮಣ್ಣಿನಲ್ಲಿ ಹಾಕುವಾಗ, ಬೀಜಗಳನ್ನು ಸುಮಾರು 2ರಿಂದ 3 ಇಂಚುಗಳಷ್ಟು ಮಣ್ಣಿನಲ್ಲಿ ಹಾಕಿದ ನಂತರ ಅವುಗಳನ್ನು ಎಚ್ಚರಿಕೆಯಿಂದ ಬಿಡಿ. ಮಣ್ಣಿನಲ್ಲಿ ಹಾಕುವ ಮೊದಲು ನೀವು ಅವುಗಳನ್ನು ಒಣಗಿಸುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಹಸಿ ಟೊಮೆಟೋ ಬೀಜಗಳನ್ನು ಹಾಗೆಯೇ ಹಾಕಿದರೆ ಬೀಜ ಕೊಳೆತು ಹೋಗುವ ಮತ್ತು ಬೂಸ್ಟ್ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಹಂತ 4
ಇನ್ನೊಂದು ಆಯ್ಕೆಯೆಂದರೆ 20 ರಿಂದ 25 ದಿನಗಳ ಹಳೆಯ ಟೊಮೆಟೊ ಗಿಡವನ್ನು ತೆಗೆದುಕೊಂಡು ಅದನ್ನು ಮನೆಯಲ್ಲಿ ಒಂದು ಕುಂಡದಲ್ಲಿ ನೆಡುವುದು. ಟೊಮೆಟೊ ಸಸ್ಯ ನೆಡಲು, 10% ಕೋಕೋಪೀಟ್, 20% ವರ್ಮಿಕಾಂಪೋಸ್ಟ್, 10% ಹಸುವಿನ ಗೊಬ್ಬರ ಮತ್ತು 50-60% ತೋಟದ ಮಣ್ಣನ್ನು ತೆಗೆದುಕೊಳ್ಳಬೇಕು.
ಹಂತ 5
ಟೊಮೆಟೊದಂತಹ ಸಸ್ಯಕ್ಕೆ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಈ ಸಸ್ಯಗಳಿಗೆ ಸಾರಜನಕ, ಪೊಟ್ಯಾಸಿಯಮ್ ಮತ್ತು ರಂಜಕದಲ್ಲಿ ಸಮೃದ್ಧವಾಗಿರುವ ಮಣ್ಣಿನ ಅಗತ್ಯವಿರುತ್ತದೆ ಅಷ್ಟೆ. ನೆನಪಿನಲ್ಲಿಡಿ, ಟೊಮೆಟೊ ಸಸ್ಯಕ್ಕೆ ಸರಿಯಾದ ತಾಪಮಾನವನ್ನು ನೀಡಿ. ಸೂಕ್ತವಾದ ತಾಪಮಾನವು 21-27 ಡಿಗ್ರಿಗಳಾಗಿರುತ್ತದೆ.
ಹಂತ 6
ಟೊಮೆಟೊಗಳ ಬೆಳವಣಿಗೆಗೆ ಸೂರ್ಯನ ಬೆಳಕು ಅವಶ್ಯಕವಾಗಿದೆ, ಆದರೆ ಅವುಗಳನ್ನು ಅತ್ಯಂತ ಪ್ರಕಾಶಮಾನವಾದ ಬೆಳಕಿನಲ್ಲಿ ಇಡಬೇಡಿ. ಬಲವಾದ ಸೂರ್ಯನ ಬೆಳಕಿನಿಂದ ಅದನ್ನು ರಕ್ಷಿಸಿ ಮತ್ತು ಪ್ರತಿದಿನ ನೀರು ಹಾಕುವ ಅಗತ್ಯವಿಲ್ಲ. ಸುಮಾರು 45 ದಿನಗಳ ನಂತರ, ನಿಮ್ಮ ತೋಟದಲ್ಲಿ ಕೆಂಪು-ಕೆಂಪು ಟೊಮೆಟೊಗಳು ಆಗುವುದನ್ನು ನೀವು ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.