Asianet Suvarna News Asianet Suvarna News

ಅಗ್ಗದಲ್ಲಿ ಮನೆ ಕಟ್ಟಬೇಕೆಂದ್ರೆ ಈ ಐಡಿಯಾ ಬಳಸಿ

ಮನೆ ಕಟ್ಟಿ ನೋಡು,ಮದುವೆ ಮಾಡಿ ನೋಡು ಎನ್ನುತ್ತಾರೆ. ಇದೆರಡೂ ಸುಲಭದ ಕೆಲಸವಲ್ಲ. ಮನೆ ನಿರ್ಮಾಣ ಮಾಡುವಾಗ ಖರ್ಚು ಎಷ್ಟಾಗುತ್ತೆ ಅಂತ ಅಂದಾಜು ಮಾಡೋದು ಕಷ್ಟ. ಸರಿಯಾದ ಪ್ಲಾನ್ ಮಾಡಿ ಮನೆ ನಿರ್ಮಾಣಕ್ಕೆ ಕೈ ಹಾಕಿದ್ರೆ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಬಹುದು.
 

Tips To Build Your House On A Small Budget
Author
First Published Sep 19, 2022, 2:28 PM IST

ಸ್ವಂತಕ್ಕೊಂದು ಮನೆಯಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವವರಿದ್ದಾರೆ. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆ ಕಟ್ಟೋದು ಸುಲಭದ ಮಾತಲ್ಲ. ಕಷ್ಟಪಟ್ಟು ಮನೆ ನಿರ್ಮಾಣ ಮಾಡುವವರೆಗೆ ಸಾಕು ಸಾಕಾಯ್ತು ಎನ್ನುವವರೇ ಹೆಚ್ಚು. ಇದು ದುಬಾರಿ ದುನಿಯಾ. ಮನೆ ನಿರ್ಮಾಣದ ವಸ್ತುಗಳ ಬೆಲೆ ಗಗನಕ್ಕೇರಿದೆ. ಮನೆ ನಿರ್ಮಾಣಕ್ಕೆ ಇಟ್ಟುಕೊಂಡ ಬಜೆಟ್ ಒಂದಾದ್ರೆ ಖರ್ಚಾಗೋದು ಡಬಲ್. ಊಹಿಸಿದ್ದಕ್ಕಿಂತ ಹೆಚ್ಚು ಹಣ ಬೇಕು ಎಂದಾಗ ಸಾಲ ಹೆಚ್ಚಾಗುತ್ತದೆ. ಸಾಲ ಹೆಚ್ಚಾದ್ರೆ ಅದನ್ನು ತೀರಿಸೋದು ಸುಲಭವಲ್ಲ. ಸ್ವಂತ ಮನೆಯಿದ್ರೂ ಅದ್ರ ನಿರ್ಮಾಣದ ಸಾಲ ತೀರಿಸೋದ್ರಲ್ಲೇ ಜೀವನ ಕಳೆಯುತ್ತದೆ. ಕಡಿಮೆ ಬೆಲೆಗೆ ಮನೆ ನಿರ್ಮಾಣವಾಗ್ಬೇಕು ಎನ್ನುವವರು ಕೆಲ ಟಿಪ್ಸ್ ಪಾಲನೆ ಮಾಡ್ಬೇಕು. ನಾವಿಂದು ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡೋಕೆ ಕೆಲವೊಂದು ಟಿಪ್ಸ್ ಹೇಳ್ತೇವೆ. 

ಅಗ್ಗದ ಮನೆ (House) ಯನ್ನು ಹೇಗೆ ನಿರ್ಮಿಸುವುದು? 
ಒಂದು ಅಂತಸ್ತಿನ ಮನೆ :
ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಬೇಕೆಂದರೆ ನೀವು ಆರಂಭದಲ್ಲಿಯೇ ಮೂರು, ನಾಲ್ಕು ಅಂತಸ್ತಿನ ಮನೆ ನಿರ್ಮಿಸಲು ಹೋಗಬಾರದು. ಪ್ರಾರಂಭದಲ್ಲಿ ಒಂದು ಅಂತಸ್ತಿನ ಮನೆ ಕಟ್ಟಬೇಕು. ಇದರಿಂದ ವೆಚ್ಚ(Cost) ವನ್ನು ಕಡಿಮೆ ಮಾಡಬಹುದು. ಬಹುತೇಕರು ಭೂಮಿ ಖರೀದಿಸಿ ತಕ್ಷಣ ಮನೆ ನಿರ್ಮಾಣಕ್ಕೆ ಮುಂದಾಗ್ತಾರೆ. ಭೂಮಿ (Land) ಖರೀದಿ ಖರ್ಚಿನ ಜೊತೆ ಮನೆ ನಿರ್ಮಾಣದ ಖರ್ಚು ಹೊರೆಯಾಗುತ್ತದೆ. ಆ ಸಂದರ್ಭದಲ್ಲಿ ಜನರು ಒಂದು ಅಂತಸ್ತಿನ ಮನೆ ನಿರ್ಮಾಣಕ್ಕೆ ಮುಂದಾಗ್ಬೇಕು. ಈಗ್ಲೇ ಮನೆ ಅವಶ್ಯಕತೆ ಇಲ್ಲ ಎನ್ನುವವರು ಭೂಮಿ ಖರೀದಿ ಸಾಲ ತೀರ್ತಿದ್ದಂತೆ ಮನೆ ನಿರ್ಮಾಣಕ್ಕೆ ಕೈ ಹಾಕಬಹುದು. 

ಮನೆಯ ನಕ್ಷೆ ಇಲ್ಲದೆ ನಿರ್ಮಾಣಕ್ಕೆ ಮುಂದಾಗ್ಬೇಡಿ : ಮನೆ ನಿರ್ಮಿಸುವ ಮೊದಲು ಮನೆ ನಕ್ಷೆಯನ್ನು ತಯಾರಿಸಿ. ನಕ್ಷೆ ಇಲ್ಲದೆ ಮನೆಯನ್ನು ಎಂದಿಗೂ ಕಟ್ಟುವ ಸಾಹಸಕ್ಕೆ ಹೋಗ್ಬೇಡಿ. ಅನೇಕ ಬಾರಿ  ನಕ್ಷೆಯಿಲ್ಲದೆ ಮನೆ ನಿರ್ಮಾಣದ ಹೊಣೆಯನ್ನು ಇಂಜಿನಿಯರ್ ಗೆ ನೀಡ್ತೀರಿ. ಅವರ ಮೇಲೆ ವಿಶ್ವಾಸವಿಟ್ಟು ನೀವು ಮನೆ ನಿರ್ಮಾಣ ಮಾಡ್ತೀರಿ. ಆದ್ರೆ ಅವರು ಕಟ್ಟಿದ ಮನೆ ನಿಮಗೆ ಇಷ್ಟವಾಗದೆ ಇರಬಹುದು. ಆಗ ಮನೆ ರಿಪೇರಿ ನಿಮಗೆ ಹೊಣೆಯಾಗುತ್ತದೆ.  

ಪದೇ ಪದೇ ಪ್ಲಾನ್ ಬದಲಿಸಬೇಡಿ : ಅನೇಕರು ಮನೆ ನಕ್ಷೆ ತಯಾರಿಸುತ್ತಾರೆ. ಆದ್ರೆ ನಕ್ಷೆಯನ್ನು ಸರಿಯಾಗಿ ಪರೀಕ್ಷೆ ಮಾಡೋದಿಲ್ಲ. ಅರ್ಧ ಮನೆ ಕಟ್ಟಿದ ಮೇಲೆ ಸರಿಯಾಗಿಲ್ಲ ಎನ್ನುತ್ತ ಪ್ಲಾನ್ ಬದಲಿಸ್ತಾರೆ. ಇದ್ರಿಂದ ಮತ್ತೆ ಮರುನಿರ್ಮಾಣ ಮಾಡ್ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಸಮಯ ಕೂಡ ಹಾಳಾಗುತ್ತದೆ. 

ಈ ಬಗ್ಗೆ ಇರಲಿ ಗಮನ : ಮನೆ ನಿರ್ಮಾಣದ ವೇಳೆ ಒಬ್ಬರ ಪ್ಲಾನ್ ನಂತೆ ನಡೆಯಬೇಕು. ನಾಲ್ಕೈದು ಮೇಸ್ತ್ರಿಗಳನ್ನು ಇಟ್ಟುಕೊಳ್ಳಬಾರದು. ನಾಲ್ಕೈದು ಮೇಸ್ತ್ರಿಗಳ ಮಾತನ್ನು ಕೇಳಿದಾಗ ಯಾವುದೂ ಸರಿಯಾಗೋದಿಲ್ಲ. ಪದೇ ಪದೇ ರಿಪೇರಿ ಮಾಡಬೇಕಾಗುತ್ತದೆ, ಇದ್ರಿಂದ ಹಣ ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಒಂದೇ ಮೇಸ್ತ್ರಿಯನ್ನು ನೇಮಕ ಮಾಡಿ. ನಾಲ್ಕೈದು ಜನರನ್ನು ವಿಚಾರಿಸಿ ಅಗ್ಗದ ಮೇಸ್ತ್ರಿಗೆ ಆದ್ಯತೆ ನೀಡಿ.   

Personal Finance: ಗೃಹಿಣಿಯರಿಗೆ ಇಲ್ಲಿದೆ ಬ್ಯುಸಿನೆಸ್ ಟಿಪ್ಸ್

ಗೃಹೋಪಯೋಗಿ ವಸ್ತು ಖರೀದಿ ವೇಳೆ ಚೌಕಾಸಿ : ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಹೋದಾಗ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅನ್ವೇಷಿಸಬೇಕು. ಅವಸರದಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ನೀವು ಖರೀದಿ ಮಾಡಬೇಡಿ. ಸರಕುಗಳನ್ನು ಖರೀದಿಸುವಾಗ ಚೌಕಾಶಿ ಮಾಡಬೇಕು. ಹಾಗೆಯೇ ನಾಲ್ಕೈದು ಕಡೆ ವಿಚಾರಿಸಿ, ಯಾವುದು ಒಳ್ಳೆಯ ಗುಣಮಟ್ಟದ ವಸ್ತು ಎಂಬುದನ್ನು ಪತ್ತೆ ಮಾಡಿ ನಂತ್ರ ಖರೀದಿ ಮಾಡಿ. 

Personal Finance : ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೆ ಇಷ್ಟೆಲ್ಲಾ ಕಷ್ಟ, ನಷ್ಟನಾ?

ಅಗ್ಗದ ಕಟ್ಟಡ ಸಾಮಗ್ರಿ ಖರೀದಿಸಿ : ಕಟ್ಟಡ ಸಾಮಗ್ರಿ ಖರೀದಿ ವೇಳೆಯೂ ಬೆಲೆಯನ್ನು ಗಮನಿಸಿ. ದುಬಾರಿ ಬೆಲೆಯ ಮರದ ಬದಲಿಗೆ ಅಕೇಶಿಯಾ ಮರವನ್ನು ಬಳಸಿ. ಇದು ಅಗ್ಗವಾಗಿರುತ್ತದೆ. ಬೂದಿ ಇಟ್ಟಿಗೆಗಳನ್ನು ಬಳಸಿ. ಇದು ಮಣ್ಣಿನ ಇಟ್ಟಿಗೆಗಳಿಗಿಂತ ನಾಲ್ಕೈದು ರೂಪಾಯಿ ಅಗ್ಗವಾಗಿರುತ್ತದೆ.

Follow Us:
Download App:
  • android
  • ios