Asianet Suvarna News Asianet Suvarna News

Personal Finance: ಗೃಹಿಣಿಯರಿಗೆ ಇಲ್ಲಿದೆ ಬ್ಯುಸಿನೆಸ್ ಟಿಪ್ಸ್

ಖಾಲಿ ಇರುವ ಸಮಯದಲ್ಲಿ ಏನಾದ್ರೂ ಮಾಡ್ಬೇಕು ಎನ್ನುತ್ತಾರೆ ಮಹಿಳೆಯರು. ಆದ್ರೆ ಏನು ಮಾಡ್ಬೇಕು ಗೊತ್ತಾಗೋದಿಲ್ಲ. ಕೈನಲ್ಲಿ ಸ್ವಲ್ಪ ಹಣ ಓಡಾಡ್ಬೇಕೆಂದ್ರೆ ಕೆಲಸ ಮಾಡ್ಬೇಕು. ಎಲ್ಲ ಜವಾಬ್ದಾರಿ ಜೊತೆ ಮನೆಯಲ್ಲೇ ಮಾಡುವ ಕೆಲಸ ಇಲ್ಲಿದೆ.
 

Business Ideas for Housewives in bengaluru
Author
Bangalore, First Published Aug 23, 2022, 3:26 PM IST

ಸ್ವಿಗ್ಗಿ, ಜೊಮಾಟೊ ಮತ್ತು ಉಬರ್ ನಂತಹ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳು ಕಾರ್ಯರೂಪಕ್ಕೆ ಬಂದ ನಂತರ ಅಡುಗೆ ಸಂಬಂಧಿತ ವ್ಯವಹಾರಗಳು ಮತ್ತಷ್ಟು ಉತ್ತೇಜನ ಪಡೆದಿವೆ. ಅಮೆಜಾನ್, ಅಲಿಬಾಬಾ, ಇ-ಬೇ, ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್ ಮುಂತಾದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದಾಗಿ ಮಹಿಳೆಯರು ಬ್ಯುಸಿನೆಸ್ ಮಾಡುವುದು ಸುಲಭವಾಗಿದೆ. ಮಕ್ಕಳು, ಮನೆಯನ್ನು ನೋಡಿಕೊಳ್ಳುವ ಕೆಲ ಮಹಿಳೆಯರಿಗೆ ಬ್ಯುಸಿನೆಸ್ ಶುರು ಮಾಡುವ ಆಸೆಯಿರುತ್ತದೆ. ಆದ್ರೆ ಜವಾಬ್ದಾರಿಗಳಿಂದಾಗಿ ಕನಸು ನನಸಾಗುವುದಿಲ್ಲ. ಆದ್ರೆ ಆನ್ಲೈನ್, ಡಿಜಿಟಲ್ ಬಳಕೆ ಹೆಚ್ಚಾದ ಕಾರಣ  ಮಹಿಳೆಯರು ಸುಲಭವಾಗಿ ಕೆಲವು ವ್ಯವಹಾರವನ್ನು ಶುರು ಮಾಡಬಹುದು. 

ಮಹಿಳೆ (Woman) ಯರು ಸುಲಭವಾಗಿ ಮಾಡ್ಬಹುದಾದ ವ್ಯವಹಾರ : 

ಮನೆಯಲ್ಲಿ ತಯಾರಿ ಆಹಾರ (Food) : ಮನೆಯಲ್ಲಿ ತಯಾರಿಸಿದ ಆಹಾರವು ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ. ರುಚಿ ರುಚಿ ಅಡುಗೆ (Cooking) ಬರುತ್ತೆ ಅಂದ್ರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಸಮಯ ಹೊಂದಿಸಿಕೊಂಡು ನೀವು ವ್ಯಾಪಾರಕ್ಕೆ ಧುಮುಕಬಹುದು. ಕಡಿಮೆ ಬಜೆಟ್ (Budget)ನಲ್ಲಿ ಈ ವ್ಯವಹಾರವನ್ನು ಸುಲಭವಾಗಿ ಶುರು ಮಾಡಬಹುದು. ಮನೆಗಳಿಗೆ ಹಾಗೂ ಕಚೇರಿಗಳಿಗೆ ನೀವು ತಯಾರಿಸಿದ ಆಹಾರವನ್ನು ವಿತರಿಸಬಹುದು. ಹೊಟೇಲ್ ಗಿಂತ ಮನೆಯಲ್ಲಿ ತಯಾರಿಸಿದ ಅಡುಗೆ ಸೇವನೆ ಮಾಡಲು ಜನರು ಇಚ್ಛಿಸುತ್ತಾರೆ. ಅಂತವರಿಗೆ ನೀವು ಅಡುಗೆ ನೀಡಬಹುದು. ಆರಂಭದಲ್ಲಿ ಮನೆಯಲ್ಲಿ ನಿಮ್ಮ ವ್ಯವಹಾರ ಶುರು ಮಾಡಿ, ನಂತ್ರ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮುನ್ನಡೆಸಬಹುದು. ಇದಲ್ಲದೆ ಸ್ವಿಗ್ಗಿ, ಜೊಮೊಟೊ ದಂತಹ ಆನ್ಲೈನ್ ಫ್ಲಾರ್ಟ್ಫಾರ್ಮ್ ಗಳ ಜೊತೆ ನೀವು ಒಪ್ಪಂದ ಮಾಡಿಕೊಳ್ಳಬಹುದು. ಆಗ ವಿತರಣೆ ಸಮಸ್ಯೆ ಇರುವುದಿಲ್ಲ. ಕಂಪನಿ ವಿತರಕರು ಮನೆಗೆ ಬಂದು ಆಹಾರವನ್ನು ತೆಗೆದುಕೊಂಡು ಹೋಗ್ತಾರೆ.   

ಗೃಹಿಣಿಯರಿಗೆ ಫ್ಯಾಷನ್ ವ್ಯಾಪಾರ : ಅಡುಗೆ ಮಾತ್ರವಲ್ಲ ಫ್ಯಾಷನ್ ಹಾಗೂ ಬಟ್ಟೆಗಳ ವ್ಯಾಪಾರವೂ ಹೆಚ್ಚು ಜನಪ್ರಿಯತೆ ಪಡೆದಿದೆ. ಆನ್ಲೈನ್ ನಲ್ಲಿ ಅಥವಾ ಆಫ್ ಲೈನ್ ನಲ್ಲಿ ಎರಡೂ ರೀತಿಯಲ್ಲಿ ಈ ವ್ಯವಹಾರ ಶುರು ಮಾಡಬಹುದು. ನೀವೇ ಸುಂದರ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದರೆ ಅಥವಾ ಬಟ್ಟೆ ಹೊಲಿಯುತ್ತಿದ್ದರೆ ಅದನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು. ಇಲ್ಲವೆ ಒಂದು ಕಂಪನಿ ಬಟ್ಟೆಗಳನ್ನು ಜನರಿಗೆ ತಲುಪಿಸುವ ವ್ಯವಹಾರ ಮಾಡಬಹುದು. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಕಂಪನಿಗಳು ತಮ್ಮ ಬಟ್ಟೆ ಉತ್ಪನ್ನಗಳನ್ನು ಮತ್ತು ಫ್ಯಾಷನ್ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಬಯಸುವ ಎಲ್ಲಾ ಮಹಿಳೆಯರಿಗೆ ವ್ಯಾಪಾರದ ಅವಕಾಶ ನೀಡ್ತಿವೆ. ಇತರ ವ್ಯವಹಾರಗಳಿಗೆ ಹೋಲಿಸಿದರೆ ಇದರಲ್ಲಿ ಆದಾಯದ ಸಾಮರ್ಥ್ಯ  ಹೆಚ್ಚಿರುತ್ತದೆ. ದೊಡ್ಡ ಮಟ್ಟದಲ್ಲಿ ಹೂಡಿಕೆ ಇರುವುದಿಲ್ಲ. ಕೆಲವೊಂದು ವ್ಯವಹಾರದಲ್ಲಿ ಹೂಡಿಕೆ ಶೂನ್ಯವಾಗಿರುತ್ತದೆ. 

ನಿಮ್ಮ ವ್ಯವಹಾರವನ್ನು ಶುರು ಮಾಡಲು ಅಥವಾ ಪ್ರಚಾರಕ್ಕೆ ನೀವು ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾರ್ಕೆಟಿಂಗ್‌ ಸಹಾಯ ಪಡೆಯಬಹುದು.   ಕಡಿಮೆ ಬಜೆಟ್‌ನಲ್ಲಿ ಮತ್ತು ಮನೆಯಿಂದಲೇ ಬಟ್ಟೆ ಮತ್ತು ಫ್ಯಾಶನ್ ವ್ಯವಹಾರ ಶುರು ಮಾಡಲು ಸರ್ಕಾರ ಕೂಡ ಮಹಿಳೆಯರಿಗೆ ನೆರವಾಗ್ತಿದೆ. ಕಡಿಮೆ ಬಡ್ಡಿಗೆ ಸಾಲವನ್ನು ಸರ್ಕಾರ ನೀಡ್ತಿದೆ. ಸುಲಭ ಇಎಂಐ ಸೌಲಭ್ಯವನ್ನು ಸರ್ಕಾರ ನೀಡಿದೆ. 

ಆದಾಯ ತೆರಿಗೆ ಉಳಿಸೋದು ಹೇಗೆಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಪಿಪಿಎಫ್ ಬಗ್ಗೆ ತಿಳಿದುಕೊಳ್ಳಿ

ಅನುಭವ ಹಾಗೂ ಪ್ರತಿಭೆಯಿಂದಾಗಿ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಕಾಣುಬಹುದಾದ ವ್ಯವಹಾರದಲ್ಲಿ ಬಟ್ಟೆ ಮತ್ತು ಫ್ಯಾಷನ್ ಸೇರಿದೆ. ಇವೆರಡಕ್ಕೂ ಬೇಡಿಕೆ ಹೆಚ್ಚಾಗಿರುವ ಕಾರಣ ಮನೆಯ ಬಟ್ಟೆ ವ್ಯಾಪಾರದಲ್ಲಿ ಕೆಲಸ ಮಾಡುವುದು ಉತ್ತಮ ಆಯ್ಕೆಯಾಗಿದೆ ಎಂದು ಹಲವಾರು ಮಾರುಕಟ್ಟೆ ಸಂಶೋಧನೆಗಳು ಸಾಬೀತುಪಡಿಸುತ್ತವೆ.

Business Idea: ಬಹುಬೇಡಿಕೆಯ ಈ ಬ್ಯುಸಿನೆಸ್ ಮಾಡಿ, ತಿಂಗಳಿಗೆ 10 ಲಕ್ಷ ಗಳಿಸಿ

ಗೃಹಾಧಾರಿತ ಮತ್ತು ಕಡಿಮೆ ಬಜೆಟ್ ವ್ಯಾಪಾರದಿಂದ ಗಳಿಸಿದ ಹಣವು ಗೃಹಿಣಿಯರಿಗೆ ಫ್ಯಾಷನ್ ಮಾಸ್ಟರ್ ಆಗುವ ಕನಸನ್ನು ಪೂರೈಸಲು ಸಹಾಯ ಮಾಡುತ್ತದೆ. 
 

Follow Us:
Download App:
  • android
  • ios