Personal Finance : ಕಡಿಮೆ ಕ್ರೆಡಿಟ್ ಸ್ಕೋರ್ ಇದ್ರೆ ಇಷ್ಟೆಲ್ಲಾ ಕಷ್ಟ, ನಷ್ಟನಾ?
ಸಾಲ ಸಿಗೋದು ಸುಲಭವಲ್ಲ. ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ ಎಷ್ಟೋ ದಿನವಾದ್ರೂ ಸಾಲ ಸಿಗೋದಿಲ್ಲ. ಇದಕ್ಕೆ ಕ್ರೆಡಿಟ್ ಸ್ಕೋರ್ ಕಾರಣ ಎನ್ನುತ್ತಾರೆ. ಬರೀ ಸಾಲವಲ್ಲ ಹೊಸ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಿದ್ರೂ ಇದೇ ಕಾರಣ ಹೇಳಿ ರಿಜೆಕ್ಟ್ ಮಾಡ್ತಾರೆ. ಈ ಕ್ರೆಡಿಟ್ ಸ್ಕೋರ್ ಜೀವನದಲ್ಲಿ ತುಂಬಾ ಇಂಪಾರ್ಟೆಂಟ್ ಗೊತ್ತಾ?
ಕ್ರೆಡಿಟ್ ಸ್ಕೂರ್ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಕ್ರೆಡಿಟ್ ಸ್ಕೂರ್, ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಬರೀ ಸಾಲ ತೆಗೆದುಕೊಳ್ಳಲು ಮಾತ್ರವಲ್ಲ, ನಿಮ್ಮ ಕ್ರೆಡಿಟ್ ಸ್ಕೂರ್ ಕಡಿಮೆಯಿದ್ರೆ ನೀವು ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವಿಂದು ಕ್ರೆಡಿಟ್ ಸ್ಕೋರ್ ಕಡಿಮೆಯಾದ್ರೆ ಏನೆಲ್ಲ ಆಗುತ್ತದೆ ಎಂಬುದನ್ನು ಹೇಳ್ತೇವೆ. ಮೊದಲನೇಯದಾಗಿ ಕ್ರೆಡಿಟ್ ಸ್ಕೋರ್ (Credit Score) ಎನ್ನುವುದು ಮೂರು ಅಂಕೆಯನ್ನು ಹೊಂದಿರುತ್ತದೆ. ನೀವು ಯಾವುದೇ ಸಾಲಕ್ಕೆ ಅಥವಾ ಇನ್ನೊಂದು ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಿದ್ರೂ ಮೊದಲು ನಿಮ್ಮ ಕ್ರೆಡಿಟ್ ಸ್ಕೂರ್ ಚೆಕ್ ಮಾಡಿಯೇ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ.
ಕ್ರೆಡಿಟ್ ಸ್ಕೋರ್ ಕಡಿಮೆಯಾದ್ರೆ ಆಗುವ ಸಮಸ್ಯೆ ಯಾವುವು?:
ಸಾಲ (Loan) ಸಿಗೋದು ಕಷ್ಟ : ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ, ಸಾಲ ನೀಡುವ ಸಂಸ್ಥೆಯು ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಕಡಿಮೆ ಅಥವಾ ಕೆಟ್ಟ ಕ್ರೆಡಿಟ್ ಸ್ಕೋರ್ ಅನಾರೋಗ್ಯದ ಸಂಕೇತವಾಗಿದೆ. ನೀವು ಈಗಾಗಲೇ ಸಾಲ ಮಾಡಿದ್ದು, ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ (re-payment) ಮಾಡದೆ ಹೋಗಿದ್ದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಹೊಡೆತ ನೀಡುತ್ತದೆ. ಅರ್ಜಿದಾರರ ಕ್ರೆಡಿಟ್ ವರದಿಯಲ್ಲಿ ಇದು ದಾಖಲಾಗಿರುತ್ತದೆ. ಯಾವುದೇ ಸಾಲಕ್ಕೆ ನೀವು ಅರ್ಜಿ ಸಲ್ಲಿಸಿದ್ದರೆ, ಸಾಲ ನೀಡಲಿರುವ ಸಂಸ್ಥೆ ಅಥವಾ ಬ್ಯಾಂಕ್, ಸಾಲ ನೀಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಟ್ರ್ಯಾಕ್ ಮಾಡಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದೆ ಎಂದಾದ್ರೆ ಸಾಲದ ಸಂಸ್ಥೆಗಳು ಅರ್ಜಿದಾರರಿಗೆ ಸಾಲ ನೀಡಲು ತಿರಸ್ಕರಿಸುತ್ತದೆ.
ಬಡ್ಡಿ ದರ ಹೆಚ್ಚಳ : ಸಾಲದ ಜೊತೆ ನೀವು ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೂ ಆ ಅರ್ಜಿ ಕೂಡ ತಿರಸ್ಕಾರಗೊಳ್ಳಬಹುದು. ಹಣಕಾಸು ಸಂಸ್ಥೆಗಳು (Financial Institutions) ಕ್ರೆಡಿಟ್ ಕಾರ್ಡ್ ನೀಡುವಾಗ ಕೂಡ ಅರ್ಜಿದಾರನ ಕ್ರೆಡಿಟ್ ಸ್ಕೋರ್ ಪರಿಶೀಲನೆ ನಡೆಸುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿದರದಲ್ಲಿ ಕ್ರೆಡಿಟ್ ಕಾರ್ಡ್ ಅನುಮೋದಿಸುವ ಸಾಧ್ಯತೆಯಿರುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್‌ನ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಸುಲಭ. ಇದು ತಕ್ಷಣವೇ ನಿಮ್ಮ ಮೇಲೆ ಪರಿಣಾಮ ಬೀರದಿರಬಹುದು. ಆದರೆ ಭವಿಷ್ಯದಲ್ಲಿ ಇದು ನಿಮಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಆದ್ದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಒಮ್ಮೆ ಅಥವಾ ತ್ರೈಮಾಸಿಕದಲ್ಲಿ ಪರಿಶೀಲಿಸುತ್ತಿರಿ.
ನಿಮಗೆ ಗೊತ್ತಿಲ್ಲದೇ ಅದು, ಇದು ಅಂಥ ಸರ್ವಿಸ್ ಚಾರ್ಜ್ ಹಾಕುತ್ತೆ ಬ್ಯಾಂಕ್, ಇರಲಿ ಗಮನ
ಹಿಂದಿನ ಕೊಡುಗೆ : ಬ್ಯಾಂಕ್ ಖಾತೆ ತೆರೆಯುವಾಗ್ಲೇ ನಿಮಗೆ ಕೆಲವೊಂದು ಕೊಡುಗೆ ನೀಡಲಾಗುತ್ತದೆ. ಇದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ರಿಂದ ಪ್ರಭಾವಕ್ಕೊಳಗಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಬ್ಯಾಂಕ್ ನಿಂದ ನಿಮಗೆ ಪೂರ್ವ ಅನುಮೋದಿತ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಿಗದೆ ಹೋಗ್ಬಹುದು.
ನಿಮ್ಮ ಒಪ್ಪಿಗೆಯಿಲ್ಲದೆ ಯಾವುದೇ ಕಂಪನಿಯು ನಿಮ್ಮ ಕ್ರೆಡಿಟ್ ಸ್ಕೋರ್ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಆಧರಿಸಿದೆ. ಇದರಲ್ಲಿ ನಿಮ್ಮ ಪಾವತಿ ಇತಿಹಾಸ ಸೇರಿದಂತೆ ಅನೇಕ ಸಂಗತಿಗಳು ಇರುತ್ತವೆ. ಕ್ರೆಡಿಟ್ ಸ್ಕೋರ್ ಬೇಗ ಕಡಿಮೆಯಾಗುತ್ತದೆ. ಆದ್ರೆ ಅದನ್ನು ಹೆಚ್ಚಿಸುವುದು ಸುಲಭವಲ್ಲ. ಕೆಲವೊಂದು ಮಾರ್ಗದ ಮೂಲಕ ನೀವು ಕ್ರೆಡಿಟ್ ಸ್ಕೂರ್ ಹೆಚ್ಚಿಸಿಕೊಳ್ಳಬೇಕು.
Recurring Deposit:ಆರ್ ಡಿ ಖಾತೆ ಎಲ್ಲಿ ತೆರೆಯುವುದು ಬೆಸ್ಟ್ ? ಎಸ್ ಬಿಐ ಅಥವಾ ಅಂಚೆ ಕಚೇರಿ?
ಸಾಲ ಪಡೆದಿದ್ದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವ ಮೂಲಕ ಉತ್ತಮ ಪಾವತಿ ಇತಿಹಾಸವನ್ನು ಹೊಂದಿರಿ. ಕಡಿಮೆ ಅವಧಿಯ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ (Credit Cards) ಹಲವಾರು ಬಾರಿ ಅರ್ಜಿ ಸಲ್ಲಿಸಬೇಡಿ. ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಹಳೆ ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚುವುದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡಬಹುದು. ನಿಯತಕಾಲಿಕವಾಗಿ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಿ. ಸಾಪ್ಟ್ ವಿಧಾನದ ಮೂಲಕ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡಿ. ಬೇರೆಯವರಿಂದ ಸ್ಕೋರ್ ಚೆಕ್ ಮಾಡಿದಾಗ ನಿಮ್ಮ ಸ್ಕೋರ್ ಕಡಿಮೆಯಾಗುತ್ತದೆ. ಈ ಎಲ್ಲ ನಿಯಮ ಪಾಲನೆ ಮಾಡುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಸರಿಯಾಗಿಟ್ಟುಕೊಂಡಲ್ಲಿ ನಿಮಗೆ ಸಾಲ ಸೇರಿದಂತೆ ಬ್ಯಾಂಕ್ ಸೇವೆ ಸಿಗುವುದು ಸುಲಭವಾಗುತ್ತದೆ.