ಅರ್ಜೆಂಟೀನಾ[ಸೆ.21]: ದಕ್ಷಿಣ ಅಮೆರಿಕದ ಅರ್ಜೆಂಟೀನಾ ರಸಿಕರ ಪಾಲಿಗೆ ನೆಚ್ಚಿನ ತಾಣ ಎಂದೇ ಕರೆಸಿಕೊಂಡಿದೆ. ಆದರೆ, ಅಲ್ಲಿ ಈಗ ಕಾಂಡೋಮ್‌ಗಳ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದೆ. ಇದಕ್ಕೆ ಕಾರಣವೇನು ಗೊತ್ತಾ? ಆರ್ಥಿಕ ಹಿಂಜರಿತ.

ಶೇ. 70 ಭಾರತೀಯ ಮಹಿಳೆಯರು ಪರಾಕಾಷ್ಠೆ ತಲುಪಲ್ಲ: ಕಾಂಡೋಮ್ ಕಂಪನಿಗೆ ಪುರುಷರ ಏಟು!

ಕಾಂಡೋಮ್‌ಗಳನ್ನು ಹಾಗೂ ಅದರ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ಅರ್ಜೆಂಟೀನಾ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಅರ್ಜೆಂಟೀನಾದ ಕರೆನ್ಸಿ ನೋಟುಗಳ ಮೌಲ್ಯ ಕುಸಿದಿರುವುದರಿಂದ ವಸ್ತುಗಳ ದರಗಳು ಗಗನಕ್ಕೆ ಏರಿವೆ. ಅದೇ ರೀತಿ ಕಾಂಡೋಂಗಳ ದರ ಕೂಡ ಶೇ.36ರಷ್ಟು ಏರಿಕೆಯಾಗಿದೆ. ಹೀಗಾಗಿ ಕಾಂಡೋಂಗಳಿಗೆ ಬೇಡಿಕೆ ಕುಸಿಯುತ್ತಿದೆಯಂತೆ.

ಮದುವೆ ನಂತರ ಕಾಂಡೋಮ್ ಆ್ಯಡ್ ಕೈಬಿಟ್ಟ ರಣವೀರ್..?

ಮತ್ತೊಂದೆಡೆ ಗರ್ಭ ನಿರೋಧಕ ಮಾತ್ರೆಗಳ ದರ ಏರಿಕೆಯಿಂದ ಅವುಗಳ ಖರೀದಿಗೂ ಜನರು ಆಸಕ್ತಿ ತೋರುತ್ತಿಲ್ಲ. ಸುಮಾರು 1,44,000 ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದಾರಂತೆ.