ಕಾಂಡೋಮ್ ಕಂಪನಿ ಭಾರತೀಯರನ್ನು ಕೆರಳಿಸುವಂಥಹ ಕೆಲಸ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ #BoycottDurex ಮತ್ತು #BanDurex   ಎಂಬುದು ಟ್ರೆಂಡ್ ಆಗಿದೆ.

ಭಾರತದ ಶೇ. 70 ರಷ್ಟು ಮಹಿಳೆಯರು ಸಂಭೋಗದ ಸಮಯದಲ್ಲಿ ಪರಾಕಾಷ್ಠೆ ತಲುಪುವುದಿಲ್ಲ ಎಂದು ಡ್ಯುರೆಕ್ಸ್ ಹೇಳಿತ್ತು. ಇದೇ ಸಂಗತಿ ಅನೇಕರನ್ನು ಕೆರಳಿಸಿದೆ.

ಮದುವೆ ನಂತರ ಕಾಂಡೋಮ್ ಆ್ಯಡ್ ಕೈಬಿಟ್ಟ ರಣವೀರ್..

ಭಾರತ ನಾವು ಈ ಬಗ್ಗೆ ಮಾತನಾಡಬೇಕು ಎಂದು ಡ್ಯುರೆಕ್ಸ್ ಹೇಳಿತ್ತು. ಮೇ. 29 ರಂದು  ಡ್ಯುರೆಕ್ಸ್ ಟ್ವೀಟ್ ಮಾಡಿದ್ದರೂ ನಿಧಾನವಾಗಿ ಜನರು ಟ್ವೀಟ್ ಮೂಲಕವೇ ಉತ್ತರ ನೀಡಲು ಆರಂಭಿಸಿದರು.

ಪುರುಷರು ಇದು ನಮ್ಮ ಸಾಮರ್ಥ್ಯವನ್ನೇ ಪ್ರಶ್ನೆ ಮಾಡಿದಂತೆ ಇದೆ ಎಂದು ಕಂಪನಿಗೆ ತಿರುಗೇಟು ನೀಡಿದ್ದಾರೆ. ಕೆಲ ಮಹಿಳೆಯರು ಪುರುಷರ ಬೆಂಬಲಕ್ಕೆ ನಿಂತಿದ್ದು ಟ್ವಿಟರ್ ನಲ್ಲಿ #BoycottDurex ಟ್ರೆಂಡ್ ಆಗಿದೆ.