ಬಾಲಿವುಡ್ ಮೋಸ್ಟ್ ಆ್ಯಕ್ಟೀವ್ ಮ್ಯಾನ್‌ ರಣವೀರ್ ಸಿಂಗ್ 2014 ರಿಂದ ಕಾಂಡೋಮ್‌ ಬ್ರ್ಯಾಂಡ್‌ವೊಂದಕ್ಕೆ ಜಾಹಿರಾತು ಮಾಡುತ್ತಿದ್ದರು. ಕೆಲವೊಂದು ಕಾರಣಗಳಿಂದ ಒಪ್ಪಂದ ಮುರಿದು ಹೊರಬಂದಿದ್ದಾರೆ.

ಖ್ಯಾತ ಮ್ಯಾಗಜಿನ್ ಕೊಟ್ಟ ವರದಿ ಪ್ರಕಾರ ರಣವೀರ್ ಹಾಗೂ ಕಾಂಡೋಮ್ ಬ್ರ್ಯಾಂಡ್‌ ಮಾಲೀಕರು ಇಬ್ಬರೂ ಒಪ್ಪಂದದ ಮೇಲೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದಿದೆ.

ಸಾಮಾನ್ಯವಾಗಿ ರಿಲೇಷನ್ ಶಿಪ್‌ ಸ್ಟೇಟಸ್ ಸಿಂಗಲ್ ಇರುವ ಹುಡುಗರನ್ನು ಪ್ರಿಫರ್ ಮಾಡುವ ಕಾಂಡೋಮ್ ಬ್ರ್ಯಾಂಡ್‌ಗಳು ರಣವೀರ್ ಮದುವೆ ಆಗಿರುವ ಕಾರಣಕ್ಕೆ ಇದರಿಂದ ಹೊರ ಬಂದಿರಬಹುದು ಇಲ್ಲವಾದರೆ ರಣವೀರ್ ಸಂಭಾವನೆ ಹೆಚ್ಚಾಗಿರುವುದು ಇದಕ್ಕೆ ಕಾರಣವಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.