ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಹಾಗೂ ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್ ಅವರು ಪರಸ್ಪರ ಕುಸ್ತಿಯಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಪಂದ್ಯ ‘ಎಕ್ಸ್‌’ನಲ್ಲಿ ಪ್ರಸಾರವಾಗಲಿದೆ. 

ಸ್ಯಾನ್‌ಫ್ರಾನ್ಸಿಸ್ಕೋ: ವಿಶ್ವದ ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ ಹಾಗೂ ಮತ್ತೊಂದು ಜನಪ್ರಿಯ ಜಾಲತಾಣ ಎಕ್ಸ್‌ (ಹಿಂದಿನ ಟ್ವೀಟರ್‌) ಮಾಲೀಕರು ಇಷ್ಟುದಿನ ಉದ್ಯಮದಲ್ಲಿ ಪೈಪೋಟಿ ನಡೆಸುತ್ತಿದ್ದರು. ಇದೀಗ ಕುಸ್ತಿ ಅಖಾಡದಲ್ಲಿ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ಹೌದು. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಹಾಗೂ ಫೇಸ್‌ಬುಕ್‌ ಒಡೆಯ ಮಾರ್ಕ್ ಜುಕರ್‌ಬರ್ಗ್ ಅವರು ಪರಸ್ಪರ ಕುಸ್ತಿಯಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಪಂದ್ಯ ‘ಎಕ್ಸ್‌’ನಲ್ಲಿ ಪ್ರಸಾರವಾಗಲಿದೆ. ಅದರಿಂದ ಬರುವ ಆದಾಯ ನಿವೃತ್ತ ಯೋಧರ ದತ್ತಿ ಕೆಲಸಕ್ಕೆ ಬಳಕೆಯಾಗಲಿದೆ ಎಂದು ಭಾನುವಾರ ಬೆಳಗ್ಗೆ ಸ್ವತಃ ಮಸ್ಕ್ ಘೋಷಣೆ ಮಾಡಿದ್ದಾರೆ.

ಈ ನಡುವೆ, ಇಬ್ಬರೂ ಉದ್ಯಮಿಗಳು (Bussinessman) ಶೀಘ್ರದಲ್ಲೇ ನಡೆಯುವ ಕುಸ್ತಿಗೆ ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಪ್ರತಿದಿನ ತೂಕ ಎತ್ತುವ ಅಭ್ಯಾಸ ನಡೆಸುತ್ತಿದ್ದು, ಕುಸ್ತಿಗೆ ಸಜ್ಜಾಗುತ್ತಿದ್ದೇನೆ. ಅಭ್ಯಾಸ ನಡೆಸಲು ಸಮಯವಿಲ್ಲದ ಕಾರಣ ತೂಕದ ಸಾಧನಗಳನ್ನು ಕಚೇರಿಗೆ ತಂದುಬಿಡುತ್ತಿದ್ದೇನೆ ಎಂದು ಮಸ್ಕ್ ಹೇಳಿಕೊಂಡಿದ್ದಾರೆ. ಟೆಕ್ವಾಂಡೋ, ಜೂಡೋ, ಕರಾಟೆಯನ್ನು ಬಾಲ್ಯದಲ್ಲಿ ಅಭ್ಯಾಸ ನಡೆಸಿರುವ ಮಸ್ಕ್ ಅವರು, ಯುವಕರಾಗಿದ್ದಾಗ ಬ್ರೆಜಿಲ್‌ನ ಜಿಯು-ಜಿಟ್ಸು ಕಲಿತಿದ್ದಾರೆ.

ಮಸ್ಕ್‌ಗೆ ಸಂಕಷ್ಟ ತಂದ X; ವಾರ್ನಿಂಗ್ ಬಳಿಕ ಕಚೇರಿಯಲ್ಲಿ ಅಳವಡಿಸಿದ್ದ ಲೋಗೋ ತೆಗೆದ ಕಂಪನಿ!

ಮತ್ತೊಂದೆಡೆ ಜುಕರ್‌ಬರ್ಗ್ (Mark Zuckerberg) ಕೂಡ ಪರಿಣತ ಕುಸ್ತಿಪಟುಗಳ ನೆರವಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ತಮ್ಮ ಮನೆ ಬಳಿಯೇ ಅಖಾಡ ನಿರ್ಮಿಸಿಕೊಂಡಿದ್ದು, ಪ್ರತಿದಿನ 4000 ಕ್ಯಾಲೋರಿಯಷ್ಟುಆಹಾರ ಸೇವಿಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಅವರು ಜಿಯು-ಜಿಟ್ಸು ಟೂರ್ನಮೆಂಟ್‌ನಲ್ಲಿ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದರು.

ಕುಸ್ತಿ ಏಕೆ?:

51 ವರ್ಷದ ಎಲಾನ್‌ ಮಸ್ಕ್ (Elon Musk) ಹಾಗೂ 39 ವರ್ಷದ ಜುಕರ್‌ಬರ್ಗ್ ರಾಜಕಾರಣದಿಂದ ಕೃತಕ ಬುದ್ಧಿಮತ್ತೆವರೆಗೆ ಹಲವು ವಿಚಾರಗಳಲ್ಲಿ ತದ್ವಿರುದ್ಧ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಟ್ವೀಟರ್‌ಗೆ ಪ್ರತಿಯಾಗಿ ಜುಕರ್‌ಬಗ್‌ರ್‍ ಅವರು ಥ್ರೆಡ್ಸ್ ಎಂಬ ಆ್ಯಪ್‌ ಲೋಕಾರ್ಪಣೆ ಮಾಡಿದ್ದರು. ಅದರ ಉದ್ಘಾಟನೆ ಆ ವೇಳೆ ತಮಾಷೆಯಾಗಿ ಮಸ್ಕ್ ಅವರು ‘ಜುಕರ್‌ಬಗ್‌ರ್‍ ಜತೆಗೆ ಕುಸ್ತಿಗೆ ರೆಡಿ’ ಎಂದು ಟ್ವೀಟ್‌ ಮಾಡಿದ್ದರು. ‘ಜಾಗ ಹೇಳಿ’ ಎಂದು ಜುಕರ್‌ಬರ್ಗ್ ತಿರುಗೇಟು ಕೊಟ್ಟಿದ್ದರು. ಅದು ಈಗ ಅಖಾಡದಲ್ಲಿ ಕುಸ್ತಿ ಮಾಡುವ ಹಂತಕ್ಕೆ ತಲುಪಿದೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ.

ಆ್ಯಪಲ್ ಕಂಪನಿಯ ಹೆಸರು, ಲೋಗೋ ಬಂದಿದ್ದೇ ನೀಮ್ ಕರೋಲಿ ಬಾಬಾರಿಂದ!