Asianet Suvarna News Asianet Suvarna News

ಆ್ಯಪಲ್ ಕಂಪನಿಯ ಹೆಸರು, ಲೋಗೋ ಬಂದಿದ್ದೇ ನೀಮ್ ಕರೋಲಿ ಬಾಬಾರಿಂದ!

ನೀಮ್ ಕರೋಲಿ ಬಾಬಾ ಆಶ್ರಮದಲ್ಲಿ ನಾಳೆ(ಜೂ.15) ಆಶ್ರಮದ 59ನೇ ಸಂಸ್ಥಾಪನಾ ದಿನ ಪ್ರಯುಕ್ತ ಸಂಭ್ರಮಾಚರಣೆ ನಡೆಯುತ್ತಿದೆ. ಬಾಬಾರಿಂದ ಆ್ಯಪಲ್ ಸಿಇಒ ಸ್ಟೀವ್ ಜಾಬ್ಸ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಬರಾಕ್ ಒಬಾಮಾ ಹೇಗೆ ಪ್ರಯೋಜನ ಪಡೆದರು ನೋಡೋಣ. 

Steve Jobs Neem Karoli baba and the Apple logo skr
Author
First Published Jun 14, 2023, 3:36 PM IST

ಬಾಬಾ ನೀಮ್ ಕರೋಲಿ 20ನೇ ಶತಮಾನದ ಸಂತರಲ್ಲಿ ಪ್ರಮುಖರಾಗಿದ್ದಾರೆ. ಕೆಲವು ಭಕ್ತರು ಅವರನ್ನು ಭಗವಾನ್ ಹನುಮಂತನ ಅವತಾರವೆಂದು ಪರಿಗಣಿಸುತ್ತಾರೆ. ಅವರ ಕೀರ್ತಿ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಇದೆ. ಆದ್ದರಿಂದಲೇ ಅವರ ಭಕ್ತರು ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಇದ್ದಾರೆ. ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅಥವಾ ಮಾಜಿ ಆಪಲ್ ಸಿಇಒ ಸ್ಟೀವ್ ಜಾಬ್ಸ್ ಈ ಪಟ್ಟಿಯಲ್ಲಿ ಸೇರಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ ದೇಶದ ಖ್ಯಾತನಾಮರೆಲ್ಲ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. 

ನೀಮ್ ಕರೋಲಿ ಬಾಬಾ ಆಶ್ರಮ ಕೈಂಚಿ ಧಾಮ್ ನೈನಿತಾಲ್‌ನಲ್ಲಿ ಜೂನ್ 15 ರಂದು ಆಶ್ರಮದ 59ನೇ ಸಂಸ್ಥಾಪನಾ ದಿನದಂದು ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಭಂಡಾರದ ಕಾಣಿಕೆಯನ್ನು ತೆಗೆದುಕೊಂಡು ಹೋಗುತ್ತಾರೆ. ಇದರೊಂದಿಗೆ ಈ ವಿದೇಶಿ ಸೆಲೆಬ್ರಿಟಿಗಳು ಹೇಗೆ ಬಾಬಾನ ಅನುಯಾಯಿಗಳಾದರು ಎಂದು ತಿಳಿಯೋಣ.

ನೀಮ್ ಕರೋಲಿ ಬಾಬಾ ಅವರು ಜೂನ್ 15ರಂದು ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಕೈಂಚಿ ಧಾಮ್ ಆಶ್ರಮವನ್ನು ಸ್ಥಾಪಿಸಿದರು. ಇದೇ ದಿನ ಇಲ್ಲಿ ಬಾಬಾರವರ ಮಂದಿರವನ್ನು ನಿರ್ಮಿಸಲಾಗಿದೆ. ಈ ಭೂಮಿ ನೀಮ್ ಕರೋಲಿ ಬಾಬಾರ ತಪಸ್ಸಿನ ಸ್ಥಳವಾಗಿದೆ. ಬಾಬಾರ ತಪಸ್ಸಿನ ಶಕ್ತಿಯು ಈ ಪ್ರದೇಶದಲ್ಲಿದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಈ ದಿನದಂದು ಅಮೆರಿಕಾ, ಫ್ರಾನ್ಸ್, ಜರ್ಮನಿ, ಕೆನಡಾ ಸೇರಿದಂತೆ ಪ್ರಪಂಚದಾದ್ಯಂತದ ನೀಮ್ ಕರೋಲಿ ಬಾಬಾ ಅವರ ಭಕ್ತರು ಭವಾಲಿಯ ಕೈಂಚಿ ಧಾಮದಲ್ಲಿ ಸೇರುತ್ತಾರೆ ಮತ್ತು ಬಾಬಾ ಅವರ ಕೈಂಚಿ ಧಾಮ ಆಶ್ರಮದ ಸಂಸ್ಥಾಪನಾ ದಿನವನ್ನು ಆಚರಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ಇಲ್ಲಿ ಬಾಬಾ ಪವಾಡಗಳನ್ನು ನೋಡಿರುವುದಾಗಿ ಹೇಳುತ್ತಾರೆ. ಈ ವರ್ಷ, ಕೈಂಚಿ ಧಾಮ್ ಆಶ್ರಮದ 59ನೇ ಸಂಸ್ಥಾಪನಾ ದಿನವನ್ನು ಆಚರಿಸಲು ಭರದಿಂದ ಸಿದ್ಧತೆ ನಡೆಯುತ್ತಿದೆ.

ಇಂಗ್ಲೆಂಡ್ ಪ್ರಧಾನಿ ಕೂಡಾ ಗುರುವಾರ ಮಾಡ್ತಾರೆ ಉಪವಾಸ; ಏನು ಈ ದಿನದ ಉಪವಾಸ ಮಹತ್ವ?

ಬಾಬಾ  ಪವಾಡ
ಒಮ್ಮೆ ಇಲ್ಲಿನ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾಗ ಭಕ್ತನೊಬ್ಬನ ಕೈ ಬಿಸಿ ಎಣ್ಣೆಯ ಬಾಣಲೆಯೊಳಗೆ ಹೊಕ್ಕಿದ್ದರಿಂದ ಆತನ ಕೈ ಪೂರ್ತಿ ಸುಟ್ಟು ಹೋಗಿತ್ತು. ಈ ವಿಷಯ ತಿಳಿದ ಬಾಬಾ ಅವರನ್ನು ತಮ್ಮ ಬಳಿಗೆ ಕರೆದು ಸುಟ್ಟ ಕೈಗೆ ಕಂಬಳಿ ಹಾಕಿದರು. ಇದಾದ ನಂತರ ಅವರ ಕೈ ಮೊದಲಿನಂತಾಯಿತು. ಇಂತಹ ಅನೇಕ ಬಾಬಾರ ಪವಾಡಗಳ ಕಥೆಗಳು ಇಲ್ಲಿನ ಭಕ್ತರಲ್ಲಿ ಪ್ರಚಲಿತದಲ್ಲಿವೆ.

ಸ್ಟೀವ್ ಜಾಬ್ಸ್ ಕೂಡ ಭೇಟಿ ನೀಡಿದ್ದಾರೆ..
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಆಪಲ್‌ನ ಮಾಜಿ ಸಿಇಒ ಸ್ಟೀವ್ ಜಾಬ್ಸ್, ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಾಬಾನ ಭಕ್ತರು.
1972ರಲ್ಲಿ, ಸ್ಟೀವ್ ಜಾಬ್ಸ್ ತೀವ್ರ ಸಂಕಷ್ಟದಲ್ಲಿದ್ದರು. 1974ರಲ್ಲಿ, ಸ್ಟೀವ್ ಸ್ನೇಹಿತನೊಂದಿಗೆ ಭಾರತವನ್ನು ತಲುಪಿದರು ಮತ್ತು ಕೈಂಚಿಧಾಮ್ ಆಶ್ರಮದಲ್ಲಿ ಹಲವಾರು ದಿನಗಳವರೆಗೆ ಧ್ಯಾನ ಮಾಡಿದರು. ಇದು ಅವರಿಗೆ ದೈವಿಕ ಅನುಭವಗಳನ್ನು ನೀಡಿತು ಮತ್ತು ಭಾರತದಿಂದ ಹಿಂದಿರುಗಿದ ಅವರು ಮೊದಲ ಆಪಲ್ ಕಂಪ್ಯೂಟರ್ ಅನ್ನು ವಿನ್ಯಾಸಗೊಳಿಸಿದರು ಮತ್ತು ಅದಕ್ಕೆ ಆಪಲ್ ಎಂದು ಹೆಸರಿಸಿದರು ಮತ್ತು ಅದು ವಿಶ್ವದಲ್ಲಿ ಜನಪ್ರಿಯವಾಯಿತು.

ಆ್ಯಪಲ್ ಲೋಗೋ
ಆ್ಯಪಲ್ ಲೋಗೋ ಬಾಬಾ ಅವರಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದ್ದು, ಸ್ಟೀವ್ ಜಾಬ್ಸ್ ಬಾಬಾರನ್ನು ನೋಡಲು ಬಂದಾಗ ನೀಮ್ ಕರೌಲಿ ಬಾಬಾ ಅವರಿಗೆ ಬಾಯಿಂದ ಕಚ್ಚಿದ ಸೇಬನ್ನು ನೀಡಿದ್ದರಂತೆ.  ಇದನ್ನೇ ಪ್ರೇರಣೆಯಾಗಿ ಸ್ವೀಕರಿಸಿದ ಸ್ಟೀವ್ ಜಾಬ್ಸ್ ತಮ್ಮ ಕಂನಿಗೆ ಆ್ಯಪಲ್ ಎಂದೇ ಹೆಸರಿಟ್ಟಿದ್ದು, ಕಚ್ಚಿದ ಹಣ್ಣಿನ ಲೋಗೋ ಬಳಸಿದ್ದಾರೆ. 

ಒಬಾಮಾಗೆ ಜಯ
ಇದಾದ ನಂತರ ಅವರಿಗೆ ಯಶಸ್ಸು ಸಿಕ್ಕಿತು. ಇದಲ್ಲದೇ ಬರಾಕ್ ಒಬಾಮ ಚುನಾವಣೆಗೂ ಮುನ್ನ, ಅಮೆರಿಕದ ತಂಡವೊಂದು ಇಲ್ಲಿಗೆ ಬಂದು ಒಬಾಮಾ ಗೆಲುವಿಗಾಗಿ ಇಲ್ಲಿ ಹನುಮಾನ್ ಚಾಲೀಸಾ ಪಠಿಸಿತ್ತು.

ಜುಕರ್‌ಬರ್ಗ್ ಅವರ ಸೋಲಿನ ಸರಣಿಗೆ ಕೊನೆ
ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್‌ನ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಒಮ್ಮೆ ಫೇಸ್‌ಬುಕ್‌ನ ನಷ್ಟದಿಂದ ತೊಂದರೆಗೀಡಾದರು. ಏತನ್ಮಧ್ಯೆ, 2006ರಲ್ಲಿ, ಸ್ಟೀವ್ ಜಾಬ್ಸ್ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡುವಂತೆ ಮಾರ್ಕ್ ಜುಕರ್‌ಬರ್ಗ್‌ಗೆ ಸಲಹೆ ನೀಡಿದರು. ಮಾರ್ಕ್ 2008ರಲ್ಲಿ ಭಾರತಕ್ಕೆ ಬಂದರು ಮತ್ತು ಕೈಂಚಿಧಾಮ್‌ನಲ್ಲಿ ವಾಸಿಸುತ್ತಿದ್ದರು. ಇದಾದ ನಂತರ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದರು. 

ಕಷ್ಟದ ಮೇಲೆ ಕಷ್ಟ ಬರಲಿ, ಗೆದ್ದೇಗೆಲ್ತೀವಿ ಅನ್ನೋ ಛಲದಂಕ ಮಲ್ಲರು ಈ ರಾಶಿಯವ್ರು; ಅವರಿಗೆ ಗೆಲುವು ಶತಸಿದ್ಧ

ಬಾಬಾರ ಅನೇಕ ಭಕ್ತರು ತಮ್ಮ ಆತ್ಮಚರಿತ್ರೆಯಲ್ಲಿ ಬಾಬಾರವರು ಯಾವುದೇ ಮಟ್ಟದಲ್ಲಿ ಏನನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಬರೆಯುತ್ತಾರೆ. ನನ್ನ ಫೋಟೋದ ಮುಂದೆ ಯಾರೇ ಬಂದರೂ ನನ್ನ ಕಣ್ಣಿಗೆ ಬೀಳುತ್ತಾರೆ ಎಂದು ಬಾಬಾ ಹೇಳುತ್ತಿದ್ದರು. ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದು, ನೀಮ್ ಕರೌಲಿ ಬಾಬಾ ಅವರ ಚಿತ್ರವನ್ನು ನೋಡಿದ ನಂತರವೇ ನಾನು ಹಿಂದೂ ಧರ್ಮದತ್ತ ಒಲವು ತೋರಿದೆ ಎಂದು.
 

Follow Us:
Download App:
  • android
  • ios