ಮಸ್ಕ್‌ಗೆ ಸಂಕಷ್ಟ ತಂದ X; ವಾರ್ನಿಂಗ್ ಬಳಿಕ ಕಚೇರಿಯಲ್ಲಿ ಅಳವಡಿಸಿದ್ದ ಲೋಗೋ ತೆಗೆದ ಕಂಪನಿ!

ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್‌ ಲೋಗೋ ಬದಲಾಯಿಸಿದ್ದಾರೆ. ನೀಲಿ ಹಕ್ಕಿ ಬದಲು X ಚಿಹ್ನೆಯನ್ನು ಬಳಸಿದ್ದಾರೆ. ಆದರೆ ಈ ಲೋಗೋ ಬಿಡುಗಡೆಯಾದ ಬೆನ್ನಲ್ಲೇ ಮಸ್ಕ್ ಸಂಕಷ್ಟವೂ ಹೆಚ್ಚಾಗಿದೆ. ಇದೀಗ ಕಚೇರಿ ಮೇಲೆ ಅಳವಡಿಸಿದ್ದ ದೊಡ್ಡ ಗಾತ್ರದ X ಲೋಗೋವನ್ನು ತೆಗೆಯಲಾಗಿದೆ. ಸ್ಥಳೀಯರ ದೂರು, ಪೊಲೀಸರು ವಾರ್ನಿಂಗ್ ಬೆನ್ನಲ್ಲೇ ಲೋಗೋ ತೆಗೆದಿದ್ದಾರೆ. 

Twitter remove New X logo from top of headquarter building after multiple neighbours complaints ckm

ಸ್ಯಾನ್ ಫ್ರಾನ್ಸಿಸ್ಕೋ(ಆ.02) ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಅಷ್ಟೇ ಟೀಕೆಯನ್ನು ಎದುರಿಸಿದ್ದಾರೆ. ಇತ್ತೀಚೆಗೆ ಮಸ್ಕ್ ಟ್ವಿಟರ್ ಲೋಗವನ್ನು ಬದಲಿಸಿದ್ದಾರೆ. ನೀಲಿ ಹಕ್ಕಿಯ ಮೂಲಕ  ಸಂದೇಶ ತರುತ್ತಿದ್ದ ಟ್ವಿಟರ್ ಏಕಾಏಕಿ X ಲೋಗೋ ನೂತನ ಚಿಹ್ನೆಯಾಗಿ ಬಳಸಿಕೊಂಡಿತ್ತು. ನೀಲಿ ಹಕ್ಕಿಯನ್ನು ಹಾರಿಬಿಟ್ಟ ಮಸ್ಕ್ ಮತ್ತೆ ಟ್ರೋಲ್ ಆಗಿದ್ದರು. ಟ್ರೋಲ್, ಮೀಮ್ಸ್ ಬೆನ್ನಲ್ಲೇ ಎಲಾನ್ ಮಸ್ಕ್ ಹಲವು ಸಂಕಷ್ಟ ಎದುರಿಸಿದ್ದಾರೆ. ಹೊಸ ಲೋಗೋ ಬಿಡುಗಡೆ ಮಾಡಿದ ಬಳಿಕ ಟ್ವಿಟರ್ ಪ್ರಧಾನ ಕಚೇರಿ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ X ಲೋಗೋ ಅಳವಡಿಸಲಾಗಿತ್ತು. ಆದರೆ ಸ್ಥಳೀಯರ ದೂರು, ಪೊಲೀಸರ ವಾರ್ನಿಂಗ್ ಬಳಿಕ ಕಚೇರಿಯ ಮೇಲಿನ ನೂತನ X ಲೋಗೋವನ್ನು ತೆಗೆದು ಹಾಕಲಾಗಿದೆ. 

ಎಲಾನ್ ಮಸ್ಕ್ X ಲೋಗೋ ಅನಾವರಣ ಮಾಡಿದ ಬೆನ್ನಲ್ಲೇ ಕಾಪಿ ರೈಟ್ಸ್ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಕಂಪನಿಗಳು X ಲೋಗೋ ಬಳಕೆ ಮಾಡುತ್ತಿದೆ. ಹೀಗಾಗಿ ಈ ಕಂಪನಿಗಳು ಕಾಪಿರೈಟ್ಸ್ ಹೋರಾಟ ಆರಂಭಿಸಿದೆ. ಇತ್ತ ಹೊಸ ಲೋಗೋ ಅನಾವರಣ ಬೆನ್ನಲ್ಲೇ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪ್ರಧಾನ ಕಚೇರಿ ಮೇಲೆ ದೊಡ್ಡ ಗಾತ್ರದ X ಲೋಗೋ ಅಳವಡಿಸಲಾಗಿತ್ತು. ಎಲ್‌ಇಡಿ ಲೈಟ್ ಮೂಲಕ ಹೊಳೆಯುವ ಈ ಲೋಗೋ ಅದೆಷ್ಟೇ ದೂರಕ್ಕೂ ಕಾಣುವ ರೀತಿಯಲ್ಲಿ ಅಳವಡಿಕೆ ಮಾಡಲಾಗಿತ್ತು.

ಟ್ವಿಟರ್‌ಗೆ ಹೊಸ ಲೋಗೋ, ನೀಲಿ ಹಕ್ಕಿ ಹಾರಿ ಬಿಟ್ಟು X ಲಾಂಛನ ಬಿಡುಗಡೆ ಮಾಡಿದ ಮಸ್ಕ್!

ಪ್ರಕಾಶಮಾನವಾದ ಎಲ್‌ಇಡಿ ಲೈಟ್ ಬಳಕೆಯಿಂದ ಸ್ಛಳೀಯ ನಿವಾಸಿಗಳಿಗೆ ಕಿರಿಕಿರಿಯಾಗಿದೆ. ರಾತ್ರಿ ವೇಳೆ ನಿದ್ದೆ ಮಾಡಲು ಆಗುತ್ತಿಲ್ಲ. ಪ್ರಕಾಶಮಾನವಾದ ಬೆಳಕಿನಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಟ್ವಿಟರ್ ಲೋಗೋವನ್ನು ತೆಗೆಯಬೇಕು ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ದೂರು ದಾಖಲಿಸಿದ್ದಾರೆ. ಈ ಟ್ವಿಟರ್ ಲೋಗೋವನ್ನು ಕಟ್ಟಡದ ಅಂಚಿನಲ್ಲಿ ಅಳವಡಿಸಲಾಗಿದೆ. ಗಗನ ಚುಂಬಿ ಕಟ್ಟದ ಅಂಚಿನಲ್ಲಿರುವ ಈ ಲೋಗೋ ಬಿರುಗಾಳಿ ಅಥವಾ ಇತರ ಕಾರಣಗಳಿಂದ ಕೆಳಕ್ಕೆ ಬಿದ್ದರೆ ಅಪಾಯ ಹೆಚ್ಚು. ಹೀಗಾಗಿ ಲೋಗೋ ತೆರೆವುಗೊಳಿಸಬೇಕು ಎಂದು ಬರೋಬ್ಬರಿ 24 ದೂರುಗಳು ದಾಖಲಾಗಿದೆ. 

 

 

ದೂರಿನ ಬಳಿಕ ಬಿಲ್ಡಿಂಗ್ ನಿರ್ವಹಣಾ ಅಧಿಕಾರಿಗಳ ತಂಡ ಟ್ವಿಟರ್ ಕಚೇರಿ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಇದು ತಾತ್ಕಾಲಿಕ ಸೈನ್ ಬೋರ್ಡ್ ಎಂದು ಟ್ವಿಟರ್ ಕಂಪನಿ ಹೇಳಿತ್ತು. ಆದರೆ ಸ್ಥಳೀಯರ ದೂರು, ಸುರಕ್ಷತೆ ಕಾರಣಗಳಿಂದ ತಕ್ಷಣವೇ ಲೋಗೋ ತೆಗೆಯುವಂತೆ ವಾರ್ನಿಂಗ್ ನೀಡಲಾಗಿದೆ. ಹೀಗಾಗಿ ಪ್ರಧಾನ ಕಚೇರಿಯಲ್ಲಿ ಅಳವಡಿಸಿದ್ದ ನೂತನ X ಲೋಗೋವನ್ನು ತೆಗೆದುಹಾಕಲಾಗಿದೆ.

 

ಬಳಕೆದಾರರ ಚಟುವಟಿಕೆಗೆ ಮಿತಿ ಹೇರಿದ ಥ್ರೆಡ್ಸ್; ಮತ್ತೊಮ್ಮೆ ವಾಗ್ದಾಳಿ ನಡೆಸಿದ ಎಲಾನ್ ಮಸ್ಕ್

ಎಲಾನ್‌ ಮಸ್‌್ಕ ಅವರು ‘ಸ್ಪೇಸ್‌ ಎಕ್ಸ್‌ಪ್ಲೋರೇಷನ್‌ ಟೆಕ್ನಾಲಜೀಸ್‌ ಕಾಪ್‌ರ್‍’ ಎಂಬ ರಾಕೆಟ್‌ ಕಂಪನಿ ಹೊಂದಿದ್ದಾರೆ. ಅದನ್ನು ‘ಸ್ಪೇಸ್‌ಎಕ್ಸ್‌’ ಎಂದೂ ಕರೆಯಲಾಗುತ್ತದೆ. 1999ರಲ್ಲಿ ಮಸ್ಕ್ ಅವರು ಆನ್‌ಲೈನ್‌ ಹಣಕಾಸು ಸೇವೆ ಒದಗಿಸಲು‘ಎಕ್ಸ್‌.ಕಾಂ’ ಎಂಬ ಸ್ಟಾರ್ಟಪ್‌ ಆರಂಭಿಸಿದ್ದರು. ಅದು ಈಗ ‘ಪೇಪಾಲ್‌’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದೆ. ‘ಎಕ್ಸ್‌’ ಜತೆ ಮಸ್‌್ಕ ಅವರಿಗೆ ನಂಟು ಹೆಚ್ಚು. ಹೀಗಾಗಿ ಆ ಹೆಸರು ಹಾಗೂ ಲೋಗೋವನ್ನು ಅವರು ಆರಿಸಿಕೊಂಡಿರಬಹುದು ಎಂದು ಹೇಳಲಾಗಿದೆ. 

Latest Videos
Follow Us:
Download App:
  • android
  • ios