ಏರ್‌ಟೆಲ್ ತನ್ನ ಜನಪ್ರಿಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಸ್ಥಗಿತಗೊಳಿಸಿದೆ, ಇದು ಗ್ರಾಹಕರಿಗೆ ತಿಂಗಳ ರೀಚಾರ್ಜ್ ಆಯ್ಕೆಯನ್ನು ಕಡಿಮೆ ಮಾಡಿದೆ. ಏರ್‌ಟೆಲ್ ಸ್ಥಗಿತಗೊಳಿಸಿರುವ ಜನಪ್ರಿಯ ಪ್ಲಾನ್ ಯಾವುದು ಎಂಬುದರ ಮಾಹಿತಿ ಇಲ್ಲಿದೆ.

Airtel Prepaid Plan: ಏರ್‌ಟೆಲ್ ತನ್ನ ಪ್ರಿಪೇಯ್ಡ್ ವಿಭಾಗದಲ್ಲಿ 299 ರೂ. ಪ್ಲ್ಯಾನ್ ಅನ್ನು ಬಹಳ ಕಾಲದಿಂದ ನೀಡಿತ್ತು. ಇದು 28 ದಿನಗಳ ವ್ಯಾಲಿಡಿಟಿಯೊಂದಿಗೆ, ಪ್ರತಿದಿನ 1GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತಿತ್ತು. ಉಚಿತ ಹಲೋ ಟ್ಯೂನ್ಸ್, ಪರ್ಪ್ಲೆಕ್ಸಿಟಿ ಪ್ರೊ AI ಚಂದಾದಾರಿಕೆಯಂತಹ ಹೆಚ್ಚುವರಿ ಪ್ರಯೋಜನಗಳೂ ಇದ್ದವು. ಇದೀಗ ಏರ್‌ಟೆಲ್ ಈ ಪ್ಲ್ಯಾನ್ ಅನ್ನು ತೆಗೆದುಹಾಕಿದೆ. ಇದರಿಂದ, 300 ರೂ. ಒಳಗೆ ತಿಂಗಳ ರೀಚಾರ್ಜ್ ಮಾಡಲು ಬಯಸುತ್ತಿದ್ದವರಿಗೆ ಒಂದು ಪ್ರಮುಖ ಆಯ್ಕೆ ಇಲ್ಲದಂತಾಗಿದೆ.

ಈಗ 349 ರೂ. ರೀಚಾರ್ಜ್ ಪ್ಯಾಕ್

299 ರೂ. ಪ್ಲ್ಯಾನ್ ಬದಲಿಗೆ, ಈಗ 349 ರೂ. ರೀಚಾರ್ಜ್ ಪ್ಯಾಕ್ ಪ್ರಮುಖ ಆಯ್ಕೆಯಾಗಿದೆ. ಈ ಪ್ಲ್ಯಾನ್ ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ, 299 ರೂ. ಪ್ಲ್ಯಾನ್‌ಗಿಂತ ಇದರಲ್ಲಿ ಡೇಟಾ ಹೆಚ್ಚು. ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್‌ಎಂಎಸ್ ಸಿಗುತ್ತದೆ. ಹೆಚ್ಚುವರಿಯಾಗಿ, ಆರು ತಿಂಗಳ ಆಪಲ್ ಮ್ಯೂಸಿಕ್ ಚಂದಾದಾರಿಕೆ, ಉಚಿತ ಹಲೋ ಟ್ಯೂನ್ಸ್‌ನಂತಹ ಪ್ರಯೋಜನಗಳೂ ಇವೆ. ಅಂದರೆ, ಹೆಚ್ಚುವರಿ 50 ರೂ. ಪಾವತಿಸಿದರೆ ಡೇಟಾ ಡಬಲ್ ಆಗುತ್ತದೆ. ಆದರೆ, ಕಡಿಮೆ ಡೇಟಾ ಬಳಸುವವರಿಗೆ ಈ ಹೆಚ್ಚುವರಿ ಖರ್ಚು ಹೊರೆಯಾಗಬಹುದು.

60 ದಿನಗಳ ವ್ಯಾಲಿಡಿಟಿ, 1.5GB ಡೇಟಾ

299 ರೂ. ಪ್ಲ್ಯಾನ್ ಜೊತೆಗೆ, ಏರ್‌ಟೆಲ್ ಇನ್ನೂ ಎರಡು ರೀಚಾರ್ಜ್ ಪ್ಯಾಕ್‌ಗಳನ್ನು ತೆಗೆದುಹಾಕಿದೆ ಎಂದು ತಿಳಿದುಬಂದಿದೆ. 579 ರೂ. ಪ್ಲ್ಯಾನ್ 56 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1.5GB ಡೇಟಾ ನೀಡುತ್ತಿತ್ತು. ಅದೇ ರೀತಿ, 619 ರೂ. ಪ್ಯಾಕ್ 60 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1.5GB ಡೇಟಾ ನೀಡುತ್ತಿತ್ತು. ಈ ಎರಡೂ ಪ್ಲ್ಯಾನ್‌ಗಳು ಸದ್ಯ ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಮೊದಲು ಕೆಲವು ಟೆಲಿಕಾಂ ಸರ್ಕಲ್‌ಗಳಲ್ಲಿ ಮಾಡಿದ ಈ ಬದಲಾವಣೆ, ಈಗ ಬೇರೆ ಪ್ರದೇಶಗಳಿಗೂ ವಿಸ್ತರಿಸಿದೆ.

299 ರೂ. ಪ್ಲ್ಯಾನ್ ತೆಗೆದುಹಾಕಿದ್ದರೂ, ಏರ್‌ಟೆಲ್ ಗ್ರಾಹಕರಿಗೆ ಬೇರೆ ಕೆಲವು ಪ್ಯಾಕ್‌ಗಳು ಲಭ್ಯವಿವೆ. ಕಡಿಮೆ ಡೇಟಾ ಬಳಸಿ ಹೆಚ್ಚು ಕರೆ ಮಾಡುವವರಿಗೆ 219 ರೂ. ಪ್ಯಾಕ್ ಇದೆ. ಇದರಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ, ಅನ್ಲಿಮಿಟೆಡ್ ಕಾಲಿಂಗ್ ಮತ್ತು ಒಟ್ಟು 3GB ಡೇಟಾ ಸಿಗುತ್ತದೆ. ಪದೇ ಪದೇ ರೀಚಾರ್ಜ್ ಮಾಡಲು ಇಷ್ಟಪಡದವರಿಗೆ, 2,249 ರೂ.ಗಳ ವಾರ್ಷಿಕ ಪ್ಲ್ಯಾನ್ ಇದೆ. ಇದರಲ್ಲಿ 365 ದಿನಗಳ ವ್ಯಾಲಿಡಿಟಿ, ಒಟ್ಟು 30GB ಡೇಟಾ ಮತ್ತು ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನಗಳಿವೆ. ಪ್ಲ್ಯಾನ್‌ಗಳ ಲಭ್ಯತೆ ಸರ್ಕಲ್‌ಗೆ ಅನುಗುಣವಾಗಿ ಬದಲಾಗಬಹುದು, ಹಾಗಾಗಿ ರೀಚಾರ್ಜ್ ಮಾಡುವ ಮೊದಲು ಏರ್‌ಟೆಲ್ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸುವುದು ಉತ್ತಮ.

ಇದನ್ನೂ ಓದಿ: ಕೇಬಲ್, ಡಿಟಿಎಚ್‌ಗೆ ಗುಡ್‌ಬೈ!: ಕೇವಲ ₹200ಗೆ 20 OTT, ಅನ್‌ಲಿಮಿಟೆಡ್ 5G ತಂದ Vi