ಕರ್ನಾಟಕ ಮತ್ತು ತಮಿಳುನಾಡಿಗಿಂತ ತೆಲಂಗಾಣ ಫಾಕ್ಸ್‌ಕಾನ್‌ಗೆ ಉತ್ತಮ ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಿದೆ ಮತ್ತು ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಘಟಕ ಸ್ಥಾಪಿಸಲು ಸಿದ್ದವಾಗಿದೆ ಎಂದು ತೆಲಂಗಾಣ ಕೈಗಾರಿಕಾ ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ. 

ಹೈದರಾಬಾದ್ (ಜನವರಿ 16, 2024): ತೈವಾನ್‌ನ ಫಾಕ್ಸ್‌ಕಾನ್‌ ಕಂಪನಿ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಫ್ಯಾಬ್‌ ಡಿಸ್‌ಪ್ಲೇ ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಘಟಕ ಸೆಳೆಯಲು ಕರ್ನಾಟಕ ಪೈಪೋಟಿ ನಡೆಸುತ್ತಿದ್ದು, ಭರ್ಜರಿ ಆಫರ್ ಮೂಲಕ ತನ್ನತ್ತ ಸೆಳೆಯಲು ತೆಲಂಗಾಣ ಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ತೈವಾನ್ ಸೆಮಿಕಂಡಕ್ಟರ್ ದೈತ್ಯ ಕಂಪನಿಯಾದ ಫಾಕ್ಸ್‌ಕಾನ್ 30 ಸಾವಿರ ಕೋಟಿ ರೂ. ಬಂಡವಾಳದೊಂದಿಗೆ ಭಾರತದಲ್ಲಿ ಫ್ಯಾಬ್ ಡಿಸ್‌ಪ್ಲೇ ಘಟಕ ಸ್ಥಾಪನೆ ಉದ್ದೇಶ ಹೊಂದಿದೆ. ಈ ಘಟಕವನ್ನು ಸೆಳೆಯಲು ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ತೆಲಂಗಾಣವು ಕರ್ನಾಟಕಕ್ಕಿಂತ ಉತ್ತಮ ಆಫರ್ ನೀಡಿ ಫಾಕ್ಸ್‌ಕಾನನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಇದನ್ನು ಓದಿ: ಮೇಕ್‌ ಇನ್‌ ಇಂಡಿಯಾ ಇಂಪ್ಯಾಕ್ಟ್‌, 1.24 ಲಕ್ಷ ಕೋಟಿ ದಾಟಲಿದೆ ಭಾರತದ ಮೊಬೈಲ್‌ ಫೋನ್‌ ರಫ್ತು!

'ಕರ್ನಾಟಕ ಮತ್ತು ತಮಿಳುನಾಡಿಗಿಂತ ತೆಲಂಗಾಣ ಫಾಕ್ಸ್‌ಕಾನ್‌ಗೆ ಉತ್ತಮ ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಿದೆ ಮತ್ತು ಕಂಪನಿಯು ಹೈದರಾಬಾದ್‌ನಲ್ಲಿ ತನ್ನ ಘಟಕ ಸ್ಥಾಪಿಸಲು ಸಿದ್ದವಾಗಿದೆ' ಎಂದು ತೆಲಂಗಾಣ ಕೈಗಾರಿಕಾ ಇಲಾಖೆಯ ಅಧಿಕೃತ ಮೂಲಗಳು ಹೈದರಾಬಾದ್‌ನ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿವೆ.

ಭಾರತ ಸರ್ಕಾರ ಈಗಾಗಲೇ ಸೆಮಿಕಂಡಕ್ಟರ್ ಹಾಗೂ ಡಿಸ್‌ಪ್ಲೇ ಉತ್ಪಾದಕ ಘಟಕ ಸ್ಥಾಪಿಸಿದರೆ ಶೇ. 50 ರಷ್ಟು ಪ್ರೋತ್ಸಾಹಧನ ನೀಡುವುದಾಗಿ 2021 ರಲ್ಲೇ ಪ್ರಕಟಿಸಿದೆ. ಇದಕ್ಕೆ ಪೂರಕವಾಗಿ ತೆಲಂಗಾಣ ಸರ್ಕಾರವು ತನ್ನ ಕಡೆಯಿಂದ ಶೇ. 30 ರಷ್ಟು ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಆದರೆ ಕರ್ನಾಟಕ ಮತ್ತು ತಮಿಳುನಾಡು ಕ್ರಮವಾಗಿ ಶೇ.20 ಹಾಗೂ ಶೇ.25 ರಷ್ಟು ಪ್ರೋತ್ಸಾಹಧನ ನೀಡುವುದಾಗಿ ಹೇಳಿವೆ. ಹೀಗಾಗಿ ಎರಡೂ ರಾಜ್ಯಕ್ಕಿಂತ ತೆಲಂಗಾಣ ಮುಂದಿದೆ' ಎಂದು ಮೂಲಗಳು ಹೇಳಿವೆ.

ಕನ್ನಡ ನಾಮಫಲಕ ಹೋರಾಟದ ನಡುವೆ ಬೆಂಗಳೂರು ಪ್ಲಾಂಟ್‌ನಲ್ಲಿ461 ಕೋಟಿ ರೂ. ಹೂಡಿಕೆ ಘೋಷಿಸಿದ ಫಾಕ್ಸ್‌ಕಾನ್‌!

ಹೆಚ್ಚುವರಿಯಾಗಿ, ತೆಲಂಗಾಣ ಸರ್ಕಾರವು ಅಗತ್ಯವಿದ್ದಲ್ಲಿ ಕಂಪನಿಯಲ್ಲಿ ಶೇ.10 ರಷ್ಟು ಷೇರು ಖರೀದಿಗೂ ಮುಂದಾಗಿದೆ. ಇಂಥ ಆಫರ್ ದೇಶದಲ್ಲೇ ಮೊದಲ ಬಾರಿಯಾಗಿದೆ ಎಂದು ಅವು ತಿಳಿಸಿವೆ.

ಡಿಸಿಎಂ ಹೆಸರಲ್ಲಿ ನಕಲಿ ಲೆಟರ್ ಹೆಡ್ ವೈರಲ್ ; ಫಾಕ್ಸ್ ಕಾನ್‌‌ ಸಂಸ್ಥೆಗೆ ನಾನು ಪತ್ರ ಬರೆದಿಲ್ಲ ಡಿಕೆಶಿ ಸ್ಪಷ್ಟನೆ