ಮೇಕ್ ಇನ್ ಇಂಡಿಯಾ ಇಂಪ್ಯಾಕ್ಟ್, 1.24 ಲಕ್ಷ ಕೋಟಿ ದಾಟಲಿದೆ ಭಾರತದ ಮೊಬೈಲ್ ಫೋನ್ ರಫ್ತು!
ಮುಂದಿನ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಲಿರುವ ಹಣಕಾಸು ವರ್ಷದಲ್ಲಿ ಭಾರತ ನಿರ್ಮಿತ ಮೊಬೈಲ್ ಫೋನ್ ರಫ್ತು ಪ್ರಮಾಣ 1.24 ಲಕ್ಷ ಕೋಟಿಯ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ ಶೇ. 35ರಷ್ಟು ಏರಿಕೆಯಾಗಿದೆ.
ನವ ದೆಹಲಿ (ಜ.2): ಸ್ಥಳೀಯವಾಗಿ ಉತ್ಪಾದನೆಯಲ್ಲಿ ಭರ್ಜರಿಯಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದೇಶದ ಮೊಬೈಲ್ ಫೋನ್ ರಫ್ತು ಈ ಹಣಕಾಸು ವರ್ಷದಲ್ಲಿ ಕಳೆದ ನವೆಂಬರ್‌ವರೆಗೆ 9 ಬಿಲಿಯನ್ ಯುಎಸ್ ಡಾಲರ್ ಗಡಿ ದಾಟಿದೆ. ಅಂದರೆ, 75 ಸಾವಿರ ಕೋಟಿ ರೂಪಾಯಿ ಬ್ಯುಸಿನೆಸ್ ಇದರಿಂದ ಆಗಿದೆ ಎಂದು ಇಂಡಸ್ಟ್ರಿ ತಿಳಿಸಿದೆ. ಇದು ಮೊಬೈಲ್ ರಫ್ತಯ ವಿಚಾರದಲ್ಲಿ ಅದ್ಭುತವಾದ ಬೆಳವಣಿಗೆ, ಕಳೆದ ವರ್ಷ ಇದೇ ಅವಧಿಯಲ್ಲಿ 6.2 ಬಿಲಿಯನ್ ಯುಎಸ್ ಡಾಲರ್ ಅಂದರೆ, 50 ಸಾವಿರ ಕೋಟಿ ರೂಪಾಯಿಯ ವ್ಯವಹಾರವಾಗಿತ್ತು ಎಂದು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಶಿಯೇಷನ್ (ಐಸಿಇಎ) ತನ್ನ ಹೇಳಿಕೆಯಲ್ಲಿ ತಿಳಿಸಿದೆ. 2024ರ ಮಾರ್ಚ್ 31ರವರೆಗೂ ಹಾಲಿ ಹಣಕಾಸು ವರ್ಷವಿದೆ. ಆಪಲ್ ನೇತೃತ್ವದಲ್ಲಿ ಭಾರತತದ ಮೊಬೈಲ್ ಫೋನ್ ರಫ್ತು ಮಾರುಕಟ್ಟೆ 15 ಬಿಲಿಯನ್ ಯುಎಸ್ ಡಾಲರ್ ಅಂದರೆ, 1.24 ಲಕ್ಷ ಕೋಟಿ ರೂಪಾಯಿ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಇದರ ಅಂದಾಜಿನಲ್ಲಿಯೇ ಹೇಳುವುದಾದರೆ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ರಫ್ತು ಮಾರುಕಟ್ಟೆಯಲ್ಲಿ ಶೇ. 35ರಷ್ಟು ಬೆಳವಣಿಗೆಯಾದಂತೆ ಅನಿಸಲಿದೆ.
ಮೂಲ ಉಪಕರಣ ತಯಾರಕರು, ಮೂಲ ವಿನ್ಯಾಸ ತಯಾರಕರು ಮತ್ತು ಘಟಕಗಳು ಮತ್ತು ಭಾಗಗಳಲ್ಲಿ ವ್ಯವಹರಿಸುವ ಕಂಪನಿಗಳಿಂದ ಭಾರೀ ಹೂಡಿಕೆಯಿಂದಾಗಿ ದೇಶವು ಈಗ ಮೊಬೈಲ್ ಫೋನ್‌ಗಳಿಗೆ ಭಾರತ ಎರಡನೇ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿದೆ. "ಮೊಬೈಲ್ ಫೋನ್ ರಫ್ತು ಭರ್ಜರಿಯಾಗಿ ಮುಂದುವರಿದಿದೆ, ಮೊಬೈಲ್ ಫೋನ್ ರಫ್ತಿನ ಪ್ರಚಂಡ ಬೆಳವಣಿಗೆಯ ಈಗ ಕಾಣುತ್ತಿದ್ದೇವೆ. ಇದು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ನವೆಂಬರ್ ಅವಧಿಯಲ್ಲಿ 75,000 ಕೋಟಿ ರೂ.ಗಳನ್ನು ದಾಟಿದೆ. ಒಟ್ಟಾರೆ ಎಲೆಕ್ಟ್ರಾನಿಕ್ಸ್ ರಫ್ತು ಕೂಡ ಶೇ.28ರಷ್ಟು ಏರಿಕೆ ಕಂಡಿದ್ದು, 46,584 ಕೋಟಿ ರೂಪಾಯಿ ತಲುಪಿದೆ' ಎಂದು ಉದ್ಯಮದ ಉನ್ನತ ಸಂಸ್ಥೆ ಹೇಳಿದೆ.
2022-23ರ ಹಣಕಾಸು ವರ್ಷದಲ್ಲಿ ಭಾರತ ಒಟ್ಟು 23.6 ಬಿಲಿಯನ್ ಮೌಲ್ಯದ ಎಲೆಕ್ಟ್ರಾನಿಕ್ಸ್‌ಅನ್ನು ರಫ್ತು ಮಾಡಿತ್ತು. ಇದರಲ್ಲಿ ಮೊಬೈಲ್ ಫೋನ್‌ಗಳ ರಫ್ತು ಪ್ರಮಾಣ ಶೇ. 11.1ರಷ್ಟಾಗಿತ್ತು. ಈ ಬಾರಿ ಅಂದರೆ, 2023-24ರ ಹಣಕಾಸು ವರ್ಷದಲ್ಲಿ ಒಟ್ಟು 26 ಬಿಲಿಯನ್ ಯುಎಸ್ ಡಾಲರ್ ಎಲೆಕ್ಟ್ರಾನಿಕ್ಸ್ ರಫ್ತುಅನ್ನು ಭಾರತ ಅಂದಾಜು ಮಾಡಿದ್ದು, ಇದರಲ್ಲಿ ಮೊಬೈಲ್ ಫೋನ್‌ಗಳ ರಫ್ತು ಪ್ರಮಾಣ 15 ಬಿಲಿಯನ್ ಯುಎಸ್ ಡಾಲರ್ ಆಗಿರಲಿದೆ.
"ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು 47 ಶೇಕಡಾಕ್ಕೆ ಹೋಲಿಸಿದರೆ, ಈ ವರ್ಷ, ಮೊಬೈಲ್ ಫೋನ್ ರಫ್ತು FY23-24 ರಲ್ಲಿ ಒಟ್ಟಾರೆ ಎಲೆಕ್ಟ್ರಾನಿಕ್ಸ್ ರಫ್ತಿನ ಶೇಕಡಾ 58 ರಷ್ಟನ್ನು ನಿರೀಕ್ಷಿಸಲಾಗಿದೆ' ICEA ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್ ಇನ್ ಇಂಡಿಯಾದ ಭಾಗವಾಗಿ ದೇಶದಲ್ಲಿ ವಿವಿಧ ಮೊಬೈಲ್ ಕಂಪಮಿಗಳ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಏರಿಕೆ ಮಾಡಲಾಗಿದೆ.
Made In India ಸ್ಮಾರ್ಟ್ ಪೋನ್ ಖರೀದಿ ಮಾಡಿರುವ ವಿಶ್ವದ ಟಾಪ್-10 ದೇಶಗಳು!
ಆಪಲ್ ಭಾರತದಲ್ಲಿ ವರ್ಷಕ್ಕೆ 50 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ, ಕೆಲವು ಉತ್ಪಾದನೆಯನ್ನು ಚೀನಾದಿಂದ ಹೊರಕ್ಕೆ ಬದಲಾಯಿಸುವ ಗುರಿಯನ್ನು ಹೊಂದಿದೆ. ಟೆಕ್ ದೈತ್ಯ ಮುಂದಿನ ಎರಡು ಮೂರು ವರ್ಷಗಳಲ್ಲಿ ಗುರಿಯನ್ನು ಸಾಧಿಸುವ ಗುರಿಯನ್ನು ಸಾಧಿಸುವ ಅಂದಾಜಿದೆ. ವರದಿಗಳ ಪ್ರಕಾರ ಹೆಚ್ಚುವರಿ ಹತ್ತಾರು ಮಿಲಿಯನ್ ಘಟಕಗಳನ್ನು ಯೋಜಿಸಲಾಗಿದೆ. ಆಪಲ್‌ನಿಂದ ಫಾಕ್ಸ್‌ಕಾನ್‌ವರೆಗೆ, ಕಂಪನಿಗಳು ಪೂರೈಕೆ ಸರಪಳಿ ವೈವಿಧ್ಯೀಕರಣವನ್ನು ಸಾಧಿಸಲು ಮತ್ತು ದೇಶದಲ್ಲಿ ಉತ್ಪಾದನೆಯ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ದೇಶೀಯ ಸಾಮರ್ಥ್ಯಗಳನ್ನು ಹತೋಟಿಗೆ ತರುವ ಗುರಿಯನ್ನು ಹೊಂದಿವೆ.
ಡಿಸೆಂಬರ್ ತಿಂಗಳ ಜಿಎಸ್‌ಟಿ ಕಲೆಕ್ಷನ್.. ಯಾವ ರಾಜ್ಯ ಫರ್ಸ್ಟು, ಯಾವ ರಾಜ್ಯ ಲಾಸ್ಟು?