ಕನ್ನಡ ನಾಮಫಲಕ ಹೋರಾಟದ ನಡುವೆ ಬೆಂಗಳೂರು ಪ್ಲಾಂಟ್ನಲ್ಲಿ461 ಕೋಟಿ ರೂ. ಹೂಡಿಕೆ ಘೋಷಿಸಿದ ಫಾಕ್ಸ್‌ಕಾನ್!
ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕದ ವಿಚಾರದಲ್ಲಿ ಹಿಂಸಾತ್ಮಕ ಹೋರಾಟ ನಡೆಸುತ್ತಿರುವ ನಡುವೆ ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಫಾಕ್ಸ್‌ಕಾನ್ ಕಂಪನಿಯು ಬೆಂಗಳೂರಿನ ಪ್ಲ್ಯಾಂಟ್‌ನಲ್ಲಿ ದೊಡ್ಡ ಮಟ್ಟದ ಹೂಡಿಕೆ ಘೋಷಣೆ ಮಾಡಿದೆ.
ಬೆಂಗಳೂರು (ಡಿ.28): ತೈವಾನೀಸ್ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳ ಪ್ರಮುಖ ಕಂಪನಿ ಫಾಕ್ಸ್‌ಕಾನ್, ಬೆಂಗಳೂರು ಮೂಲದ ಫಾಕ್ಸ್‌ಕಾನ್ ಪ್ರೆಸಿಷನ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ $ 55.29 ಮಿಲಿಯನ್ (ಸುಮಾರು ₹ 461 ಕೋಟಿ) ಹೂಡಿಕೆ ಮಾಡಿದ್ದಾಗಿ ತನ್ನ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ. ಕಂಪನಿಯು ತನ್ನ ಸಿಂಗಾಪುರ ಮೂಲದ ಅಂಗಸಂಸ್ಥೆ ಫಾಕ್ಸ್‌ಕಾನ್ ಸಿಂಗಾಪುರ್ ಪಿಟಿಇ ಲಿಮಿಟೆಡ್ ಮೂಲಕ ಈ ಹಣವನ್ನು ಹೂಡಿಕೆ ಮಾಡಿದೆ. ಫಾಕ್ಸ್‌ಕಾನ್ ಸಿಂಗಾಪುರವು ಸುಮಾರು 46,08,76,736 ಷೇರುಗಳನ್ನು ತಲಾ ₹ 10 ರಂತೆ ಸ್ವಾಧೀನಪಡಿಸಿಕೊಂಡಿದೆ, ಇದು ಫೈಲಿಂಗ್ ಪ್ರಕಾರ ಸುಮಾರು $ 55.29 ಮಿಲಿಯನ್ (₹ 460.87 ಕೋಟಿ) ಆಗಿದೆ. ಫಾಕ್ಸ್‌ಕಾನ್ ಪ್ರೆಸಿಷನ್ ಇಂಜಿನಿಯರಿಂಗ್ ಅನ್ನು ಸುಮಾರು ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಜುಲೈನಲ್ಲಿ, ಫಾಕ್ಸ್‌ಕಾನ್ ಕರ್ನಾಟಕದ ದೇವನಹಳ್ಳಿ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶದಲ್ಲಿ ತನ್ನ ಘಟಕಕ್ಕೆ ₹8,800 ಕೋಟಿ ಪೂರಕ ಘಟಕವನ್ನು ಸ್ಥಾಪಿಸಲು ಪ್ರಸ್ತಾಪ ಮಾಡಿದೆ. ದೇವನಹಳ್ಳಿಯಲ್ಲೂ ಇದಕ್ಕಾಗಿ 300 ಎಕರೆ ಜಾಗವನ್ನು ಖರೀದಿ ಮಾಡಿದೆ.
ಕರ್ನಾಟಕ ಸರ್ಕಾರವು ಈ ಹಿಂದೆ ಹೊರಡಿಸಿದ್ದ ಪ್ರಕಟಣೆಯ ಪ್ರಕಾರ, ಫಾಕ್ಸ್‌ಕಾನ್ ಮೊದಲ ಹಂತದಲ್ಲಿ ದೇವನಹಳ್ಳಿಯಲ್ಲಿ ಸುಮಾರು 50,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. 2023r ಮಾರ್ಚ್ 20 ರಂದು ಕರ್ನಾಟಕ ಸರ್ಕಾರವು ಫಾಕ್ಸ್‌ಕಾನ್‌ನೊಂದಿಗೆ ಎಂಒಯುಗೆ ಸಹಿ ಹಾಕಿತು, ಇದರಲ್ಲಿ ಕಂಪನಿಯು ಮೊಬೈಲ್ ಉತ್ಪಾದನಾ ಘಟಕದಲ್ಲಿ ಹೂಡಿಕೆ ಮಾಡಲು ಬದ್ಧವಾಗಿದೆ, ಇದು ಮೊದಲ ಹಂತದಲ್ಲಿ 50,000 ಜನರಿಗೆ ಉದ್ಯೋಗಾವಕಾಶಗಳನ್ನು ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ಒಳಗೆ ರಾಜ್ಯದಲ್ಲಿ ಒಂದು ಲಕ್ಷ ಉದ್ಯೋಗಾವಕಾಶಗಳನ್ನು ನೀಡುವುದಾಗಿ ತಿಳಿಸಿತ್ತು.
ದೇವನಹಳ್ಳಿಯ ಪ್ಲ್ಯಾಂಟ್‌ನಲ್ಲಿ ಉತ್ಪಾದನೆಯು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ, ಹೂಡಿಕೆಗಳು ಮೂರು ಹಂತಗಳಲ್ಲಿ ನಡೆಯಲಿದೆ. ಫಾಕ್ಸ್‌ಕಾನ್ ಹಂತ 1 ರಲ್ಲಿ (2023-2024) 3,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತದೆ, ನಂತರ 2 ನೇ ಹಂತದಲ್ಲಿ (2025-2026) 4,000 ಕೋಟಿ ರೂಪಾಯಿಗಳನ್ನು ಮತ್ತು ಹಂತ 3 ರಲ್ಲಿ (2026-2027) 1,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಬೃಹತ್ ಐಫೋನ್ ಘಟಕ: ತೈವಾನ್ ಮೂಲದ ಫಾಕ್ಸ್‌ಕಾನ್ ಜತೆ ಸಿಎಂ ಬೊಮ್ಮಾಯಿ ಸಮ್ಮುಖ ಒಪ್ಪಂದ
ಡಿಸೆಂಬರ್ 2025 ರ ವೇಳೆಗೆ ಒಂದು ಲಕ್ಷ ಯೂನಿಟ್ ಐಫೋನ್‌ಗಳು, ಡಿಸೆಂಬರ್ 2026 ರ ವೇಳೆಗೆ 50 ಲಕ್ಷ ಯೂನಿಟ್‌ಗಳು, ಡಿಸೆಂಬರ್ 2027 ರ ವೇಳೆಗೆ ಒಂದು ಕೋಟಿ ಮತ್ತು ಡಿಸೆಂಬರ್ 2028 ರ ವೇಳೆಗೆ ಎರಡು ಕೋಟಿ ಉತ್ಪಾದನಾ ಗುರಿಯನ್ನು ಕಂಪನಿ ಇಟ್ಟಿದೆ. ಕಂಪನಿಯ ಈ ಕ್ರಮವು ಚೀನಾದಿಂದ ಉತ್ಪಾದನೆಯನ್ನು ಹೊರಗಿಡಲು ಅದರ 'ಚೀನಾ ಪ್ಲಸ್ ಒನ್' ಕಾರ್ಯತಂತ್ರದ ಭಾಗವಾಗಿದೆ. ಭಾರತದಲ್ಲಿ ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಹೊರತುಪಡಿಸಿ Apple iPhone ಘಟಕಗಳ ಪ್ರಾಥಮಿಕ ಪೂರೈಕೆದಾರರಲ್ಲಿ ಫಾಕ್ಸ್‌ಕಾನ್ ಒಂದಾಗಿದೆ.
13,000 ಕನ್ನಡಿಗರಿಗೆ ಉದ್ಯೋಗ ನೀಡಲಿದೆ ಫಾಕ್ಸ್‌ಕಾನ್ ಸಂಸ್ಥೆ: 5,000 ಕೋಟಿ ರೂ. ಹೂಡಿಕೆಗೆ ಒಪ್ಪಂದ