ತೆರಿಗೆ ರಿಟರ್ನ್ಸ್‌ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ!

ತೆರಿಗೆ ರಿಟನ್ಸ್‌ರ್‍ನಲ್ಲಿ ದೊಡ್ಡ ವ್ಯವಹಾರ ತಿಳಿಸಬೇಕಾಗಿಲ್ಲ| - ಹಣಕಾಸು ಸಂಸ್ಥೆಗಳಿಂದಲೇ ಮಾಹಿತಿ ಲಭ್ಯ: ಕೇಂದ್ರ

Taxpayers need not disclose high value transactions in income tax return

ನವದೆಹಲಿ(ಆ.18): ಈ ವರ್ಷದಿಂದ ಆದಾಯ ತೆರಿಗೆ ಪಾವತಿದಾರರು ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳನ್ನು ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸುವಾಗ ಪ್ರತ್ಯೇಕವಾಗಿ ತಿಳಿಸಬೇಕಾಗುತ್ತದೆ ಎಂದು ಹರಡಿದ್ದ ಸುದ್ದಿ ನಿಜವಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೇರ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ ನಂತರ ಈ ವರ್ಷದಿಂದ 26ಎಎಸ್‌ ಫಾಮ್‌ರ್‍ನಲ್ಲಿ ಬದಲಾವಣೆ ತರಲಾಗುತ್ತಿದ್ದು, ಜನರು 20,000 ರು.ಗಿಂತ ಹೆಚ್ಚಿನ ಹೋಟೆಲ್‌ ಬಿಲ್‌ ಪಾವತಿ, 50,000 ರು.ಗಿಂತ ಹೆಚ್ಚಿನ ಜೀವ ವಿಮೆ ಪ್ರೀಮಿಯಂ, 1 ಲಕ್ಷ ರು.ಗಿಂತ ಹೆಚ್ಚಿನ ಶಾಲಾ ಶುಲ್ಕ, ದುಬಾರಿ ವಿಮಾನ ಪ್ರಯಾಣದ ವಿವರಗಳನ್ನು ತೆರಿಗೆ ಇಲಾಖೆಗೆ ಪ್ರತ್ಯೇಕವಾಗಿ ಎಸ್‌ಎಫ್‌ಟಿ ಎಂಬ ಫಾಮ್‌ರ್‍ನಲ್ಲಿ ತಿಳಿಸಬೇಕಾಗುತ್ತದೆ ಎಂದು ಸುದ್ದಿ ಹರಡಿತ್ತು.

ವರ್ಕ್ ಫ್ರಂ ಹೋಂ ಎಫೆಕ್ಟ್‌ : ಈ ಬಾರಿ ನಿಮಗೆ ಹೆಚ್ಚು ತೆರಿಗೆ!

ಈ ಕುರಿತು ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆಯ ಉನ್ನತ ಮೂಲಗಳು, ಎಸ್‌ಎಫ್‌ಟಿ ಅಡಿ ವಿವರಗಳನ್ನು ಸಲ್ಲಿಸಬೇಕಾದವರು ಹಣಕಾಸು ಸಂಸ್ಥೆಗಳೇ ಹೊರತು ಜನಸಾಮಾನ್ಯರಲ್ಲ. ಹಣಕಾಸು ಸಂಸ್ಥೆಗಳಿಗೆ ಜನರು ನೀಡುವ ಪಾನ್‌ ಸಂಖ್ಯೆ, ಆಧಾರ್‌ ಇತ್ಯಾದಿಗಳ ಮೂಲಕ ಜನರು ನಡೆಸುವ ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳನ್ನು ತಿಳಿದುಕೊಳ್ಳುವ ವ್ಯವಸ್ಥೆ ಈಗಾಗಲೇ ಆದಾಯ ತೆರಿಗೆ ಇಲಾಖೆಯಲ್ಲಿದೆ. ಹೀಗಾಗಿ ತೆರಿಗೆ ರಿಟನ್ಸ್‌ರ್‍ ಸಲ್ಲಿಸುವಾಗ ಇಂತಹ ಮಾಹಿತಿಗಳನ್ನು ಪ್ರತ್ಯೇಕವಾಗಿ ಕೇಳುವುದಿಲ್ಲ. ತೆರಿಗೆ ಪಾವತಿದಾರರು ಅಧಿಕ ಮೊತ್ತದ ಹಣಕಾಸು ವ್ಯವಹಾರಗಳನ್ನು ತಿಳಿಸುವ ಅಗತ್ಯವಿಲ್ಲ ಎಂದು ತಿಳಿಸಿವೆ.

Latest Videos
Follow Us:
Download App:
  • android
  • ios