ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್‌: ಹಿಂಡನ್‌ಬರ್ಗ್‌ ಹೇಳಿದಂತೆ ಅದಾನಿ ಅಕ್ರಮ ಎಸಗಿಲ್ಲ: ಸುಪ್ರೀಂ ಕೋರ್ಟ್‌

ಅಮೆರಿಕದ 'ಹಿಂಡನ್‌ಬರ್ಗ್' ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ಸಮೂಹದ ಬಗ್ಗೆ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು, ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್‌ ನೀಡಿದೆ.

Supreme Court gives clean chit to Adani Group court said As Hindenburger said, Adani has not committed any illegality akb

ನವದೆಹಲಿ: ಅಮೆರಿಕದ 'ಹಿಂಡನ್‌ಬರ್ಗ್' ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ಸಮೂಹದ ಬಗ್ಗೆ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು, ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್‌ ನೀಡಿದೆ ಹಾಗೂ ಈ ವಿಚಾರದಲ್ಲಿ ಮಾರುಕಟ್ಟೆನಿಯಂತ್ರಕ 'ಸೆಬಿ' ಕೂಡ ಯಾವುದೇ ವೈಫಲ್ಯ ತೋರಿಲ್ಲ ಎಂದಿದೆ. ದೇಶದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದ್ದ ಈ ಪ್ರಕರಣದಲ್ಲಿ, ಈಗ ಸಮಿತಿ ವರದಿಯು ಅದಾನಿಗೆ ಹಾಗೂ ಸರ್ಕಾರಕ್ಕೆ ಭಾರಿ ನಿರಾಳತೆ ಉಂಟು ಮಾಡಿದೆ. ಆದರೆ ಅಕ್ರಮದ ಆರೋಪ ಮಾಡುತ್ತಿದ್ದ ವಿಪಕ್ಷಗಳಿಗೆ ಭಾರಿ ಹಿನ್ನಡೆಯಾಗಿದೆ.

ಆದರೆ ಹಿಂಡನ್‌ಬರ್ಗ್ ವರದಿ (Hindenburg report) ಬಹಿರಂಗಕ್ಕೂ ಮುನ್ನ, ಅದಾನಿ ಸಮೂಹದ ಷೇರುಗಳನ್ನು ಭಾರೀ ಪ್ರಮಾಣದಲ್ಲಿ ಶಾರ್ಟ್‌ ಮಾಡಲಾಗಿತ್ತು. ವರದಿ ಪ್ರಕಟಗೊಂಡು ಷೇರು ಬೆಲೆ ಕುಸಿತದ ಬಳಿಕ ಅವುಗಳನ್ನು ಖರೀದಿಸಿ ಭಾರೀ ಲಾಭ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 4 ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ಒಂದು ಕಾರ್ಪೊರೆಟ್‌ ಸಂಸ್ಥೆ ಮತ್ತು ಓರ್ವ ವ್ಯಕ್ತಿ ಭಾಗಿಯಾಗಿದ್ದಾರೆ ಎಂದು ವರದಿ ಹೇಳಿದೆ.

ಮತ್ತೊಮ್ಮೆ ಭಾರೀ ಕುಸಿತ ದಾಖಲಿಸಿದ ಅದಾನಿ ಗ್ರೂಪ್ ಷೇರುಗಳು, ಕಾರಣವೇನು ಗೊತ್ತಾ?

ಸುಪ್ರೀಂ ಕೋರ್ಟ್ (Supreme Court) ನೇಮಿಸಿದ್ದ ನ್ಯಾ. ಎ.ಎಂ. ಸಪ್ರೇ (A.M. sapre) ನೇತೃತ್ವದ 6 ತಜ್ಞರ ಸಮಿತಿ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ, ‘ಅದಾನಿ ಗ್ರೂಪ್‌ ಷೇರುಗಳ ಬೆಲೆಯನ್ನು ಹೆಚ್ಚೂ ಕಡಿಮೆ ಮಾಡಿ ಯಾವುದೇ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ತನ್ನ ಚಿಲ್ಲರೆ ಹೂಡಿಕೆದಾರರ ಹಿತ ಕಾಯಲು ಹಾಗೂ ಅವರ ವಿಶ್ವಾಸ ವೃದ್ಧಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದೆ. ಇದಲ್ಲದೆ, ಅದಾನಿ ಸಮೂಹ ತೆಗೆದುಕೊಂಡ ಕ್ರಮಗಳು ಷೇರುಪೇಟೆಯಲ್ಲಿ ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡಿದೆ ಮತ್ತು ಸಮೂಹದ ಷೇರುಗಳು ಈಗ ಸ್ಥಿರವಾಗಿವೆ ಎಂದು ಸಮಿತಿ ಹೇಳಿದೆ.

ಅದಾನಿ ಸಮೂಹ ಯಾವುದೇ ಕೃತಕ ವ್ಯಾಪಾರ ನಡೆಸಿಲ್ಲ ಹಾಗೂ ಅದರ ಲಾಭ ಪಡೆಯಲು ಯತ್ನಿಸಿಲ್ಲ. ಈ ಹಿಂದೆಯೂ ಕೂಡ ಸಮೂಹವು ಈ ಥರದ ವ್ಯಾಪಾರದಲ್ಲಿ ತೊಡಗಿರುವ ಯಾವುದೇ ನಿದರ್ಶನ ಲಭ್ಯವಾಗಿಲ್ಲ. ಷೇರುದಾರರಿಗೆ (Share Holders) ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯ ಕಂಡು ಬಂದಿಲ್ಲ ಹಾಗೂ ನಿಯಮ ಪಾಲನೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದೂ ಅದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಗುಜರಾತ್‌ನಲ್ಲಿ ಅದಾನಿ ಗ್ರೂಪ್‌ನ ಘಟಕ ಸ್ಥಗಿತ: ಸಂಪನ್ಮೂಲ ಕ್ರೋಢೀಕರಿಸಲು ಕಸರತ್ತು

ಇದೇ ವೇಳೆ, ಷೇರುಪೇಟೆ ನಿಯಂತ್ರಕ 'ಸೆಬಿ ಕೂಡ ತನ್ನ ಸಂದೇಹವನ್ನು ಸಾಬೀತು ಮಾಡಿ, ಇದನ್ನು ಪ್ರಕರಣವಾಗಿ ಪರಿವರ್ತಿಸುವಲ್ಲಿ ಯಶ ಕಂಡಿಲ್ಲ. ಅದಾನಿ ಸಮೂಹದ ಷೇರುಗಳಲ್ಲಿನ ವಿದೇಶಿ ಬಂಡವಾಳ ಹೂಡಿಕೆದಾರರು ಸೆಬಿಯ ನಿಯಮಗಳಿಗೆ ಬದ್ಧರಾಗಿದ್ದಾರೆ ಎಂದು ಸಮಿತಿ ಹೇಳಿದೆ.

ಏನಿದು ಪ್ರಕರಣ?:

ಅಮೆರಿಕದ ಹಿಂಡನ್‌ಬರ್ಗ್ ಎಂಬ ಸಮೂಹವು ಅದಾನಿ ಸಮೂಹದ ಮೇಲೆ ಷೇರುಪೇಟೆಯಲ್ಲಿ ಹೇರಾಫೇರಿ ಮಾಡಿದ ಆರೋಪ ಹೊರಿಸಿತ್ತು. ಈ ರೀತಿ ಅಕ್ರಮಗಳನ್ನು ಎಸಗುವ ಮೂಲಕ ಷೇರು ಬೆಲೆಗಳಲ್ಲಿ ಭಾರಿ ವ್ಯತ್ಯಾಸ ಮಾಡಿ ಅಕ್ರಮ ಲಾಭ ಗಳಿಸಿದ ಆರೋಪವನ್ನು ಹಿಂಡನ್‌ಬರ್ಗ್ ಮಾಡಿತ್ತು. ಇದರ ಬೆನ್ನಲ್ಲೇ ಅದಾನಿ ಸಮೂಹದ ಮೌಲ್ಯ ಜಾಗತಿಕ ಪೇಟೆಯಲ್ಲಿ ಭಾರಿ ಕುಸಿತ ಕಂಡಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟು, ಪ್ರಕರಣದ ವಿಚಾರಣೆ ಆರಂಭಿಸಿತ್ತು. ನಿವೃತ್ತ ನ್ಯಾಯಾಧೀಶ ನ್ಯಾ. ಎ.ಎಂ. ಸಪ್ರೆ ನೇತೃತ್ವದಲ್ಲಿ 6 ಸದಸ್ಯರ ಸಮಿತಿ ರಚಿಸಿ ಆರೋಪಗಳ ಪರಿಶೀಲನೆಗೆ ಸೂಚಿಸಿತ್ತು. ಸಮಿತಿಯಲ್ಲಿ ಇಸ್ಫೋಸಿಸ್‌ ಮಾಜಿ ಸಂಸ್ಥಾಪಕ ಸದಸ್ಯ ನಂದನ್‌ ನಿಲೇಕಣಿ (Nandan Nilekani) ಕೂಡ ಇದ್ದರು. ಇದಲ್ಲದೆ ಮಾರುಕಟ್ಟೆನಿಯಂತ್ರಕ 'ಸೆಬಿ'ಗೆ ಕೂಡ ಪ್ರತ್ಯೇಕ ತನಿಖೆ ನಡೆಸಲು ಸೂಚಿಸಿತ್ತು. ಈ ಪೈಕಿ ನ್ಯಾಯಾಧೀಶರ ಸಮಿತಿ ವರದಿ ಸಲ್ಲಿಸಿದ್ದರೆ, ಸೆಬಿಗೆ ವರದಿ ಸಲ್ಲಿಸಲು ಆ.14 ಕಡೆಯ ದಿನವಾಗಿದೆ.
 

Latest Videos
Follow Us:
Download App:
  • android
  • ios