ಮತ್ತೊಮ್ಮೆ ಭಾರೀ ಕುಸಿತ ದಾಖಲಿಸಿದ ಅದಾನಿ ಗ್ರೂಪ್ ಷೇರುಗಳು, ಕಾರಣವೇನು ಗೊತ್ತಾ?

ಅದಾನಿ ಸಮೂಹದ ಷೇರುಗಳ ಮೌಲ್ಯ ಹಿಂಡೆನ್ ಬರ್ಗ್ ವರದಿ ಬಳಿಕ ಭಾರೀ ಇಳಿಕೆ ಕಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಚೇತರಿಕೆ ದಾಖಲಿಸಿತ್ತು. ಈಗ ಮತ್ತೆ ಅದಾನಿ ಗ್ರೂಪ್ ನ ಕೆಲವು ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಆರ್ಹ ಸಾಂಸ್ಥಿಕ ಹೂಡಿಕೆದಾರರಿಂದ  21 ಸಾವಿರ ಕೋಟಿ ರೂ. ಬಂಡವಾಳವನ್ನು ಸಂಗ್ರಹಿಸುವ ಯೋಜನೆಯನ್ನು ಅದಾನಿ ಎಂಟರ್ ಪ್ರೈಸಸ್ ಹಾಗೂ ಅದಾನಿ ಟ್ರಾನ್ಸ್ ಮಿಷನ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 
 

Most Adani shares fall after announcement of Rs 21000 cr fundraise anu

ಮುಂಬೈ (ಮೇ 15): ಅದಾನಿ ಗ್ರೂಪ್ ಬಹುತೇಕ ಸಂಸ್ಥೆಗಳ ಷೇರುಗಳು ಇಂದು (ಸೋಮವಾರ) ಇಳಿಕೆ ಕಂಡಿವೆ. ಆರ್ಹ ಸಾಂಸ್ಥಿಕ ಹೂಡಿಕೆದಾರರಿಂದ  21 ಸಾವಿರ ಕೋಟಿ ರೂ. ಬಂಡವಾಳವನ್ನು ಸಂಗ್ರಹಿಸುವ ಯೋಜನೆಯನ್ನು ಅದಾನಿ ಎಂಟರ್ ಪ್ರೈಸಸ್ ಹಾಗೂ ಅದಾನಿ ಟ್ರಾನ್ಸ್ ಮಿಷನ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಎರಡೂ ಸಂಸ್ಥೆಗಳ ಷೇರುಗಳು ತಲಾ ಶೇ.3ರಷ್ಟು ಇಳಿಕೆ ದಾಖಲಿಸಿದ್ದರೆ, ಅದಾನಿ ಪವರ್ ಷೇರುಗಳು ಶೇ.2.43ರಷ್ಟು ಇಳಿಕೆ ಕಂಡಿವೆ. ಇನ್ನು ಅದಾನಿ ಗ್ರೀನ್ಸ್ ಷೇರುಗಳು ಶೇ.1.60 ಹಾಗೂ ಅದಾನಿ ಪೋರ್ಟ್ಸ್ ಷೇರುಗಳು ಶೇ.0.59ರಷ್ಟು ಇಳಿಕೆ ಕಂಡಿವೆ. ಷೇರು ಮಾರುಕಟ್ಟೆಯ ಪ್ರಾರಂಭಿಕ ಟ್ರೇಡ್ ನಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳಲ್ಲಿ ಇಳಿಕೆ ಕಂಡುಬಂದಿದೆ. ಶನಿವಾರ ನಡೆದ ಅದಾನಿ ಎಂಟರ್ ಪ್ರೈಸಸ್ ಆಡಳಿತ ಮಂಡಳಿ ಸಭೆಯಲ್ಲಿ 12,500 ಕೋಟಿ ರೂ.ಬಂಡವಾಳ  ಸಂಗ್ರಹಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಇನ್ನೊಂದೆಡೆ ಅದಾನಿ ಟ್ರಾನ್ಸ್ ಮಿಷನ್ ಆಡಳಿತ ಮಂಡಳಿ ಕ್ಯುಐಪಿ ಮೂಲಕ 8,500 ಕೋಟಿ ರೂ. ಸಂಗ್ರಹಿಸುವ ನಿರ್ಧಾರಕ್ಕೆ ಅದಾನಿ ಟ್ರಾನ್ಸ್ ಮಿಷನ್ ಮಂಡಳಿ ಒಪ್ಪಿಗೆ ನೀಡಿತ್ತು.

ಅದಾನಿ ಗ್ರೂಪ್ ಎನರ್ಜಿ ಕೂಡ ಬಂಡವಾಳ ಸಂಗ್ರಹಿಸುವ ನಿರ್ಧಾರ ಕೈಗೊಳ್ಳಲು ಮೇ 13ರಂದು ಸಭೆ ಆಯೋಜಿಸಿತ್ತು. ಆದರೆ, ಈ ಸಭೆಯನ್ನು ಮೇ 24ಕ್ಕೆ ಮುಂದೂಡಲಾಗಿತ್ತು.ಕ್ಯುಐಪಿ ಮೂಲಕ ಅದಾನಿ ಗ್ರೂಪ್ ಕಂಪನಿಗಳು ಷೇರುದಾರರ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

Adani-Hindenburg Row: ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ತಜ್ಞರ ಸಮಿತಿ!

ಜನವರಿಯಲ್ಲಿ ಹಿಂಡನ್ ಬರ್ಗ್ ರಿಸರ್ಚ್ ವರದಿ ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಫೆಬ್ರವರಿಯಲ್ಲಿ ಅದಾನಿ ಎಂಟರ್ ಪ್ರೈಸರ್ಸ್ ಐಪಿಒ ಮೂಲಕ 20,000 ಕೋಟಿ ರೂ. ಬಂಡವಾಳ ಸಂಗ್ರಹಿಸಲು ನಿರ್ಧರಿಸಿತ್ತು. ಅದಾನಿ ಗ್ರೂಪ್ ಷೇರುಗಳ ಬೆಲೆಯಲ್ಲಿ ಏರಿಳಿತ ಮಾಡಲಾಗಿದ ಎಂದು ವರದಿ ಆರೋಪಿಸಿತ್ತು. ಅದಾನಿ ಗ್ರೂಪ್ ಗೆ ಜಿಕ್ಯುಜಿ ಎಸ್ ಹೂಡಿಕೆ ಬಳಿಕ ಷೇರುಗಳು ಮರಳಿ ಹಳಿಗೆ ಬಂದಿವೆ' ಎಂದು ವೆಲ್ತ್ ಮಿಲ್ಸ್ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಕ್ರಾಂತಿ ಬಥ್ನಿ ಬ್ಲೂಮ್ ಬರ್ಗ್ ಗೆ ಮಾಹಿತಿ ನೀಡಿದ್ದಾರೆ. ಅದಾನಿ ಎಂಟರ್ ಪ್ರೈಸರ್ಸ್ ಇಂದು ನಿಫ್ಟಿ 50 ಸೂಚ್ಯಂಕದಲ್ಲಿ ಅತೀದೊಡ್ಡ ನಷ್ಟ ಅನುಭವಿಸಿದ ಸಂಸ್ಥೆ ಆಗಿದೆ.

ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್‌ ಅದಾನಿ

ಅಮೆರಿಕದ ಹಿಂಡನ್ ಬರ್ಗ್ ಸಂಸ್ಥೆಯ ವರದಿಯಿಂದಾಗಿ ಅದಾನಿ ಸಮೂಹ 11.55 ಲಕ್ಷ ಕೋಟಿ ರೂ ನಷ್ಟು ಮೌಲ್ಯ ಕಳೆದುಕೊಂಡಿತ್ತು. ಹಿಂಡೆನ್ ಬರ್ಗ್  ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳು ಮಾರುಕಟ್ಟೆಯಲ್ಲಿ ದಯನೀಯ ಸ್ಥಿತಿಗೆ ಬಂದು ತಲುಪಿದ್ದವು. ಹೂಡಿಕೆದಾರರ ಹಾಗೂ ಜನರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸುವ ದೃಷ್ಟಿಯಿಂದ ಅದಾನಿ ಗ್ರೂಪ್‌, ದುಬೈ, ಲಂಡನ್‌ ಸೇರಿದಂತೆ ಅಮೆರಿಕದ ಕೆಲವು ಪ್ರಮುಖ ನಗರಗಳಲ್ಲಿ ರೋಡ್‌ಶೋ ನಡೆಸಲು ಮುಂದಾಗಿತ್ತು. ಫೆಬ್ರವರಿ ಕೊನೆಯಲ್ಲಿ ಸಿಂಗಾಪುರ ಹಾಗೂ ಹಾಂಕಾಂಗ್‌ನಲ್ಲಿ ಅದಾನಿ ಗ್ರೂಪ್‌ನಿಂದ ರೋಡ್‌ ಶೋ ನಡೆದಿತ್ತು. ಅಮೆರಿಕದ ಶಾರ್ಟ್‌ ಸೆಲ್ಲರ್‌ ವರದಿಯಿಂದ ಕಂಪನಿಯ ವ್ಯವಹಾರಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕೃತಕವಾಗಿ ಷೇರುಗಳ ಮೌಲ್ಯ ಏರಿಕೆ, ಅವ್ಯವಹಾರ ಹಾಗೂ ಆರ್ಥಿಕ ಲೋಪದೋಷಗಳನ್ನು ಮಾಡಿದ ಆರೋಪಗಳನ್ನು ಹಿಂಡೆನ್‌ಬರ್ಗ್‌, ಅದಾನಿ ಗ್ರೂಪ್‌ ಮೇಲೆ ಹೊರಿಸಿತ್ತು. ಆರಂಭದಲ್ಲಿ ಈ ಬಗ್ಗೆ ಕಂಪನಿ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ, ಕಂಪನಿಯ ಷೇರುಗಳು ದಿನದಿಂದ ದಿನಕ್ಕೆ ಇಳಿಕೆಯಾದಾಗ ಹಾಗೂ ಸುಪ್ರೀಂ ಕೋರ್ಟ್‌ ಕೂಡ ತನಿಖೆಗೆ ಅದೇಶ ನೀಡಿದಾಗ, ಅದಾನಿ ಗ್ರೂಪ್‌ ಹೂಡಿಕೆದಾರರ ವಿಶ್ವಾಸ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಆರಂಭಿಸಿತ್ತು.
 

Latest Videos
Follow Us:
Download App:
  • android
  • ios