Sundar Pichai Birthday: ಆಲ್ಫಬೆಟ್ CEOಗೆ ಶುಭಾಶಯಗಳ ಮಹಾಪೂರ!
* ವಿಶ್ವದ ನಂಬರ್ ವನ್ ಸರ್ಚ್ ಇಂಜಿನ್ ಗೂಗಲ್‌ನ CEO ಸುಂದರ್ ಪಿಚೈಗೆ ಹುಟ್ಟುಹಬ್ಬದ ಸಂಭ್ರಮ
* ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಹುಡುಗ ಪಿಚೈ ಹೆಸರು ವಿಶ್ವಕ್ಕೇ ಚಿರಪರಿಚಿತ
* ವಿಶ್ವದ ಅತೀ ಹೆಚ್ಚು ಸ್ಯಾಲರಿ ಪಡೆಯುವ CEO ಆದರೂ ಸರಳತೆಗೇ ಫೇಮಸ್ ಸುಂದರ್ ಪಿಚೈ
ವಾಷಿಂಗ್ಟನ್(ಜೂ.10): ವಿಶ್ವದ ನಂಬರ್ ವನ್ ಸರ್ಚ್ ಇಂಜಿನ್ Googleನ CEO ಸುಂದರ್ ಪಿಚೈ ಇಂದು,ಜೂನ್ 10ರಂದು ತಮ್ಮ 49ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಇಂದಿನ ಕಾಲದಲ್ಲಿ ಸುಂದರ್ ಪಿಚೈ ಅಂದ್ರೆ ಯಾರು ಎಂದು ತಿಳಿಯದ ವ್ಯಕ್ತಿ ಯಾರೂ ಬಹುಶಃ ಇರಲಿಲಕ್ಕಿಲ್ಲ.ತಮ್ಮ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರ ಬಯಸುವ ಪ್ರತಿಯೊಬ್ಬ ಯುವಕ/ಯುವತಿಗೂ ಸುಂದರ್ ಪಿಚೈ ಪ್ರೇರಣೆಯಾಗಿದ್ದಾರೆ.
1972ರ ಜೂನ್ 10ರಂದು ತಮಿಳುನಾಡಿನ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸುಂದರ್ ಪಿಚೈ ತಮ್ಮ ಸ್ವಂತ ಪರಿಶ್ರಮದಿಂದ ಇಂದು ಓರ್ವ ಅಂತಾರಾಷ್ಟ್ರೀಯ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಅವರ ಸರಳ ಸ್ವಭಾವ ಎಲ್ಲರನ್ನೂ ವಿಶೇಷವಾಗಿ ಸೆಳೆಯುತ್ತದೆ.
ಸುಂದರ್ ಪಿಚೈ, ಅಂಜಲಿ ಲವ್ ಸ್ಟೋರಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ಈ ಸ್ಟೋರಿ!
ತಮಿಳುನಾಡಿನ ಹುಡುಗ
ಸುಂದರ್ ಪಿಚೈ ತಂದೆ ಬ್ರಿಟಿಷ್ ಕಂಪನಿ ಜಿಇಸಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹತ್ತನೇ ತರಗತಿವರೆಗೆ ಚೆನ್ನೈನಲ್ಲೇ ಕಲಿತ ಸುಂದರ್ ಪಿಚೈ ಬಳಿಕ ಐಐಟಿ ಖಡಗ್ಪುರದಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದರು. ಅತ್ಯಂತ ಮೇಧಾವಿಯಾಗಿರುವ ಪಿಚೈ ಯಾವತ್ತೂ ತನ್ನ ಬ್ಯಾಚ್‌ನ ಟಾಪರ್ ಆಗಿರುತ್ತಿದ್ದರು. ಐಐಟಿಯಲ್ಲಿ ಶಿಕ್ಷಣ ಪೂರೈಸಿದ ಪಿಚೈ, ಮುಂದಿನ ಶಿಕ್ಷಣಕ್ಕಾಗಿ ಅಮೆರಿಕದ ಸ್ಯಾನ್‌ಪೋರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಪಿಚೈ ಅವರು, ಅಮೆರಿಕಾಗೆ ತೆರಳಲು ತನ್ನ ತಂದೆ ಖರೀದಿಸಿದ್ದ ವಿಮಾನದ ಟಿಕೆಟ್ ಬೆಲೆ ಅವರ ಇಡೀ ಒಂದು ವರ್ಷದ ಸ್ಯಾಲರಿಯಾಗಿತ್ತೆಂಬ ವಿಚಾರವನ್ನು ತಿಳಿಸಿದ್ದರು.
ವಿಶ್ವದ ಪ್ರಭಾವಶಾಲಿ ವ್ಯಕ್ತಿ
ಟೈಮ್ಸ್ ಮ್ಯಾಗಜೀನ್ ಬಿಡುಗಡೆಗೊಳಿಸಿದ 2020ರ ವಿಶ್ವದ ನೂರು ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಸುಂದರ್ ಪಿಚೈ ಹೆಸರೂ ಇತ್ತೆಂಬುವುದು ಉಲ್ಲೇಖನೀಯ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಅವರು 2004ರಲ್ಲಿ ಮ್ಯಾನೇಜ್ಮೆಂಟ್ ಎಕ್ಸಿಕ್ಯುಟಿವ್ ಆಗಿ ಗೂಗಲ್‌ಗೆ ಸೇರಿದರಾದರೂ, 2015ರಲ್ಲಿ ಅವರನ್ನು Google ಸಿಇಒ ಆಗಿ ನೇಮಕ ಮಾಡಲಾಯ್ತು. ಸುಂದರ್ ಪಿಚೈ ಕಳೆದ ಹದಿನಾರು ವರ್ಷಗಳಿಂದ Googleನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ಕೋಟ್ಯಾಂತರ ಭಾರತೀಯರಿಗೆ ಹೆಮ್ಮೆ ಹಾಘೂ ಪ್ರೇರಣೆಯಾಗಿದ್ದಾರೆ.
ಭಾರತದ ಮಹಿಳಾ ಉದ್ಯಮಿಗಳಿಗೆ ನೆರವು ಘೋಷಿಸಿದ ಗೂಗಲ್
ಅತೀ ಹೆಚ್ಚು ವೇತನ ಪಡೆಯುವ ಸಿಇಒ
2015 ರ ಆಗಸ್ಟ್ 10ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕ ಮಾಡಲಾಯ್ತು. 2019ರಲ್ಲಿ ಅವರನ್ನು ಗೂಗಲ್‌ನ ಮಾತೃಸಂಸ್ಥೆ Alphabetನ ಸಿಇಒ ಹೊಣೆಯನ್ನೂ ವಹಿಸಲಾಯ್ತು. Alphabet ಸಿಇಒ ಆದ ಬಳಿಕ ಪಿಚೈ ಸ್ಯಾಲರಿ ಮತ್ತಷ್ಟು ಹೆಚ್ಚು ಮಾಡಲಾಯ್ತು. ಇಂದು ಅವರು ವಿಶ್ವದಲ್ಲೇ ಅತೀ ಹೆಚ್ಚು ಸ್ಯಾಲರಿ ಪಡೆಯುವ ಸಿಇಒ ಆಗಿ ಗುರುತಿಸಿಕೊಂಡಿಸಿದ್ದಾರೆ. 2020 ರಲ್ಲಿ ಸುಂದರ್ ಪಿಚೈ ಅವರ ಬೇಸಿಕ್ ಸ್ಯಾಲರಿಯೇ 15 ಕೋಟಿ ರೂಪಾಯಿ(20 ಲಕ್ಷ ಡಾಲರ್) ಆಗಿತ್ತು. ಅಲ್ಲದೇ ಅನ್ಯ ಭತ್ಯೆ ರೂಪದಲ್ಲಿ 37 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಿಗುತ್ತಿತ್ತು. ಇವೆರಡನ್ನೂ ಸೇರಿಸಿದರೆ ಅವರ ಒಟ್ಟು ವೇತನ 52 ಕೋಟಿ ಆಗಿದೆ.
ಶುಭಾಶಯಗಳ ಮಹಾಪೂರ:
ಇನ್ನು ಗೂಗಲ್ ದಿಗ್ಗಜನ ಹುಟ್ಟುಹಬ್ಬಕ್ಕೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಸೇರಿದಂತೆ ಅನೇಕ ನೆಟ್ಟಿಗರು ಶುಭ ಕೋರಿದ್ದಾರೆ. ಗೂಗಲ್ ಸಿಇಒಗೆ ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನವಾಗಿ ವಿಶ್ ಮಾಡಿದ್ದು, ಟ್ವಿಟರ್‌ನಲ್ಲಿ ಸುಂದರ್ ಪಿಚೈ ಹುಟ್ಟುಹಬ್ಬ ಟ್ರೆಂಡ್ ಸೃಷ್ಟಿಸಿದೆ.
ಅದರಲ್ಲೂ ವಿಶೇಷವಾಗಿ ವ್ಯಕ್ತಿಯೊಬ್ಬ ನನಗೂ ಗೂಗಲ್ ಸಿಇಒ ಸುಂದರ್ ಪಿಚೈಗೂ ಇರುವ ವ್ಯತ್ಯಾಸವೇನು ಗೊತ್ತಾ? ಅವರು ಗೂಗಲ್‌ನಲ್ಲಿ ಕೆಲಸ ಮಾಡುತ್ತಾರೆ. ನಾನು ನನ್ನ ಕೆಲಸಕ್ಕಾಗಿ ಗೂಗಲ್ ಮಾಡುತ್ತೇನೆ ಎಂದಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಅಲ್ಲದೇ ಇನ್ನೂ ಅನೇಕ ಮಂದಿ ತಮ್ಮ ನೆಚ್ಚಿನ ಹೀರೋ, ಗೂಗಲ್ ಸಿಇಒಗೆ ಶುಭ ಕೋರಿದ್ದಾರೆ.