ಭಾರತದ ಮಹಿಳಾ ಉದ್ಯಮಿಗಳಿಗೆ ನೆರವು ಘೋಷಿಸಿದ ಗೂಗಲ್
ಭಾರತದ ಮಹಿಳಾ ಉದ್ಯಮಿಗಳಿಗೆ ಗೂಗಲ್ ನೆರವು | ಧನ ಸಹಾಯ ಘೋಷಿಸಿದ ಗೂಗಲ್ ಸಿಇಒ
ದೆಹಲಿ(ಮಾ.08): ಅಮೆರಿಕ ಮೂಲದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಭಾರತದ ಮಹಿಳಾ ಉದ್ಯಮಿಗಳ ನೆರವಿಗೆ ಎರಡೂವರೆ ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.
ಗ್ರಾಮೀಣ ಭಾರತದಲ್ಲಿ ಒಂದು ಮಿಲಿಯನ್ ಮಹಿಳಾ ಉದ್ಯಮಿಗಳಿಗೆ ಬೆಂಬಲ ಮತ್ತು ಸಾಫ್ಟ್‌ವೇರ್ ಕಂಪನಿಗಳ ಲಾಬಿ ನಾಸ್ಕಾಮ್ ಬೆಂಬಲದ ಜೊತೆ ಜೊತೆಗೆ 3,66,16,250 ನೆರವು ಘೋಷಿಸಲಾಗಿದೆ.
ಅಗ್ಗದ ಬೆಲೆಗೆ ಪಡೆದಿದ್ದ ತೈಲ ಬಳಸಿ: ಭಾರತಕ್ಕೆ ಸೌದಿ ಅರೇಬಿಯಾ ‘ಬುದ್ಧಿಮಾತು’!
ಟೆಕ್ ಟಾಟಾ ಟ್ರಸ್ಟ್‌ಗಳ ಜೊತೆಗೆ ತನ್ನ ಇಂಟರ್ನೆಟ್ ಸಾಥಿ ಫಾರ್ ವುಮೆನ್ ಕಾರ್ಯಕ್ರಮವನ್ನು ಗೂಗಲ್ ಮುಕ್ತಾಯಗೊಳಿಸಿದೆ. ಮಹಿಳೆಯರಿಗೆ ಅವಕಾಶಕ್ಕೆ ಸಮಾನ ಪ್ರವೇಶವಿದ್ದಾಗ ನಾವೆಲ್ಲರೂ ಅವರ ದೃಷ್ಟಿಕೋನಗಳು, ಸೃಜನಶೀಲತೆ ಮತ್ತು ಅವರ ಪರಿಣತಿಯಿಂದ ಪ್ರಯೋಜನ ಪಡೆಯುತ್ತೇವೆ, ಇದು ಪ್ರಪಂಚದಾದ್ಯಂತ ನಿಜವಾಗಿದೆ ಕೂಡಾ. ಆದರೂ, ಅವಕಾಶವನ್ನು ಪಡೆಯುವಾಗ ಅಸಮಾನತೆಗಳು ಇರುತ್ತವೆ ಎಂದಿದ್ದಾರೆ.
ಇಂಟರ್ನೆಟ್ ಸಾಥಿ ಕಾರ್ಯಕ್ರಮದ ಯಶಸ್ಸನ್ನು ಆಧರಿಸಿ, ನಾವು ಭಾರತದ ಗ್ರಾಮೀಣ ಹಳ್ಳಿಗಳಲ್ಲಿ 1 ಮಿಲಿಯನ್ ಮಹಿಳೆಯರಿಗೆ ವ್ಯಾಪಾರದ ಟ್ಯುಟೋರಿಯಲ್, ಪರಿಕರಗಳು ಮತ್ತು ಮಾರ್ಗದರ್ಶನದ ಮೂಲಕ ಉದ್ಯಮಿಗಳಾಗಲು ಸಹಾಯ ಮಾಡಲು ಹೊಸ ಯೋಜನೆ ಮಾಡುತ್ತಿದ್ದೇವೆ ”ಎಂದು ಪಿಚೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶೀಘ್ರ ಪೆಟ್ರೋಲ್ 100 ರೂ, ಗ್ಯಾಸ್ ಬೆಲೆ 1000 ರೂಕ್ಕೆ?
ಎರಡೂವರೆ ಕೋಟಿ ಅನುದಾನವು ಭಾರತ ಮತ್ತು ವಿಶ್ವದಾದ್ಯಂತ ಲಾಭೋದ್ದೇಶವಿಲ್ಲದ ಮತ್ತು ಸಾಮಾಜಿಕ ಉದ್ಯಮಗಳನ್ನು ಒದಗಿಸುತ್ತದೆ. ಅದು ಮಹಿಳೆಯರು ಮತ್ತು ಹುಡುಗಿಯರು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುವ ಪ್ರಮುಖ ಕೆಲಸವನ್ನು ಮಾಡುತ್ತಿದೆ. ಇದಕ್ಕಾಗಿ, ಏಪ್ರಿಲ್ 10 ರವರೆಗೆ ಅರ್ಜಿಗಳು ಲಭ್ಯವಿರುತ್ತದೆ.