ಸುಂದರ್ ಪಿಚೈ, ಅಂಜಲಿ ಲವ್ ಸ್ಟೋರಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ಈ ಸ್ಟೋರಿ!
ಭಾರತೀಯ ಮೂಲದ ಸುಂದರ್ ಪಿಚೈ ವಿಶ್ವದ ಅತೀ ದೊಡ್ಡ ಕಂಪನಿ ಆಲ್ಪಾಬೆಟ್ ಹಾಗೂ ಅದರ ಸಹಾಯಕ ಕಂಪನಿ ಗೂಗಲ್ ಎಲ್‌ಎಲ್‌ಸಿಯ ಸಿಇಒ. ಸಾಮಾನ್ಯರಂತೆ ಕಂಡು ಬರುವ ಪಿಚೈ, ಗೂಗಲ್ ಕಂಪನಿ ಪಾಲಿಗೆ ಅತ್ಯಮೂಲ್ಯ ವಜ್ರದಂತೆ. ಹೀಗಾಗೇ ಕಂಪನಿ ಕೋಟಿಗಟ್ಟಲೇ ಸಂಬಳ ನೀಡಿ ಅವರನ್ನು ಉಳಿಸಿಕೊಳ್ಳಲು ಸಿದ್ಧವಿದೆ. ಸದ್ಯ ಪಿಚೈ ವಿಶ್ವದಲ್ಲಿ ಅತೀ ಹೆಚ್ಚು ವೇತನ ಪಡೆಯುವ ಸಿಇಒ ಆಗಿದ್ದಾರೆ. ಹೀಗಿದ್ದರೂ ಪಿಚೈ ಮಾತ್ರ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸುತ್ತಾರೆ. ಆದರೆ ಅವರ ಲವ್ ಸ್ಟೋರಿ ಮಾತ್ರ ಯಾವುದೇ ಸಿನಿಮಾ ಕತೆಗಿಂತ ಭಿನ್ನವಾಗಿಲ್ಲ. ಗೆಳೆತನದಿಂದ ಆರಂಭವಾದ ಸುಂದರ್ ಪಿಚೈ ಹಾಗೂ ಅಂಜಲಿ ಭೇಟಿ, ನಿಧಾನವಾಗಿ ಪ್ರೀತಿಗೆ ತಿರುಗಿತು. ಪ್ರತಿಯೊಂದು ಹೆಜ್ಜೆಯಲ್ಲೂ ಇಬ್ಬರೂ ಪರಸ್ಪರ ಜೊತೆಗಿದ್ದವರು. ಇಲ್ಲಿದೆ ನೋಡಿ ಐಐಟಿ ಖಡಗ್ಪುರದಿಂದ ಆರಂಭವಾಗಿ ಅಮೆರಿಕವರೆಗಿನ ಇಬ್ಬರ ಪಯಣದ ಸ್ಟೋರಿ.
ಯಾರು ಸುಂದರ್ ಪಿಚೈ?: 1972ರಲ್ಲಿ ಚೆನ್ನೈನಲ್ಲಿ ಜನಿಸಿದ ಸುಂದರಾಜನ್ ಪಿಚೈರನ್ನು ಇಂದು ಇಡೀ ವಿಶ್ವವೇ ಸುಂದರ್ ಪಿಚೈ ಹೆಸರಿನಿಂದ ಗುರುತಿಸುತ್ತದೆ. ಅವರು ತಮ್ಮ ಬ್ಯಾಚುಲರ್ ಡಿಗ್ರಿಯನ್ನು ಐಐಟಿ ಖಡಗ್ಪುರ್‌ನಿಂದ ಗಳಿಸಿದ್ದು, ತಮ್ಮ ಬ್ಯಾಚ್‌ನಲ್ಲಿ ಸಿಲ್ವರ್ ಮೆಡಲ್ ಕೂಡಾ ತಮ್ಮದಾಗಿಸಿಕೊಂಡಿದ್ದರು. ಇದಾದ ಬಳಿಕ ಅವರು ಮಾಸ್ಟರ್ ಡಿಗ್ರಿ ಪಡೆಯಲು ಸ್ಟಾನ್‌ಫೋರ್ಡ್‌ಗೆ ತೆರಳಿದರು. 2019ರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಗೂಗಲ್‌ನ ಮಾತೃ ಸಂಸ್ಥೆ ಆಲ್ಪಾಬೆಟ್‌ನ ಜವಾಬ್ದಾರಿಯೂ ವಹಿಸಿಕೊಂಡರು. ಇಂದು ಅವರು ವಿಶ್ವದಲ್ಲೇ ಅತೀ ಹೆಚ್ಚು ಸ್ಯಾಲರಿ ಪಡೆಯುವ ಸಿಇಒ ಆಗಿದ್ದಾರೆ. ಅವರಿಗೆ 2,144.53 ಕೋಟಿ ರೂ. ಸ್ಯಾಲರಿ ಸಿಗುತ್ತದೆ.
ಅಂಜಲಿ ಪಿಚೈ ಯಾರು?
ಅಂಜಲಿ ಪಿಚೈ(ಅಂಜಲಿ ಹರ್ಯಾನಿ) 1971ರ ಜನವರಿ 11ರಂದು ರಾಜಸ್ಥಾನದ ಕೋಟಾ ನಗರದಲ್ಲಿ ಜನಿಸಿದ್ದರು. ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಂಜಲಿ ಆರಂಭಿಕ ಶಿಕ್ಷಣ ಕೋಟಾದಲ್ಲಿ ಪೂರೈಸಿದರು. ಇದಾಧ ಬಳಿಕ ಅವರೂ ಕೂಡಾ ತಮ್ಮ ಬ್ಯಾಚುಲರ್ ಡಿಗ್ರಿ ಐಐಟಿ ಖಡಗ್ಪುರದಲ್ಲೇ ಪಡೆದರು.
ಸುಂದರ್- ಅಂಜಲಿ ಭೇಟಿಯಾಗಿದ್ದು ಹೀಗೆ:ಸುಂದರ್ ಪಿಚೈ ಹಾಗೂ ಅಂಜಲಿ ಭೇಟಿಯಾಗಿದ್ದು ಐಐಟಿ ಖಡಗ್ಪುರದಲ್ಲೇ ಆಗಿದ್ದು. ಇಲ್ಲಿ ಇಬ್ಬರೂ ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದರು. ಆರಂಭದಲ್ಲಿ ಗೆಳೆಯರಾಗಿದ್ದರು. ಆದರೆ ನಿಧಾನವಾಗಿ ಮಾತುಕತೆ, ಒಡನಾಟ ಬೆಳೆದು ಇಬ್ಬರಿಗೂ ಪರಸ್ಪರ ಜೊತೆ ಇಷ್ಟವಾಯಿತು.
ಕದ್ದು ಮುಚ್ಚಿ ಭೇಟಿಯಾಗುತ್ತಿದ್ದ ಸುಂದರ್ ಅಂಜಲಿ: ಸಂದರ್ಶನವೊಂದರಲ್ಲಿ ಸುಂದರ್ ಪಿಚೈ ಕಾಲೇಜು ದಿನಗಳಲ್ಲಿ ಪರಸ್ಪರ ಕರರೆ ಮಾಡಿ ಮಾತನಾಡುವುದು ಬಹಳ ಕಷ್ಟವಾಗುತ್ತಿತ್ತು. ನಾನು ಅಂಜಲಿ ಇದ್ದ ಹಾಸ್ಟೆಲ್ ಹೊರಗೆ ಹೋಗುತ್ತಿದ್ದೆ, ಅಲ್ಲಿ ಓಡಾಡಿಕೊಂಡಿರುತ್ತಿದ್ದ ಯಾವುದಾದರೂ ಯುವತಿ ಬಳಿ ಅಂಜಲಿಯನ್ನು ಕರೆಯಲು ಹೇಳುತ್ತಿದ್ದೆ. ಆಗ ಅವರು ಜೋರಾಗಿ, ಅಂಜಲಿ ನೋಡು ಸುಂದರ್ ಬಂದಿದ್ದಾರೆನ್ನುತ್ತಿದ್ದರು ಎಂದಿದ್ದಾರೆ.
ಹೀಗೆ ಪ್ರೊಪೋಸ್ ಮಾಡಿದ್ರು: ಸುಂದರ್ ಪಿಚೈ ಹಾಗೂ ಅಂಜಲಿ ಮೆಟಾಲರ್ಜಿಯಲ್ಲಿ ಇಂಜಿನಿಯರಿಂಗ್ ಫೈನಲ್ ಇಯರ್‌ನಲ್ಲಿದ್ದಾಗ ಆಗ ಸುಂದರ್ ಪಿಚೈ ಅಂಜಲಿಗೆ ಮನದುವೆಯಾಗಲು ಪ್ರೊಪೋಸ್ ಮಾಡಿದ್ದರು. ಹೀಗಿರುವಾಗ ಅಂಜಲಿ ಕೂಡಾ ಒಪ್ಪಿಕೊಂಡಿದ್ದರು.
ಆರು ತಿಂಗಳವರೆಗೆ ಮಾತಿಲ್ಲ": ಬ್ಯಾಚುಲರ್ ಡಿಗ್ರಿ ಆದದ ಬಳಿಕ ಸುಂದರ್ ಮಾಸ್ಟರ್ಸ್ ಡಿಗ್ರಿಗಾಗಿ ಅಮೆರಿಕಾಗೆ ತೆರಳಿದರು. ಆಗ ಅವರ ಬಳಿ ಅಂತಾರಾಷ್ಟ್ರೀಯ ಕರೆ ಮಾಡಿ ಅಂಜಲಿ ಬಳಿ ಮಾತನಾಡುವಷ್ಟು ಹಣವಿರಲಿಲ್ಲ. ಹೀಗಾಗಿ ಇವರಿಬ್ಬರು ಆರು ತಿಂಗಳವವರೆಗೆ ಮಾತನಾಡಲು ಆಗಿರಲಿಲ್ಲ. ಆದರೆ ಇದು ಅವರ ಸಂಬಂಧದ ಮಧ್ಯೆ ತೊಡಕಾಗಲಿಲ್ಲ. ಕೆಲ ಸಮಯದ ಬಳಿಕ ಅಂಜಲಿ ಕೂಡಾ ಅಮೆರಿಕಾಗೆ ತೆರಳಿದರು.
ಮದುವೆಗಾಗಿ ಮನೆಯವರನ್ನು ಒಪ್ಪಿಸಿದರು: ಸುಂದರ್ ಪಿಚೈ ಶ್ರೀಮಂತ ವ್ಯಕ್ತಿ ಆಗಿರದಿದ್ದ ಸಂದರ್ಭದಲ್ಲೂ ಅಂಜಲಿ ಅವರೊಂದಿಗಿದ್ದರು. ಅವರೊಬ್ಬ ಸಾಧಾರಣ ಕುಟುಂಬದ ಸಾಧಾರಣ ವ್ಯಕ್ತಿಯಾಗಿದ್ದರು. ಹೀಗಾಗಿ ಸುಂದರ್ ಪಿಚೈ ಅವರಿಗೆ ಕೆಲಸ ಸಿಗುತ್ತಿದ್ದಂತೆಯೇ ಇಬ್ಬರೂ ತಮ್ಮ ಮನೆಯವರ ಬಳಿ ಮದುವೆ ಬಗ್ಗೆ ಮಾತನಾಡಿದರು, ಮನೆಯವರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ಪಿಚೈ ಯಶಸ್ಸಿನ ಹಿಂದಿಗೆ ಅಂಜಲಿ ಬೆಂಬಲ: ಗೂಗಲ್ ಕಂಪನಿ ಸೇರಿದ ಬಳಿಕ ಅವರ ಕಂಪನಿ ನೋಡಿದ ಟ್ವಿಟರ್, ಮೈಕ್ರೋಸಾಫ್ಟ್‌ನಂತಹ ಕಂಪನಿಗಳು ಅವರಿಗೆ ದೊಡ್ಡ ದೊಡ್ಡ ಆಫರ್ ಕೊಟ್ಟವು. ಆದರೆ ಅಂಜಲಿ ಪಿಚೈ ಅವರಿಗೆ ಗೂಗಲ್‌ನಲ್ಲೇ ಉಳಿದುಕೊಳ್ಳುವ ಸಲಹೆ ನೀಡಿದರು. ಇಂದು ತಾನೇನೇ ಸಾಧಿಸಿದ್ದರು ಅದರ ಹಿಂದಿನ ಶ್ರೇಯಸ್ಸು ತನ್ನ ಪತ್ನಿ ಅಂಜಲಿಗೇ ಸಲ್ಲಬೇಕು ಎನ್ನುತ್ತಾರೆ ಪಿಚೈ
ಇಬ್ಬರು ಮುದ್ದಾದ ಮಕ್ಕಳು: ಮದುವೆಯಾದ ಕೆಲ ವರ್ಷದ ಬಳಿಕ ಅವರ ಸಂಸಾರದಲ್ಲಿ ಮೊದಲು ಹೆಣ್ಮಗು ಹಾಗೂ ಬಳಿಕ ಗಂಡು ಮಗು ಜನಿಸಿತು. ಮಗಳಿಗೆ ಕಾವ್ಯಾ ಹಾಗೂ ಮಗನಿಗೆ ಕಿರಣ್ ಎಂದು ನಾಗಕರಣ ಮಾಡಿದ್ದಾರೆ.
ಸಿಂಪಲ್ ವ್ಯಕ್ತಿ ಪಿಚೈ: ಇಷ್ಟು ಹಣ ಸಂಪಾದಿಸುತ್ತಿದ್ದರೂ ಪಿಚೈ ಸಾಧಾರಣ ಬದುಕು ಬದುಕುತ್ತಿದ್ದಾರೆ. ಮಾರ್ನಿಂಗ್ ರೂಟೀನ್ ತಪ್ಪದೇ ಫಾಲೋ ಮಾಡುವ ಪಿಚೈ 48 ವರ್ಷ ವಯಸ್ಸಾದರೂ ಫಿಟ್ ಆಗಿ ಕಾಣಿಸುತ್ತಾರೆ. ಅವರ ಹೆಂಡತಿ ಕೂಡಾ 48 ವರ್ಷ ವಯಸ್ಸಲ್ಲೂ ಫಿಟ್ನೆಸ್ ಹಾಗೂ ಸೌಂದರ್ಯ ಕಾಪಾಡಿಕೊಂಡಿದ್ದಾರೆ.