6210 ಕೋಟಿ ಮೊತ್ತದ ಆಸ್ತಿ ಉದ್ಯೋಗಿಗಳಿಗೆ ದಾನ ಮಾಡಿದ ಶ್ರೀರಾಮ ಗ್ರೂಪ್ ಮಾಲೀಕ

  • ಬಡವರಿಗೆ ಸಾಲ ಸಿಗದ ಕಾಲದಲ್ಲಿ ಕರೆದು ಸಾಲ ನೀಡಿದ ಶ್ರೀರಾಮ್ ಗ್ರೂಪ್
  • ಕೋಟಿ ಕೋಟಿ ಆಸ್ತಿ ಇದ್ರು ಮೊಬೈಲ್ ಫೋನ್ ಹೊಂದಿರದ ಮಹಾದಾನಿ ಈ ಉದ್ಯಮಿ
  • 6210 ಕೋಟಿ ಮೊತ್ತದ ಆಸ್ತಿ ಉದ್ಯೋಗಿಗಳಿಗೆ ದಾನ ಮಾಡಿದ ತ್ಯಾಗರಾಜ
  • ಕೋಟಿ ಕೋಟಿ ಆಸ್ತಿ ಇದ್ರು ಮೊಬೈಲ್ ಫೋನ್ ಬಳಸಲ್ಲ
Sriram Group owner R thyagarajan donates 6210 crore worth of assets to his company employees akb

ಚೆನ್ನೈ: ಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶ್ರೀರಾಮ್ ಗ್ರೂಪ್ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಇದರ ಸ್ಥಾಪಕ ಆರ್. ತ್ಯಾಗರಾಜನ್‌ ಬಗ್ಗೆ ನಿಮಗೆ ಗೊತ್ತಾ. ತನ್ನ ಎಲ್ಲಾ ಆಸ್ತಿಯನ್ನು ಸಂಸ್ಥೆಯ ಉದ್ಯೋಗಿಗಳಿಗೆ ದಾನ ಮಾಡಿದ ಮಹಾದಾನಿ ಇವರು. ಇವರ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

ಆಸ್ತಿ ಇದ್ದವರಿಗೆ ತಿಂಗಳಾಂತ್ಯಕ್ಕೆ ಬ್ಯಾಂಕ್‌ ಖಾತೆಗೆ ಸಂಬಳ ಬಂದು ಬೀಳುವವರಿಗೆ ಬ್ಯಾಂಕುಗಳು ಕರೆದು ಕರೆದು ಸಾಲ ನೀಡುತ್ತವೆ. ನಂತರ ಸಾಲ ಕಟ್ಟದೇ ದೇಶ ಬಿಟ್ಟು ಓಡಿ ಹೋದಾಗ ಅಳಲು ಶುರು ಮಾಡುತ್ತಾರೆ. ಆದರೆ ಆಸ್ತಿ ಇಲ್ಲದಿದ್ದರು ಏನೋ ಸಾಧಿಸಬೇಕು ಎಂಬ ಹುಮ್ಮಸಿರುವವರಿಗೆ ಯಾವ ಬ್ಯಾಂಕುಗಳು ಸಾಲು ನೀಡುವುದಿಲ್ಲ.  ಸಾಲವನ್ನು ಹೇಗಾದರೂ ಮಾಡಿ ಕಟ್ಟುತ್ತೇವೆ ಎಂದು ಕಾಲಿಗೆ ಬಿದ್ದರೂ ಯಾವ ಬ್ಯಾಂಕುಗಳು ಕೂಡ ದಾಖಲೆ ಇಲ್ಲದೇ ಸಾಲ ನೀಡುವುದಿಲ್ಲ. ಪರಿಸ್ಥಿತಿ ಹೀಗಿದ್ದ ಕಾಲದಲ್ಲಿ ಆರ್ ತ್ಯಾಗರಾಜನ್ (R. tyagarajan) ಶ್ರೀರಾಮ್ ಫೈನಾನ್ಸ್‌ನ್ನು ಸ್ಥಾಪಿಸಿದರು. ಇಂತಹ ಆರ್ಥಿಕ ದಿಕ್ಕಿಲ್ಲದ ಸಾವಿರಾರು ಜನರಿಗೆ ಸಾಲ ನೀಡಿ ನೆರವಾಗಿದ್ದರು ಈ ಆರ್‌ ತ್ಯಾಗರಾಜನ್.  

ಆಪಲ್ ಕಂಪನಿಯಿಂದ ವಾರನ್‌ ಬಫೆಟ್‌ಗೆ 1814 ಕೋಟಿ ರೂಪಾಯಿ ಡಿವಿಡೆಂಡ್‌!

ಸಣ್ಣಮಟ್ಟಿನಿಂದ ಆರಂಭವಾದ ಈ ಶ್ರೀರಾಮ್ ಫೈನಾನ್ಸ್ ಗ್ರೂಪ್ (Sri Ram Finance Group) ಇಂದು ಒಂದು ಲಕ್ಷದ 8 ಸಾವಿರ ಉದ್ಯೋಗಿಗಳಿಗೆ ನೆಲೆ ನೀಡಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಸಮಾಜದ ಅತ್ಯಂತ ಕೆಳವರ್ಗದಲ್ಲಿ ಕೆಲಸ ಮಾಡುವ ಟ್ರಕ್‌ಗಳು ಟ್ರ್ಯಾಕ್ಟರ್‌ಗಳು ಇತರ ವಾಹನಗಳನ್ನು ಚಲಾಯಿಸಿ ಬದುಕು ಕಟ್ಟಿಕೊಳ್ಳುವವರಿಗೆ ಸಾಲವನ್ನು ನೀಡುವ ಮೂಲಕ ಅಂತಹವರಿಗೆ ಸಾಲ ನೀಡುವುದು ಅಪಾಯಕಾರಿ ಅಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. 

ಸಮಾಜದ ಹಿಂದುಳಿದ ಸಮುದಾಯಕ್ಕೆ ಏನನ್ನಾದರು ಮಾಡಬೇಕು ಎಂದು ಬಯಸಿರುವ ತ್ಯಾಗರಾಜನ್ ಅವರು ಹೆಸರಿಗೆ ತಕ್ಕಂತೆ  ತಮ್ಮ 6210 ಕೋಟಿ ಮೊತ್ತದ ಆಸ್ತಿಯನ್ನು ದಾನ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ತಮಿಳುನಾಡಿನ ಶ್ರೀಮಂತ ರೈತ ಕುಟುಂಬದಲ್ಲಿ ಜನಿಸಿದ ಅವರು ಕೋಲ್ಕತ್ತಾದ  ಸ್ಟ್ಯಾಟಿಕಲ್ ಇನ್ಸ್‌ಟಿಟ್ಯೂಟ್‌ನಲ್ಲಿ(Indian Statistical Institute Kolkata) ಗಣಿತಶಾಸ್ತ್ರದಲ್ಲಿ ಪದವಿ ಪಡೆದರು.  ನಂತರ 1961ರಲ್ಲಿ ನ್ಯೂ ಇಂಡಿಯ ಆಶ್ಯುರೆನ್ಸ್ ಕಂಪನಿಗೆ (New India Assurance Company) ಸೇರಿದ ಅವರು ನಂತರದ 20 ವರ್ಷಗಳ ಕಾಲ ಹಲವು ಹಣಕಾಸು ಸಂಸ್ಥೆಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. 

ತಮ್ಮ 37ನೇ ವಯಸ್ಸಿಗೆ ಉದ್ಯಮ ಆರಂಭಿಸಿದ ಅವರು ಈಗ ಸುಮಾರು ಶ್ರೀರಾಮ್ ಗ್ರೂಪ್ಸ್‌ನಡಿ ಸುಮಾರು  30 ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಇವರು ಸಾಮಾನ್ಯವಾದ ಕಾರೊಂದರಲ್ಲಿ ಓಡಾಡುತ್ತಾರೆ, ಸಣ್ಣದಾದ ಮನೆಯೊಂದರಲ್ಲಿ ವಾಸ ಮಾಡುತ್ತಾರೆ. ಜೊತೆಗೆ ಇವರ ಬಳಿ ಮೊಬೈಲ್ ಫೋನ್ ಕೂಡ ಇಲ್ಲ, ಮೊಬೈಲ್ ಫೋನ್ ಗುರಿ ತಪ್ಪಿಸುತ್ತದೆ ಎಂದು ಅವರು ನಂಬಿದ್ದಾರೆ.  ಪ್ರಸ್ತುತ ಇವರ ಸಂಸ್ಥೆಗಳು 23 ಮಿಲಿಯನ್ ಗ್ರಾಹಕರನ್ನು ಹೊಂದಿದ್ದಾರೆ. 

ರೇಷ್ಮೆ ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಕೊರಟಗೆರೆಯ ಶ್ರೀವತ್ಸ: ರೇಷ್ಮೆಗೆ ಪ್ರತ್ಯೇಕ ಮೊಬೈಲ್ ಆ್ಯಪ್

ಹಣಕಾಸು ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ (Shriram Finance Limited) ಮಾರುಕಟ್ಟೆ ಮೌಲ್ಯವು ಸುಮಾರು 8.5 ಬಿಲಿಯನ್ ಡಾಲರ್ ಆಗಿದೆ. ಜೂನ್ ತ್ರೈಮಾಸಿಕದಲ್ಲಿ ಅದರ ಲಾಭ ಸುಮಾರು 200 ಮಿಲಿಯನ್ ಡಾಲರ್ ಆಗಿತ್ತು.

ಉತ್ತಮ ಸಂಬಳ ನೀಡುವ ಸಂಸ್ಥೆ ಎಂಬ ಹೆಸರು ಈ ಕಂಪನಿಗಿಲ್ಲ, ಈ ಬಗ್ಗೆ ಮಾತನಾಡಿದ ಅವರು ಒಬ್ಬರನ್ನು ಸಂತೋಷದಿಂದ ಇಡಲು ಸಂಬಳ ಸಾಕಾಗುತ್ತದೆ. ಆದರೆ ಸಂಭ್ರಮಿಸಲು ಅಲ್ಲ ಎಂದು ಅವರು ಹೇಳುತ್ತಾರೆ. ಅವರು ತಮ್ಮ ಎಲ್ಲಾ ಷೇರುಗಳನ್ನು (shareholdings) ಉದ್ಯೋಗಿಗಳ ಸಂಘಕ್ಕೆ ನೀಡಿದ್ದು. ಅವರು ಸಂಪೂರ್ಣ ಹಣವನ್ನು ಶ್ರೀರಾಮ್ ಮಾಲೀಕತ್ವ ಟ್ರಸ್ಟ್‌ಗೆ (Shriram Ownership Trust) ವರ್ಗಾಯಿಸಿದ್ದಾರೆ, ಶಾಸ್ತ್ರೀಯ ಸಂಗೀತಾವನ್ನು ಇಷ್ಟಪಡುವ ಇವರು ಪಾಶ್ಚಾತ್ಯ ಬ್ಯುಸಿನೆಸ್ ಮ್ಯಾಗಜೀನ್ ಅನ್ನು ಸದಾ ಓದುತ್ತಿರುತ್ತಾರೆ.

ಕೆಲವರಿಗೆ ಶ್ರೀಮಂತರಿಗೆ ಸ್ವಲ್ಪ ಶ್ರೀಮಂತಿಕೆ ಬಂದಂತೆ ಇನ್ನಷ್ಟು ಮತ್ತಷ್ಟು ಶ್ರೀಮಂತರಾಗುವ ಗೀಳು ಶುರುವಾಗುತ್ತದೆ. ಸಮಾಜದ ಬಗ್ಗೆ ಸಂಬಂಧಗಳ ಬಗ್ಗೆ ಏನನ್ನು ಯೋಚಿಸದೇ ದುಡ್ಡಿನ ಹಿಂದೆ ಬೀಳುತ್ತಾರೆ.  ಹೀಗಿರುವಾಗ ಶ್ರೀಮಂತಿಕೆಯಲ್ಲಿಯೇ ಜನಿಸಿದರೂ ಸಮಾಜದ ಕೆಳಸ್ತರದ ಜನರ ಬಗ್ಗೆ ತನ್ನ ಉದ್ಯೋಗಿಗಳ ಬಗ್ಗೆ ಯೋಚಿಸುತ್ತಾ ಇವರು ಮಾಡಿದ ಕಾರ್ಯವನ್ನು ಜನ ಸದಾ ನೆನಪಿಸಿಕೊಳ್ಳಲಿದ್ದಾರೆ. ಹೆಸರಿಗೆ ತಕ್ಕಂತೆ ತ್ಯಾಗರಾಜರೆನಿಸಿರುವ ಶ್ರೀರಾಮ್‌ ಗ್ರೂಪ್‌ನ ಮಾಲೀಕ ಆರ್ ತ್ಯಾಗರಾಜ್ ಅವರಿಗೆ ಹ್ಯಾಟ್ಸಾಪ್ ಎನ್ನಲೇಬೇಕು. 

Latest Videos
Follow Us:
Download App:
  • android
  • ios