Smart Business Idea : ಒಂದು ಗಂಟೆಯಲ್ಲಿ 5 ಸಾವಿರ ಗಳಿಸೋದು ಅದೃಷ್ಟವಲ್ಲ. ಸಮಯವನ್ನು ಸರಿಯಾಗಿ ಬಳಸಿಕೊಂಡು ಬುದ್ಧಿವಂತಿಕೆಯಿಂದ ಮಾಡೋ ಬ್ಯುಸಿನೆಸ್. ಕಡಿಮೆ ಬಂಡವಾಳದಲ್ಲಿ ಕೈತುಂಬಾ ಹಣ ಸಂಪಾದಿಸಿ ವ್ಯಕ್ತಿ ಈಗ ವೈರಲ್
ಬೆಂಗಳೂರಿನಂತ ಸಿಟಿಯಲ್ಲಿ ಮಳೆ ಬರೋದು ಅಪರೂಪ. ಮಳೆ ಯಾವಾಗ ಬರುತ್ತೆ ಹೇಳೋಕೆ ಸಾಧ್ಯವಾಗೋದಿಲ್ಲ. ಆಫೀಸ್ ಗೆ ಹೊರಟಿರ್ತೀರಿ, ಮೆಟ್ರೋ ಇಳಿದು, ಇನ್ನೇನು ಹೊರಗೆ ಬೀಳ್ಬೇಕು, ಧಾರಾಕಾರ ಮಳೆ. ಆಫೀಸ್ ಟೈಂಗೆ ಮಿಸ್ ಮಾಡುವಂತಿಲ್ಲ. ಅನಿವಾರ್ಯವಾಗಿ ಹತ್ತಿರ ಎಲ್ಲಿ ಛತ್ರಿ ಸಿಗುತ್ತೆ ಅಂತ ಹುಡುಕ್ತೀರಿ. ಆಗ ಚೌಕಾಸಿ ಮಾಡೋಕೂ ನಿಮಗೆ ಪುರಸೊತ್ತಿರೋದಿಲ್ಲ. ಅದನ್ನೇ ವ್ಯಕ್ತಿಯೊಬ್ಬರು ಬಂಡವಾಳ ಮಾಡ್ಕೊಂಡು ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ.
ಕಡಿಮೆ ಬಂಡವಾಳ ಬುದ್ಧಿವಂತಿಕೆ ಬ್ಯುಸಿನೆಸ್ (Business)
ಎಲ್ಲಿ ಮಳೆ ಬೀಳುತ್ತೋ ಅಲ್ಲಿಗೆ ಹೋಗೋದು ಈ ವ್ಯಕ್ತಿಯ ಕೆಲ್ಸ. ಅತಿಯಾಗಿ ಮಳೆ ಆಗ್ತಿರುವ ಜಾಗದ ರೈಲ್ವೆ ನಿಲ್ದಾಣದ ಬಳಿ ಇವರು ನಿಂತಿರ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವ್ರ ಸುದ್ದಿ ವೈರಲ್ ಆಗಿದೆ. ಅವರು ಒಂದು ಛತ್ರಿಗೆ 100 ರೂಪಾಯಿ ಅಂತೆ 50 ಛತ್ರಿಯನ್ನು ಅವರು ಖರೀದಿಸಿದ್ದು. ಇದಕ್ಕಾಗಿ 5 ಸಾವಿರ ರೂಪಾಯಿ ಖರ್ಚು ಮಾಡಿದ್ರು. ನಂತ್ರ ಮಳೆ ಬರುವ ಮೆಟ್ರೋ ನಿಲ್ದಾಣದ ಬಳಿ ಬಂತು ಛತ್ರಿ ಮಾರಾಟ ಶುರು ಮಾಡಿದ್ರು.
14ನೇ ವಯಸ್ಸಿನಲ್ಲೇ ಬುರ್ಜ್ ಖಲೀಫಾದ 141ನೇ ಮಹಡಿಯಲ್ಲಿ ಕಂಪನಿ, ಭಾರತೀಯ ಬಾಲಕನ ಸಾಧನೆ
ಒಂದು ಛತ್ರಿಗೆ 200 ರೂಪಾಯಿಯಂತೆ ಅವರು ಮಾರಾಟ ಶುರು ಮಾಡಿದ್ರು. ಮಳೆಯಲ್ಲಿ ನೆನೆಯಬಾರದು, ಆದ್ರೆ ಮಳೆ ನಿಲ್ಲೋವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಜನರು ಒಬ್ಬೊಬ್ಬರಾಗಿ ಅವರಿಂದ ಛತ್ರಿ ಖರೀದಿಸಲು ಆರಂಭಿಸಿದರು. ಅಚ್ಚರಿಯ ಸಂಗತಿ ಏನೆಂದರೆ, ಕೇವಲ ಒಂದು ಗಂಟೆಯಲ್ಲೇ ಎಲ್ಲಾ 50 ಛತ್ರಿಗಳೂ ಮಾರಾಟವಾದವು. ಒಟ್ಟು ಖರೀದಿ ವೆಚ್ಚ 5000 ರೂಪಾಯಿ ಆದ್ರೆ ಮಾರಾಟ 10,000 ರೂಪಾಯಿ. ಅಂದ್ರೆ ಒಂದು ಗಂಟೆಯಲ್ಲಿ 5,000 ಲಾಭ ಸಿಕ್ಕಂತಾಯ್ತು.
ಇದನ್ನು ಎಕ್ಸ್ ಖಾತೆ, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಯಶಸ್ವಿ ವ್ಯವಹಾರ ಮಾಡಲು ಯಾವಾಗಲೂ ಲಕ್ಷಾಂತರ ರೂಪಾಯಿ ಹೂಡಿಕೆ ಬೇಕೆಂದೇನಿಲ್ಲ. ಜನರಿಗೆ ಯಾವಾಗ, ಎಲ್ಲಿ, ಯಾವ ವಸ್ತುವಿನ ಅಗತ್ಯವಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಸಣ್ಣ ಬಂಡವಾಳದಲ್ಲೂ ಉತ್ತಮ ಆದಾಯ ಗಳಿಸುವ ಅವಕಾಶ ಸಿಗುತ್ತದೆ ಎಂಬುದಕ್ಕೆ ಇವರು ಉತ್ತಮ ನಿದರ್ಶನ. ಬಿಸಿನೆಸ್ನಲ್ಲಿ ಯಶಸ್ಸು ಸಿಗುವುದು ಕೇವಲ ಉತ್ಪನ್ನದಿಂದಲ್ಲ. ಸರಿಯಾದ ಸಮಯ, ಸರಿಯಾದ ಸ್ಥಳ ಮತ್ತು ಸರಿಯಾದ ನಿರ್ಧಾರದಿಂದ.
ಸ್ನೇಹಿತೆ ಮದುವೆಯಲ್ಲಿ ಅಂಬಾನಿ ಸೊಸೆ ಭಾವುಕ, 2 ವರ್ಷದ ಹಳೆ ಲೆಹಂಗಾದಲ್ಲಿ ಮಿಂಚಿದ Radhika Merchant
ಸೋಶಿಯಲ್ ಮೀಡಿಯಾದಲ್ಲಿ ಅವರ ಕೆಲ್ಸವನ್ನು ಮೆಚ್ಚಿಕೊಳ್ಳಲಾಗಿದೆ. ಇದ್ರ ಹಿಂದೆ ಸಾಕಷ್ಟು ಪರಿಶ್ರಮ ಇದೆ ಅಂತ ಜನರು ಕಮೆಂಟ್ ಮಾಡಿದ್ದಾರೆ. ಇದನ್ನು ಒಳ್ಳೆಯ ಬ್ಯುಸಿನೆಸ್ ಐಡಿಯಾ ಎಂದು ಕರೆಯಲಾಗುವುದಿಲ್ಲ. ಆದ್ರೆ ಇದನ್ನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇರುವುದು (ಮಾರ್ಕೆಟಿಂಗ್‌ನ ಪಿಪಿಪಿ) ಎಂದು ಕರೆಯಬಹುದು. ನಿಮ್ಮ ಉತ್ಪನ್ನವನ್ನು ಬಿಸಿ ಪ್ಯಾನ್‌ಕೇಕ್‌ನಂತೆ ಮಾರಾಟ ಮಾಡಲು ಅಲ್ಲಿರಲು ಬುದ್ಧಿವಂತಿಕೆ ಮತ್ತು ವ್ಯವಹಾರದ ಚುರುಕುತನ ಬೇಕಾಗುತ್ತದೆ ಅಂತ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.


