MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Life
  • Fashion
  • ಸ್ನೇಹಿತೆ ಮದುವೆಯಲ್ಲಿ ಅಂಬಾನಿ ಸೊಸೆ ಭಾವುಕ, 2 ವರ್ಷದ ಹಳೆ ಲೆಹಂಗಾದಲ್ಲಿ ಮಿಂಚಿದ Radhika Merchant

ಸ್ನೇಹಿತೆ ಮದುವೆಯಲ್ಲಿ ಅಂಬಾನಿ ಸೊಸೆ ಭಾವುಕ, 2 ವರ್ಷದ ಹಳೆ ಲೆಹಂಗಾದಲ್ಲಿ ಮಿಂಚಿದ Radhika Merchant

ಮುಖೇಶ್‌ ಅಂಬಾನಿ ಫ್ಯಾಮಿಲಿಯ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್‌ ಎಲ್ಲೇ ಹೋದ್ರೂ ಸುದ್ದಿಯಲ್ಲಿರ್ತಾರೆ. ಅವರ ಸ್ವಭಾವ, ಫ್ಯಾಷನ್‌ ಸೆನ್ಸ್‌ ಎಲ್ಲರ ಗಮನ ಸೆಳೆಯುತ್ತೆ. ಸ್ನೇಹಿತೆ ಸೃಷ್ಟಿ ಪಾಂಚಾಲ್ ಮದುವೆಯಲ್ಲಿ ಪಾಲ್ಗೊಂಡಿದ್ದ ರಾಧಿಕಾ ಮರ್ಚೆಂಟ್‌, ತಮ್ಮ ಫ್ಯಾಷನ್‌, ಎಮೋಷನ್‌ ನಿಂದ ಗಮನ ಸೆಳೆದಿದ್ದಾರೆ.

2 Min read
Author : Roopa Hegde
Published : Jul 13 2026, 11:54 AM IST
Share this Photo Gallery
  • FB
  • TW
  • Linkdin
  • Whatsapp
15
ಸ್ನೇಹಿತೆ ಮದುವೆಯಲ್ಲಿ ರಾಧಿಕಾ
Image Credit : Asianet News

ಸ್ನೇಹಿತೆ ಮದುವೆಯಲ್ಲಿ ರಾಧಿಕಾ

ರಾಧಿಕಾ ಮತ್ತು ಅನಂತ್ ತಮ್ಮ ಸ್ನೇಹಿತರ ಮದುವೆಯಲ್ಲಿ ಕೇವಲ ಅತಿಥಿಗಳಾಗಿರಲಿಲ್ಲ. ಬದಲಿಗೆ ಪ್ರತಿಯೊಂದು ಆಚರಣೆಯಲ್ಲೂ ಪಾಲ್ಗೊಂಡಿದ್ದರು. ಮದುವೆಯ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಸ್ನೇಹಿತೆಯನ್ನು ತಬ್ಬಿಕೊಂಡು ರಾಧಿಕಾ ಭಾವುಕರಾದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಮದುವೆ ಸಮಾರಂಭದಲ್ಲಿ ರಾಧಿಕಾ ಖುಷಿಯಿಂದ ಡಾನ್ಸ್‌ ಕೂಡ ಮಾಡಿದ್ದಾರೆ. ವಧುವಿನ ಹೂವಿನ ಚಾದರ್ ಹಿಡಿದಿರೋದನ್ನು ನೀವು ಕಾಣ್ಬಹುದು. ರಾಧಿಕಾ ಮಾತ್ರವಲ್ಲ ಅನಂತ್‌ ಅಂಬಾನಿ, ನೀತಾ ಅಂಬಾನಿ ಕೂಡ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗಮನ ಸೆಳೆದ ಲೆಹಂಗಾ
Image Credit : Asianet News

ಗಮನ ಸೆಳೆದ ಲೆಹಂಗಾ

ಮದುವೆಯಲ್ಲಿ ರಾಧಿಕಾ ಎಮೋಷನ್‌ ಮಾತ್ರವಲ್ಲ ಅವರು ಧರಿಸಿದ್ದ ಲೆಹೆಂಗಾ ಕೂಡ ಸುದ್ದಿಯಲ್ಲಿದೆ. ಮದುವೆ ಸಮಾರಂಭ ಅದ್ರಲ್ಲೂ ಸ್ನೇಹಿತರ ಮದುವೆ ಫಂಕ್ಷನ್‌ ಅಂದ್ಮೇಲೆ ಮಿಡಲ್‌ ಕ್ಲಾಸ್‌ ಹುಡುಗಿಯರೂ ದುಬಾರಿ ಬೆಲೆ ಕೊಟ್ಟ ಹೊಸ ಡ್ರೆಸ್‌ ಖರೀದಿ ಮಾಡ್ತಾರೆ. ಆದ್ರೆ ಈ ವಿಷ್ಯದಲ್ಲಿ ರಾಧಿಕಾ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮಲ್ಲಿದ್ದ ಹಳೆ ಲೆಹಂಗಾ ಧರಿಸಿ ಗಮನ ಸೆಳೆದಿದ್ದಾರೆ. ತಮ್ಮ ಮದುವೆ ಸಂಭ್ರಮದ ವೇಳೆ ಧರಿಸಿದ್ದ ಸುಮಾರು ಎರಡು ವರ್ಷದ ಹಳೆಯ ಲೆಹೆಂಗಾವನ್ನೇ ಅವರು ಈಗ ಧರಿಸಿದ್ದರು.

Related Articles

Related image1
Pearl Earrings: ಕಡಿಮೆ ಚಿನ್ನದಲ್ಲಿ ಮಾಡಿಸಿ ಮುತ್ತಿನೋಲೆ: ಇಲ್ಲಿವೆ ಸ್ಲೀಕ್ & ಸುಂದರ ಡಿಸೈನ್ಸ್
Related image2
ಬರೋಬ್ಬರಿ 700 ಗಂಟೆ ಕಸೂತಿ ಮಾಡಿದ ಚಿನ್ನದ ಗೌನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಇಶಾ ಅಂಬಾನಿ
35
ಲೆಹಂಗಾ ಡಿಸೈನ್
Image Credit : Asianet News

ಲೆಹಂಗಾ ಡಿಸೈನ್

ಈ ಸುಂದರ ಲೆಹೆಂಗಾವನ್ನು ಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದರು. ಕೆಂಪು ಮತ್ತು ಗುಲಾಬಿ ಬಣ್ಣಗಳ ಈ ಲೆಹೆಂಗಾದ ಮೇಲೆ ಆಕರ್ಷಕ ಹೂವಿನ ಕಸೂತಿ ಮಾಡಲಾಗಿತ್ತು. ರಾಧಿಕಾ ದುಪಟ್ಟಾವನ್ನು ಒಂದು ಭುಜದ ಮೇಲೆ ಸರಳವಾಗಿ ಹಾಕಿಕೊಂಡು ಡ್ರೆಸ್‌ ಗೆ ಮತ್ತಷ್ಟು ಮೆರಗು ನೀಡಿದ್ರು. ಅತಿಯಾದ ಅಲಂಕಾರಕ್ಕಿಂತ ಸರಳವಾದ ಡ್ರೇಪಿಂಗ್ ಅವರ ಲುಕ್ ಅನ್ನು ಇನ್ನಷ್ಟು ಎಲಿಗಂಟ್ ಆಗಿ ಮಾಡಿತ್ತು.

45
ರಾಧಿಕಾ ಆಭರಣ
Image Credit : Asianet News

ರಾಧಿಕಾ ಆಭರಣ

ಆಭರಣಗಳ ವಿಷಯದಲ್ಲೂ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರು. ಪ್ಲಾವರ್‌ ಡಿಸೈನ್ ಡೈಮಂಡ್ ಕಿವಿಯೋಲೆಗಳು, ಲೇಯರ್ಡ್ ನೆಕ್ಪೀಸ್, ಉಂಗುರಗಳು ಹಾಗೂ ಕ್ಲಾಸಿಕ್ ಸ್ಲೀಕ್ ಬನ್ ಹೇರ್ಸ್ಟೈಲ್ ಅವರ ನೋಟವನ್ನು ಮತ್ತಷ್ಟು ಮೆರಗುಗೊಳಿಸಿತು. ಮಿನಿಮಲ್ ಮೇಕಪ್ ಅವರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿತು.

55
ರಾಧಿಕಾ ಸಂದೇಶ
Image Credit : Asianet News

ರಾಧಿಕಾ ಸಂದೇಶ

ಭಾರತದ ಅತ್ಯಂತ ಶ್ರೀಮಂತರ ಮನೆ ಸೊಸೆ ರಾಧಿಕಾ, ಸುಂದರವಾಗಿ ಕಾಣಲು ಹೊಸ ಡ್ರೆಸ್ಸೇ ಬೇಕಿಲ್ಲ ಎಂಬುದನ್ನು ತಮ್ಮ ಲುಕ್‌ ಮೂಲಕ ತೋರಿಸಿದ್ದಾರೆ. ದುಬಾರಿ ಅಥವಾ ಹೊಸ ಉಡುಪಿಗಿಂತ ಅದನ್ನು ಆತ್ಮವಿಶ್ವಾಸದಿಂದ ಧರಿಸುವ ಶೈಲಿಯೇ ನಿಜವಾದ ಫ್ಯಾಷನ್. ಹಳೆಯ ಲೆಹೆಂಗಾವನ್ನೇ ಹೊಸದಾಗಿ ಧರಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ರಾಧಿಕಾ ಮರ್ಚಂಟ್
ಮುಕೇಶ್ ಅಂಬಾನಿ
ಅನಂತ್ ಅಂಬಾನಿ
ಫ್ಯಾಷನ್

Latest Videos
Recommended Stories
Recommended image1
Rani Haar: ಸೀರೆ ಮೇಲೆ ಈ ಒಂದು ರಾಣಿಹಾರ ಹಾಕಿದ್ರೆ ಸಾಕು, ಲುಕ್ಕೇ ಬದಲಾಗುತ್ತೆ: ಇಲ್ಲಿವೆ ಡಿಸೈನ್ಸ್!
Recommended image2
Coriander water for hair growth: ಕೊತ್ತಂಬರಿ ಬೀಜದ ನೀರನ್ನು ಹೀಗೆ ಬಳಸಿ.. ಕೂದಲು ವೇಗವಾಗಿ ಬೆಳೆಯುತ್ತೆ!
Recommended image3
Anklet Designs:ಈ ಕಾಲ್ಗೆಜ್ಜೆ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ
Related Stories
Recommended image1
Pearl Earrings: ಕಡಿಮೆ ಚಿನ್ನದಲ್ಲಿ ಮಾಡಿಸಿ ಮುತ್ತಿನೋಲೆ: ಇಲ್ಲಿವೆ ಸ್ಲೀಕ್ & ಸುಂದರ ಡಿಸೈನ್ಸ್
Recommended image2
ಬರೋಬ್ಬರಿ 700 ಗಂಟೆ ಕಸೂತಿ ಮಾಡಿದ ಚಿನ್ನದ ಗೌನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಇಶಾ ಅಂಬಾನಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved