ಡಿಸೆಂಬರ್ 1ರಿಂದ ಈ ಹಣಕಾಸಿನ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಡಿಸೆಂಬರ್ 1 ರಿಂದ ಹಲವಾರು ಹಣಕಾಸಿನ ನಿಯಮಗಳಲ್ಲಿ ಬದಲಾವಣೆಗಳಾಗಲಿದ್ದು ಈ ಬದಲಾವಣೆಗಳು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದ್ದು, ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

Significant changes in these financial rules from December 1 2024 mrq

ಬೆಂಗಳೂರು: ಡಿಸೆಂಬರ್ 1ರಿಂದ ಕೆಲವು ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗುತ್ತಿದ್ದು,  ಇದರಲ್ಲಿ ಕೆಲವು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.  ಹಾಗಾಗಿ ಜನಸಾಮಾನ್ಯರು ಸಹ ಬದಲಾಗುತ್ತಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಬ್ಯಾಂಕ್ ಸಾಲ, ಎಲ್‌ಪಿಜಿ ದರ, ಪಿಂಚಣಿ, ಯುಪಿಐ ಸೇರಿದಂತೆ ಕೆಲ ಪರೀಕ್ಷಾ ಮಾನದಂಡಗಳು ಸಹ ಡಿಸೆಂಬರ್ 1ರಿಂದ ಬದಲಾಗಲಿವೆ.

1.ಬ್ಯಾಂಕ್ ಸಾಲದ ನಿಯಮಗಳು: ಡಿಸೆಂಬರ್ 1ರಿಂದ ಕೆಲವು  ಬ್ಯಾಂಕ್ ಸಾಲಗಳ ಮೇಲಿನ ನಿಯಮಗಳು ಬದಲಾಗಲಿವೆ.  ಈ ನಿಯಮಗಳ ಬದಲಾವಣೆಯಿಂದ ಗೃಹಸಾಲ, ವೈಯಕ್ತಿಯ ಸಾಲದ ಬಡ್ಡದರದಲ್ಲಿ ವ್ಯತ್ಯಾಸವುಂಟಾಗುತ್ತದೆ. 
2.ಪಡಿತರ ಚೀಟಿ:  ಡಿಸೆಂಬರ್ 1ರಿಂದ ಪಡಿತರ ಚೀಟಿಯಲ್ಲಿ ಕೆಲವೊಂದು ನಿಯಮಗಳು ಸೇರ್ಪಡೆಯಾಗಲಿದ್ದು, ಇನ್ಮುಂದೆ ಪಡಿತರ ಪಡೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಲಿದೆ.  ಹಾಗೆ ವಂಚನೆ ತಡೆಯಲು ಬೆರಳಚ್ಚು ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. 

3.ಸಿಮ್ ಕಾರ್ಡ್:  ಹೊಸ ಸಿಮ್ ಕಾರ್ಡ್ ಖರೀದಿ ಮತ್ತು ಪರಿಶೀಲನೆಯ ನಿಯಮಗಳು ಸಹ ಡಿಸೆಂಬರ್ 1ರಿಂದ ಬದಲಾಗಲಿವೆ.  ಸಿಮ್ ಖರೀದಿಗೆ ಆಧಾರ್ ಕಾರ್ಡ್‌ನೊಂದಿಗೆ ಚಹರೆ ಗುರುತಿಸುವ ತಂತ್ರಜ್ಞಾನ ಆಕ್ಟಿವೇಟ್ ಮಾಡಲಾಗಿದೆ.  ಈ ನಿಯಮ ನಕಲಿ ಗುರುತಿನ ದಾಖಲೆ ನೀಡಿ ಸಿಮ್ ಖರೀದಿಸೋದನ್ನು ತಡೆಯಲಿದೆ.
4.ಪಿಂಚಣಿ ವ್ಯವಸ್ಥೆ: ಪಿಂಚಣಿ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಆದ್ದರಿಂದ ಪಿಂಚಣಿದಾರರು ಕಡ್ಡಾಯವಾಗಿ ತಮ್ಮ ಖಾತೆಯಿರೋ ಬ್ಯಾಂಕ್‌ಗೆ ತೆರಳಿ ಅಥವಾ ಆನ್‌ಲೈನ್ ಮೂಲಕ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು. 

5.ಯುಪಿಐ ಶುಲ್ಕಗಳು:  ಇನ್ಮುಂದೆ  ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ.  2000 ಅಥವಾ ಅದಕ್ಕಿಂತ ಕಡಿಮೆ ಹಣದ ವಹಿವಾಟಿನ ಮೇಲೆ ಯಾವುದೇ ಶುಲ್ಕ ಇರೋದಿಲ್ಲ. ಡಿಜಿಟಲ್ ಪಾವತಿಯನ್ನು ಉದ್ದೇಶಿಸಲು ಈ ಕ್ರಮ ಕೈಗೊಳ್ಳಲಾಗಿದೆ. 
6.ಬೋರ್ಡ್ ಪರೀಕ್ಷೆ ನಿಯಮಗಳು:   ಈ ಬಾರಿ ಬೋರ್ಡ್ ಪರೀಕ್ಷೆಗಳಲ್ಲಿ ಹೊಸ ನಿಯಮಗಳನ್ನುಮ ತರಲಾಗಿದ್ದು, ವಿದ್ಯಾರ್ಥಿಗಳಿಗೆ  ಪರೀಕ್ಷೆಯ ಮೊದಲು ವಿಷಯವನ್ನು ಆಯ್ಕೆ ಮಾಡಲು  ಅಥವಾ ಬದಲಾಯಿಸಲು ಅವಕಾಶ ನೀಡಲಾಗಿದೆ.  ಪರೀಕ್ಷೆಗೆ ಅಗತ್ಯವಿರುವ ದಾಖಲೆಗಳ ಸಲ್ಲಿಕೆ ಮತ್ತು ಪರಿಶೀಲನೆ ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಬ್ರೇಕ್ ಅಪ್ ನಂತ್ರ ಗಳಿಕೆಗೆ ಹೊಸ ದಾರಿ ಹುಡುಕಿದ ಮಲೈಕಾ ಅರೋರಾ!

7.ಹೊಸ ತೆರಿಗೆ ಪಾವತಿ ಮಾರ್ಗಸೂಚಿ ಮತ್ತು ಕ್ರೆಡಿಟ್ ಕಾರ್ಡ್:  ತೆರಿಗೆ ವಂಚನೆ ತಡೆಯಲು ತೆರಿಗೆದಾರರು ಕಡ್ಡಾಯವಾಗಿ ರಿಟರ್ನ್ಸ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು. ಕೆಲ ಖಾಸಗಿ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಪಾವತಿ ಮತ್ತು ಬಡ್ಡಿದರಗಳನ್ನು ಸಹ ಬದಲಾವಣೆ ಮಾಡುತ್ತಿರುತ್ತವೆ. ಇವುಗಳ ಬಗ್ಗೆ ಗ್ರಾಹಕರು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ.
8.ವಿಮಾನ ಪ್ರಯಾಣ: ಡಿಸೆಂಬರ್ 1ರಿಂದ  ವಿಮಾನಯಾನದಲ್ಲಿಯೂ ಕೆಲವು ಬದಲಾವಣೆಗಳು ಬರಲಿವೆ.  ಪ್ರಯಾಣಿಕರು ಪ್ರಯಾಣಕ್ಕೂ ಮೊದಲು ಎರಡು ಗಂಟೆ ನಿಲ್ದಾಣದಲ್ಲಿದ್ದು,  ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಸಲಹೆ ನೀಡಲಾಗಿದೆ. ಹಾಗೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿಯೂ ಕೆಲ ಬದಲಾವಣೆಗಳಾಗಲಿವೆ. 

9.ಚಾಲನ ನಿಯಮಗಳು: ವಾಹನ ಚಾಲಕರಿಗೆ ವೇಗದ  ಮಿತಿ, ಸೀಟ್ ಬೆಲ್ಟ್ ಕಡ್ಡಾಯ, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ಎಲ್ಲಾ ಟ್ರಾಫಿಕ್ ನಿಯಮಗಳಲ್ಲಿ ಬದಲಾವಣೆಯಾಗಲಿವೆ. ನಿಯಮ ಉಲ್ಲಂಘನೆ ಮಾಡೋರಿಗೆ ಕಠಿಣ ದಂಡ ಇ-ಚಲನ್  ಮೂಲಕ ನಿಮ್ಮ ಮೊಬೈಲ್‌ಗೆ ಬರಲಿದೆ.
10.ಎಲ್‌ಪಿಜಿ ದರ:  ಪ್ರತಿ ತಿಂಗಳು ತೈಲ ಕಂಪನಿಗಳು ಎಲ್‌ಪಿಜಿ ದರದಲ್ಲಿ ಬದಲಾವಣೆಯನ್ನು ತರುತ್ತವೆ.  ಸಾಮಾನ್ಯವಾಗಿ ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಳಿತ  ಆಗುತ್ತಿರುತ್ತದೆ.

ಇದನ್ನೂ ಓದಿ: ಐಡಿಯಾ ಇದ್ರೆ ಬ್ಯುಸಿನೆಸ್ ಆರಂಭಿಸೋಕೆ ಸರ್ಕಾರ ಕೊಡುತ್ತೆ ₹30 ಲಕ್ಷ; ಇದು ಯಾರಿಗೆಲ್ಲಾ ಸಿಗುತ್ತೆ?

Latest Videos
Follow Us:
Download App:
  • android
  • ios