Asianet Suvarna News Asianet Suvarna News

Loan and Saving: ಮೊದಲು ಮಾಡ್ಬೇಕಾದ ಕೆಲ್ಸ ಯಾವುದು? ಸಾಲ ಮರುಪಾವತಿಯಾ ಅಥವಾ ನಿವೃತ್ತಿ ಜೀವನಕ್ಕೆ ಉಳಿತಾಯನಾ?

ನಿವೃತ್ತಿ ಜೀವನಕ್ಕಾಗಿರೋ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸೋ ಮುನ್ನ ಎಲ್ಲ ಸಾಲಗಳನ್ನು ಮರುಪಾವತಿಸಬೇಕಾ? ಅಥವಾ ಸಾಲ ಮರುಪಾವತಿ ಹಾಗೂ ನಿವೃತ್ತಿ ಬದುಕಿಗಾಗಿ ಉಳಿತಾಯ ಎರಡನ್ನೂ ಒಟ್ಟಿಗೆ ಮಾಡ್ಬೇಕಾ? ಇಂಥ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಹಾಗಾದ್ರೆ ಇವೆರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಮಾಹಿತಿ.

Should you pay off your home loan before investing for retirement? here is answer
Author
Bangalore, First Published Feb 18, 2022, 9:25 PM IST | Last Updated Feb 18, 2022, 9:25 PM IST

Business Desk: ನಿವೃತ್ತಿ (Retirement) ನಂತರದ ಜೀವನಕ್ಕೆ ಉಳಿತಾಯ (Saving) ಯೋಜನೆಯಲ್ಲಿ(Scheme) ಹೂಡಿಕೆ (Invest) ಮಾಡೋ ಮುನ್ನ ಎಲ್ಲ ಸಾಲಗಳನ್ನು (Loans) ತೀರಿಸಬೇಕಾ ಅಥವಾ ಸಾಲಗಳನ್ನು ತೀರಿಸೋದ್ರ ಜೊತೆಗೆ ಉಳಿತಾಯ (Saving) ಮಾಡೋದು ಉತ್ತಮವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಬಹುತೇಕರನ್ನು ಕಾಡುತ್ತದೆ. ಈ ಎರಡೂ ಯೋಚನೆಗಳನ್ನು ಬೆಂಬಲಿಸೋರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಇವೆರಡೂ ಯೋಚನೆಗಳು ಉತ್ತಮವೇ. ಗೃಹಸಾಲದಂತಹ (Home loan) ಬೃಹತ್ ಮೊತ್ತವನ್ನು ತೀರಿಸಿದ್ರೆ ಮಾನಸಿಕ ನೆಮ್ಮದಿ ಹಾಗೂ ಸುಭದ್ರತೆಯ ಭಾವನೆ ಮೂಡೋದಂತೂ ಖಂಡಿತಾ. ಈ ನೆಮ್ಮದಿಯ ಭಾವನೆಯನ್ನು ಹಣ ಅಥವಾ ಸಾಲದ ಮರುಪಾವತಿ (Loan Repayment) ಲೆಕ್ಕಾಚಾರದ ಜೊತೆಗೆ ಹೋಲಿಕೆ  ಮಾಡಿ ಸಮರ್ಥಿಸಲು ಸಾಧ್ಯವೂ ಇಲ್ಲ. ಆದ್ರೆ ಕೆಲವು ಸಾಲವನ್ನು ನಿಧಾನಕ್ಕೆ ಮರುಪಾವತಿ ಮಾಡೋದು ಕೂಡ ಉತ್ತಮವೇ. ಏಕೆ ಅನ್ನೋದನ್ನು ಹಂತ ಹಂತವಾಗಿ ನೋಡೋಣ.

ಯಾವ ಸಾಲವನ್ನು ನಿಧಾನಕ್ಕೆ ಪಾವತಿಸಬಹುದು?
ಸಾಲ (Loan) ಅಂದ ತಕ್ಷಣ ನಕಾರಾತ್ಮಕ ಭಾವನೆ ಮೂಡೋದು ಸಹಜ. ಆದ್ರೆ ಭಾರತದಂತಹ ರಾಷ್ಟ್ರದಲ್ಲಿ ಸ್ವಲ್ಪ ಮೊತ್ತದ ಸಾಲವಿದ್ರೆ ತೆರಿಗೆ ಉಳಿತಾಯ (Taxe saving) ಮಾಡಲು ಕೂಡ ಸಾಧ್ಯವಿದೆ. ಹೀಗಾಗಿ ಎಲ್ಲ ಸಾಲಗಳು ವ್ಯಕ್ತಿಯ ಆರ್ಥಿಕ ಬೆಳವಣಿಗೆಗೆ (Economical Growth) ಮಾರಕವಲ್ಲ. ಆದ್ರೆ ಯಾವುದು ಒಳ್ಳೆಯ ಸಾಲ ಹಾಗೂ ಯಾವುದು ಕೆಟ್ಟ ಸಾಲ ಎಂಬ ಮಾಹಿತಿಯಿರೋದು ಮುಖ್ಯ. ಅಧಿಕ ಬಡ್ಡಿದರ (Interest) ಹೊಂದಿರೋ ವೈಯಕ್ತಿಕ ಸಾಲ (Personal Loan), ಕ್ರೆಡಿಟ್ ಕಾರ್ಡ್ ಸಾಲ (Credit card loan) ಇತ್ಯಾದಿ ವ್ಯಕ್ತಿಯ ಆರ್ಥಿಕ ಸ್ಥಿತಿಗತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲವು. ಆರ್ಥಿಕ ಆರೋಗ್ಯಕ್ಕೆ ಹಿತಕರವಲ್ಲದ ಈ ಸಾಲಗಳನ್ನು ಆದಷ್ಟು ಶೀಘ್ರವಾಗಿ ಪಾವತಿಸೋದು ಉತ್ತಮ. ಆದ್ರೆ ಗೃಹ ಸಾಲವನ್ನು ಮುಂದುವರಿಸೋದು ಆರ್ಥಿಕ ಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರೋದಿಲ್ಲ. ಗೃಹಸಾಲ ಹೊಂದಿರೋರು ಆದಾಯ ತೆರಿಗೆ ವಿನಾಯ್ತಿ (Income Tax relaxation) ಪಡೆಯಲು ಕೂಡ ಅವಕಾಶವಿದೆ. ಅಲ್ಲದೆ, ಗೃಹಸಾಲದ ಇಎಂಐ (EMI) ಪಾವತಿಸೋ ಜೊತೆಗೆ ನಿವೃತ್ತಿಗೂ ಉಳಿತಾಯ ಮಾಡಲು ಸಾಧ್ಯವಿದೆ. ಇಲ್ಲವಾದ್ರೆ ಇನ್ನೂ ಒಂದು ಉಪಾಯ ಮಾಡ್ಬಹುದು. ಅದೇನಪ್ಪ ಅಂದ್ರೆ ಗೃಹಸಾಲವನ್ನು ನಿಗದಿತ ಅವಧಿಗೂ ಮುನ್ನ ಪಾವತಿಸೋದು. ಉದಾಹರಣೆಗೆ ನೀವು 25 ವರ್ಷಗಳ ಅವಧಿಗೆ ಗೃಹಸಾಲ ಪಡೆದಿದ್ದೀರಿ ಎಂದು ಭಾವಿಸೋಣ. 15 ವರ್ಷಕ್ಕೆ ತೀರಿಸಿಬಿಡಿ. ಇದಕ್ಕಾಗಿ ಪ್ರತಿವರ್ಷ ನಿಮ್ಮ ಬಳಿಯಿರೋ ಉಳಿತಾಯದ ಹಣವನ್ನು ಸಾಲದ ಖಾತೆಗೆ ಹಾಕಿ. ಇದ್ರಿಂದ ಉಳಿದ 10 ವರ್ಷಗಳಲ್ಲಿ ನಿವೃತ್ತಿ ಬದುಕಿಗಾಗಿ ಕೂಡಿಡೋ ಕಾರ್ಯ ಮಾಡಬಹುದು. 

LIC IPO : ಮಾರ್ಚ್ 11ಕ್ಕೆ ಬರೋದು ಬಹುತೇಕ ಖಚಿತ, ಇಲ್ಲಿದೆ ಮತ್ತಷ್ಟು ವಿವರ!

ಸಾಲ ತೀರಿಸೋ ಜೊತೆಗೆ ನಿವೃತ್ತಿ ಬದುಕಿಗೆ ಉಳಿತಾಯ ಮಾಡಲು ಕೆಲವು ಸಲಹೆ
*ಗೃಹಸಾಲ (Home Loan), ವೈಯಕ್ತಿಕ ಸಾಲ (Personal loan), ಕಾರು ಸಾಲ (Car loan) ಸೇರಿದಂತೆ ಎಲ್ಲ ಸಾಲಗಳ ಇಎಂಐಗಳನ್ನು(EMIs) ನಿಯಮಿತವಾಗಿ ಪಾವತಿಸಿ.
*ಸಮರ್ಪಕ ಆರೋಗ್ಯ (Health) ಹಾಗೂ ಜೀವ ವಿಮೆ (Life Insurance) ಮಾಡಿಸಿಡಿ.
*ತುರ್ತು (Emergency) ಸಂದರ್ಭಕ್ಕೆಂದು ಒಂದಿಷ್ಟು ಹಣವನ್ನು ಉಳಿತಾಯ ಮಾಡಲು ಮರೆಯಬೇಡಿ. ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾಗೋ ಪ್ರಸಂಗಗಳನ್ನು ನಿಭಾಯಿಸಲು ತುರ್ತುನಿಧಿ ಅಗತ್ಯ.

NSE Scam: ಷೇರುಪೇಟೆ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣಗೆ ಐಟಿ ಶಾಕ್‌!

*ಒಂದು ವೇಳೆ ಪ್ರತಿ ತಿಂಗಳ ವೇತನ (Income) ಇಎಂಐ ಪಾವತಿಸಿ ನಿತ್ಯದ ವೆಚ್ಚ ಸರಿತೂಗಿಸಲಷ್ಟೇ ಸಾಲುತ್ತೆ ಅಂತಾದ್ರೆ ಆದಾಯ ಹೆಚ್ಚಿಸಿಕೊಳ್ಳೋ ಮಾರ್ಗದ ಬಗ್ಗೆ ಚಿಂತಿಸಿ. ಏಕೆಂದ್ರೆ ಪ್ರತಿ ತಿಂಗಳು ಸ್ವಲ್ಪವಾದ್ರೂ ಉಳಿತಾಯ ಮಾಡಿದ್ರಷ್ಟೇ ಭವಿಷ್ಯವನ್ನು ಧೈರ್ಯದಿಂದ ಎದುರಿಸಬಹುದು.
*ನಿವೃತ್ತಿ ಜೀವನ (Retirement Life), ಮಕ್ಕಳ ಶಿಕ್ಷಣ (Children's education) ಇತ್ಯಾದಿ ವೆಚ್ಚಗಳಿಗಾಗಿ ಎಷ್ಟು ಹೂಡಿಕೆ (Invest) ಮಾಡ್ಬೇಕು ಎಂಬುದನ್ನು ನಿರ್ಧರಿಸಿ.
*ಇಎಂಐ ಪಾವತಿ (EMI Payment), ಹೂಡಿಕೆ (Investment), ಉಳಿತಾಯದ (Savings) ಜೊತೆಗೆ ತಕ್ಷಣಕ್ಕೆ ಲಭ್ಯವಾಗುವಂತೆ ಒಂದಿಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿರಲಿ. 

Latest Videos
Follow Us:
Download App:
  • android
  • ios