ಗಲ್ಲಿಯಲ್ಲಿ ಸ್ಕೂಟರ್‌ನಲ್ಲೇ ಬಿಸ್ಕೆಟ್ ಮಾರಿ ಬಹುಕೋಟಿ ಆಸ್ತಿಯ ಒಡೆಯನಾದ ಸುಬ್ರತೋ ರಾಯ್
ಸುಬ್ರತಾ ರಾಯ್ ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದರೂ ಅವರು ಸಾಗಿ ಬಂದ ದಾರಿ ಅಷ್ಟು ಸುಲಭದ್ದಾಗಿರಲ್ಲಿಲ್ಲ. ಸ್ಕೂಟರ್‌ನಲ್ಲಿ ಬಿಸ್ಕತ್ತು ಮಾರಾಟದಿಂದ ಹಿಡಿದು ಬಹುಕೋಟಿ ಸಂಸ್ಥೆಯನ್ನು ನಿರ್ಮಿಸುವ ವರೆಗೆ, ಈ ಭಾರತೀಯ ಉದ್ಯಮಿಯ ಸ್ಪೂರ್ತಿದಾಯಕ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ.
ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ಮುಂಬೈನಲ್ಲಿ ನಿಧನರಾಗಿದ್ದಾರೆ. ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸುಬ್ರತಾ ರಾಯ್ ಅವರನ್ನು ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ರತಾ ರಾಯ್ ಅವರು ಇಹಲೋಕ ತ್ಯಜಿಸಿದ್ದಾರೆ. ಸುಬ್ರತಾ ರಾಯ್, ಆಂಬಿ ವ್ಯಾಲಿ ಸಿಟಿ, ಸಹಾರಾ ಮೂವೀ ಸ್ಟುಡಿಯೋಸ್, ಏರ್ ಸಹಾರಾ, ಉತ್ತರ ಪ್ರದೇಶ ವಿಝಾರ್ಡ್ಸ್ ಮತ್ತು ಫಿಲ್ಮಿ ಸೇರಿದಂತೆ ಹಲವಾರು ಕಂಪನಿಗಳನ್ನು ಸಹರಾ ಇಂಡಿಯಾ ಪರಿವಾರ್ ನಡೆಸುತ್ತಿದೆ.
ಸುಬ್ರತಾ ರಾಯ್ ಕೋಟಿ ಕೋಟಿ ಆಸ್ತಿಯ ಒಡೆಯನಾಗಿದ್ದರೂ ಅವರು ಸಾಗಿ ಬಂದ ದಾರಿ ಅಷ್ಟು ಸುಲಭದ್ದಾಗಿರಲ್ಲಿಲ್ಲ. ಸ್ಕೂಟರ್‌ನಲ್ಲಿ ಬಿಸ್ಕತ್ತು ಮಾರಾಟದಿಂದ ಹಿಡಿದು ಬಹುಕೋಟಿ ಸಂಸ್ಥೆಯನ್ನು ನಿರ್ಮಿಸುವವರೆಗೆ, ಈ ಭಾರತೀಯ ಉದ್ಯಮಿಯ (Indian Businessman) ಸ್ಪೂರ್ತಿದಾಯಕ ಜೀವನದ (Life) ಬಗ್ಗೆ ಇಲ್ಲಿದೆ ಮಾಹಿತಿ.
ಹೊಟೇಲ್ ಉದ್ಯಮಕ್ಕೆ ಫೈವ್ ಸ್ಟಾರ್ ಆಯಾಮ ನೀಡಿದ ಪಿಆರ್‌ಎಸ್ ಒಬೇರಾಯ್
ಸುಬ್ರತಾ ರಾಯ್ ಯಾರು?
ಜೂನ್ 10, 1948ರಂದು, ಸುಬ್ರತಾ ರಾಯ್ ಬಿಹಾರದ ಅರಾರಿಯಾದಲ್ಲಿ ಬಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಪೋಷಕರು ಛಬಿ ಮತ್ತು ಸುಧೀರ್ ಚಂದ್ರ ರಾಯ್. ಅವರ ತಾಯಿ ಮತ್ತು ತಂದೆ ಶ್ರೀಮಂತ ಭಾಗ್ಯಕುಲ್ ಜಮೀನ್ದಾರ್ ಭೂಮಾಲೀಕ ಕುಟುಂಬದಿಂದ ಬಂದವರು. ಪೂರ್ವ ಬಂಗಾಳದ (ಈಗ ಬಾಂಗ್ಲಾದೇಶ) ಢಾಕಾ, ಬಿಕ್ರಮ್‌ಪುರದಲ್ಲಿ ವಾಸಿಸುತ್ತಿದ್ದರು. ಕೋಲ್ಕತ್ತಾದ ಹೋಲಿ ಚೈಲ್ಡ್ ಇನ್‌ಸ್ಟಿಟ್ಯೂಟ್, ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಸುಬ್ರತಾ ರಾಯ್ ತಮ್ಮ ಶಿಕ್ಷಣವನ್ನು (Education) ಮುಂದುವರೆಸಿದರು. ನಂತರ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ಗೋರಖ್‌ಪುರದಲ್ಲಿ ರಾಯ್ ತಮ್ಮ ಮೊದಲ ವ್ಯಾಪಾರವನ್ನು ಆರಂಭಿಸಿದರು. ಆದರೆ ಅಕಾಲಿಕವಾಗಿ ತಂದೆ ಮೃತಪಟ್ಟ ಕಾರಣ, ರಾಯ್ ತನ್ನ ವ್ಯಾಪಾರ ಮಾಡುವುದು ಕಷ್ಟವಾಯಿತು. ಯಾವುದೇ ಜಾಬ್‌ಗೆ ಜಾಯಿನ್ ಆಗಲು ಸಾಧ್ಯವಾಗಲ್ಲಿಲ್ಲ. ಹೀಗಾಗಿ ರಾಯ್ ಗೋರಖ್‌ಪುರನ ಗಲ್ಲಿಗಳಲ್ಲಿ ನಮ್‌ಕೀನ್ ಮಾರಾಟ ಮಾಡಲು ಆರಂಭಿಸಿದರು. ಆರಂಭದಲ್ಲಿ ಸ್ಪಲ್ಪ ಮಟ್ಟಿಗೆ ಕಡಿಮೆ ಸೇಲ್ ಆದರೂ ನಂತರದ ದಿನಗಳಲ್ಲಿ ನಮ್‌ಕೀನ್ ಮಾರಾಟ (Sale) ಉತ್ತಮಗೊಂಡಿತು. ಹೀಗಾಗಿ ಇವರು ತಾವು ಮಾರಾಟ ಮಾಡುವ ತಿಂಡಿಗಳಿಗೆ ಜಯಾ ಪ್ರಾಡಕ್ಟ್ ಎಂಬ ಹೆಸರನ್ನಿಟ್ಟರು.
ಬ್ರಿಟನ್ ಜನಪ್ರಿಯ ಉದ್ಯಮಿ ಭಾರತದ ಬಿಲಿಯನೇರ್ ಅಳಿಯ;ಇವರ ಸಂಪತ್ತು ಎಷ್ಟು ಕೋಟಿ ಗೊತ್ತಾ?
1978ರಲ್ಲಿ ಸುಬ್ರತಾ ರಾಯ್ ಸಹಾರಾವನ್ನು ಪ್ರಾರಂಭಿಸಿದಾಗ, ಅವರ ಜೇಬಿನಲ್ಲಿ ಕೇವಲ 2000 ರೂ. ಇತ್ತು. 1970ರ ದಶಕದಿಂದಲೂ ಸುಬ್ರತಾ ರಾಯ್ ಗೋರಖ್‌ಪುರದ ಸುತ್ತಲೂ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. 1976 ರಲ್ಲಿ, ಸಹಾರಾ ಫೈನಾನ್ಸ್ ನಿರ್ವಹಿಸುತ್ತಿದ್ದ ಚಿಟ್ ಫಂಡ್ ಅನ್ನು ರಾಯ್ ವಹಿಸಿಕೊಂಡರು. ಆರಂಭದಲ್ಲಿ ಇದು ಸಕ್ಸಸ್ ಆಗಲ್ಲಿಲ್ಲ. ಹಲವು ಬಾರಿ ನಷ್ಟವನ್ನು ಅನುಭವಿಸಿತು. 1978ರಲ್ಲಿ, ಅವರು ಅದರ ಆರ್ಥಿಕ ಚೌಕಟ್ಟನ್ನು ಮಾರ್ಪಡಿಸಿದರು. ಸಹಾರಾ ಹೆಚ್ಚು ಹಳೆಯ ಪೀರ್‌ಲೆಸ್ ಗ್ರೂಪ್‌ನ ಹಣಕಾಸು ವ್ಯವಸ್ಥೆಯನ್ನು ಬಳಸಿಕೊಂಡಿದೆ ಎಂದು ಹೇಳಲಾಗುತ್ತದೆ. ರೆಸಿಡ್ಯೂರಿ ನಾನ್-ಬ್ಯಾಂಕಿಂಗ್ ಕಂಪನಿಗಳು (RNBCs) ಎಂದು ಕರೆಯಲ್ಪಡುವ ಈ ಘಟಕಗಳು ಬಹಳ ಸಣ್ಣ ಠೇವಣಿಗಳನ್ನು ತೆಗೆದುಕೊಳ್ಳುತ್ತವೆ.
ರಾಯ್ 1990 ರ ದಶಕದಲ್ಲಿ ಲಕ್ನೋಗೆ ಸ್ಥಳಾಂತರಗೊಂಡರು, ಅಲ್ಲಿ ಸಹಾರಾದ ಪ್ರಧಾನ ಕಛೇರಿ ಇದೆ. ಅಲ್ಲಿಂದ ಸಹಾರಾ ಗ್ರೂಪ್, ಭಾರತದ ಅತಿದೊಡ್ಡ ಉದ್ಯಮವಾಗಿ ಗುರುತಿಸಿಕೊಂಡಿತು. ಪ್ರಸ್ತುತ, ಕಂಪನಿಯು ಹಣಕಾಸು ಸೇವೆಗಳು, ರಿಯಲ್ ಎಸ್ಟೇಟ್, ಶಿಕ್ಷಣ, ಮಾಧ್ಯಮ, ಆರೋಗ್ಯ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.
ಲಂಡನ್‌ನಲ್ಲಿರುವ ಪ್ರಸಿದ್ಧ ಗ್ರೋಸ್ವೆನರ್ ಹೌಸ್ ಹೋಟೆಟ್‌ನ್ನು ಸಹಾರಾ 2010 ರಲ್ಲಿ ಸ್ವಾಧೀನಪಡಿಸಿಕೊಂಡಿತು. ನ್ಯೂಯಾರ್ಕ್ ನಗರದ ಡ್ರೀಮ್ ಡೌನ್‌ಟೌನ್ ಹೋಟೆಲ್ ಮತ್ತು ಐತಿಹಾಸಿಕ ಪ್ಲಾಜಾ ಹೋಟೆಲ್‌ನ್ನು 2012ರಲ್ಲಿ ಸ್ವಾಧೀನಪಡಿಸಿಕೊಂಡಿತು. ಸಹಾರಾ 9 ಕೋಟಿಗೂ ಹೆಚ್ಚು ಠೇವಣಿದಾರರು ಮತ್ತು ಹೂಡಿಕೆದಾರರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.