ಬ್ರಿಟನ್ ಜನಪ್ರಿಯ ಉದ್ಯಮಿ ಭಾರತದ ಬಿಲಿಯನೇರ್ ಅಳಿಯ;ಇವರ ಸಂಪತ್ತು ಎಷ್ಟು ಕೋಟಿ ಗೊತ್ತಾ?
ಬ್ರಿಟನ್ ನಲ್ಲಿ ಜನಪ್ರಿಯತೆ ಗಳಿಸಿರುವ ಭಾರತೀಯ ಮೂಲದ ಸಿಇಒಗಳಲ್ಲಿ ಅಮಿತ್ ಭಾಟಿಯಾ ಕೂಡ ಒಬ್ಬರು. ಇವರು ಭಾರತದ ಶ್ರೀಮಂತ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಅಳಿಯ.
Business Desk: ವಿದೇಶಿ ನೆಲದಲ್ಲಿ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡ ಭಾರತೀಯ ಮೂಲದವರು ಅನೇಕರಿದ್ದಾರೆ. ಅಂಥವರಲ್ಲಿ ಅಮಿತ್ ಭಾಟಿಯಾ ಕೂಡ ಒಬ್ಬರು. ಬ್ರಿಟನ್ ನಲ್ಲಿ ಹೂಡಿಕೆ ಸಂಸ್ಥೆ ಪ್ರಾರಂಭಿಸಿ ಯಶಸ್ಸು ಕಂಡಿರುವ ಅಮಿತ್ ಭಾರತದ ಶ್ರೀಮಂತ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಅಳಿಯ. ಬ್ರಿಟಿಷ್ -ಇಂಡಿಯನ್ ಉದ್ಯಮಿಯಾಗಿರುವ ಇವರು ಸೋರ್ಡ್ ಫಿಶ್ ಹೂಡಿಕೆ ಸಂಸ್ಥೆಯ ಸ್ಥಾಪಕರು. ಇದು ಖಾಸಗಿ ಈಕ್ವಿಟಿ/ವೆಂಚರ್ ಫಂಡ್ ಆಗಿದೆ. ಇನ್ನು ಈ 44 ವರ್ಷದ ಉದ್ಯಮಿ ಸೋರ್ಡ್ ಫಿಶ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ಎಂಬ ಹೂಡಿಕೆ ನಿರ್ವಹಣೆ ಕಂಪನಿಯನ್ನು ಕೂಡ ಹೊಂದಿದ್ದಾರೆ. ಮಿತ್ತಲ್ ಭಾರತದ ಎರಡನೇ ಅತೀ ಶ್ರೀಮಂತ ಗಣಿ ಉದ್ಯಮಿಯಾಗಿದ್ದು, ಫೋರ್ಬ್ಸ್ ಪ್ರಕಾರ ಇವರ ನಿವ್ವಳ ಸಂಪತ್ತು 1,28,060 ಕೋಟಿ ರೂ. ಲಕ್ಷ್ಮೀ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್ ಅವರನ್ನು ಅಮಿತ್ ಭಾಟಿಯಾ 2004ರಲ್ಲಿ ವಿವಾಹವಾಗಿದ್ದರು. ಇನ್ನು ಇವರು ಲಂಡನ್ ಕ್ವೀನ್ಸ್ ಪಾರ್ಕ್ ರೇಂಜರ್ಸ್ ಫುಟ್ ಬಾಲ್ ಕ್ಲಬ್ ಮುಖ್ಯಸ್ಥರು ಕೂಡ ಆಗಿದ್ದಾರೆ. ಇತ್ತೀಚೆಗೆ ಈ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಮೆರ್ರಿಲ್ ಲಿಂಚ್ ಹಾಗೂ ಮಾರ್ಗನ್ ಸ್ಟ್ಯಾನ್ಲೆಯಲ್ಲಿ ಲಕ್ಷ್ಮೀ ಮಿತ್ತಲ್ ವೃತ್ತಿಜೀವನ ಪ್ರಾರಂಭಿಸಿದ್ದರು.
ಲಂಡನ್ ಕ್ರೆಡಿಟ್ ಸುಸ್ಸೆ ಫಸ್ಟ್ ಬೂಸ್ಟನ್ ನಲ್ಲಿ ಕಾರ್ಯನಿರ್ವಹಿಸಿದ್ದ ಅಮಿತ್ ಭಾಟಿಯಾ, 2004ರಲ್ಲಿ ಸೋರ್ಡ್ ಫಿಶ್ ಇನ್ವೆಸ್ಟ್ ಮೆಂಟ್ಸ್ ಪ್ರಾರಂಭಿಸಿದ್ದರು. 2013ರಲ್ಲಿ ಭಾಟಿಯಾ ಅವರನ್ನು ಹೋಪ್ ಕನ್ಸಟ್ರಕ್ಷನ್ ಮೆಟೀರಿಯಲ್ಸ್ ಎಕ್ಸಿಕ್ಯುಟಿವ್ ಚೇರ್ಮನ್ ಆಗಿ ನೇಮಕ ಮಾಡಲಾಗಿತ್ತು. ಬ್ರೀಡನ್ ಪಿಎಲ್ ಸಿಗೆ ಇದನ್ನು ಮಾರಾಟ ಮಾಡಲು ಮುನ್ನ ಇದು ಇಂಗ್ಲೆಂಡ್ ನ ಅತೀದೊಡ್ಡ ಸ್ವತಂತ್ರ ಬಿಲ್ಡಿಂಗ್ ಮೆಟೀರಿಯಲ್ಸ್ ಉದ್ಯಮವಾಗಿತ್ತು.
ಭಾರತದ ಅತ್ಯಂತ ಕಿರಿಯ ಬಿಲಿಯನೇರ್, ಐಐಟಿಯಲ್ಲಿ ಓದದ ಶ್ರೀಮಂತ ಕನ್ನಡಿಗ 9152 ಕೋಟಿ ರೂ ಆಸ್ತಿಗೆ ಒಡೆಯ
ಅಮಿತ್ ಭಾಟಿಯಾ ಹುಟ್ಟಿದ್ದು ಲಂಡನ್ ನಲ್ಲಿ, ಆದರೆ ಅವರು ಶಿಕ್ಷಣ ಪೂರ್ಣಗೊಳಿಸಿದ್ದು ನವದೆಹಲಿಯಲ್ಲಿ. ನವದೆಹಲಿಯ ಕೊಲಂಬಿಯಾ ಸ್ಕೂಲ್ ನಲ್ಲಿ 1995ರ ತನಕ ಅವರು ಶಿಕ್ಷಣ ಪಡೆದರು. ಹಾಗೆಯೇ ತಮ್ಮ ಕಾಲೇಜು ಶಿಕ್ಷಣವನ್ನು ಲಂಡನ್ ನ ದುಲ್ವಿಚ್ ಕಾಲೇಜ್ ನಲ್ಲಿ ಪೂರ್ಣಗೊಳಿಸಿದ್ದರು. ಇನ್ನು ಕಾರ್ನೆಲ್ ಯುನಿವರ್ಸಿಟಿಯಲ್ಲಿ ಭಾಟಿಯಾ ಅರ್ಥಶಾಸ್ತ್ರದ ಅಧ್ಯಯನ ನಡೆಸಿದ್ದರು. ಪ್ರಸ್ತುತ ಅವರು ಕಾರ್ನೆಲ್ ಯುನಿವರ್ಸಿಟಿ ಇಂಟರ್ ನ್ಯಾಷಲ್ ಮಂಡಳಿಯಲ್ಲಿ ಕೂಡ ಇದ್ದಾರೆ.
ಅಮಿತ್ ಭಾಟಿಯಾ ಅವರಿಗೆ ಇನ್ ಸ್ಟಾಗ್ರಾಮ್ ನಲ್ಲಿ 198K ಫಾಲೋವರ್ಸ್ ಇದ್ದಾರೆ. ಇನ್ನು ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ಸಂಬಂಧಿಸಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇನ್ನು ಭಾಟಿಯಾ ಇಂಗ್ಲೆಂಡ್ ಮೆಟ್ರೋ ಬ್ಯಾಂಕ್ ಸಲಹಾ ಸಮಿತಿಯಲ್ಲಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. 2013ರ ಮೇನಲ್ಲಿ ಥೆರೇಸಾ ಅವರು ಅಮಿತ್ ಅವರಿಗೆ ಯುವ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಕೂಡ.
ಭಾರತೀಯ ಬಿಲಿಯನೇರ್‌ನ ಸೊಸೆ, ಜರ್ಮನ್‌ನಲ್ಲಿ ದಿನಕ್ಕೆ ಕೋಟಿ ಕೋಟಿ ಗಳಿಸುವ ಬೃಹತ್ ಉದ್ಯಮಿ!
ಐದು ವರ್ಷಗಳ ಕಾಲ ಕ್ವೀನ್ ಪಾರ್ಕ್ ರೇಂಜರ್ಸ್ ಚೇರ್ಮನ್ ಆಗಿದ್ದ ಅಮಿತ್ ಭಾಟಿಯಾ ಕೆಲವು ದಿನಗಳ ಹಿಂದೆಯಷ್ಟೇ ಈ ಹುದ್ದೆಯಿಂದ ಕೆಳಗಿಳಿದಿದ್ದಾರೆ. 'ತುಂಬಾ ಬೇಸರದಿಂದಲೇ ಈ ನಿರ್ಧಾರ ಕೈಗೊಂಡಿದ್ದು, ಕ್ಲಬ್ ನ ಅತ್ಯುತ್ತಮ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಂಡಿರೋದಾಗಿ' ಭಾಟಿಯಾ ಕ್ಲಬ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದಾರೆ.
ಅಮಿತ್ ಭಾಟಿಯಾ ಅನೇಕ ಸಮಾಜಮುಖಿ ಕೆಲಸಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2009ರ ಜನವರಿಯಲ್ಲಿ ಭಾಟಿಯಾ ಅವರನ್ನು ಕ್ಯುಪಿಆರ್ ಮುಖ್ಯಸ್ಥರನ್ನಾಗಿ ಕೂಡ ನೇಮಕ ಮಾಡಲಾಗಿತ್ತು. ಗ್ರೇಟರ್ ಲಂಡನ್ ಪ್ರದೇಶದಲ್ಲಿ ಈ ಟ್ರಸ್ಟ್ ಸಾವಿರಾರು ಮಕ್ಕಳ ಜೀವನವನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.