SBI Alert: ಗ್ರಾಹಕರೇ ಗಮನಿಸಿ, ನಾಳೆ, ನಾಡಿದ್ದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ

*ಶನಿವಾರ (ಡಿ.11) ಹಾಗೂ ಭಾನುವಾರ (ಡಿ.12) SBI ಇ-ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ
*ನಾಳೆ ಎರಡನೇ ಶನಿವಾರವಾದ ಕಾರಣ ಬ್ಯಾಂಕಿಗೂ ರಜೆ
*INB/ Yono / Yono Lite / Yono Business / UPI  ಸೇವೆಗಳು ಲಭ್ಯವಿಲ್ಲ

SBI YONO UPI net banking services to be unavailable tomorrow (Dec10) anu

ನವದೆಹಲಿ (ಡಿ.10): ಭಾರತದ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರೋ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ನಾಳೆ (ಡಿ.11) ನಿರ್ದಿಷ್ಟ ಅವಧಿ ಕಾರ್ಯನಿರ್ವಹಿಸೋದಿಲ್ಲ. ನಿಗದಿತ ನಿರ್ವಹಣಾ ಚಟುವಟಿಕೆಯ ಹಿನ್ನೆಲೆಯಲ್ಲಿ ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳ (Internet banking services) ಬಳಕೆದಾರರು ಇಂಟರ್ನೆಟ್ ಬ್ಯಾಂಕಿಂಗ್ ( Internet Banking), ಯೋನೋ (YONO), ಯೋನೋ ಲೈಟ್ (YONO Lite),ಯುಪಿಐ (UPI) ಮುಂತಾದ ಸೇವೆಗಳನ್ನು ಶನಿವಾರ (ಡಿ.11) ಹಾಗೂ ಭಾನುವಾರ (ಡಿ.12) ಒಟ್ಟು 300 ನಿಮಿಷಗಳ ಕಾಲ ಬಳಸಲು ಸಾಧ್ಯವಾಗೋದಿಲ್ಲ.

ಟ್ವಿಟರ್ ಮೂಲಕ ಮಾಹಿತಿ
ತನ್ನ ಅಧಿಕೃತ ಟ್ವಿಟರ್(Twitter) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರೋ ಎಸ್ ಬಿಐ(SBI) 'ಉತ್ತಮ ಬ್ಯಾಂಕಿಂಗ್ ಅನುಭವಗಳನ್ನು ನೀಡಲು ನಾವು ಶ್ರಮಿಸುತ್ತಿದ್ದು, ಈ ಅಡಚಣೆಗೆ ವಿಷಾದಿಸುತ್ತ ಗೌರವನ್ವಿತ ಗ್ರಾಹಕರು ಸಹಕಾರ ನೀಡುವಂತೆ ಕೋರುತ್ತೇವೆ' ಎಂದು ಹೇಳಿದೆ. 'ನಾವು 2021ರ ಡಿಸೆಂಬರ್  11ರಂದು ಮುಂಜಾನೆ 23.30 ರಿಂದ 4.30ರ ತನಕ ಒಟ್ಟು 300 ನಿಮಿಷಗಳ ಕಾಲ ತಂತ್ರಜ್ಞಾನ ಉನ್ನತೀಕರಣ (Technology upgradation)ಕಾರ್ಯವನ್ನು ಕೈಗೊಳ್ಳುತ್ತಿದ್ದೇವೆ. ಈ ಅವಧಿಯಲ್ಲಿ  INB/ Yono / Yono Lite / Yono Business / UPI  ಸೇವೆಗಳು ಲಭ್ಯವಿರೋದಿಲ್ಲ. ಈ ಅಡಚಣೆಗಾಗಿ ನಾವು ವಿಷಾದಿಸುತ್ತ ನಮ್ಮೊಂದಿಗೆ ಸಹಕರಿಸುವಂತೆ ಕೋರುತ್ತೇವೆ' ಎಂದು ಎಸ್ ಬಿಐ ತಿಳಿಸಿದೆ. 

24 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣ; SBI ಮಾಜಿ ಮುಖ್ಯಸ್ಥ ಪ್ರತೀಪ್ ಚೌಧರಿ ಅರೆಸ್ಟ್!

57,889 ಕ್ಕೂ ಅಧಿಕ ಎಟಿಎಂ(ATM)
SBI ಅತಿದೊಡ್ಡ ಬ್ಯಾಂಕಿಂಗ್ ನೆಟ್ ವರ್ಕ್ ವ್ಯವಸ್ಥೆಯನ್ನು ಹೊಂದಿರೋ ಬ್ಯಾಂಕ್ ಆಗಿದ್ದು, ದೇಶಾದ್ಯಂತ 22,000 ಶಾಖೆಗಳು,  57,889 ಕ್ಕೂ ಅಧಿಕ ಎಟಿಎಂಗಳನ್ನು(ATMs) ಹೊಂದಿದೆ. ಸ್ಟೇಟ್ ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದಿರೋ ಡಿಜಿಟಲ್ ವಹಿವಾಟುಗಳ ಬಗ್ಗೆ ಪ್ರತಿಕ್ರಿಯಿಸಿದ ಬ್ಯಾಂಕ್, ಮೂಲ ಉಳಿತಾಯ ಬ್ಯಾಂಕ್ ಠೇವಣಿಯಿಂದ (Basic Savings Bank Deposit) ಯುಪಿಐ(UPI), ರುಪೇ ಡೆಬಿಟ್ ಕಾರ್ಡ್(Rupay debit card) ಸೇರಿದಂತೆ ಗ್ರಾಹಕರು ನಡೆಸೋ ಯಾವ ಡಿಜಿಟಲ್ ವಹಿವಾಟಿನ ಮೇಲೂ ಶುಲ್ಕ ವಿಧಿಸೋದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿರೋದಾಗಿ ಎಸ್‌ ಬಿಐ ಹೇಳಿದೆ.

ಮಾಧ್ಯಮ ವರದಿಯೊಂದರ ಪ್ರಕಾರ ಐಐಟಿ ಅಧ್ಯಯನವೊಂದರಲ್ಲಿ ಎಸ್ ಬಿಐ 2017 ಹಾಗೂ ಸೆಪ್ಟೆಂಬರ್ 2020ರ ನಡುವೆ ಜನ್ ಧನ್ ಖಾತೆದಾರರಿಂದ 164 ಕೋಟಿ ರೂ. ಕಡಿತಗೊಳಿಸಿತ್ತು. ಈ 164 ಕೋಟಿ ರೂ.ನಲ್ಲಿ ಕೇವಲ 90 ಕೋಟಿ ರೂಪಾಯಿಯನ್ನು ಮಾತ್ರ ಯುಪಿಐ ಹಾಗೂ ರುಪೇ ಕಾರ್ಡಗಳ ಮೂಲಕ ವಹಿವಾಟು ನಡೆಸಲು  ಖಾತೆದಾರರಿಗೆ ಹಿಂತಿರುಗಿಸಿದೆ. ಈ ಅವಧಿಯಲ್ಲಿ ಬ್ಯಾಂಕ್ ಪ್ರತಿ ಖಾತೆದಾರನಿಂದ 17.07ರೂ. ಸಂಗ್ರಹಿಸಿದೆ.

Bank Holiday:ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ, ಯಾಕೆ ಗೊತ್ತಾ?

10 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಲು OTP ಅಗತ್ಯ
SBI ಎಟಿಎಂನಿಂದ  ಹಣ ಪಡೆಯಲು ಒನ್ ಟೈಮ್ ಪಾಸ್ ವರ್ಡ್ (OTP) ಅಗತ್ಯ. ಗ್ರಾಹಕರು ಎಟಿಎಂ ಬಳಸೋ ಸಮಯದಲ್ಲಿಅವರ ಮೊಬೈಲ್ ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ಬಳಿಕವಷ್ಟೇ ಹಣ ಸಿಗುತ್ತದೆ. ಆದ್ರೆ ಈ ನಿಯಮ 10 ಸಾವಿರ ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವಿತ್ ಡ್ರಾ ಮಾಡಲು ಮಾತ್ರ ಅನ್ವಯಿಸುತ್ತದೆ. ಆದ್ರೆ ಕೆಲವು ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ವಿತ್ ಡ್ರಾ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. OTP ಬರುತ್ತಿಲ್ಲ ಎಂಬ ದೂರನ್ನು ಕೆಲವು ಗ್ರಾಹಕರು ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರೋದಾಗಿ ತಿಳಿಸಿರೋ SBI, ಏನೇ ಸಮಸ್ಯೆಯಾದ್ರೂ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ತಿಳಿಸಿದೆ.


 

Latest Videos
Follow Us:
Download App:
  • android
  • ios