Bank Holiday:ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ, ಯಾಕೆ ಗೊತ್ತಾ?
*ಮುಂದಿನ ವಾರದ ಕೊನೆಯ ನಾಲ್ಕು ದಿನ ಬ್ಯಾಂಕ್ ಕ್ಲೋಸ್
*ಡಿ.16, 17ರಂದು ಬ್ಯಾಂಕ್ ಮುಷ್ಕರ
*ಡಿ.18 ಹಾಗೂ 19ರಂದು ಬ್ಯಾಂಕ್ ರಜೆ
ಬೆಂಗಳೂರು (ಡಿ.10): ಮುಂದಿನ ವಾರ ಬ್ಯಾಂಕಿಗೆ ಹೋಗೋ ಪ್ಲ್ಯಾನ್ ಇದ್ರೆ ನಿಮಗೆ ಈ ವಿಷಯ ತಿಳಿದಿರಲೇಬೇಕು. ಅದೇನಂದ್ರೆ ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ (Bank) ಕಾರ್ಯನಿರ್ವಹಿಸೋದಿಲ್ಲ. ಡಿಸೆಂಬರ್ 16, 17, 18 ಹಾಗೂ 19ರಂದು ಬ್ಯಾಂಕುಗಳಿಗೆ ರಜೆಯಿದೆ. ಹೀಗಾಗಿ ಈ ದಿನಗಳಂದು ಯಾವುದೇ ಬ್ಯಾಂಕ್ ಕೆಲಸಗಳನ್ನಿಟ್ಟುಕೊಳ್ಳಬೇಡಿ. ಆದ್ರೆ ಈ ದಿನಗಳಲ್ಲಿ ಎಲ್ಲ ಬ್ಯಾಂಕಿಂಗ್ ಆನ್ಲೈನ್ ವಹಿವಾಟುಗಳು ಎಂದಿನಂತೆ ನಡೆಯಲಿವೆ.
ಬ್ಯಾಂಕ್ ಮುಷ್ಕರ
ಸಾರ್ವಜನಿಕ ವಲಯದ (Public sector) 2 ಬ್ಯಾಂಕುಗಳ ಖಾಸಗೀಕರಣಕ್ಕೆ (Privatisation)ಸಂಬಂಧಿಸಿ ಸರ್ಕಾರ ಸಂಸತ್ತಿನ (Parliament) ಚಳಿಗಾಲದ ಅಧಿವೇಶನದಲ್ಲಿ(Winter session) ಮಂಡಿಸಲು ಇಚ್ಛಿಸಿರೋ ಮಸೂದೆಯನ್ನು(Bill) ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ಡಿಸೆಂಬರ್ 16 ಹಾಗೂ 17ರಂದು ಎರಡು ದಿನಗಳ ದೇಶವ್ಯಾಪ್ತಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೆ ಸಂಬಂಧಿಸಿ ಭಾರತೀಯ ಬ್ಯಾಂಕ್ ಗಳ ಸಂಘಟನೆಗೆ ಯುನೈಟೆಡ್ ಫೋರಂ ನೋಟಿಸ್ ಕೂಡ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಗುರುವಾರ ಹಾಗೂ ಶುಕ್ರವಾರ ಬ್ಯಾಂಕುಗಳು ಮುಚ್ಚಿರಲಿವೆ. ಈ ವರ್ಷ ಫೆಬ್ರವರಿಯಲ್ಲಿ 2021-22ನೇ ಸಾಲಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾರ್ವಜನಿಕ ವಲಯದ ಎರಡು ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು.1.75ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸೋ ಉದ್ದೇಶದಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣವನ್ನು ಘೋಷಿಸಿದ್ದರು. ಸರ್ಕಾರದ ಈ ಖಾಸಗೀಕರಣ ನೀತಿಯನ್ನು ವಿರೋಧಿಸಿ ಚಳವಳಿ ನಡೆಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯುನಿಯನ್ಸ್ (UFBU) ನಿರ್ಧರಿಸಿದೆ.
ಯುಪಿಐ ಗುರಿಮೀರಿದ ಸಾಧನೆ, ಕರ್ಣಾಟಕ ಬ್ಯಾಂಕಿಗೆ ಕೇಂದ್ರದ 2 ಪ್ರತಿಷ್ಠಿತ ಪ್ರಶಸ್ತಿ
ಯಾವೆಲ್ಲ ದಿನ ರಜೆಯಿದೆ?
ಇನ್ನು ಶನಿವಾರ (ಡಿ.18) ಯು ಸೋಸೋ ಥಾಮ್ ಡೆತ್ ಆನಿವರ್ಸರಿ ಪ್ರಯುಕ್ತ ರಜೆ ಘೋಷಿಸಲಾಗಿದೆ. ಡಿಸೆಂಬರ್ 19 ಭಾನುವಾರವಾದ ಕಾರಣ ಆ ದಿನ ಎಂದಿನಂತೆ ಬ್ಯಾಂಕಿಗೆ ರಜೆ ಇರಲಿದೆ. ಹೀಗಾಗಿ ಮುಂದಿನ ವಾರದ ಕೊನೆಯ ನಾಲ್ಕು ದಿನಗಳು ಬ್ಯಾಂಕ್ ತೆರೆದಿರೋದಿಲ್ಲ.
12 ದಿನಗಳ ರಜೆ
ಭಾರತೀಯ ರಿಸರ್ವ್ ಬ್ಯಾಂಕ್ (RBI)ರಜಾದಿನಗಳ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ12 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಈ ರಜಾಪಟ್ಟಿಯಲ್ಲಿ(Holiday list) ಸೇರಿವೆ. ಹಾಗಾದ್ರೆ ಈ ತಿಂಗಳಲ್ಲಿ ಉಳಿದಿರೋ ಯಾವೆಲ್ಲ ದಿನ ಬ್ಯಾಂಕ್ ಬಾಗಿಲು ಮುಚ್ಚಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಡಿಸೆಂಬರ್ 11: ಎರಡನೇ ಶನಿವಾರ
ಡಿಸೆಂಬರ್ 12: ಭಾನುವಾರ
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 24: ಕ್ರಿಸ್ಮಸ್ ಈವ್
ಡಿಸೆಂಬರ್ 25: ಕ್ರಿಸ್ಮಸ್ ಮತ್ತು ನಾಲ್ಕನೇ ಶನಿವಾರ
ಡಿಸೆಂಬರ್ 26: ಭಾನುವಾರ
ಡಿಸೆಂಬರ್ 27: ಕ್ರಿಸ್ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್
Paytm Payments Bank:ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ಪಡೆದ ಪಿಪಿಬಿಎಲ್
ಯಾರಿಗೆ ತೊಂದರೆ?
ಬ್ಯಾಂಕುಗಳಿಗೆ ಮೂರ್ನಾಲ್ಕು ದಿನ ನಿರಂತರ ರಜೆಯಿದ್ದಾಗ ಆನ್ ಲೈನ್ ಬ್ಯಾಂಕಿಂಗ್ ಹೊಂದಿರದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಅದ್ರಲ್ಲೂ ಗ್ರಾಮೀಣ ಭಾಗದ ಅನಕ್ಷರಸ್ಥ ಜನರು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಬಗ್ಗೆ ಮಾಹಿತಿ ಹೊಂದಿರದ ಗ್ರಾಹಕರು ಸಮಸ್ಯೆ ಅನುಭವಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಕೆಲವರು ನಗದು ಹಣದ ಅವಶ್ಯಕತೆ ಬಿದ್ದಾಗ ನೇರವಾಗಿ ಬ್ಯಾಂಕ್ ಗೆ ಹೋಗಿ ಹಣ ಡ್ರಾ ಮಾಡೋ ಪರಿಪಾಠವ ಹೊಂದಿದ್ದಾರೆ. ಇಂಥವರು ಈ ವಾರದ ಪ್ರಾರಂಭದಲ್ಲೇ ಬ್ಯಾಂಕಿಗೆ ತೆರಳಿ ಕೆಲಸಗಳನ್ನು ಮುಗಿಸಿಕೊಂಡು ಬರೋದು ಒಳ್ಳೆಯದು.